ಲೇಖಕ: admin

ಮಡಿಕೇರಿ ಜು.18 : ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದ ಕಾರ್ಯಪಾಲಕ ಅಭಿಯಂತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕಾಮಗಾರಿ ಕಳಪೆ ಎಂದು ಆರೋಪಿಸಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

Read More

ಮಡಿಕೇರಿ ಜು.18 :  ಜೀವನದಲ್ಲಿ ಸುಖ, ದುಃಖ, ನೋವು ನಲಿವು ಸಹಜ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಇರುವವನು ಸ್ಥಿತಪ್ರಜ್ಞ. ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗ ದ್ವೇಷ ರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವನು . ಇದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಪ್ರತಿಯೊಬ್ಬರೂ ಒಂದೊಂದು ತರಹ ಸ್ಪಂದಿಸುತ್ತಾರೆ. ಕೆಲವು ಭಾವುಕರು ಅತಿಯಾಗಿ ಸ್ಪಂದಿಸುವುದು ನೋವಿಗೆ ಮತ್ತು ದುಃಖಕ್ಕೆ. ಇದರ ಶಮನಕ್ಕೆ ಹೆಚ್ಚಿನವರು ಮೊದಲು ಉಪಯೋಗಿಸುವುದು ಮದ್ಯ ಪಾನ, ಇನ್ನು ಕೆಲವರು ಕಷ್ಟ ಪಟ್ಟು ದೊರಕಿಸಿದ ಮಾದಕ ದ್ರವ್ಯಗಳು. ಮೊದಲು ತತ್ಕಾಲಕ್ಕೆ ಅದನ್ನು ಉಪಯೋಗಿಸುವ ಇವರು ಕೊನೆಗೆ ಅದರ ಹಿಡಿತಕ್ಕೆ ಸಿಲುಕಿ ಹೋಗುವರು. ಕುಡಿತ, ಮಾದಕಗಳಲ್ಲಿ ಮೊದಲು ನೀವು ಅದನ್ನು ಕುಡಿಯುವಿರಿ , ಸೇವಿಸುವಿರಿ. ಆದರೆ ನಂತರದ ದಿನಗಳಲ್ಲಿ ಅದು ನಿಮ್ಮನ್ನೇ ದಾಸರನ್ನಾಗಿಸಿ, ನಿಮ್ಮನ್ನು ಅದರ ಹಿಡಿತದಲ್ಲಿ ಇಟ್ಟು ಕೊಳ್ಳುತ್ತದೆ. ಒಮ್ಮೆ ಆ ಚಕ್ರವ್ಯೂಹದ ಒಳ ಹೊಕ್ಕರೆ,ಅದರಿಂದ…

Read More

ಕಡಂಗ ಜು.18 :   ಕಡಂಗ ಬದ್ರಿಯಾ ಸುನ್ನೀ ಮುಸ್ಲಿಂ ಜಮಾಅತ್ ನ ವಾರ್ಷಿಕ ಮಹಾಸಭೆ ಸ್ಥಳೀಯ ಬದ್ರಿಯಾ ಮದರಸ  ಸಭಾಂಗಣದಲ್ಲಿ ನಡೆಯಿತು. ಹುಸೈನ್ ಸಖಾಫಿ ಎಮ್ಮೆಮಾಡು ಅಧ್ಯಕ್ಷತೆಯಲ್ಲಿ ನಡೆದ  ಸಭೆಯನ್ನು ಸ್ಥಳೀಯ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ಉದ್ಘಾಟಿಸಿದರು.  ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ ನೆರವೇರಿಸಿದರು. ನಂತರ ಹಲವಾರು ಚರ್ಚೆಗಳು ನಡೆದು ಅದಕ್ಕೆ ಜಮಾಅತ್ ಅಧ್ಯಕ್ಷ ಸುಲೈಮಾನ್ ಪ್ರತಿಕ್ರಿಯೆಸಿ ಉತ್ತರಿಸಿದರು. ಅಬ್ದುಲ್ ಸಲಾಂ  ಸ್ವಾಗತಿಸಿದರು. ಕಾರ್ಯದರ್ಶಿ ಆಶಿಕ್  ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ನೌಶಾದ್ ಲೆಕ್ಕ ಪತ್ರವನ್ನು ಮಂಡಿಸಿದರು. ನಂತರ 2023-24 ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್ ಅರಫಾ, ಉಪಾಧ್ಯಕ್ಷರಾಗಿ ಕೆ.ಇ.ಉಸ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಯು.ಇ.ರಾಶೀದ್, ಕೋಶಾಧಿಕಾರಿ  ಸಿ.ಎ.ರಜಾಕ್,  ಜೊತೆ ಕಾರ್ಯದರ್ಶಿ ಎಂ.ಬಿ.ನೌಫಲ್ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಹಾಶಿಮ್, ಕರೀಂ, ಅಶ್ರಫ್, ಸುಹೈಲ್, ರಝಕ್ ಕೆ.ಎ.ಸಹದ್ ಅವರನ್ನು ಆಯ್ಕೆ ಮಾಡಲಾಯಿತು. ನಿರೂಪಣೆಯನ್ನು ಅಶ್ರಫ್ ಹಾಗೂ ರಶೀದ್ ಐಬಿಎಂ ನೆರವೇರಿಸಿದರು. ವರದಿ :…

Read More

ಬೆಂಗಳೂರು, ಜು 18: ಹಿರಿಯ ರಾಜಕೀಯ ಮುತ್ಸದ್ದಿ ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ‌ ಉಮ್ಮನ್ ಚಾಂಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನಗೆ ಅತ್ಯಂತ ಆತ್ಮೀಯರಾಗಿದ್ದ ಉಮ್ಮನ್ ಚಾಂಡಿಯವರ ನಿಧನದ ಸುದ್ದಿ ಆಘಾತಕಾರಿ. ಕೇರಳ‌ ರಾಜ್ಯವನ್ನು ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಉನ್ನತ ಸ್ಥಾನದಲ್ಲಿ ಇರಿಸಲು ಕಾರಣರಾದ ಮುಖ್ಯಮಂತ್ರಿಗಳಲ್ಲಿ  ಉಮ್ಮನ್ ಚಾಂಡಿ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅಪಾರ ಸಾಧನೆ ಮಾಡಿದವರಾಗಿದ್ದರು. 2004 ರಿಂದ 2006 ಮತ್ತು 2011 ರಿಂದ 2016 ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ಸಂವಿಧಾನದ ಆಶಯಗಳ, ಮೌಲ್ಯಗಳ‌ ರಕ್ಷಣೆಗೆ ಶ್ರಮಿಸಿ ಹೋರಾಟ ರಾಜಕಾರಣದ ಪರಂಪರೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದರು. 1970 ರಿಂದ ಕೇರಳ ರಾಜ್ಯ ವಿಧಾನಸಭೆಗೆ ನಿರಂತರವಾಗಿ ಆಯ್ಕೆಯಾಗುತ್ತಾ ಅತ್ಯಂತ ದೀರ್ಘಾವಧಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದರು. ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ…

Read More

ಮಡಿಕೇರಿ ಜು.18 :  ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರು ಆತoಕಗೊಂಡಿದ್ದಾರೆ.  26ಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡನ್ನು ಅರಣ್ಯ ಸಿಬ್ಬಂದಿಗಳು ಕಾಡಿಗೆ ಹಟ್ಟಿಸುವ ಪ್ರಯತ್ನ ಇಂದು ಮುಂದುವರೆಯಿತು. 14 ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ 18ಕ್ಕೂ ಕಾಡಾನೆಯ ಹಿಂಡುನ್ನು ಬೀಟಿ ಕಾಡಿಗೆ ಅಟ್ಟಿಸಲಾಯಿತು. ಉಳಿದ ಕಾಡಾನೆಗಳ  ಕಾರ್ಯಚರಣೆ ಮುಂದುವರಿಸಲಾಗುವುದು ಎಂದು ಅರಣ್ಯ ವಲಯ ಅರಣ್ಯ ಅಧಿಕಾರಿ ಕೆ.ಎಂ.ದೇವಯ್ಯ ತಿಳಿಸಿದ್ದಾರೆ. ವರದಿ : ಗುಹ್ಯ ಸುರೇಶ್ 

Read More

ಕಡಂಗ ಜು.17 :  ಕೊಡಗಿನ ಪ್ರಮುಖ ಸೇತುವೆಗಳಲ್ಲಿ ಒಂದಾದ ಬೇತ್ರಿ ಸೇತುವೆಯ ಸಮೀಪದಲ್ಲಿರುವ ಕಸ ಕಡ್ಡಿಗಳನ್ನು ಮತ್ತು ಗ್ರಾಮದ ರಸ್ತೆ ಬದಿಯಲ್ಲಿರುವ  ಕಾಡುಗಳನ್ನು ಕಡಿದು ಶುಚಿಗೊಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಹಜಾನ್ ,ಇಬ್ರಾಹಿಂ, ಮುಸ್ತಫಾ,ಆಸ್ಕರ್  ಸೇರಿದಂತೆ ಮತ್ತಿತರರು ಇದ್ದರು. ವರದಿ : ನೌಫಲ್ ಕಡಂಗ 

Read More

ಕುಶಾಲನಗರ, ಜು.16 : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮೇ ತಿಂಗಳ ಅಂತ್ಯಕ್ಕೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರಿಗೆ ಕೂಡ್ಲೂರು ಅಂಗನವಾಡಿ ಕೇಂದ್ರದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಿವೃತ್ತಗೊಂಡ ಸುಶೀಲಮ್ಮ ಅವರನ್ನು ಅಂಗನವಾಡಿ ಕೇಂದ್ರ ಹಾಗೂ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರೌಢಶಾಲಾ‌ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಸುಶೀಲಮ್ಮ ಮಕ್ಕಳ ಆರೋಗ್ಯ ಆರೈಕೆಯೊಂದಿಗೆ ಪಾಲಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು ಎಂದರು. ಫ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ ಮಾತನಾಡಿದರು. ನವಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕಲಾವತಿ, ಸಹಾಯಕಿ ತ್ರಿಪುರ ಸುಂದರಿ, ಶಾಲೆಯ ಶಿಕ್ಷಕರು ಇದ್ದರು. 

Read More

ಮಡಿಕೇರಿ ಜು.17 : ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ‘ಪೊಲಿಂಕಾನ ಉತ್ಸವ’ ವಿಶೇಷ ಪೂಜೆ ಜರುಗಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಿಗೆ ಪೂಜೆ, ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣವಿಟ್ಟು ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ವಿಸರ್ಜಿಸಲಾಯಿತು. ಪೊಲಿಂಕಾನ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಪೊಲಿಂಕಾನ ಉತ್ಸವ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ಪೂಜೆ ಪುರಸ್ಕಾರ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆ ಮತ್ತಿತರವನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು…

Read More

ಮಡಿಕೇರಿ ಜು.17 : ಕಡಗದಾಳು ಹಾಗೂ ಇಬ್ನಿವಳವಾಡಿ ವ್ಯಾಪ್ತಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದರು. ಗ್ರಾ.ಪಂ ನ ಇಬ್ನಿವಳವಾಡಿ ವಾರ್ಡ್ ಸಂಖ್ಯೆ- 2 ರ ಉಪಚುನಾವಣೆಗೆ ಕಣದಲ್ಲಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯಶ್ರೀ ಎಂ.ಕೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಜಿಲ್ಲಾ ಉಪಾಧ್ಯಕ್ಷ ಕೊಕ್ಕಲೇರ ಸುಜು ತಿಮ್ಮಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯಾಧ್ಯಕ್ಷ ರಮೇಶ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರೌಫ್, ಉಪಾಧ್ಯಕ್ಷ ಬಿ.ಜಿ.ಮೋಹನ್, ಡಿಸಿಸಿ ಸದಸ್ಯ ಜಾನ್ಸನ್ ಪಿಂಟೋ, ಬ್ಲಾಕ್ ಮಾಜಿ ಉಪಾಧ್ಯಕ್ಷ ನಂದಿನೆರವಂಡ ಮಧು, ಕೆಪಿಸಿಸಿ ಸಾಮಾಜಿ ಜಾಲತಾಣದ ಮಾಜಿ ಉಸ್ತುವಾರಿ ಕೋಚನ ಹರಿಪ್ರಸಾದ್ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಜು.17 : ಸರ್ಕಾರದ ಆದೇಶದಂತೆ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 05 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಜುಲೈ ಮಾಹೆಯಿಂದ ಪ್ರತಿ ಕೆ.ಜಿಗೆ ರೂ.34 ರಂತೆ (34*5 ಕೆ.ಜಿ=170) 170 ರೂ.ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು. ಇನ್ನು 2 ಅಥವಾ 3 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದ್ದು, ಈಗಾಗಲೇ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಹೇಳಿದರು. ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಕೊಡಗು ಜಿಲ್ಲೆಯ 80,525…

Read More