ನಾಪೋಕ್ಲು ಜೂ.14 : ನಾಪೋಕ್ಲು ವ್ಯಾಪ್ತಿಯ ಚೆರಿಯಪರಂಬು ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ಸ್ಥಳೀಯ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚಿದರು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚೇರಿಯಪರಂಬು ರಸ್ತೆಯ ದುರಸ್ಥಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಗಮನಹರಿಸದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವುದನ್ನು ಗಮನಿಸಿದ ಶೌರ್ಯ ಸದಸ್ಯರುಗಳು ಹೊಳೆಯಿಂದ ಹೊರಳು ಕಲ್ಲುಗಳನ್ನು ಶೇಖರಿಸಿ ಪಿಕಪ್ ವಾಹನದಲ್ಲಿ ತಂದು ರಸ್ತೆಗೆ ಹಾಕಿ ಸೇವಾ ಕಾರ್ಯವನ್ನು ಮಾಡಿ ರಸ್ತೆಗೊಂದು ಕಾಯಕಲ್ಪ ನೀಡಿ ನಾಪೋಕ್ಲು ಶೌರ್ಯ ಸದಸ್ಯರು ಊರಿನವರ ಪ್ರಶಂಸೆಗೆ ಭಾಜನರಾದರು. ಈ ಸಂದರ್ಭ ಎನ್.ಬಿ.ದಿಲೀಶ್, ಬಿ.ಹೆಚ್.ಶಂಕರ್, ಸೀನಾ ಮಾಧವನ್, ಪಿ.ಎಂ.ಮಾಯಿಲಪ್ಪ, ಎಂ.ಗಣೇಶ್, ವೈ.ಆರ್.ಅಪ್ಪಣ್ಣ, ಕೆ.ಹೆಚ್.ಪ್ರವೀಣ ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ಮಡಿಕೇರಿ ಜೂ.19 : ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭಗೊಂಡಿತು. ಅಂಗಡಿಯನ್ನು ಕರಾವಳಿ ಕೊಕೋನೆಟ್ ಪೈಚಾರು ಮಾಲೀಕ ಅಬೂಬಕ್ಕರ್ ಬೊಳುಬೈಲು ಉದ್ಘಾಟಿಸಿದರು. ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಕುರುಂಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಅರಂತೋಡು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಜಾಲ್ಸೂರು ಗ್ರಾ.ಪಂ.ಸದಸ್ಯ ಮುಜೀಬ್ ಪೈಚಾರು, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ಪಿ.ಎ.ಉಮ್ಮರ್, ವಿದ್ಯಾಬೋಧಿನಿ ಬಾಳಿಲ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಜತ್ತಪ್ಪ ಮಾಸ್ಟರ್ , ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಎ.ಕೆ.ಶಶಿಕುಮಾರ್, ಅರಂತೋಡು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಇಂಡಿಯನ್ ಮಾರ್ಕೆಟಿಂಗ್ ಅರಂತೋಡಿನ ಹಂಝ ಬೊಳುಬೈಲು, ಕರ್ನಾಟಕ ರಬ್ಬರ್ ಮಾರ್ಕೆಟಿಂಗ್ ಪೈಚಾರ್ ನ ಸಂಶುದ್ದೀನ್, ಶಾರಿಕ್, ಅಬ್ದುಲ್ಲಾ, ನಿರಂಜನ, ಸಿರಾಜ್, ಮತ್ತಿತರರು ಹಾಜರಿದ್ದರು. ಸುದ್ದಿ ಬಿಡುಗಡೆ ಪ್ರತಿನಿಧಿ ತಾಜುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಮಡಿಕೇರಿ ಜು.19 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ 19 ನೇ ವಷ೯ದ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ ಮತ್ತು ಕಾಯ೯ದಶಿ೯ಯಾಗಿ ರತ್ನಾಕರ್ ರೈ ಆಯ್ಕೆಯಾಗಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ನ 2023-24 ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ ಹಾಗೂ ಕಾಯ೯ದಶಿ೯ಯಾಗಿ ರತ್ನಾಕರ್ ರೈ ಆಯ್ಕೆಯಾಗಿದ್ದು, ಆಡಳಿತ ಮಂಡಳಿಯ ಪದಗ್ರಹಣ ಕಾಯ೯ಕ್ರಮ ಜು.4 ರಂದು ಸಂಜೆ 6.30 ಗಂಟೆಗೆ ಮಡಿಕೇರಿ ಹೊರವಲಯದಲ್ಲಿನ ಆಹನ್ ಹಿಲ್ ಕಾಟೇಜ್ ನಲ್ಲಿ ನಡೆಯಲಿದೆ. ರೋಟರಿ ಜಿಲ್ಲೆ 3181 ನ ಮುಂದಿನ ಸಾಲಿನ ನಿಯೋಜಿತ ಗವನ೯ರ್ ವಿಕ್ರಂದತ್ತ ಪದಗ್ರಹಣ ನೆರವೇರಿಸಲಿದ್ದಾರೆ. ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ನಿಗ೯ಮಿತ ಅಧ್ಯಕ್ಷ ಪ್ರಸಾದ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಮಿಸ್ಟಿ ಹಿಲ್ಸ್ ಪ್ರಕಟಣೆ ತಿಳಿಸಿದೆ.
ಮಡಿಕೇರಿ ಜೂ.19 : ಕಕ್ಕಬ್ಬೆಯ “ದಿ ತಾಮರ ಕೂರ್ಗ್” ವತಿಯಿಂದ ನಾಲಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1 ಟೇಬಲ್ ಮತ್ತು 3 ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ತಾಮರ ಕೂರ್ಗ್ ವ್ಯವಸ್ತಾಪಕರಾದ ಕಲ್ಯಾಟಾಂಡ ಗಿರೀಶ್ ಸುಬ್ಬಯ್ಯ, ಅವಿನಾಶ್, ವಿಜು. ಗ್ರಾ.ಪ ಸದಸ್ಯ ಕೊಡಿಮನಿಯಂಡ ಬೋಪಣ್ಣ ಮತ್ತು ಅತಿಥಿ ಶಿಕ್ಷಕರು ಹಾಜರಿದ್ದರು.
ಮಡಿಕೇರಿ ಜೂ.19 : ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆ ವತಿಯಿಂದ ಶಾಸಕ ಡಾ. ಮಂಥರ್ ಗೌಡ ಅವರನ್ನು ಸನ್ಮಾನಿಸಲಾಯಿತು. ನಗರದ ಬ್ರಹ್ಮಾಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರೀಜಿ ಆಶೀರ್ವದಿಸಿ, ಪರಮಾತ್ಮನ ಶಕ್ತಿ ಮತ್ತು ಸ್ಮೃತಿಯಿಂದ ತಮ್ಮ ಕಾರ್ಯದಲ್ಲಿ ವಿಜಯಿಗಳಾಗಿ ಎಂದು ಹಾರೈಸಿ, ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಉಡುಗೊರೆಯೊಂದಿಗೆ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ನಿಮ್ಮೆಲ್ಲರ ಮಾರ್ಗದರ್ಶನದಿಂದ ಆತ್ಮತೃಪ್ತಿಯಿಂದ ಜನಸೇವೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ, ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಕಾಶ್, ರಾಜೇಶ್ವರಿ ವಿದ್ಯಾ ಸಂಸ್ಥೆಯ ನಿರ್ದೇಶಕರು ಹಾಗೂ ವಕೀಲರಾದ ಸಚಿನ್ ವಾಸುದೇವ್ , ಕೊಡಗು ಡಿ.ಸಿ.ಸಿ. ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಪ್ರೇಮ ಕರುಂಬಯ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಬ್ರಹ್ಮಾಕುಮಾರೀಸ್ ಶಾಖೆಯ ಎಲ್ಲಾ ರಾಜಯೋಗ ಶಿಕ್ಷಕಿಯರು ಹಾಜರಿದ್ದರು. ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕ ನಿರೂಪಿಸಿದರು. ಕೊನೆಯಲ್ಲಿ ಎಲ್ಲರಿಗೂ ಪ್ರಸಾದ…
ಸೋಮವಾರಪೇಟೆ ಜೂ.9 : ಪ್ರಾಣಿ, ಪಕ್ಷಿಗಳಿಂದ ಪರಿಸರ ಮತ್ತು ಪ್ರಕೃತಿ ನಾಶವಾಗುತ್ತಿಲ್ಲ. ಪ್ರಕೃತಿ ನಾಶದಲ್ಲಿ ಮಾನವನ ಕೊಡುಗೆ ಅಪಾರವಾದದ್ದು ಎಂದು ಕಲಾವಿದರು ಮತ್ತು ಪಕ್ಷಿತಜ್ಞ ಹಾಸನದ ಬಿ.ಎಸ್.ದೇಸಾಯಿ ಹೇಳಿದರು. ನಾವು ಪ್ರತಿಷ್ಠಾನ ಕೊಡಗು ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ‘ಹಕ್ಕಿಗೊಂದು ಗುಟುಕು ಅಭಿಯಾನ-2023 ರ ಸಮಾರೋಪ ಸಮಾರಂಭ ಹಾಗೂ ಪಕ್ಷಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ಮಾತೆ ಬಳಲಿದ್ದಾಳೆ. ಭೂಮಿಯ ಮೇಲೆ ಮನುಷ್ಯರು ಹಾಗೂ ಇತರ ಜೀವಿಗಳು ಬದುಕಬೇಕು. ದಟ್ಟವಾದ ಕಾಡನ್ನು ಮಾನವನಿಂದ ಸೃಷ್ಟಿಸಲು ಸಾಧ್ಯವಿಲ್ಲ. ಅಂತಹ ಕಾಡನ್ನು ಮನುಷ್ಯರು ನುಗ್ಗಿ ಅರಣ್ಯ ನಾಶ ಮಾಡಲು ಬೀಡಬಾರದು ಎಂದು ಹೇಳಿದರು. ಪ್ರಕೃತಿನಾಶ, ಭೂಮಿಯೊಳಗಿನ ಒತ್ತಡದಿಂದ ಪ್ರಕೃತಿವಿಕೋಪಗಳು, ಹವಮಾನ ವೈಪರಿತ್ಯ ಸಂಭವಿಸುತ್ತಿದೆ. ಮುಂದೆ ಗಂಡಾಂತರದ ಮುನ್ಸೂಚನೆ ಇದೆ. ಈ ಕಾರಣದಿಂದಲಾದರೂ ಪ್ರತಿದಿನ ಪರಿಸರ ಉಳಿಯುವ ಕಾಯಕ ಮಾಡಲೇಬೇಕಾಗಿದೆ ಎಂದರು. ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು. ಅವುಗಳು ಉಳಿದರೆ ಮಾತ್ರ ಮನುಷ್ಯ ಉಳಿಯಲು…
ಸುಂಟಿಕೊಪ್ಪ,ಜೂ.19 : ಸುಂಟಿಕೊಪ್ಪ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಾತಾಜಿ ಜ್ಯುವ¯ರ್ಸ್ ಮಾಲೀಕ ಬಿ.ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಗ್ರಾ.ಪಂ.ಸದಸ್ಯ ಎಂ.ಮಂಜುನಾಥ್ ನೇಮಕಗೊಂಡಿದ್ದಾರೆ. ಮಾದಾಪುರ ರಸ್ತೆಯ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದ ಆವರಣದಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್.ರಮೇಶ್, ಜಂಟಿ ಕಾರ್ಯದರ್ಶಿಯಾಗಿ ದಿವಾಕರ್ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಎಸ್.ಸದಾಶಿವ ರೈ, ಬಿ.ಎಂ.ಸುರೇಶ್ (ಪುಟ್ಟ), ಮಹೇಶ್ ರೈ, ಸುನಿಲ್ ಕುಮಾರ್, ಸುರೇಶ್ ಚಂದು, ಮನುಅಚ್ಚಮಯ್ಯ, ಪವಿ, ಯಶೋಧರ, ಬಿ.ಆರ್.ಅರುಣ್ ಕುಮಾರ್, ಶಿವರಾಮನ್, ನಿಖಿಲ್ ಹರೀಶ್ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2022 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಮಾಡಲಾಗಿದೆ. 1.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ”ಅಳಿವಿನಂಚಿನಲ್ಲಿರುವ ಎರವ ಜನಾಂಗಕ್ಕೆ ಪ್ರೋತ್ಸಾಹ” ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ” ಉತ್ತಂಗ ಕಂಡಿದ್ದ ಸ್ಕೇಟಿಂಗ್ ಕ್ರೀಡೆ ರಿಂಕ್ ಹಾಕಿ ನೆನೆಗುದಿಯಲ್ಲಿ” ವರದಿಗೆ ಕಾಯಪಂಡ ಶಶಿ ಸೋಮಯ್ಯ ಪಡೆದುಕೊಂಡಿದ್ದಾರೆ. ಸಂಘದ ಮಾಜಿ ಉಪಾಧ್ಯಕ್ಷರಾದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿರುವ ತುದಿಬಳ್ಳಿಯಿಂದ ಕಾಳು ಮೆಣಸು ಕೃಷಿ ಸುದ್ದಿಯ ವೀಡಿಯೋಗ್ರಫಿಗೆ ಕೆ.ಬಿ.ದಿವಾಕರ್ ಪಡೆದುಕೊಂಡಿದ್ದಾರೆ. 4.ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ”ಕಾಡಾನೆಗಳ…
ಮಡಿಕೇರಿ ಜೂ.18 : ಕೊಡಗಿನಲ್ಲಿ ವೈದ್ಯಕೀಯ ಕ್ಷೇತ್ರ ತೀರಾ ಹಿಂದುಳಿದಿದ್ದು, ಇದು ಆದಷ್ಟು ಶೀಘ್ರವಾಗಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅನುಭವಿ ತಜ್ಞ ವೈದ್ಯರು ಒಟ್ಟಾಗಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದಕ್ಕೆ ಪೂರಕವಾಗಿ ತಾನು ಯಾವುದೇ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದು ನಿವೃತ್ತ ಲೆ.ಜ. ಡಾ. ಬಿ.ಎನ್.ಬಿ.ಎಂ. ಪ್ರಸಾದ್ ಅವರು ಭರವಸೆ ನೀಡಿದರು. ಮಡಿಕೇರಿಯ ಪತ್ರಿಕಾಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಜನ ಇಲ್ಲಿನ ಪರಿಸರ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶ ಸೇವೆಗಾಗಿ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಕೀರ್ತಿ ಕೊಡಗು ಜಿಲ್ಲೆಯದ್ದಾಗಿದೆ. ಕೊಡಗಿನ ಹಿರಿಮೆ ಇಲ್ಲಿಯವರಿಗೆ ತಿಳಿದಿಲ್ಲ.ಆದರೆ ಉತ್ತರ ಭಾರತದ ಜನತೆಗೆ ಕೊಡಗಿನ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಕೊಡಗನ್ನು ದಕ್ಷಿಣದ ಕಾಶ್ಮೀರ ಎಂದು ಬಣ್ಣಿಸಿದ್ದರು. ಇದಕ್ಕೆ ಇಲ್ಲಿನ ಪರಿಸರ…
ಮಡಿಕೇರಿ ಜು.18 : ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾಯ೯ವಾಗಿದೆ ಎಂದು ಹಿರಿಯ ಪತ್ರಕತ೯ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷ್ಮಿ ವಿರಚಿತ ಚಪ್ಪಾಳೆಗೂ ಬೆಲೆ ಇದೆ ಪುಸ್ತಕವನ್ನು ಲೋಕಾಪ೯ಣೆ ಮಾಡಿ ಮಾತನಾಡಿದ ಚಿದ್ವಿಲಾಸ್, ಸಮಾಜದಲ್ಲಿನ ಪ್ರತೀ ಕ್ಷೇತ್ರವೂ ಆಧುನಿಕ ದಿನಮಾನಗಳ ಬೇಡಿಕೆಗೆ ತಕ್ಕಂತೆ ಬದಲಾವಣೆ ಆಗುತ್ತಿದೆ. ಎಲ್ಲಾ ರಂಗಗಳಲ್ಲಿಯೂ ಹೊಸತನದ ಗಾಳಿ ಬೀಸುತ್ತಿದೆ. ಸಾಹಿತ್ಯ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಸಾಹಿತ್ಯ ರಂಗದಲ್ಲಿಯೂ ಬದಲಾವಣೆ ಅನಿವಾಯ೯ವಾಗಿದೆ. ಮುಖ್ಯವಾಗಿ ಯುವಪೀಳಿಗೆಯನ್ನು ಆಕಷಿ೯ಸುವಂಥ ಸಾಹಿತ್ಯದ ಅನಿವಾಯ೯ತೆ ಇದೆ. ಮಕ್ಕಳಲ್ಲಿ ಆಸಕ್ತಿ ಸೖಷ್ಟಿಸುವ ಸಾಹಿತ್ಯದ ಆದ್ಯತೆ ಸಾಹಿತಿಗಳದ್ದಾಗಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಲೇಖಕರಿಗೆ ಸಾಹಿತ್ಯ ಲೋಕದ ಬದಲಾವಣೆ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟದ ಅಗತ್ಯವಿದ್ದು ಕನ್ನಡ ಪರ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆಯೂ ಚಿದ್ವಿಲಾಸ್ ಸಲಹೆ ನೀಡಿದರು. ಕೊಡಗು ಜಿಲ್ಲಾ ಕನ್ನಡ…






