ನಾಪೋಕ್ಲು ಜು.19 : ಇತ್ತೀಚಿನ ದಿನಗಳಲ್ಲಿ ಕಾಡುಗಳು ಕ್ಷಿಣಿಸುತ್ತಾ ಕಾಂಕ್ರೀಟ್ ಮಯವಾಗುತ್ತಿದೆ.ಪರಿಸರ ಸಮತೋಲನವನ್ನು ಕಾಪಾಡಿ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೌರ್ಯ ಸದಸ್ಯರು ನಡೆಸುತ್ತಿರುವ ಹಣ್ಣಿನ ಗಿಡ ನಾಟಿ ಅಭಿಯಾನ ಶ್ಲಾಘನೀಯ ಎಂದು ಕುಂಜಲಗೇರಿ ಗ್ರಾಮದ ಶ್ರೀ ಈಶ್ವರ ಬೊಟ್ಲಪ್ಪ ದೇವಾಲಯದ ಕಾರ್ಯದರ್ಶಿ ಕುತಂಡ ಬೋಪಯ್ಯ ಹೇಳಿದರು. ಶ್ರೀ ಈಶ್ವರ ಬೊಟ್ಲಪ್ಪ ದೇವಾಲಯದ ಆವರಣದಲ್ಲಿ ನಾಪೋಕ್ಲು ಶೌರ್ಯ ಘಟಕದ ಸದಸ್ಯರು ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಣ್ಣಿನ ಗಿಡಗಳನ್ನು ನೆಡುವುದರಿಂದ ಪರಿಸರ ರಕ್ಷಣೆಯೊಂದಿಗೆ ಪ್ರಾಣಿ ಪಕ್ಷಿಗಳಿ ಗೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ನೀಗಿಸಿದಂತಾಗುತ್ತದೆ. ತಮ್ಮ ಈ ಸೇವೆಯಿಂದಾಗಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬಲ್ಲದು ಎಂದರು. ನಾಪೋಕ್ಲು ಶೌರ್ಯ ಘಟಕದ ಸಂಯೋಜಕ ಬಾಳೆಯಡ ದಿವ್ಯ ಮಂದಪ್ಪ ಮಾತನಾಡಿ, ಕಳೆದ 3 ವರ್ಷಗಳಿಂದ ನಾನಾ ಕಡೆಗಳಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದೇವೆ, ನೆಟ್ಟ ಗಿಡಗಳು ಚೆನ್ನಾಗಿ ಬೆಳೆದು ಕೆಲವೊಂದು ಗಿಡಗಳಲ್ಲಿ ಹಣ್ಣುಗಳಾಗಿರುವುದು ನಮ್ಮ ಶೌರ್ಯ…
ಲೇಖಕ: admin
ನಾಪೋಕ್ಲು ಜು.19 : ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾ.ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದಲ್ಲಿ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಬೆಳೆಗಳನ್ನು ತುಳಿದು ನಾಶಪಡಿಸಿ ನಷ್ಟ ಉಂಟು ಮಾಡಿದೆ. ನೆಲಜಿ ಗ್ರಾಮದ ನಿವಾಸಿ ಎಂ.ಎಂ ಶಾರದ ಎಂಬವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದಿದ್ದ ಕಾಫಿ, ತೆಂಗು, ಬಾಳೆ ಸೇರಿದಂತೆ ಇನ್ನಿತರ ಫಸಲು ಭರಿತ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟಉಂಟು ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಚೇಲಾವರ, ಮರಂದೋಡ ಹಾಗೂ ಕಕ್ಕಬ್ಬೆ, ಕುಂಜಿಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ತೋಟಗಳಿಗಲ್ಲಿ ದಾಂಧಲೆ ನಡೆಸಿ ಬೆಳೆಗಾರರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳನ್ನು ತುಳಿದು ನಾಶಪಡಿಸಿ ನಷ್ಟ ಅನುಭವಿಸುವಂತೆ ಮಾಡಿತ್ತು. ಈಗ ಕಾಡಾನೆಗಳು ನೆಲಜಿ ಗ್ರಾಮ ವ್ಯಾಪ್ತಿಯಲ್ಲಿ ಗೋಚರಿಸಿದ್ದು ಜನರು ನಡೆದಾಡಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರು ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು…
ಮಡಿಕೇರಿ ಜು.18 : ಮಡಿಕೇರಿಯನ್ನು ಸ್ವಚ್ಚ, ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಿದ್ದು, ಆ ನಿಟ್ಟಿನಲ್ಲಿ ಮನೆಯಲ್ಲಿನ ಕಸವನ್ನು ಪ್ಲಾಸ್ಟಿಕ್‍ನಿಂದ ವಿಂಗಡಿಸಿ ನಗರಸಭೆ ವಾಹನಕ್ಕೆ ನೀಡುವಂತಾಗಬೇಕು ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಕೋರಿದ್ದಾರೆ. ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಸಂಬಂಧಿಸಿದಂತೆ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಏಕ ಬಳಕೆ ಪ್ಲಾಸ್ಟಿಕ್‍ನ್ನು ಬಳಸಬಾರದು. ಸಾರ್ವಜನಿಕರು ಸಹ ಎಲ್ಲೆಂದರಲ್ಲಿ ಪ್ಲಾಸ್ಟಿಕ್‍ನ್ನು ಬಿಸಾಡದೆ ಡಸ್ಟ್‍ಬಿನ್‍ಗೆ ಹಾಕಬೇಕು. ನಗರವನ್ನು ಸುಂದರ, ಸ್ವಚ್ಚವಾಗಿ ಕಾಣುವಂತಾಗಲು ಎಲ್ಲರೂ ನಗರಸಭೆಯ ಜೊತೆ ಕೈಜೋಡಿಸಬೇಕಿದೆ ಎಂದು ನಗರಸಭಾ ಅಧ್ಯಕ್ಷರು ಮನವಿ ಮಾಡಿದರು. ‘ನಮ್ಮ ತ್ಯಾಜ್ಯ, ನಮ್ಮ ಹೊಣೆ’ ಎಂಬುದನ್ನು ಅರ್ಥಮಾಡಿಕೊಂಡು ಪ್ರತಿಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕಿದೆ. ಪ್ಲಾಸ್ಟಿಕ್ ಹೊರತು ಪಡಿಸಿ ಉಳಿದ ಕಸದಿಂದ ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ ಎಂದು ಹೇಳಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸತೀಶ್ ಅವರು ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಎಂಬುದನ್ನು ತಿಳಿಯಬೇಕಿದೆ. ಆದ್ದರಿಂದ ಸ್ವಯಂ ಪ್ಲಾಸ್ಟಿಕ್ ಬಳಸದೆ ಬಟ್ಟೆ…
ಮಡಿಕೇರಿ ಜು.18 : ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಸಾಮಾನ್ಯ ಸಭೆಯು ಜಿ.ಪಂ.ಉಪ ಕಾರ್ಯದರ್ಶಿ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ ಮಾತನಾಡಿದ ಅವರು ಶಿಕ್ಷಣ ಇಲಾಖೆಯಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲಹೆ ನೀಡಿದರು. ನರೇಗಾ ಯೋಜನೆಯಡಿ ಶಾಲಾ ಶೌಚಾಲಯ ಕಾಮಗಾರಿ ತೆಗೆದುಕೊಳ್ಳಲಾಗಿದ್ದು, ಶೀಘ್ರ ಪೂರ್ಣಗೊಳಿಸಲಾವುದು ಎಂದು ಮಾಹಿತಿ ನೀಡಿದರು. ಮಳೆಗಾಲ ಪ್ರಾರಂಭವಾಗಿದ್ದು ಶಾಲಾ ಕಟ್ಟಡ ದುರಸ್ತಿಗಳಿದ್ದಲ್ಲಿ ಕೂಡಲೇ ಕ್ರಮ ತೆಗೆದುಕೊಂಡು ಯಾವುದೇ ರೀತಿ ಹಾನಿಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಹಾಡಿಗಳಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಹೆಚ್ಚು ಗಮನ ನೀಡಬೇಕು. ಅನುದಾನದ ಕೊರತೆಗಳಿದ್ದರೆ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಪೂರಕವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಲ ಜೀವನ್ ಮೀಷನ್ ಯೋಜನೆಯಡಿ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಿ, ಕುಡಿಯುವ ನೀರಿನ ಸಮಸ್ಯೆ ಬರದಂತೆ…
ಮಡಿಕೇರಿ ಜು.18 : ಭಾರತ ಆಹಾರ ನಿಗಮದಲ್ಲಿ ಲಭ್ಯತೆಯನುಸಾರ ಜುಲೈ-2023 ರ ಮಾಹೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ‘ಸಾರವರ್ಧಿತ’ (ಪೌಷ್ಟಿಕಾಂಶ) ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪಡಿತರದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಸಾರವರ್ಧಿತ ಅಕ್ಕಿಯನ್ನು ಪಡೆದು ಸದುಪಯೋಗಿಸಿಕೊಳ್ಳಬೇಕೆಂದು ಸಾರ್ವಜನಿಕ ಪಡಿತರದಾರರಲ್ಲಿ ಆಹಾರ ಇಲಾಖೆ ಕೋರಿದೆ. ಅಂತ್ಯೋದಯ ಪಡಿತರ ಚೀಟಿಗಳಿಗೆ (ಎಎವೈ) ಪ್ರತಿ ಪಡಿತರ ಚೀಟಿಗೆ ಅಕ್ಕಿ- 35 ಕೆ.ಜಿ ಉಚಿತ, ಪಿಹೆಚ್‍ಹೆಚ್ ಪಡಿತರ ಚೀಟಿಗಳಿಗೆ (ಬಿಪಿಎಲ್) (ಆದ್ಯತಾ) ಪ್ರತಿ ಸದಸ್ಯರಿಗೆ ಅಕ್ಕಿ-05 ಕೆ.ಜಿ. ಉಚಿತ, ಎನ್‍ಪಿಹೆಚ್‍ಹೆಚ್ ಪಡಿತರ ಚೀಟಿಗಳಿಗೆ (ಎಪಿಎಲ್)(ಒಪ್ಪಿತ ಪಡಿತರ ಚೀಟಿಗಳಿಗೆ) ಏಕ ಸದಸ್ಯ ಪಡಿತರ ಚೀಟಿಗೆ ಅಕ್ಕಿ-05 ಕೆ.ಜಿ, 2 ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ ಅಕ್ಕಿ-10 ಕೆ.ಜಿ. ಪ್ರತಿ ಕೆ.ಜಿ.ಗೆ ರೂ.15/-, ಅಂತರ್ ನ್ಯಾಯಬೆಲೆ ಅಂಗಡಿ / ಅಂತರ್ ಜಿಲ್ಲೆ /ಅಂತರ್ ರಾಜ್ಯ ಪಡಿತರ ಚೀಟಿಗಳಿಗೆ ಪೋರ್ಟಬಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಜಿಲ್ಲೆಯ/ ರಾಜ್ಯದ…
ಮಡಿಕೇರಿ ಜು.18 : ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಸಸ್ಯ ಕ್ಷೇತ್ರದಲ್ಲಿ 2023-24 ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿ ಬೆಳೆಸಲಾಗಿರುತ್ತದೆ. ಮಹಾಗನಿ, ಶಿವನೆ, ಸಿಲ್ವರ್, ಬೀಟೆ, ಮಳೆ ಮರ, ನೇರಳೆ, ಸುಬಾಬುಲ್, ಹಲಸು, ದೂಪ, ನಿಂಬೆ, ಅಗಸೆ, ಬೆಟ್ಟದನೆಲ್ಲಿ, ಸೀಬೆ, ಮುಂತಾದ ಸಸಿಗಳು ಲಭ್ಯವಿದ್ದು, ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಸ್ಕೃತ ಆದೇಶದಂತೆ ರೂ.3 ಹಾಗೂ ರೂ.6 ಪ್ರತಿ ಸಸಿಗೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು. ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ತಮ್ಮ ಜಮೀನಿನ ಆರ್‍ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು ಹಾಗೂ ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ನೆಟ್ಟ 100 ಸಸಿಗಳಿಗೆ ಸುಮಾರು 8000-10,000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಉಪ ವಲಯ ಅರಣ್ಯ ಅಧಿಕಾರಿಗಳು 9743722646, ಗಸ್ತು ಅರಣ್ಯ ಪಾಲಕರು 7975952388…
ಮಡಿಕೇರಿ ಜು.18 : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2023-24 ನೇ ಸಾಲಿಗೆ ಪ್ರಥಮ ಬಿ.ಎ ಮತ್ತು ಬಿ.ಕಾಂ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ನೂತನವಾಗಿ ಪ್ರಾರಂಭವಾಗಿರುವ ಕೊಡಗು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿನಿಯರು ಕಚೇರಿಯಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಸೂಕ್ತ ದಾಖಲೆಗೊಂದಿಗೆ ಪ್ರವೇಶ ಪಡೆಯಲು ತಿಳಿಸಿದೆ. ಬಿ.ಕಾಂ ತರಗತಿಗೆ ಸೇರಬಯಸುವ 5 ಜನ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಜುಲೈ, 25 ಪ್ರವೇಶಾತಿ ಕೊನೆಯ ದಿನಾಂಕವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಿ. ಜೆ. ಜವರಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9945185783, 9845907344, 9008180049, 9538506370 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಕಡಂಗ ಜು.18 : ವಿರಾಜಪೇಟೆ ಜಮಿಯತುಲ್ ನಲ್ಲಿ ಮುಹಲ್ಲಿಮೀನ್ ರೇಂಜ್ ಮಟ್ಟದ ಮುಹ ಲಿಮಿನ್ ಡೇ ಕಡಂಗ ಶಾದಿಮಹಲ್ ಸಭಾಂಗಣದಲ್ಲಿ ನಡೆಯಿತು. ಜಮಹತ್ ಅಧ್ಯಕ್ಷ ಅಬುಲ್ಲ ಅಧ್ಯಕ್ಷರೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿ ಪಿ ಎಂ ಬಷೀರ್ ಹಾಜಿ ಉದ್ಘಾಟಿಸಿದರು. ವಿರಾಜಪೇಟೆ ಖತೀಬ್ ಉಸ್ತಾದ್ ರಹ್ಹೋಫ್ ಹುದವಿ ಮದರಸ ಅಧ್ಯಪಕರ ಸೇವೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಇಸ್ಮಾಯಿಲ್ ಉಸ್ತಾದ್, ಅಹ್ಮದ್ ಹಾಜಿ, ಯೂಸೂಫ್ ಉಸ್ತಾದ್, ಸುಹೈಬ್ ಫೈಜಿ,ಸಲಾಂ, ಅಬ್ದುಲ್ಲ ಹಾಜಿ ಪಾಲ್ಗೊಂಡಿದ್ದರು. ಪ್ರಾರ್ಥನೆ ಯನ್ನು ಅಬೂಬಕರ್ ಮುಸ್ಲಿಯಾರ್ ನೆರವೇರಿಸಿದರು. ಹನೀಫ್ ಫೈಜಿ ಸ್ವಾಗತಿಸಿ, ಸರ್ವರನ್ನು ವಂದಿಸಿದರು. ವರದಿ : ನೌಫಲ್ ಕಡಂಗ
ಮಡಿಕೇರಿ ಜು.18 : ಆಡಳಿತ ವ್ಯವಸ್ಥೆಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆಯೇ ಹೆಚ್ಚು ಒತ್ತು ನೀಡಿ ಮಾತನಾಡುತ್ತವೆ. ಆದರೆ ಇಲ್ಲೊಂದು ಗ್ರಾಮಕ್ಕೆ ಬಸ್ ತಂಗುದಾಣದ ಭಾಗ್ಯವೇ ಇಲ್ಲದೆ ಗ್ರಾಮಸ್ಥರು ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಕಾಲೋನಿಯ ನಿವಾಸಿಗಳು ಬಸ್ ತಂಗುದಾಣದ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿರುವ ಸುಮಾರು 30 ಕುಟುಂಬಗಳು ಬಸ್ ಗಾಗಿ ಮಳೆ, ಚಳಿ, ಗಾಳಿಯಲ್ಲೇ ಕಾಯುತ್ತಾ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ. ಬಹಳ ವರ್ಷಗಳ ಹಿಂದೆ ಇಲ್ಲಿದ್ದ ಬಸ್ ತಂಗುದಾಣ ಶಿಥಿಲಾವಸ್ಥೆಗೊಂಡು ಬೀಳುವ ಸ್ಥಿತಿಯಲ್ಲಿತ್ತು. ಇತ್ತೀಚೆಗೆ ಸುರಿದ ಸಣ್ಣ ಮಳೆಗೆ ತಂಗುದಾಣ ಸಂಪೂರ್ಣ ಕುಸಿದು ಬಿದ್ದಿದೆ. ತಂಗುದಾಣದ ಅವ್ಯವಸ್ಥೆಯ ಬಗ್ಗೆ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿರುವ ಗ್ರಾ.ಪಂ ಮಾಜಿ ಸದಸ್ಯೆ ಬಿ.ಕೆ.ಬೋಜಿ, ಇಲ್ಲಿ ವಾಸ ಇರುವವರು ದುರ್ಬಲರು ಎನ್ನುವ ಕಾರಣಕ್ಕೆ ನಿರ್ಲಕ್ಷಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಸುರಿಯುವ ಮಳೆಯಲ್ಲೇ ಮಕ್ಕಳು, ವಯೋವೃದ್ಧರು ಬಸ್ ಗಾಗಿ ಕಾರ್ಯಬೇಕಾಗಿದೆ.…
ಮಡಿಕೇರಿ ಜು.18 : ಕೇಂದ್ರದ ಮಾಜಿ ಸಚಿವ ಹಾಗೂ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ರಾಜ್ಯಸಭಾ ನಿಧಿಯಿಂದ ನೀಡಿದ ಅನುದಾನದಲ್ಲಿ ಕುಶಾಲನಗರ ತಾಲ್ಲೂಕಿನ “ನೂರೊಕ್ಕನಾಡ್ ಹಿಲ್ಸ್” ರಸ್ತೆ ಮತ್ತು ಮಡಿಕೇರಿ ತಾಲ್ಲೂಕಿನ ಕತ್ತಲೆಕಾಡು ರಸ್ತೆ ಅಭಿವೃದ್ಧಿಯಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಜು.19 ರಂದು ನಡೆಯಲಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಕೋರಿಕೆಯ ಮೇರೆಗೆ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿಯಡಿ ಕೊಡಗಿನ ಕುಗ್ರಾಮಗಳ “ಬಲ್ಯಮನೆ” ರಸ್ತೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ 2.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ “ನೂರೊಕ್ಕನಾಡ್ ಹಿಲ್ಸ್” ರಸ್ತೆ ಮತ್ತು ಕತ್ತಲೆಕಾಡು ರಸ್ತೆ ನಿರ್ಮಾಣವಾಗಿದೆ. ಇದನ್ನು ಬುಧವಾರ ಬೆಳಗ್ಗೆ 10 ಗಂಟೆಗೆ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಹಾಗೂ ವಿಹೆಚ್‍ಎಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ…






