ಸುಂಟಿಕೊಪ್ಪ ಮೇ 10 : ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ 139 ಮತಗಟ್ಟೆಯಲ್ಲಿ ವಿದ್ಯಾರ್ಥಿನಿ ಶಿವಾನಿ ಪ್ರಥಮ ಮತ ಚಲಾಯಿಸಿ ಸಂಭ್ರಮಿಸಿದರು. ನಂತರ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಹಕ್ಕು ಶ್ರೇಷ್ಠವಾಗಿದ್ದು, ದೇಶವನ್ನು ಆಳುವವರ ಆಯ್ಕೆ ಮಾಡುವ ಹಕ್ಕು ಲಭಿಸಿರುವುದೇ ಅತೀವ ಸಂತಸ ತಂದಿದೆ ಎಂದು ಶಿವಾನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲೇಖಕ: admin
ನಾಪೋಕ್ಲು ಮೇ 10 : ಅಂಚೆ ಮತದಾನ ನಿರಾಕರಿಸಿ ಮತಗಟ್ಟೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ 90 ವರ್ಷದ ವೃದ್ದೆ ಅಮೀನಾ ಗಮನ ಸೆಳೆದರು. ಹಳೇ ತಾಲ್ಲೂಕು ನಿವಾಸಿ ನಾಪೋಕ್ಲು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಎಂ.ಎಂ. ಶಾದುಲಿ ಅವರ ಪತ್ನಿ ಅಮೀನಾ, ಕಳೆದ ಎಲ್ಲಾ ಚುನಾವಣೆಯಲ್ಲೂ ನಾನು ಮತಗಟ್ಟೆಯಲ್ಲೇ ಮತದಾನ ಮಾಡುತ್ತಿದ್ದೇನೆ, ಈ ವರ್ಷ ಯಾಕೆ ಅಂಚೆ ಮತದಾನ ಮಾಡಿಸುತ್ತಿರಿ ಎಂದು ಕೆಲವು ದಿನಗಳ ಹಿಂದೆ ಅಧಿಕಾರಿಗಳು ಅಂಚೆ ಮತದಾನ ಮಾಡಿಸಲು ಮನೆಗೆ ಭೇಟಿ ನೀಡಿದಾಗ ಪ್ರಶ್ನಿಸಿದರು. ಮತಗಟ್ಟೆಗೆ ನಡೆಯಲು ಸಾಧ್ಯವಿಲ್ಲ ಎಂದು ಮಕ್ಕಳು ಮನ ಒಲಿಸಲು ಪ್ರತ್ನಿಸಿದರೂ ಮಾತು ಕೇಳದ ವೃದ್ದೆ ತಾನು ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತೇನೆ ಎಂದು ಪಟ್ಟು ಹಿಡಿದ ಹಿನ್ನೆಲೆ ಇಂದು ಮಗ ಇಬ್ರಾಹಿಂ ನೊಂದಿಗೆ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಗೆ ತೆರಳಿ ಮತವನ್ನು ಚಲಾವಣೆ ಮಾಡಿದರು. 90ವರ್ಷ ವಾದರೂ ಇವರಿಗೆ ಮತದಾನ ಮಾಡಲು ಇರುವ ಮುತುವರ್ಜಿ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ. ವರದಿ…
ನಾಪೋಕ್ಲು ಮೇ 10 : ಮಲೇಶ್ಯಾದಲ್ಲಿ ಮೇ 12 ರಿಂದ 14ರ ತನಕ ನಡೆಯಲಿರು 19ನೇ ಅಂತರ ರಾಷ್ಟ್ರೀಯ ಓಕಿನಾವ ಗೊಜು – ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್ ಶಿಪ್ – 2023ಗೆ ಬಾಲಕರ (7 -1೦ ವರ್ಷದೊಳಗಿನ) ವಿಭಾಗದಲ್ಲಿ) ಕೊಡಗಿನ ಕೊಳ್ಳೀರ ಭವಿನ್ ಆಯ್ಕೆಯಾಗಿದ್ದಾನೆ. ಈತ ನಂಜರಾಯಪಟ್ಟಣದ ಕೊಳ್ಳೀರ ಯೋಗೇಶ್ ರಮ್ಯಾ ದಂಪತಿಯ ಪುತ್ರ. ಭವಿನ್ ಡಾ.ಎಸ್.ಷಣ್ಮುಗಮ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಪ್ರಸ್ತುತ ಬೆಂಗಳೂರಿನ ಇಂಡಿಯನ್ ಏರ್ಫೋರ್ಸ್ (ವಾಯು ಸೇನಾ) ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾನೆ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಮೇ 10 : ಕೊಡಗಿನಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಮಧ್ಯಾಹ್ನದ ವೇಳೆಗೆ ಶೇ.45.64ರಷ್ಟು ಮತದಾನ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 43.99 ರಷ್ಟು ಮತದಾನ ನಡೆದಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 47.34 ರಷ್ಟು ಮತದಾನ ನಡೆದಿದೆ. ಮತದಾರರು ಉತ್ಸಹದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.
ನಾಪೋಕ್ಲು ಮೇ 10 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ (ಜೆಡಿಎಸ್) ಅಭ್ಯರ್ಥಿ ಎಂ. ಎ. ಮನ್ಸೂರ್ ಆಲಿ ಮತ ಚಲಾವಣೆ ಮಾಡಿದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆ 57 ರಲ್ಲಿ ಮನ್ಸೂರ್ ಆಲಿ ಮತ ಚಲಾವಣೆಮಾಡಿದರು. ವರದಿ :ಝಕರಿಯ ನಾಪೋಕ್ಲು
ಮಡಿಕೇರಿ ಮೇ 10 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಸೋಮವಾರಪೇಟೆ ತಾಲೂಕು ಬೇಗೂರು ಗ್ರಾ.ಪಂ ವ್ಯಾಪ್ತಿಯ ಬಳಗುಂದ ಮತಗಟ್ಟೆಯಲ್ಲಿ ತಮ್ಮ ಪತ್ನಿ ದಿವ್ಯ ಅವರೊಂದಿಗೆ ಮತ ಚಲಾಯಿಸಿದರು.
ಮಡಿಕೇರಿ ಮೇ 10 : ಹತ್ತನೇ ತರಗತಿ ಪರೀಕ್ಷೆಯಲ್ಲಿ ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಆರ್.ಶ್ರೇಯಾ 625ಕ್ಕೆ 593 ಅಂಕಗಳನ್ನು ಪಡೆದು ಶೇ.94.88 ರಷ್ಟು ಅಂಕಪಡೆದು ಸಾಧನೆ ಮಾಡಿದ್ದಾಳೆ. ಕನ್ನಡ 117, ಇಂಗ್ಲೀಷ್ 97, ಹಿಂದಿ 95, ವಿಜ್ಞಾನ 97, ಗಣಿತ 89, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದಾಳೆ. ಈಕೆ ಬೋಯಿಕೇರಿ ಗ್ರಾಮದ ವಿ.ಎಂ.ರವಿ ಮತ್ತು ಶೈಲಜಾ ದಂಪತಿಯ ಪುತ್ರಿ.
ಮಡಿಕೇರಿ ಮೇ 10 : ವಿಧಾನಸಭಾ ಚುನಾವಣೆ ಗೆ ಮುಂಜಾನೆ 7 ಗಂಟೆಯಿಂದಲೇ ಮತದಾನ ಪ್ರಕೃಯೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 26.49ರಷ್ಟು ಮತದಾನ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.26.27 ರಷ್ಟು ಮತದಾನ ನಡೆದಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ 26.71ರಷ್ಟು ಮತದಾನ ನಡೆದಿದೆ. ಮತದಾರರು ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು.
ಮಡಿಕೇರಿ ಮೇ 10 : ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ತಮ್ಮ ಪತ್ನಿಯೊಂದಿಗೆ ಆಗಮಿಸಿ ಮಡಿಕೇರಿ ಸಂತ ಮೈಕಲರ ಶಾಲಾ ಆವರಣದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮಡಿಕೇರಿ ಮೇ 10 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣ ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಹುದಿಕೇರಿಯ ಬೇಳೂರುವಿನ ಮತಗಟ್ಟೆ 246ರಲ್ಲಿ ಮತ ಚಲಾಯಿಸಿದರು. ಈ ಸಂದರ್ಭ ಪತ್ನಿ ಕಾಂಚನ ಪೊನ್ನಣ್ಣ, ಸಹೋದರ ನರೇನ್ ಕಾರ್ಯಪ್ಪ ಹಾಗೂ ಮತ್ತಿತರರು ಇದ್ದರು.






