ಮಡಿಕೇರಿ ಮೇ 19 : ಹಾಕಿ ಇಂಡಿಯಾ ವತಿಯಿಂದ ರೂರ್ಕೆಲಾದ ಒಡಿಶಾದಲ್ಲಿ ಮೇ 28ರ ವರೆಗೆ ನಡೆಯಲಿರುವ ಸಬ್‍ಜೂನಿಯರ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ 13ನೇ ಹಾಕಿ ಕರ್ನಾಟಕ ತಂಡದ ಹಾಕಿ ನಾಯಕನಾಗಿ ಕೊಡಗಿನ ಕೆ.ಡಿ.ಹೃತಿಕ್ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ತಂಡದ ಬಹುತೇಕ ಆಟಗಾರರು ಕೊಡಗು ಮೂಲದವರಾಗಿದ್ದಾರೆ. ತಂಡವನ್ನು ಕೊಡಗಿವರಾದ ಟಿ.ಬಿ.ಕೃಶಾಂಕ್ ಕಾಳಪ್ಪ, ಕುಶಾಲ್ ನಂಜಪ್ಪ, ಎಂ.ನಿಶಾಂತ್, ಎಸ್.ಎಲ್.ವಚನ್ ಉತ್ತಪ್ಪ, ಬಿ.ಕೆ.ವಿಖ್ಯಾತ್ ಮಂದಣ್ಣ, ಎಂ.ಎಂ.ಅಚ್ಚಯ್ಯ, ಬಿ.ಪಿ.ಸಂಪನ್ ಗಣಪತಿ, ಕೆ.ವಿ.ವಿಶ್ವಜಿತ್, ಜಿ.ಸುಪ್ರಿತ್, ಸಿ.ಆರ್.ವರುಣ್ ಮಾದಪ್ಪ, ಕೆ.ಎಸ್.ಉತ್ತಪ್ಪ, ಎಂ.ಸಿ.ಜಶನ್ ತಿಮ್ಮಯ್ಯ, ವಿ.ವಿ.ಕಾರ್ತಿಕ್ ಕಾರ್ಯಪ್ಪ ಪ್ರತಿನಿಧಿಸಲಿದ್ದಾರೆ.
ಲೇಖಕ: admin
ಮಡಿಕೇರಿ ಮೇ 19 : ಕೊಡಗು ಜಿಲ್ಲೆ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 1 ಹುದ್ದೆ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ 2 ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ 2023-24 ನೇ ಸಾಲಿನ ಸೀಮಿತ ಅವಧಿಗೆ ಮಡಿಕೇರಿ, ಕೊಡ್ಲಿಪೇಟೆ ಹಾಗೂ ಶಾಂತಳ್ಳಿ ಹೋಬಳಿಗಳಿಗೆ ಸೇರಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಎಂ.ಎಸ್ಸಿ, (ಕೃಷಿ/ ತೋಟಗಾರಿಕೆ/ ಮೀನುಗಾರಿಕೆ/ ಅರಣ್ಯ, ರೇಷ್ಮೆ) ವಿದ್ಯಾರ್ಹತೆ ಹೊಂದಿದ್ದು, ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಮತ್ತು ಎಂಎಸ್ ಆಫಿಸ್‍ನಲ್ಲಿ ಪರಿಣತಿ ಹೊಂದಿರಬೇಕು. ಗರಿಷ್ಠ 45 ವರ್ಷ, ಗೌರವ ಧನ ರೂ.30,000. ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಬಿ.ಎಸ್ಸಿ/ ಎಂ ಎಸ್ಸಿ (ಕೃಷಿ/ತೋಟಗಾರಿಕೆ/ಮೀನುಗಾರಿಕೆ/ಅರಣ್ಯ ರೇಷ್ಮೆ) ವಿದ್ಯಾರ್ಹತೆ ಹೊಂದಿದ್ದು, 1 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ…
ಮಡಿಕೇರಿ ಮೇ 19 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ “ನನ್ನ ಜೀವನ ನನ್ನ ಸ್ವಚ್ಛ ನಗರ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಪಟ್ಟಣದ ವ್ಯಾಪ್ತಿಯ ನಾಗರಿಕರಿಗೆ/ ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ತೊಡಗಲು ಆರ್‍ಆರ್‍ಆರ್ ಆಂದೋಲನ ಅಂದರೆ ತ್ಯಾಜದ ಪ್ರಮಾಣ ಕಡಿತಗೊಳಿಸುವುದು(ರೆಡ್ಯೂಷ್), ತ್ಯಾಜ್ಯದ ಮರುಬಳಕೆ(ರೆಸ್ಯೂ), ತ್ಯಾಜ್ಯದ ಮರು ಉಪಯೋಗದ(ರೀಸೈಕಲ್) ಬಗ್ಗೆ ಪಟ್ಟಣ ಪಂಚಾಯಿತಿ ವತಿಯಿಂದ ಮೇ, 20 ರಿಂದ ಜೂನ್, 5 ರವರೆಗೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಈಗಾಗಲೇ ಸ್ಥಾಪಿಸಿರುವ ಕೇಂದ್ರಕ್ಕೆ ಮತ್ತು ವಾಹನಕ್ಕೆ ನಾಗರಿಕರು/ಸಾರ್ವಜನಿಕರು ತ್ಯಾಜ್ಯವನ್ನು ನೀಡಿ ಯಶಸ್ವಿಗೊಳಿಸಲು ಸಹಕರಿಬೇಕೆಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರು ತಿಳಿಸಿದ್ದಾರೆ. ಜೇಸಿ. ವೇದಿಕೆ ಮತ್ತು ಆರ್‍ಆರ್‍ಆರ್ ಕೇಂದ್ರ ಆನ್ ವೀಲ್ಸ್ ಕೇಂದ್ರಕ್ಕೆ ಉಪಯೋಗಿಸಿದ ಪ್ಲಾಸ್ಟಿಕ್ ಸಾಮಗ್ರಿಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಮಕ್ಕಳ ಪ್ಲಾಸ್ಟಿಕ್ ಆಟಿಕೆಗಳು, ಬಟ್ಟೆಗಳು, ಹಳೇ ಜೀನ್ಸ್, ಯೂನಿಫಾರಂ, ಸೀರೆಗಳು, ಹಳೇ ಬಟ್ಟೆಗಳು, ಚಪ್ಪಲಿ, ಶೂಗಳು, ನ್ಯೂಸ್ ಪೇಪರ್, ಹಳೇ ಪುಸ್ತಕಗಳು…
ಮಡಿಕೇರಿ ಮೇ 19 : ಪ್ರಸಕ್ತ(2023-24) ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಟಿತ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ, 25 ಕೊನೆಯ ದಿನವಾಗಿದೆ. 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಆಯ್ಕೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಯಲ್ಲಿ 6 ನೇ ತರಗತಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಂದ ಜಾತಿ ದೃಢೀಕರಣ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಮುಖ್ಯೋಪಾಧ್ಯಾಯರಿಂದ ದೃಢೀಕೃತಗೊಂಡ ಅಂಕ ಪಟ್ಟಿಯನ್ನು ಸಲ್ಲಿಸುವುದು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ರೂ.2 ಲಕ್ಷ ಒಳಗೆ ಇರಬೇಕು. (ಈ ಬಗ್ಗೆ ತಹಶೀಲ್ದಾರರವರಿಂದ ಪಡೆದ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು). ಅರ್ಜಿಯನ್ನು ಪಡೆಯಲು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ-9480843037, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ-9480843155,…
ನಾಪೋಕ್ಲು ಮೇ 18 : ಇಂಡಿಯಾದ ವತಿಯಿಂದ ಒರಿಸ್ಸಾದ ರೋರ್ಕೆಲಾ ಕ್ರೀಡಾಂಗಣದಲ್ಲಿ ಮೇ.18ರಿಂದ 28ರವರೆಗೆ ನಡೆಯಲಿರುವ 13ನೇ ರಾಷ್ಟ್ರೀಯ ಸಜ್ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕರ್ನಾಟಕ ತಂಡಕ್ಕೆ ನಾಪೋಕ್ಲುವಿನ ಬೊಪ್ಪಂಡ ವಿಕ್ಯಾತ್ ಮಂದಣ್ಣ ಆಯ್ಕೆಯಾಗಿದ್ದಾರೆ. ಪೊನ್ನಮ್ಪೇಟೆ ಕ್ರೀಡಾಶಾಲೆಯ ವಿದ್ಯಾರ್ಥಿಯಾಗಿರುವ ವಿಕ್ಯಾತ ಮಂದಣ್ಣ ನಾಪೋಕ್ಲುವಿನ ಬೊಪ್ಪಂಡ ಕವನ್ ಕಾಳಪ್ಪ ಹಾಗೂ ಸೌಮ್ಯ ದಂಪತಿಗಳ ಪುತ್ರನಾಗಿದ್ದಾನೆ. (ವರದಿ : ಝಕರಿಯ, ನಾಪೋಕ್ಲು)
ಮಡಿಕೇರಿ ಮೇ 18 : ಮೂರು ದಿನಗಳ ಹಿಂದೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದ ಪಾಲಿಬೇಟ್ಟದ ಕಾರ್ಮಿಕ ಬಾಬಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಷಯ ತಿಳಿದ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಮೃತ ಸಂಬಂಧಿಕರಿಗೆ ದೂರವಾಣಿ ಕರೆ ಮೂಲಕ ಸಾಂತ್ವನ ಹೇಳಿ ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳಿಗೆ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಶಾಸಕ ಪೊನ್ನಣ್ಣ ಅವರ ನಿರ್ದೇಶನದಂತೆ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಮೈಸೂರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಮೃತ ಅಂತಿಮ ದರ್ಶನ ಪಡೆದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿ ಶಾಸಕರ ನಿರ್ದೇಶನದಂತೆ ಆಸ್ಪತ್ರೆಗೆ ಭೇಟಿ ನೀಡಿದ್ದು ಕುಟುಂಬಕ್ಕೆ ಧೈರ್ಯ ಹೇಳಿ ಸರ್ಕಾರದಿಂದ ಸಿಗುವ ಪರಿಹಾರವನ್ನು ತಕ್ಷಣ ನೀಡಲು ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಶಾಸಕರು ಚರ್ಚಿಸಲಾಗಿದ್ದು ಪರಿಹಾರದ ಮೊತ್ತವನ್ನ ಕುಟುಂಬಕ್ಕೆ ನೀಡುವಂತೆ ಸೂಚಿಸಿದ್ದಾರೆ ಎಂದು ಹೇಳಿದ ಅವರು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಯುವ ನಿಟ್ಟಿನಲ್ಲಿ ಶೀಘ್ರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರು ಸಭೆ…
ಕೊಡ್ಲಿಪೇಟೆ ಮೇ 18 : ನೀರಗುಂದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ 21ರ ಬಾನುವಾರ ಪುಣ್ಯಾಹ, ಪಂಚಗವ್ಯ, ಗಣಪತಿ ಪೂಜೆ, ಮಹಾಸಂಕಲ್ಪ, ಕಂಕಣಧಾರಣ, ಆದಿತ್ಯಾದಿ ನವಗ್ರಹ ಸಹಿತ ಪರಿವಾರ ದೇವತೆಗಳ ಕಳಸ ಸ್ಥಾಪನೆ, ನಂತರ ದೇವರ ವಿಗ್ರಹಕ್ಕೆ ಜಲಾಧಿವಾಸ, ಕ್ಷೀರಾಧಿವಾಸ, ನೇತ್ರಬಿಂಬ ಶುದ್ದಿ, ಜೀವಕಳೆ, ತೈಲವಾಸ, ಪುಪ್ಪವಾಸ ಸುವರ್ಣವಾಸ, ಧಾನ್ಯಾಧಿವಾಸ ಮಾಡಿ ವಾಸ್ತು ರಾಠೋಡ್ ಹೋಮ, ತತ್ವ ಹೋಮಗಳಿಂದ ಪೂರ್ಣಾಹುತಿ, ವಾಸ್ತುಬಲಿ ನಂತರ ಮಹಾಮಂಗಳಾರತಿ ಇರುತ್ತದೆ. 22ರ ಸೋಮವಾರ ಬೆಳಿಗ್ಗೆ 6.00 ಗಂಟೆಯಿಂದ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ನೇತ್ರ ಮಿಲನ, ಅಲಂಕಾರ, ನಂತರ ಗಣಪತಿಹೋಮ, ನವಗ್ರಹ ಹೋಮ, ಪ್ರಧಾನ ದುರ್ಗಾ ಹೋಮ, ಪೂರ್ಣಾಹುತಿ, ತದನಂತರ ಬಲಿಪ್ರಧಾನ ಹಾಗೂ ಮಹಾಮಂಗಳಾರತಿ ಇರುತ್ತದೆ. ಅಂದು ರಾತ್ರಿ 10-00 ಗಂಟೆಗೆ ಹೇಮಾವತಿ ನದಿಗೆ ತೆರಳಿ ನೂತನ ವಿಗ್ರಹ ಪೂಜೆ ಮಾಡಿ ಕಳಸದೊಂದಿಗೆ ದೇವಾಲಯ ತಲುಪುವುದು ಮುಂಜಾನೆ 5 ಗಂಟೆಗೆ ಕೆಂಡೋತ್ಸವ ಇರುತ್ತದೆ. ಈ ಎಲ್ಲಾ ಪೂಜಾ ಕೈಕರ್ಯಗಳನ್ನು ಶ್ರೀ ಶ್ರೀ ಸದಾಶಿವಸ್ವಾಮಿಗಳು, ಶ್ರೀ ಕ್ಷೇತ್ರ…
ಮಡಿಕೇರಿ ಮೇ 18 : ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಪೂರ್ಣಗೊಂಡ ಕಾಮಗಾರಿಗಳಿಗೆ ‘ಬಿಲ್’ ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಪೂರ್ಣ ಕಾಮಗಾರಿಗಳಿಗೆ ಬಿಲ್ ಮಾಡಬಾರದು. ಒಂದು ವೇಳೆ ನಿಯಮ ಮೀರಿ ಇಂತಹ ಕಾರ್ಯಕ್ಕೆ ಕೈಹಾಕಿದರೆ ತಪ್ಪಿತಸ್ಥ ಅಧಿಕಾರಿಗಳ ತಲೆದಂಡ ಖಚಿತವೆಂದು ತಿಳಿಸಿದರು. ಮಡಿಕೇರಿಯ ಜಿಲ್ಲಾಡಳಿತ ಭವನದ ತಡೆಗೋಡೆಯ ಕಾಮಗಾರಿ ಅಪೂರ್ಣಗೊಂಡಿದೆ. ಪ್ರಸಕ್ತ ಸಾಲಿನ ಮುಂಗಾರು ಜೂನ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಹೀಗಿದ್ದೂ ಇಲ್ಲಿಯವರೆಗೂ ಇದರ ದುರಸ್ತಿ ಕಾರ್ಯ ಪೂರ್ಣವಾಗಿಲ್ಲ, ಮಳೆೆಗಾಲದಲ್ಲಿ ಮತ್ತೆ ಈ ತಡೆಗೋಡೆಯ ಭಾಗ ಕುಸಿಯುವ ಸಾಧ್ಯತೆ ಇದೆ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಭವನದ ತಡೆಗೋಡೆ ಕೆಳಭಾಗದಲ್ಲಿರುವ ಮಡಿಕೇರಿ-ಮಂಗಳುರು ರಸ್ತೆಯ ಸಂಚಾರವನ್ನು ಮುಂಗಾರಿನ ಆಗಸ್ಟ್ ಅಂತ್ಯದವರೆಗೆ ಬಂದ್ ಮಾಡಬೇಕೆಂದು ಮೈನಾ ಒತ್ತಾಯಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ…
ಮಡಿಕೇರಿ ಮೇ 18 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 4ನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದ ಕೈಗನ್ನಡಿಯಂತೆ ಕಾರ್ಯನಿರ್ವಹಿಸುವ ದಿಟ್ಟತನವನ್ನು ಹೊಂದಿದೆ. ಪತ್ರಕರ್ತರಾದವರಿಗೆ ವಿವೇಚನಾ ಶಕ್ತಿಯ ಅಗತ್ಯವಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಅಶೋಕ್ ಸಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ರಚಿತ “ಸೊಡರು” ಪುಸ್ತಕ ವಿಮರ್ಶೆ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ ಭಾಷಾ ಕೌಶಲ್ಯ, ವಿಷಯದ ಆಳವಾದ ಜ್ಞಾನ, ಅಧ್ಯಯನ, ವಿಷಯವನ್ನು ವಿಶ್ಲೇಷಿಸುವ ಅರಿವು ಇರಬೇಕು, ವಿವೇಚನಾತ್ಮಕ ಶಕ್ತಿಯನ್ನು ಹೊಂದಿರಬೇಕು ಮತ್ತು ಸನ್ನಿವೇಶದ ಗಾಂಭೀರ್ಯತೆ ತಿಳಿದಿರಬೇಕು ಎಂದರು. ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮದ ಬಗ್ಗೆ ಕಾರ್ಯಾಗಾರ ಮತ್ತು ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವ ಕುರಿತು ಹಿರಿಯರ ಮಾರ್ಗದರ್ಶನದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು. ಸೊಡರು ಎಂದರೆ ದೀಪ ಎಂದರ್ಥ, ಸೊಡರು ಎಂಬ ಜ್ಞಾನದ ಜ್ಯೋತಿಯ ಮೂಲಕ ನಮ್ಮಲ್ಲಿರುವ ಅಜ್ಞಾನವನ್ನು ತೊಡೆದು ಹಾಕಬೇಕು. ಸತ್ಯವನ್ನು ಎಂದೂ ಅಸತ್ಯ ಎಂದು…
ಮಡಿಕೇರಿ ಮೇ.18 : ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಅಧ್ಯಕ್ಷರಾದ ಟಿ.ಎಂ.ವಿಜಯ ಭಾಸ್ಕರ್ ಮತ್ತು ಸಲಹೆಗಾರ ಪ್ರಸನ್ನ ಕುಮಾರ್ ನಗರದ ಅರಣ್ಯ ಭವನ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಅಬಕಾರಿ ಇಲಾಖೆಗಳಲ್ಲಿ ಆಡಳಿತ ಸುಧಾರಣೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ನಗರದ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯಲ್ಲಿ ಆಡಳಿತ ಸುಧಾರಣೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಹಿಸಿನ್ ಭಾಷಾ, ಶ್ರೀನಿವಾಸ್ ನಾಯಕ್, ವೃತ್ತ ಅರಣ್ಯ ಅಧಿಕಾರಿ ಹನುಮಂತ ರಾಜು ಹಾಗೂ ಇತರರು ಹಲವು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಗೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆ ಮತ್ತು ಆಡಳಿತ ಸುಧಾರಣೆ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ ಅಬಕಾರಿ ಇಲಾಖೆಗೆ ಭೇಟಿ ನೀಡಿ ಆಡಳಿತ ಸುಧಾರಣೆ ಸಂಬಂಧಿಸಿದಂತೆ ಅಬಕಾರಿ ಉಪ ಆಯುಕ್ತರಾದ ಜಗದೀಶ ನಾಯ್ಕ್ ಅವರಿಂದ ಮಾಹಿತಿ ಪಡೆದರು.






