ಮಡಿಕೇರಿ ಮೇ.10 : ವಿಧಾನಸಭಾ ಚುನಾವಣೆಯ ಮತದಾನವು ಜಿಲ್ಲೆಯಾದ್ಯಂತ ಬುಧವಾರ ಶಾಂತಿಯುತ ಹಾಗೂ ಬಿರುಸಿನಿಂದ ನಡೆಯಿತು. ಜಿಲ್ಲೆಯಲ್ಲಿ 9 ಗಂಟೆ ವೇಳೆಗೆ ಶೇ.11.74 ರಷ್ಟು, 11 ಗಂಟೆ ವೇಳೆಗೆ ಶೇ.26.52 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.45.64 ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ 58.24 ರಷ್ಟು ಮತದಾನವಾಗಿತ್ತು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಒಟ್ಟು 543 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗ್ಗಿನ ವೇಳೆಯಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು. ಮತದಾರರು ಮತಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದ ದೃಶ್ಯವು ಮತದಾನದ ಹುಮ್ಮಸ್ಸನ್ನು ಹೆಚ್ಚಿಸಿತು. ಪ್ರಥಮ ಬಾರಿಗೆ ಮತಹಕ್ಕು ಚಲಾಯಿಸಿದ ಯುವ ಮತದಾರರು ಸಂತಸದಿಂದ ಮತದಾನದ ಹಬ್ಬದಲ್ಲಿ ಪಾಲ್ಗೊಂಡು ಮತಹಕ್ಕು ಚಲಾಯಿಸಿದರು. ತಿತಿಮತಿ ಗ್ರಾಮದ ಯುವ ಮತದಾರರೊಬ್ಬರು ಮಾತನಾಡಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮತ ಚಲಾಯಿಸಿದ್ದೇನೆ. ಪ್ರಥಮ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದರು. ನಕ್ಸಲ್ ಪೀಡಿತ…
ಲೇಖಕ: admin
ಮಡಿಕೇರಿ ಮೇ 6 : ಕೊಡಗು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಕಾವಾಡಿ – ಅಮ್ಮತ್ತಿ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ವಿರಾಜಪೇಟೆ ಮೇ 10 : ನಾಪೋಕ್ಲು ಸಮೀಪದ ಬೇತು ಸ.ಹಿ.ಪ್ರಾ.ಶಾಲೆಯ ಮತಗಟ್ಟೆಗೆ ಹಿರಿಯ ವಿಶೇಷ ಚೇತನರೊಬ್ಬರು ಗಾಲಿ ಖುರ್ಚಿಯಲ್ಲಿ ತೆರಳಿ ಮತದಾನ ಮಾಡಿ ಗಮನ ಸೆಳೆದರು.
ಮಡಿಕೇರಿ ಮೇ 10 : ಆಮ್ ಆದ್ಮಿ ಪಕ್ಷದ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಿ.ಎಸ್.ರವೀಂದ್ರ ವಿರಾಜಪೇಟೆ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿದರು. ಕೊಂಡಂಗೇರಿ, ಚಂಬೆಬೆಳ್ಳೂರು, ಬಿಟ್ಟಂಗಾಲ, ವಿ.ಬಾಡಗ, ಬಾಳೆಲೆ ಬೂತ್ ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಹಾಜರಿದ್ದರು.
ಮಡಿಕೇರಿ ಮೇ 10 : ಕೊಡಗು ಜಿಲ್ಲಾ ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ಕೊಡಗು ಜಿಲ್ಲಾ ಮರಾಠ, ಮರಾಠಿ ಸಮಾಜ ಸೇವಾ ಸಂಘ ತಾಳತ್ತಮನೆ ವತಿಯಿಂದ ಮೇ 13 ಮತ್ತು 14 ರಂದು ಎಂ.ಪಿ.ಎಲ್ ಸೀಸನ್-1 ಕ್ರಿಕೆಟ್ ಪಂದ್ಯಾವಳಿ ಮಡಿಕೇರಿಯಲ್ಲಿ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಯುವಕ ಸಂಘದ ಅಧ್ಯಕ್ಷ ಎಂ.ಆರ್.ಮೋಹನ್, ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಬೇರೆ ಜಿಲ್ಲೆ ಅಥವಾ ರಾಜ್ಯದ ಸ್ವಜಾತಿ ಪ್ರತಿ ತಂಡದಲ್ಲಿ ಇಬ್ಬರು ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಥಮ ಬಹುಮಾನ ರೂ.25 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.15 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ರೂ.5 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, 4ನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ಇತರ ವೈಯುಕ್ತಿಕ ಬಹುಮಾನಗಳನ್ನು…
ಕಡಂಗ ಮೇ 10 : ಎಡಪಾಲ ಹಾಗೂ ಅರಪಟ್ಟು ಪೊದವಾಡ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಬಿರುಸಿನ ಮತದಾನ ನಡೆಯಿತು. ಮಹಿಳೆಯರು, ವಯಸ್ಕರು , ಅಂಗವಿಕಲರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರು ಹರ್ಷ ವ್ಯಕ್ತಪಡಿಸಿದರು. ಅರಪಟ್ಟು ಪೊದವಾಡ ಮತಗಟ್ಟೆ ಗೆ ವಿರಾಜಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಶಿವ ರುದ್ರ ಹಾಗೂ ಗ್ರಾಮಾಂತರ ಠಾಣಾಣಾಧಿಕಾರಿ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು ವರದಿ : ನೌಫಲ್ ಕಡಂಗ
ಮಡಿಕೇರಿ ಮೇ 10 : ವಿಧಾನಸಭಾ ಚುನಾವಣೆ ಗೆ ಮುಂಜಾನೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 58.24ರಷ್ಟು ಮತದಾನ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.57.58 ರಷ್ಟು ಮತದಾನ ನಡೆದಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ 58.92ರಷ್ಟು ಮತದಾನ ನಡೆದಿದೆ. ಮತದಾರರು ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು.
ಚೆಯ್ಯಂಡಾಣೆ ಮೇ 10 : ವಿಧಾನ ಸಭಾ ಚುನಾವಣೆಯ ಚೆಯ್ಯಂಡಾಣೆ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ 7 ಗಂಟೆಗೆ ಮೊದಲ ಮತದಾನ ಮಾಡಿದರು. ವಿಕಲಚೇತನರು, ಅಂಗವಿಕಲರು ಹಾಗೂ ರೋಗಿಗಳನ್ನು ಕರೆತರುವ ವಾಹನಕ್ಕೆ ಮಾತ್ರ ಮತಗಟ್ಟೆ ಸಮೀಪಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಎಲ್ಲರು ಸಾಲಾಗಿ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಮೊದಲ ಬಾರಿ ಮತದಾನ ಮಾಡಿದ ಟಿ.ಆರ್. ಸಂದ್ಯಾ , ಟಿ.ಎಸ್. ಆಕಾಶ್, ಬಿ.ಜೆ.ಪುನೀತ್ ರೈ, ಎಂ.ಎ.ಮನೋಜ್, ಪಿ.ಎಂ .ಯೋಶಿಕ್ ,ಪಿ.ಎಂ. ಪುನೀತ್, ಎಂ. ಎಸ್. ಮೈತ್ರಿ ಮತಿತ್ತರರು ಮೊದಲ ಬಾರಿಗೆ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿ ಸಂಭ್ರಮಿಸಿದರು. ಮಧ್ಯಾಹ್ನ ನಂತರ ಮಳೆ ಸುರಿದರು ಕೂಡ ಮತದಾರರು ಆಗಮಿಸಿ ಮತ ಚಲಾಯಿಸಿದರು. ವರದಿ : ಅಶ್ರಫ್
ಮಡಿಕೇರಿ ಮೇ 10 : ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಡಿಕೇರಿ ನಗರಸಭಾ ವ್ಯಾಪ್ತಿಯ ಎವಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಸುಂಟಿಕೊಪ್ಪ, ಮೇ 10 : ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ ಮತಗಟ್ಟೆ 139 ರಲ್ಲಿ ವಿದ್ಯಾರ್ಥಿ ಜ್ಞಾನೇಶ್ ಪ್ರಥಮ ಮತ ಚಲಾಯಿಸಿದರು. ನಂತರ ಮತನಾಡಿ, ಸಂವಿಧಾನದಲ್ಲಿ ಮತದಾನ ಹಕ್ಕು ಪವಿತ್ರವಾದುದು. ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಕಲ್ಪಿಸುವುದು ಯಾವುದೇ ಸರಕಾರದ ಹಕ್ಕಾಗಿದೆ. ಪ್ರಥಮ ಮತ ಅರ್ಹ ವ್ಯಕ್ತಿಗೆ ನೀಡಿದ್ದೇನೆ ಎಂದು ಹೇಳಿದರು.






