ಸುಂಟಿಕೊಪ್ಪ ಜೂ.23: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮಕ್ಕಳಲ್ಲಿ ಸಾರ್ವತ್ರಿಕ ಮತದಾನ ಪ್ರಕ್ರಿಯೆಯ ಕುರಿತು ಮಾಹಿತಿ ಅರಿವು ಮೂಡಿಸುವ ದಿಸೆಯಲ್ಲಿ ಶಾಲಾವರಣದಲ್ಲಿ ಮತದಾನದ ಮಾಹಿತಿಯ ಬ್ಯಾನರ್‍ಗಳನ್ನು ಅಳವಡಿಸಲಾಗಿತ್ತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತ ಕೇಂದ್ರ ಅಧಿಕಾರಿಗಳನ್ನು ನೇಮಕಗೊಳಿಸುವ ಮೂಲಕ ಮಕ್ಕಳ ಸಂಸತ್‍ಗೆ ಮತದಾನದಕ್ಕೆ ಅವಕಾಶ ಕಲ್ಪಿಸಿದರು. ಆಧಾರ್ ಕಾರ್ಡ್‍ಗಳನ್ನು ಹಿಡಿದು ಮಕ್ಕಳು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಚುನಾವಣಾ ಮೇಲ್ವಿಚಾರಣೆಯನ್ನು ಶಾಲಾ ಮುಖ್ಯೋಪಾದ್ಯಾಯರಾದ ಬಾಲಕೃಷ್ಣ, ಸಹಶಿಕ್ಷಕರುಗಳಾದ ಸಿ.ಟಿ.ಸೋಮಶೇಖರ್, ಎಸ್.ಪ್ರಕಾಶ್, ಲಿಯೋನ, ಆರ್.ಚಿತ್ರಾ, ಶಾಂತ ಹೆಗಡೆ, ಜಯಶ್ರೀ ನಿರ್ವಹಿಸಿದರು.
ಲೇಖಕ: admin
ಮಡಿಕೇರಿ ಜೂ.24 : ಭಾರತ ಸೇವಾದಳದ ವತಿಯಿಂದ 9ನೇ ಅಂತರಾಷ್ಟ್ರೀಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸರಕಾರಿ ಪದವಿ ಪೂರ್ವ ಪ್ರೌಢ ಶಾಲೆಯ ಮಕ್ಕಳು ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಭಂಗಿಯ ಯೋಗ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಜಿಲ್ಲಾ ಸಂಘಟಕರಾದ ಜಿ.ಈ.ರೇವಣ್ಣ, ಸರಕಾರಿ ಪದವಿ ಪೂರ್ವ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಪಿ.ಕೆ.ನಳಿನಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀನಿವಾಸ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಂದೇಶ್ ಪಾಲ್ಗೊಂಡಿದ್ದರು. ಯೋಗಾಭ್ಯಾಸದ ನಂತರ ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ದೈಹಿಕ ಶಿಕ್ಷಣ ಸಮನ್ವಯ ಅಧಿಕಾರಿ ಡಾ.ಹರಿಹರನ್ ಪಲ್ಯದ್ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.
ಮಡಿಕೇರಿ ಜೂ.24 : ವ್ಯಾಂಡಮ್ ಎಂಟರ್‌ಪ್ರೈಸಸ್ ನ 28ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಪ್ರತೀ 2000 ಖರೀದಿಗೆ ನೀಡಲಾಗುವ ಉಚಿತ ಕೂಪನ್ “ಲಕ್ಕಿ ಡ್ರಾ” ಸಮಾರಂಭವು ಜೂ.25 ರಂದು ನಡೆಯಲಿದೆ. ವ್ಯಾಂಡಮ್ ಎಂಟರ್‌ಪ್ರೈಸಸ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲಯನ್ ಅಂಬೆಕಲ್ ನವೀನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷೆ, ಕೊಡವ ಸಮಾಜದ ನಿರ್ದೇಶಕಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಲಯನ್ ಕನ್ನಂಡ ಕವಿತಾ ಕಾವೇರಮ್ಮ ಪಾಲ್ಗೊಳ್ಳಲಿದ್ದಾರೆ. ಗೌರವ ಉಪಸ್ಥಿತರಾಗಿ ಶಿಕ್ಷಕಿ ಲಯನ್ ಜಿ.ವನಜಾಕ್ಷಿ ದಾಮೋದರ್ ಭಾಗವಹಿಸಲಿದ್ದಾರೆ ಎಂದು ವ್ಯಾಂಡಮ್ ಎಂಟರ್‌ಪ್ರೈಸಸ್ ಮಾಲೀಕ ಲಯನ್ ಕೆ.ಕೆ.ದಾಮೋದರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9448125571, 9449125571, 08272-225571 ಸಂಪರ್ಕಿಸಬಹುದಾಗಿದೆ.
ಕುಶಾಲನಗರ ಜೂ.24 : 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನದ ಹಾರಾಟ ನಡೆಸಿ ಸಾಧನೆ ಮಾಡಿ ವಾಯು ಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಕೊಡಗಿನ ಸಚಿನ್ ಬೇಂಬೊರೆ ನೇಮಕಗೊಂಡಿದ್ದಾರೆ. ಕುಶಾಲನಗರದ ರಥ ಬೀದಿಯ ಉದ್ಯಮಿ ಪ್ರಸನ್ನ ಕುಮಾರ್ ಬಾಂಬೊರೆ ಮತ್ತು ವಾಣಿ ದಂಪತಿಯ ಪುತ್ರ ಸಚಿನ್ ಬೇಂಬೊರೆ ಇದೀಗ ಫ್ಲೈಯಿಂಗ್ ಆಫೀಸರ್ ರ‍್ಯಾಂಕ್ ಪಡೆದು ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿದ್ದಾರೆ. ಯುಪಿಎಸ್ಸಿ ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ನಲ್ಲಿ ಪರೀಕ್ಷೆಗೆ ದೇಶದ ನಾಲ್ಕು ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಕೇವಲ ಒಂಬತ್ತು ಜನ ಆಯ್ಕೆಯಾಗಿದ್ದು, ಅದರಲ್ಲಿ ಸಚಿನ್ ಕೂಡ ಒಬ್ಬರು. ತರಬೇತಿಯಲ್ಲಿ ಕ್ರೀಡೆ, ಪ್ಲೈಯಿಂಗ್, ಯುದ್ಧ ಸಂದರ್ಭದಲ್ಲಿ ತಯಾರಿ, ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್ ಗಳಲ್ಲಿ ತರಬೇತಿ ಪಡೆದಿದ್ದು, ಇದೀಗ ರಜೆಯಲ್ಲಿ ಕುಶಾಲನಗರಕ್ಕೆ ಬಂದ ಸಂದರ್ಭ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿ ಅತ್ಯಂತ ಕಠಿಣ ಪರಿಶ್ರಮ ಮತ್ತು ತರಬೇತಿಯಿಂದ ಈ ಮಟ್ಟಕ್ಕೆ ಹೋಗಲು ಸಾಧ್ಯವಾಗಿದೆ. ಸಾಧನೆಗೆ ನನ್ನ ಶಿಕ್ಷಕರು, ತರಬೇತಿ ನೀಡಿದ ತರಬೇತಿದಾರರು ಹಾಗೂ ಕುಟುಂಬದ ಸಹಕಾರ ಪ್ರಮುಖವಾಗಿದೆ…
ಮೈಸೂರು ಜೂ.24 : ಗೃಹಲಕ್ಷ್ಮೀ ಯೋಜನೆಗೆ ಜೂ. 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಗೃಹಲಕ್ಷ್ಮೀ ಯೋಜನೆ ಜಾರಿ ತಡವಾಗುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆ್ಯಪ್ ತಯಾರಾಗಿದೆ. ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ಜೂ.27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಾವತಿಸಬಾರದು. ಆಗಸ್ಟ್ 16 ಅಥವಾ 17ರಂದು ಮನೆ ಯಜಮಾನಿ ಖಾತೆಗೆ ಹಣ ತಲುಪುತ್ತದೆ ಎಂದು ಹೇಳಿದ್ದಾರೆ.
ಮಡಿಕೇರಿ ಜೂ.24 : ವರ್ಷದ ಹಿಂದೆ ನಮ್ಮನ್ನು ಅಗಲಿರುವ ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕರು, ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದ *ಪತ್ರಕರ್ತ ಬಿ.ಎನ್.ಮನು ಶೆಣೈ* ಅವರ ನೆನಪಿನ ಕಾರ್ಯಕ್ರಮವು ಜೂ.26 ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಕೊಡಗು ಪತ್ರಿಕಾ ಭವನ ದ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವು ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಸಮಾಚಾರ ಅಭಿಮಾನಿ ಬಳಗ ವತಿಯಿಂದ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ನೆರವೇರಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಮಂಗಳೂರಿನ ನಿವೃತ್ತ ಉಪನ್ಯಾಸಕ ಐವಾನ್ ಡಿ’ಸಿಲ್ವಾ, ಮುಖ್ಯ ಅತಿಥಿಗಳಾಗಿ , ಸಮಾಜ ಸೇವಕರಾದ ವಿ.ಪಿ.ಶಶಿಧರ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ ಮುರುಳಿಧರ ಉಪಸ್ಥಿತರಿರುತ್ತಾರೆ ಎಂದು ಪತ್ರಿಕಾ ಭವನ ಟ್ರಸ್ಟ್ ನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಂಗ ಜೂ.24 : ಬಕ್ರೀದ್ ಹಬ್ಬದ ಹಿನ್ನೆಲೆ ಗೋಣಿಕೊಪ್ಪಲು ರಾಧ ಟೂರಿಸ್ಟ್ ಸಭಾಂಗಣದಲ್ಲಿ ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಗೋಣಿಕೊಪ್ಪಲು ನಗರದ ಮೂರು ಮಸೀದಿಗಳ ಸಮಿತಿಯ ಪದಾಧಿಕಾರಿಗಳು ಹಾಗೂ ಇತರೆ ಸಂಘ ಸಂಸ್ಥೆಗಳ ನೇತಾರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಹಲವು ಸಂಘ ಸಂಸ್ಥೆಗಳ ನೇತಾರರು ಮಾತನಾಡಿ, ಈ ಭಾಗದಲ್ಲಿ ನಾವುಗಳು ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ ಈ ವರೆಗೆ ನಮ್ಮ ಭಾಗದಲ್ಲಿ ಯಾವುದೇ ಹಬ್ಬದ ಸಂದರ್ಭಗಳಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ ಮುಂದೆಯೂ ಕೂಡ ನಾವು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾತನಾಡಿ, ಪ್ರತೀ ವರ್ಷವೂ ಈ ಭಾಗದಲ್ಲಿ ಎಲ್ಲಾ ಧರ್ಮಗಳ ಹಬ್ಬಗಳು ಬಹಳ ಶಾಂತಿಯುತವಾಗಿ ನಡೆಯುತ್ತಿರುವುದು ಬಹಳ ಸಂತಸದ ವಿಷಯ ಮುಂದೆಯೂ ಕೂಡ ನಿಮ್ಮ ಸೌಹಾರ್ದತೆ ಕಾಪಾಡಿ ಸಮಾಜಕ್ಕೆ ಮಾದರಿಯಾಗಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಭೆಯಲ್ಲಿ ಗೋಣಿಕೊಪ್ಪಲು ಪೊಲೀಸ್ ವೃತ ನೀರಿಕ್ಷಕ ಗೋವಿಂದರಾಜು, ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ದೀಕ್ಷಿತ್…
ಮಡಿಕೇರಿ ಜೂ.24 : ಲಯನ್ಸ್ ಜಿಲ್ಲೆ 317- ಡಿ ಇದರ 14 ಕ್ಲಬ್ ಗಳು ಕಾರ್ಯ ನಿರ್ವಹಿಸುವ ಪ್ರಾಂತೀಯ 8ರ ಅಧ್ಯಕ್ಷರಾಗಿ ನವೀನ್ ಅಂಬೆಕಲ್ಲು ನೇಮಕಗೊಂಡಿದ್ದಾರೆ. ಮಡಿಕೇರಿ ಲಯನ್ಸ್ ಸಂಸ್ಥೆಯ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಇವರು 2006-07 ರಲ್ಲಿ ಲಯನ್ಸ್ ಅಧ್ಯಕ್ಷರಾಗಿದ್ದರಲ್ಲದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ 2023-24 ರ ಅವಧಿಗೆ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಜು.1 ರಿಂದ 2024 ಜೂನ್ ಅಂತ್ಯದವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಾಂತೀಯ ರಾಯಭಾರಿಯಾಗಿ ಧನು ಉತ್ತಯ್ಯ, ವಲಯಾಧ್ಯಕ್ಷರುಗಳಾಗಿ ರೋಹಿತ್ ಸಿ.ಕೆ, ಕಾನೆಹಿತ್ಲು ಸತೀಶ್ ಕುಮಾರ್, ಬಾಲಕೃಷ್ಣ ಎಂ.ಎ ಹಾಗೂ ವಿಶಾಲ್ ದೇವಯ್ಯ ನೇಮಕಗೊಂಡಿದ್ದಾರೆ.
ಮಡಿಕೇರಿ ಜೂ.24 : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 19ನೇ ವರ್ಷದ ಪದಗ್ರಹಣ ಸಮಾರಂಭವು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಮಲ್ಚಿರ ಕೆ.ಕಾರ್ಯಪ್ಪ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೊಡವ ಸಮಾಜ ಹಾಗೂ ಶಾಲೆಯ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಆಯ್ಕೆಯಾದ ಶಾಲಾ ನಾಯಕರಿಗೆ ಪದಕ ಪ್ರದಾನ ಮಾಡಿದರು. ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ ಚಂಗಪ್ಪ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿದರು. ಶಾಲೆಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಸಾಹಿತ್ಯ ಸಂಘ, ಮಡಿಕೇರಿ ಕೊಡವ ಸಮಾಜದ ಜಂಟಿಕಾರ್ಯದರ್ಶಿ ನಂದಿನೆರವಂಡ ದಿನೇಶ್ ವಿಜ್ಞಾನಸಂಘ, ನಿರ್ದೇಶಕರಾದ ಬೊಪ್ಪಂಡ ಸರಳಾಕರುಂಬಯ್ಯ ಕಲಾಸಂಘವನ್ನು ಹಾಗೂ ಕೊಡವ ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್ ಕ್ವಿಜ್ ಸಂಘವನ್ನು ಉದ್ಘಾಟಿಸಿದರು. ನಂತರ 2022-23ನೇ ಸಾಲಿನ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು, ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು, ಪೋಷಕರು…
ಮಡಿಕೇರಿ ಜೂ.24 : ಲಯನ್ಸ್ ಜಿಲ್ಲೆ 317- ಡಿ ಇದರ 14 ಕ್ಲಬ್ ಗಳು ಕಾರ್ಯ ನಿರ್ವಹಿಸುವ ಪ್ರಾಂತೀಯ 8ರ ಅಧ್ಯಕ್ಷರಾಗಿ ನವೀನ್ ಅಂಬೆಕಲ್ಲು ನೇಮಕಗೊಂಡಿದ್ದಾರೆ. ಮಡಿಕೇರಿ ಲಯನ್ಸ್ ಸಂಸ್ಥೆಯ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಇವರು 2006-07 ರಲ್ಲಿ ಲಯನ್ಸ್ ಅಧ್ಯಕ್ಷರಾಗಿದ್ದರಲ್ಲದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ 2023-24 ರ ಅವಧಿಗೆ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಜು.1 ರಿಂದ 2024 ಜೂನ್ ಅಂತ್ಯದವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಾಂತೀಯ ರಾಯಭಾರಿಯಾಗಿ ಧನು ಉತ್ತಯ್ಯ, ವಲಯಾಧ್ಯಕ್ಷರುಗಳಾಗಿ ರೋಹಿತ್ ಸಿ.ಕೆ, ಕಾನೆಹಿತ್ಲು ಸತೀಶ್ ಕುಮಾರ್, ಬಾಲಕೃಷ್ಣ ಎಂ.ಎ ಹಾಗೂ ವಿಶಾಲ್ ದೇವಯ್ಯ ನೇಮಕಗೊಂಡಿದ್ದಾರೆ.






