ಲೇಖಕ: admin

ಮಡಿಕೇರಿ ಜೂ.19 :  ಕಕ್ಕಬ್ಬೆಯ “ದಿ ತಾಮರ ಕೂರ್ಗ್” ವತಿಯಿಂದ  ನಾಲಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1 ಟೇಬಲ್ ಮತ್ತು 3 ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ತಾಮರ ಕೂರ್ಗ್ ವ್ಯವಸ್ತಾಪಕರಾದ ಕಲ್ಯಾಟಾಂಡ ಗಿರೀಶ್ ಸುಬ್ಬಯ್ಯ, ಅವಿನಾಶ್, ವಿಜು. ಗ್ರಾ.ಪ ಸದಸ್ಯ ಕೊಡಿಮನಿಯಂಡ ಬೋಪಣ್ಣ ಮತ್ತು ಅತಿಥಿ ಶಿಕ್ಷಕರು ಹಾಜರಿದ್ದರು.

Read More

ಮಡಿಕೇರಿ ಜೂ.19 :  ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆ ವತಿಯಿಂದ ಶಾಸಕ  ಡಾ. ಮಂಥರ್ ಗೌಡ ಅವರನ್ನು ಸನ್ಮಾನಿಸಲಾಯಿತು. ನಗರದ  ಬ್ರಹ್ಮಾಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ  ಜಿಲ್ಲಾ ಸಂಚಾಲಕರಾದ ರಾಜಯೋಗಿನಿ‌ ಬ್ರಹ್ಮಾಕುಮಾರಿ ಗಾಯತ್ರೀಜಿ  ಆಶೀರ್ವದಿಸಿ, ಪರಮಾತ್ಮನ ಶಕ್ತಿ ಮತ್ತು ಸ್ಮೃತಿಯಿಂದ ತಮ್ಮ ಕಾರ್ಯದಲ್ಲಿ ವಿಜಯಿಗಳಾಗಿ ಎಂದು ಹಾರೈಸಿ, ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಉಡುಗೊರೆಯೊಂದಿಗೆ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು,  ನಿಮ್ಮೆಲ್ಲರ ಮಾರ್ಗದರ್ಶನದಿಂದ ಆತ್ಮತೃಪ್ತಿಯಿಂದ ಜನಸೇವೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭ  ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ  ಪುಷ್ಪಾ ಕುಟ್ಟಣ್ಣ, ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಕಾಶ್,  ರಾಜೇಶ್ವರಿ ವಿದ್ಯಾ ಸಂಸ್ಥೆಯ ನಿರ್ದೇಶಕರು ಹಾಗೂ ವಕೀಲರಾದ ಸಚಿನ್ ವಾಸುದೇವ್ , ಕೊಡಗು ಡಿ.ಸಿ.ಸಿ. ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಪ್ರೇಮ ಕರುಂಬಯ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಬ್ರಹ್ಮಾಕುಮಾರೀಸ್ ಶಾಖೆಯ ಎಲ್ಲಾ ರಾಜಯೋಗ ಶಿಕ್ಷಕಿಯರು ಹಾಜರಿದ್ದರು. ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕ  ನಿರೂಪಿಸಿದರು. ಕೊನೆಯಲ್ಲಿ ಎಲ್ಲರಿಗೂ ಪ್ರಸಾದ…

Read More

ಸೋಮವಾರಪೇಟೆ ಜೂ.9 : ಪ್ರಾಣಿ, ಪಕ್ಷಿಗಳಿಂದ ಪರಿಸರ ಮತ್ತು ಪ್ರಕೃತಿ ನಾಶವಾಗುತ್ತಿಲ್ಲ. ಪ್ರಕೃತಿ ನಾಶದಲ್ಲಿ ಮಾನವನ ಕೊಡುಗೆ ಅಪಾರವಾದದ್ದು ಎಂದು ಕಲಾವಿದರು ಮತ್ತು ಪಕ್ಷಿತಜ್ಞ ಹಾಸನದ ಬಿ.ಎಸ್.ದೇಸಾಯಿ ಹೇಳಿದರು. ನಾವು ಪ್ರತಿಷ್ಠಾನ ಕೊಡಗು ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ‘ಹಕ್ಕಿಗೊಂದು ಗುಟುಕು ಅಭಿಯಾನ-2023 ರ ಸಮಾರೋಪ ಸಮಾರಂಭ ಹಾಗೂ ಪಕ್ಷಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಮಾತೆ ಬಳಲಿದ್ದಾಳೆ. ಭೂಮಿಯ ಮೇಲೆ ಮನುಷ್ಯರು ಹಾಗೂ ಇತರ ಜೀವಿಗಳು ಬದುಕಬೇಕು. ದಟ್ಟವಾದ ಕಾಡನ್ನು ಮಾನವನಿಂದ ಸೃಷ್ಟಿಸಲು ಸಾಧ್ಯವಿಲ್ಲ. ಅಂತಹ ಕಾಡನ್ನು ಮನುಷ್ಯರು ನುಗ್ಗಿ ಅರಣ್ಯ ನಾಶ ಮಾಡಲು ಬೀಡಬಾರದು ಎಂದು ಹೇಳಿದರು. ಪ್ರಕೃತಿನಾಶ, ಭೂಮಿಯೊಳಗಿನ ಒತ್ತಡದಿಂದ ಪ್ರಕೃತಿವಿಕೋಪಗಳು, ಹವಮಾನ ವೈಪರಿತ್ಯ ಸಂಭವಿಸುತ್ತಿದೆ. ಮುಂದೆ ಗಂಡಾಂತರದ ಮುನ್ಸೂಚನೆ ಇದೆ. ಈ ಕಾರಣದಿಂದಲಾದರೂ ಪ್ರತಿದಿನ ಪರಿಸರ ಉಳಿಯುವ ಕಾಯಕ ಮಾಡಲೇಬೇಕಾಗಿದೆ ಎಂದರು. ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು. ಅವುಗಳು ಉಳಿದರೆ ಮಾತ್ರ ಮನುಷ್ಯ ಉಳಿಯಲು…

Read More

ಸುಂಟಿಕೊಪ್ಪ,ಜೂ.19 : ಸುಂಟಿಕೊಪ್ಪ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಾತಾಜಿ ಜ್ಯುವ¯ರ್ಸ್ ಮಾಲೀಕ ಬಿ.ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಗ್ರಾ.ಪಂ.ಸದಸ್ಯ ಎಂ.ಮಂಜುನಾಥ್ ನೇಮಕಗೊಂಡಿದ್ದಾರೆ. ಮಾದಾಪುರ ರಸ್ತೆಯ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದ ಆವರಣದಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್.ರಮೇಶ್, ಜಂಟಿ ಕಾರ್ಯದರ್ಶಿಯಾಗಿ ದಿವಾಕರ್ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಎಸ್.ಸದಾಶಿವ ರೈ, ಬಿ.ಎಂ.ಸುರೇಶ್ (ಪುಟ್ಟ), ಮಹೇಶ್ ರೈ, ಸುನಿಲ್ ಕುಮಾರ್, ಸುರೇಶ್ ಚಂದು, ಮನುಅಚ್ಚಮಯ್ಯ, ಪವಿ, ಯಶೋಧರ, ಬಿ.ಆರ್.ಅರುಣ್ ಕುಮಾರ್, ಶಿವರಾಮನ್, ನಿಖಿಲ್ ಹರೀಶ್ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್ ತಿಳಿಸಿದ್ದಾರೆ.

Read More

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2022 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಮಾಡಲಾಗಿದೆ. 1.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು  ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ”ಅಳಿವಿನಂಚಿನಲ್ಲಿರುವ ಎರವ ಜನಾಂಗಕ್ಕೆ ಪ್ರೋತ್ಸಾಹ” ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ  ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ” ಉತ್ತಂಗ ಕಂಡಿದ್ದ ಸ್ಕೇಟಿಂಗ್ ಕ್ರೀಡೆ ರಿಂಕ್ ಹಾಕಿ ನೆನೆಗುದಿಯಲ್ಲಿ” ವರದಿಗೆ ಕಾಯಪಂಡ ಶಶಿ ಸೋಮಯ್ಯ  ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಉಪಾಧ್ಯಕ್ಷರಾದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿರುವ ತುದಿಬಳ್ಳಿಯಿಂದ ಕಾಳು ಮೆಣಸು ಕೃಷಿ ಸುದ್ದಿಯ ವೀಡಿಯೋಗ್ರಫಿಗೆ ಕೆ.ಬಿ.ದಿವಾಕರ್     ಪಡೆದುಕೊಂಡಿದ್ದಾರೆ. 4.ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ  ಪ್ರಶಸ್ತಿಯನ್ನು  ಪ್ರಜಾಸತ್ಯ  ಪತ್ರಿಕೆಯಲ್ಲಿ ಪ್ರಕಟವಾದ ”ಕಾಡಾನೆಗಳ…

Read More

ಮಡಿಕೇರಿ ಜೂ.18 : ಕೊಡಗಿನಲ್ಲಿ ವೈದ್ಯಕೀಯ ಕ್ಷೇತ್ರ ತೀರಾ ಹಿಂದುಳಿದಿದ್ದು, ಇದು ಆದಷ್ಟು ಶೀಘ್ರವಾಗಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅನುಭವಿ ತಜ್ಞ ವೈದ್ಯರು ಒಟ್ಟಾಗಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಕ್ಕೆ ಪೂರಕವಾಗಿ ತಾನು ಯಾವುದೇ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದು ನಿವೃತ್ತ ಲೆ.ಜ. ಡಾ. ಬಿ.ಎನ್.ಬಿ.ಎಂ. ಪ್ರಸಾದ್ ಅವರು ಭರವಸೆ ನೀಡಿದರು. ಮಡಿಕೇರಿಯ ಪತ್ರಿಕಾಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಜನ ಇಲ್ಲಿನ ಪರಿಸರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶ ಸೇವೆಗಾಗಿ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಕೀರ್ತಿ ಕೊಡಗು ಜಿಲ್ಲೆಯದ್ದಾಗಿದೆ. ಕೊಡಗಿನ ಹಿರಿಮೆ ಇಲ್ಲಿಯವರಿಗೆ ತಿಳಿದಿಲ್ಲ.ಆದರೆ ಉತ್ತರ ಭಾರತದ ಜನತೆಗೆ ಕೊಡಗಿನ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಕೊಡಗನ್ನು ದಕ್ಷಿಣದ ಕಾಶ್ಮೀರ ಎಂದು ಬಣ್ಣಿಸಿದ್ದರು. ಇದಕ್ಕೆ ಇಲ್ಲಿನ ಪರಿಸರ…

Read More

ಮಡಿಕೇರಿ ಜು.18 : ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾಯ೯ವಾಗಿದೆ ಎಂದು ಹಿರಿಯ ಪತ್ರಕತ೯ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ  ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷ್ಮಿ ವಿರಚಿತ ಚಪ್ಪಾಳೆಗೂ ಬೆಲೆ ಇದೆ ಪುಸ್ತಕವನ್ನು  ಲೋಕಾಪ೯ಣೆ ಮಾಡಿ ಮಾತನಾಡಿದ ಚಿದ್ವಿಲಾಸ್, ಸಮಾಜದಲ್ಲಿನ ಪ್ರತೀ ಕ್ಷೇತ್ರವೂ ಆಧುನಿಕ ದಿನಮಾನಗಳ ಬೇಡಿಕೆಗೆ ತಕ್ಕಂತೆ ಬದಲಾವಣೆ ಆಗುತ್ತಿದೆ. ಎಲ್ಲಾ ರಂಗಗಳಲ್ಲಿಯೂ ಹೊಸತನದ ಗಾಳಿ ಬೀಸುತ್ತಿದೆ. ಸಾಹಿತ್ಯ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಸಾಹಿತ್ಯ ರಂಗದಲ್ಲಿಯೂ ಬದಲಾವಣೆ ಅನಿವಾಯ೯ವಾಗಿದೆ. ಮುಖ್ಯವಾಗಿ ಯುವಪೀಳಿಗೆಯನ್ನು ಆಕಷಿ೯ಸುವಂಥ ಸಾಹಿತ್ಯದ ಅನಿವಾಯ೯ತೆ ಇದೆ. ಮಕ್ಕಳಲ್ಲಿ ಆಸಕ್ತಿ ಸೖಷ್ಟಿಸುವ ಸಾಹಿತ್ಯದ ಆದ್ಯತೆ ಸಾಹಿತಿಗಳದ್ದಾಗಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಲೇಖಕರಿಗೆ ಸಾಹಿತ್ಯ ಲೋಕದ ಬದಲಾವಣೆ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟದ ಅಗತ್ಯವಿದ್ದು ಕನ್ನಡ ಪರ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆಯೂ ಚಿದ್ವಿಲಾಸ್ ಸಲಹೆ ನೀಡಿದರು. ಕೊಡಗು ಜಿಲ್ಲಾ ಕನ್ನಡ…

Read More

ಮಡಿಕೇರಿ ಜೂ.18 : ಕೊಡವಾಮೆರ ಕೊಂಡಾಟ ಸಂಘಟನೆ ನಡೆಸುವ “ಬಾಳೋಪಾಟ್’ರ ಬಂಬಂಗ” ಕೊಡವ ಕೌಟುಂಬಿಕ ಎರಡನೇ ವಾರ್ಷಿಕ ಬಾಳೋ ಪಾಟ್ ಸ್ಪರ್ಧೆಯಲ್ಲಿ ಚೇನಂಡ ಪ್ರಥಮ ಕನ್ನಿಂಗಂಡ(ಕುಂಬಾರಗಡಿಗೆ) ದ್ವಿತೀಯ ಏಳ್‌ನಾಡ್ ಓಡಿಯಂಡ ತೃತೀಯ ಬಹುಮಾನ ಪಡೆಯಿತು. ಮಡಿಕೇರಿಯ ಕಾಫಿ ಕೃಪ ಸಭಾಂಗಣದಲ್ಲಿ, ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಅಧ್ಯಕ್ಷತೆಯಲ್ಲಿ, ಸ್ಪರ್ಧಾ ಸಂಚಾಲಕ, ಸಂಘಟನೆಯ ಕಾರ್ಯದರ್ಶಿ ಕುಂuಟಿಜeಜಿiಟಿeಜರ ಗಿರೀಶ್ ಬೀಮಯ್ಯ ನೇತೃತ್ವದಲ್ಲಿ ನಡೆದ ತೀರ್ಪುಗಾರಿಕೆಯಲ್ಲಿ, ಮೊದಲಿಗೆ ಆಡಳಿತ ಮಂಡಳಿ ನಿರ್ದೇಶಕ ಅಜ್ಜಮಕ್ಕಡ ವಿನು ಕುಶಾಲಪ್ಪ ಅವರು ಗುರು ಕಾರೋಣರಿಗೆ ನೇರ್ಚೆ ಕಟ್ಟಿ ಅಕ್ಕಿ ಹಾಕುವ ಮೂಲಕ ಚಾಲನೆ ನೀಡಲಾಯಿತು. ತೀರ್ಪುಗಾರರಾಗಿ ಬಾಳೋ ಪಾಟ್ ತಜ್ಞರಾದ ಕಾಳಿಮಾಡ ಮೋಟಯ್ಯ, ಮುದ್ದಂಡ ದೇವಯ್ಯ, ಚೀಯಕ್‌ಪೂವಂಡ ದೇವಯ್ಯ ಅವರು ಕಾರ್ಯ ನಿರ್ವಹಿಸಿದರು. ಎರಡನೇ ವರ್ಷದ ಸ್ಪರ್ಧೆಯ, ಆರಂಭದಲ್ಲಿ 19ಕುಟುಂಬಗಳು ಹೆಸರು ನೋಂದಾಯಿಸಿ ಕೊಂಡಿದ್ದರಾದರೂ, ಅಂತಿಮವಾಗಿ 7ಕುಟುಂಬಗಳು ಸ್ಪರ್ಧಾ ಕಣದಲ್ಲಿದ್ದವು. ‘ಕಾವೇರಿ ಪಾಟ್ ‘ ವಿಷಯವಾಗಿ 20ನಿಮಿಷಕ್ಕೆ ಮೀರದಂತೆ ಹಾಡಲು ನಿಗದಿ ಪಡಿಸಲಾಗಿತ್ತು. ಹಾಡಿನ ವಿಷಯ,…

Read More

ಮಡಿಕೇರಿ ಜೂ.17 : ಭಾಗಮಂಡಲದ ಸಮೀಪ ಕೋಪಟ್ಟಿಯಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದೆ. ಗ್ರಾಮದ ವಿವಿಧ ತೋಟಗಳಲ್ಲಿ ಕಾಣಿಸಿಕೊಂಡ ಆರಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬಾಳೆ, ಅಡಿಕೆ ಮತ್ತಿತರ ಸಸಿಗಳನ್ನು ಧ್ವಂಸ ಮಾಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಕಾಡಾನೆಗಳನ್ನು ಓಡಿಸುವಲ್ಲಿ ಯಶಸ್ವಿಯಾದರು. ಅರಣ್ಯ ಇಲಾಖೆ ಕಾಡಾನೆ ಉಪಟಳ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ನಷ್ಟಕ್ಕೊಳಗಾದ ಕೋಪಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಜೂ.17 :  ಪ್ರಧಾನ ಮಂತ್ರಿ ನರೇಂದ್ರ ಮೋದಿ  ನೇತೃತ್ವದ ಕೇಂದ್ರ ಸರ್ಕಾರವು 9 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಾಗೂ ಕೇಂದ್ರ ಸರ್ಕಾರ  ನೀಡಿರುವ  ಅಭಿವೃದ್ಧಿ ಕಾರ್ಯಗಳನ್ನ ಮನೆ ಮನೆಗೆ ತಲುಪಿಸುವ ಅಭಿಯಾನದ ಅಂಗವಾಗಿ ವಿರಾಜಪೇಟೆಯಲ್ಲಿ ಬಿಜೆಪಿ  ಕಾರ್ಯಕರ್ತರ ಸಭೆ ನಡೆಯಿತು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸರ್ಕಾರದ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮಾಜಿ ಶಾಸಕ  ಕೆ.ಜಿ ಬೋಪಯ್ಯ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು  ಹಾಜರಿದ್ದರು.

Read More