ಮಡಿಕೇರಿ ಮೇ.8 : ವಿಧಾನಸಭಾ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 543 ಮತಗಟ್ಟೆಗಳಲ್ಲಿ ಮೇ, 10 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 4,56,313 ಮತದಾರರಿದ್ದು, 2,24,875 ಪುರುಷರು ಮತ್ತು 2,31,415 ಮಹಿಳಾ ಮತದಾರರು, 23 ಇತರ ಮತದಾರರು ಇದ್ದಾರೆ ಎಂದರು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,32,148 ಮತದಾರರಿದ್ದು, 1,13,585 ಪುರುಷರು ಮತ್ತು 1,18,553 ಮಹಿಳಾ ಮತದಾರರಿದ್ದಾರೆ. 10 ಮಂದಿ ಇತರ ಮತದಾರರು ಇದ್ದಾರೆ ಎಂದು ಹೇಳಿದರು. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,24,165 ಮತದಾರರಿದ್ದು, 1,11,290 ಪುರುಷ ಮತ್ತು 1,12,862 ಮಹಿಳಾ ಮತದಾರರು ಇದ್ದಾರೆ. 13 ಇತರ ಮತದಾರರು ಇದ್ದಾರೆ…
ಲೇಖಕ: admin
ಸೋಮವಾರಪೇಟೆ ಮೇ 8 : ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರು ಸಂಪಿಗೆಕಟ್ಟೆಯಲ್ಲಿ ರೋಡ್ ಶೋ ನಡೆಸಿದರು. ಭಾಷಣಕಾರರಾಗಿ ವೇದಿಕೆಯೇರಿದ ರಂಜನ್ ಅವರ ಪುತ್ರ ಡಾ.ಕಾರ್ಯಪ್ಪ ಅವರು ತಮ್ಮನ್ನು ತಾವು ಪರಿಚಯಿಸಿಕೊಂಡು, ಅಮೆರಿಕಾದ ಜನರ ಸೇವೆ ಮಾಡುತ್ತಿದ್ದಾರೆಂದು ಆರೋಪಿಸಿರುವ ಅಪ್ಪಚ್ಚು ರಂಜನ್ ಅವರ ಡಾಕ್ಟರ್ ಪುತ್ರ ನಾನೇ ಎಂದರು. ಅಪ್ಪಚ್ಚು ರಂಜನ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದ ಡಾ.ಕಾರ್ಯಪ್ಪ, ನಾನು ವೈದ್ಯಕೀಯ ವಿದ್ಯಾಭ್ಯಾಸವನ್ನು ಜಿಲ್ಲೆಯ ಹೊರಗೆ ಮಾಡಿದ್ದೇನೆ. ನನ್ನ ತಂದೆ ಈಗ ಮಡಿಕೇರಿ ಕ್ಷೇತ್ರವನ್ನೇ ವಿದ್ಯಾ ಕೇಂದ್ರವನ್ನಾಗಿ ಮಾಡಿದ್ದಾರೆ. ವಿಶ್ವವಿದ್ಯಾನಿಲಯ, ವೈದ್ಯಕೀಯ, ಇಂಜಿನಿಯರಿಂಗ್, ವಸತಿ ಶಾಲೆಗಳು, ಸೈನಿಕ ಶಾಲೆ ಎಲ್ಲವೂ ಇಲ್ಲೇ ಇದೆ ಎಂದರು. ನಾನು ಪ್ರತಿ ಚುನಾವಣಾ ಸಮಯದಲ್ಲಿ ಅಮೇರಿಕದಿಂದ ಬರುತ್ತೇನೆ, ಕ್ಷೇತ್ರದಲ್ಲಿ ಸೇವಾಕಾರ್ಯದಲ್ಲಿ, ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಕೋವಿಡ್ ಸಮಯದಲ್ಲಿ ನನ್ನ ತಂದೆ ಪಿಪಿಇ ಕಿಟ್ ಧರಿಸಿ, ಕೋವಿಡ್ ಪೀಡಿತರನ್ನು ಭೇಟಿ ಮಾಡುವಂತೆ ಸಲಹೆ ನೀಡಿದವನೂ ನಾನೇ. “ಆದರೆ, ಡಾಕ್ಟರ್ ಮಂಥರ್ ಗೌಡ್ರೇ, ಪಕ್ಕದ…
ಮಡಿಕೇರಿ ಮೇ 8 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಶೇ.93.19 ಫಲಿತಾಂಶದೊಂದಿಗೆ ರಾಜ್ಯಕ್ಕೆ 9ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಜಿಲ್ಲೆ ರಾಜ್ಯಕ್ಕೆ 11 ಸ್ಥಾನದಲ್ಲಿತ್ತು. ಜಿಲ್ಲೆಗೆ ಪ್ರಥಮ-ಮಡಿಕೇರಿಯ ಸಂತ ಮೈಕೆಲರ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿನಿ ಮರ್ಲಿನ್ ಲಾಸ್ರೆಡೋ, ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ವೈಷ್ಣವಿ ಅವರುಗಳು 620(ಶೇ.99.20) ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮರಾಗಿದ್ದಾರೆ. ಸೋಮವಾರಪೇಟೆಯ ಫಾತಿಮಾ ಕಾನ್ವೆಂಟ್‍ನ ಶ್ರೀವಿದ್ಯಾ ಡಿ.619(ಶೇ.99.04) ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೂಡಿಗೆಯ ಏಂಜೆಲಾ ವಿದ್ಯಾನಿಕೇತನದ ಚೇತನ್ ಎಸ್.ಎನ್. ಮತ್ತು ಗೋಣಿಕೊಪ್ಪಲು ಲಯನ್ಸ್ ಪ್ರೌಢಶಾಲೆಯ ದೀತ್ಯಾ ದೇಚಮ್ಮ ಎಂ.ವಿ. ಅವರುಗಳು 618 (ಶೇ.98.88) ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. 5597 ವಿದ್ಯಾರ್ಥಗಳು ತೇರ್ಗಡೆ- ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಜಿಲ್ಲೆಯ 6026 ವಿದ್ಯಾರ್ಥಿಗಳಲ್ಲಿ 5597 ಮಂದಿ ಉತ್ತೀರ್ಣಗಾಗಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 1769 ವಿದ್ಯಾರ್ಥಿಗಳಲ್ಲಿ 1608 ಮಂದಿ ತೇರ್ಗಡೆಯಾಗಿ ಶೇ.90.90 ಫಲಿತಾಂಶ ಬಂದಿದ್ದರೆ, ಸೋಮವಾರಪೇಟೆ ತಾಲ್ಲೂಕಿನ 2383 ವಿದ್ಯಾರ್ಥಿಗಳಲ್ಲಿ 2270…
ಮಡಿಕೇರಿ ಮೇ 8 : ಕೋಮು ಭಾವನೆ ಬಿತ್ತುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಜನರನ್ನು ಗೊಂದಲಕ್ಕೀಡು ಮಾಡುತ್ತಿವೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಜಾಶೀರ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಎದುರಾಗಿರುವ ಚುನಾವಣೆ ಅತ್ಯಂತ ವಿಭಿನ್ನ ರೀತಿಯದ್ದಾಗಿದೆ. ಅಲ್ಪಸಂಖ್ಯಾತರು ತನ್ನ ಮತ ಬ್ಯಾಂಕ್ ಎಂದು ಭಾವಿಸಿಕೊಂಡಿರುವ ಕಾಂಗ್ರೆಸ್ ಈಗಾಗಲೇ ಗೆದ್ದಿರುವ ಭ್ರಮೆಯಲ್ಲಿದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪದ ಕಾಂಗ್ರೆಸ್ ಮುಖಂಡ ಕೆ.ಎಂ.ಇಬ್ರಾಹಿಂ ಅವರ ಪುತ್ರ ರಫೀಕ್ ಅವರು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು. ಈ ಬಾರಿಯ ಚುನಾವಣೆಯಲ್ಲಿ ಜಾತ್ಯತೀತ ನಿಲುವಿನ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರನ್ನು ಕ್ಷೇತ್ರದ ಜನತೆ ಆಶೀರ್ವದಿಸಲಿದ್ದು, ಅವರ ಗೆಲುವು ನಿಶ್ಚಿತವೆಂದು ಹೇಳಿದರು. ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ಪ್ರಮುಖ ರಾಜಕೀಯ ಪಕ್ಷಗಳು ಜೆಡಿಎಸ್ ಈ ಚುನಾವಣೆಯಲ್ಲಿ ಹೊಂದಾಣಿಕೆಯ ರಾಜಕೀಯ ಮಾಡುತ್ತಿರುವುದಾಗಿ ಅಪಪ್ರಚಾರ ಮಾಡುತ್ತಿವೆ. ನಿಜಾಂಶವೆಂದರೆ ಒಳ…
ಮಡಿಕೇರಿ ಮೇ 8 : ಮಡಿಕೇರಿ ಕ್ಷೇತ್ರದ ಶಾಸಕರು ಕೋಟ್ಯಾಂತರ ರೂ. ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಅನುದಾನ ಎಲ್ಲಿಗೆ ಬಳಕೆಯಾಗಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಪ್ರಮುಖ ಸುರೇಶ್ ಹಣಕೋಡು ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಮತದಾರರು ಜಾತಿ, ಮತ, ಧರ್ಮಗಳನ್ನು ಮೀರಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಐದು ಬಾರಿ ಶಾಸಕರಾದವರು ಕೋಟ್ಯಾಂತರ ರೂ. ಅನುದಾನ ತಂದಿರುವ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಇಷ್ಟು ಹಣ ಬಂದಿದ್ದರೂ ಕ್ಷೇತ್ರ ಅಭಿವೃದ್ಧಿ ಕಾಣದೆ ಇರಲು ಕಾರಣವೇನೆಂದು ಪ್ರಶ್ನಿಸಿದರು. ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ವಸಂತ ಶಾಂತವೇರಿ ಮಾತನಾಡಿ ಬಿಜೆಪಿಯಲ್ಲಿನ ಗೊಂದಲಗಳಿಂದ ಬೇಸತ್ತು ಪಕ್ಷ ತೊರೆದಿದ್ದೇನೆ ಎಂದರು. ಭ್ರಷ್ಟಾಚಾರ ರಹಿತ ಆಡಳಿತ ದೊgತಯಕಬೇಕೆನ್ನುವ ಚಿಂತನೆ ತನ್ನದಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾದ ನಡೆUಳು ಕಂಡು ಬಂದಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮುರುಳಿ ಉಪಸ್ಥಿತರಿದ್ದರು.
ಮಡಿಕೇರಿ ಮೇ 8 : ಸಿದ್ದಾಪುರ ಸಂತ ಜೋಸೆಫ್‌ರ ಚರ್ಚ್‌ನ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವದ ಪ್ರಯುಕ್ತ ದಿವ್ಯ ಅಡಂಬರ ಬಲಿ ಪೂಜೆಯನ್ನು ಬೆಂಗಳೂರಿನ ಇಂದಿರಾ ನಗರದ ಫಾದರ್ ಬಾಲ್ ರಾಜ್ ಧರ್ಮಗುರುಗಳು ನೆರವೇರಿಸಿದರು. ಕ್ರೈಸ್ತ ಬಾಂಧವರು ನೂರಾರು ಸಂಖ್ಯೆಯಲ್ಲಿ ಪ್ರಾರ್ಥನೆ ಹಾಗೂ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂತ ಜೋಸೆಫ್ ರ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪ ವಾದ್ಯ ಗೋಷ್ಠಿಗಳ ಮೂಲಕ ಹಳೇ ಸಿದ್ದಾಪುರದ ರಸ್ತೆಯ ಸಂತ ಮೇರಿ ಗವಿಯವರೆಗೆ ಭಕ್ತಾದಿಗಳು ಮೇಣದ ಬತ್ತಿ ಹಿಡಿದು ಮೆರವಣಿಗೆ ಮೂಲಕ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿ ಚರ್ಚ್‌ಗೆ ಹಿಂತಿರುಗಲಾಯಿತು. ಸಿದ್ದಾಪುರ ಧರ್ಮ ಕೇಂದ್ರದ ಫಾದರ್ ಮೈಕಲ್ ಮೇರಿ, ಫಾದರ್ ದಯಾನಂದ ಪ್ರಭು ವಿರಾಜಪೇಟೆ, ಫಾದರ್ ಜ್ಞಾನಪ್ರಕಾಶ್ ನಾಪೋಕ್ಲು ಮತ್ತು ಕೊಡಗಿನ ಇತರ ಧರ್ಮ ಕೇಂದ್ರದ ಗುರುಗಳು ವಾರ್ಷಿಕೋತ್ಸವ ಹಬ್ಬದಲ್ಲಿ ಪಾಲ್ಗೊಂಡಿದ್ದು, ನೆರೆದಿದ್ದ ಭಕ್ತರಿಗೆ ಆಶೀರ್ವದಿಸಿದರು. ಈ ಸಂದರ್ಭ ಪಾಲನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.
ಮಡಿಕೇರಿ ಮೇ 8 : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕೆಎಸ್‌ಆರ್‌ಟಿಸಿ ಬಸ್‍ಗಳ ಮುಖಾಂತರ ಕರೆದುಕೊಂಡು ಹೋಗುವ ಮಾರ್ಗದ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನ ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮೂರ್ನಾಡು ಮಾರ್ಗವಾಗಿ ಬಸ್ ಸಂಚರಿಸಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ. ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಟ್ಟಗೇರಿ-ನಾಪೋಕ್ಲು-ಕಕ್ಕಬೆ-ಪಾರಾಣೆ ಮಾರ್ಗವಾಗಿ ಬಸ್ ಸಂಚರಿಸಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿಗೆ ತಲುಪಲಿದೆ. ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಹಾಕತ್ತೂರು-ಮರಗೋಡು-ಸಿದ್ದಾಪುರ-ಅಮ್ಮತ್ತಿ ಮಾರ್ಗವಾಗಿ ಬಸ್ ಸಂಚರಿಸಿ ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲುಪಲಿದೆ. ಕರಿಕೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಭಾಗಮಂಡಲ-ಅಯ್ಯಂಗೇರಿ-ನೆಲಜಿ-ಬಲ್ಲಮಾವಟಿ-ಕಕ್ಕಬೆ-ಚೆಯ್ಯಂಡಾಣೆ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಜೂನಿಯರ್ ಕಾಲೇಜಿಗೆ ತಲುಪಲಿದೆ. ಮಡಿಕೇರಿ ಕೋಟೆ ಆವರಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಕತ್ತಲೆಕಾಡು-ಕಡಗದಾಳು-ಚೆಟ್ಟಳ್ಳಿ-ಸಿದ್ದಾಪುರ-ಅಮ್ಮತ್ತಿ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಜೂನಿಯರ್…
ಮಡಿಕೇರಿ ಮೇ 8 : ನಗರದ ಜಿಲ್ಲಾ ಪಂಚಾಯಿತಿ ಬಳಿ (ಗೃಹ ಮಂಡಳಿ ಹತ್ತಿರ) ಭಾರತ ಚುನಾವಣಾ ಆಯೋಗದಿಂದ ಸುಮಾರು 4.25 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ’ವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಉದ್ಘಾಟಿಸಿದರು. ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾ ತಹಶೀಲ್ದಾರ್ ರವಿಶಂಕರ, ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ಎಇಇ ದ್ರುವರಾಜು, ಜೂನಿಯರ್ ಎಂಜಿನಿಯರ್ ಸತೀಶ್, ಚುನಾವಣಾ ಶಿರಸ್ತೇದಾರ್ ಪ್ರಕಾಶ್ ಇತರರು ಇದ್ದರು. ಮತ ಎಣಿಕೆ ಪೂರ್ಣಗೊಂಡ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಸೂಕ್ತ ಭದ್ರತೆಯೊಂದಿಗೆ ಈ ಉಗ್ರಾಣದಲ್ಲಿ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮಡಿಕೇರಿ ಮೇ.8 : ಪ್ರಸಕ್ತ (2023-24)ಸಾಲಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎ-ಎಚ್‍ಆರ್‍ಡಿ, ಬಿಎಸ್ಸಿ, ಬಿಎಸ್‍ಡಬ್ಲ್ಯು ಕೋರ್ಸ್‍ಗಳಿಗೆ ಉಚಿತವಾಗಿ ಅರ್ಜಿಯನ್ನು ಕಾಲೇಜಿನಲ್ಲಿ ಹಾಗೂ ಕಾಲೇಜಿನ ಜಾಲತಾಣ www.fmkmcc.edu.in ನಲ್ಲಿ ಪಡೆದುಕೊಳ್ಳಬಹುದು. ನಿಯಮಾನುಸಾರ ಭರ್ತಿ ಮಾಡಿದ ಅರ್ಜಿಯನ್ನು ಕಾಲೇಜಿನ ಕಚೇರಿಗೆ ಹಿಂದಿರುಗಿಸುವುದು. ಹೆಚ್ಚಿನ ಮಾಹಿತಿಗೆ 08272-298222/ 8088272689 ನ್ನು ಸಂಪರ್ಕಿಸಬಹುದು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಮಡಿಕೇರಿ ಏ.8 : ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೆ ಮಾನ್ಯತೆ ಪಡೆದ 12 ಬಗೆಯ ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ಆಧಾರ್ ಕಾರ್ಡ್, ಎಂಎನ್‍ಆರ್‍ಇಜಿಎ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಹೆಲ್ತ್ ಇನ್ಸುರೆನ್ಸ್ ಕಾರ್ಡ್, ಚಾಲನಾ ಪರವಾನಗಿ ಪತ್ರ, ಪಾನ್‍ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‍ಜಿಐ ವತಿಯಿಂದ ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು. ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ ತೋರಿಸಿ ಮತ ಹಕ್ಕು ಚಲಾಯಿಸಬಹುದಾಗಿದೆ. ‘ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಪ್ರತಿ ಮತಗಟ್ಟೆಯ 200 ಮೀಟರ್ ಅಂತರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬೂತ್‍ಗಳನ್ನು ಸ್ಥಾಪಿಸಬಹುದಾಗಿದೆ. ಈ ಬೂತ್‍ಗಳಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿಯ, ಪಂಚಾಯತ್…






