ಲೇಖಕ: admin

ಚೆಯ್ಯಂಡಾಣೆ ಮೇ 9 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ  ನರಿಯಂದಡ ಕೇಂದ್ರ ಪ್ರೌಢಶಾಲೆ ಶೇ.100 ರಷ್ಟು ಸಾಧನೆ ಮಾಡಿದೆ. ಪರೀಕ್ಷೆಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ಹಾಜರಾಗಿದ್ದು, ಗಂಡು 9, ಹೆಣ್ಣು 14 ಮಂದಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಉನ್ನತ ಶ್ರೇಣಿಯಲ್ಲಿ ಈರ್ವರು, ಪ್ರಥಮ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು,  ದ್ವಿತೀಯ ಆರು, ತೃತೀಯ ಶ್ರೇಣಿಯಲ್ಲಿ ಇಬ್ಬರು  ಉತ್ತೀರ್ಣರಾದರು. ಕೆ.ಯು.ಫೌಝಿಯಾ 562 ಅಂಕ ಪಡೆದು ಶಾಲೆಗೆ ಪ್ರಥಮ, ವಿ.ಯಂ.ಅಜಯ್ 557 ಅಂಕ ಪಡೆದು ದ್ವಿತೀಯ, ಪಿ.ಟಿ.ಶರಣ್ಯ 510 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವರದಿ :  ಅಶ್ರಫ್     

Read More

ಚೆಯ್ಯಂಡಾಣೆ ಮೇ 9 :  ಚಾಮಿಯಾಲ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ 4ನೇ ವರ್ಷದ ಚಾಮಿಯಾಲ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು  2 ದಿನಗಳ ಕಾಲ ಕುವೆಲೆರ ಅನಿಸ್ ಕುಟುಂಬದ ಗದ್ದೆಯಲ್ಲಿ  ನಡೆಯಿತು. ಫೈನಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಎ.ಎಸ್. ಬ್ಲಾಸ್ಟರ್ಸ್ ತಂಡ ಹೊರಹೂಮ್ಮಿದರೆ, ರನ್ನರ್ಸ್ ಸ್ಥಾನಕ್ಕೆ ಅಯಾನ್ ಸೂಪರ್ ಸ್ಟಾರ್ ತಂಡ ತೃಪ್ತಿ ಪಟ್ಟಿತ್ತು. ಮೂರನೇ ಸ್ಥಾನವನ್ನು ಶಾಮಿಲಿ ಕಿಂಗ್ಸ್ ತಂಡ ಪಡೆದು ಕೊಂಡಿತ್ತು. ಮೊದಲು ನಡೆದ ಸೆಮಿಫೈನಲ್ ಪಂಧ್ಯದಲ್ಲಿ ಅಯಾನ್ ಸೂಪರ್ ಸ್ಟಾರ್ ತಂಡ ಎ.ಎಸ್.ಬ್ಲಾಸ್ಟರ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು  ಸೆಮಿಫೈನಲ್ ಪಂದ್ಯಾವಳಿಯನ್ನು ಎ.ಎಸ್.ಬ್ಲಾಸ್ಟರ್ಸ್ ತಂಡ ಶಾಮಿಲಿ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾವಳಿಯಲ್ಲಿ  ಸ್ಥಳೀಯ ಜಮಾಅತ್ ಅಧ್ಯಕ್ಷ ಕೆ.ಎ.ಮಜೀದ್ ಬೋಲಿಂಗ್ ಹಾಗೂ ಗ್ರಾಮದ ಹಿರಿಯರಾದ ರಶೀದ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿದರು. ಒಟ್ಟು 5 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದವು. ಅಯಾನ್ ಸೂಪರ್ ಸ್ಟಾರ್ , ಎ.ಎಸ್ ಬ್ಲಾಸ್ಟರ್ಸ್, ಶಾಮಿಲಿ…

Read More

ನಾಪೋಕ್ಲು ಮೇ 9 : ಪಾರಾಣೆ ಪ್ರೌಢಶಾಲೆಯು ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, ಸತತ ನಾಲ್ಕು ಬಾರಿ ಶೇ.100 ಫಲಿತಾಂಶ ಗಳಿಸಿದ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯು ಶೇ. 95.31 ಫಲಿತಾಂಶ ದಾಖಲಿಸಿದರೆ ಸೇಕ್ರೆಡ್ ಹಾರ್ಟ್ ಶಾಲೆಯು 93.33 ಫಲಿತಾಂಶ ದಾಖಲಿಸಿದೆ. ಶ್ರೀರಾಮ ಟ್ರಸ್ಟ್ ಶಾಲೆಯ ವಿದ್ಯಾರ್ಥಿ ಎಮ್.ಸಿ ಸಮಯ ಉತ್ತಪ್ಪ 613 ಅಂಕಗಳಿಸಿ 98 ಶೇ ಫಲಿತಾಂಶ ಪಡೆದುಕೊಂಡಿದ್ದಾರೆ. ಅದೇ ಶಾಲೆಯ ವಿದ್ಯಾರ್ಥಿಗಳಾದ ಆರ್ಯನ್ ಅಯ್ಯಪ್ಪ 604 ಅಂಕ ಗಳಿಸಿ ಶೇ. 96 ಅಂಕ ಹಾಗೂ ಎನ್.ಪಿ.ಪ್ರಿಶಾ ಮಾಚಮ್ಮ 601 ಅಂಕಗಳಿಸಿ 96.16 ಫಲಿತಾಂಶ ಪಡೆದುಕೊಂಡಿದ್ದಾರೆ. ಉಳಿದಂತೆ ಕಕ್ಕಬ್ಬೆಯ ಅನುದಾನಿತ ಪ್ರೌಢಶಾಲೆ 93.33, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ ಶೇ.85, ನಾಪೋಕ್ಲುವಿನ ಕೆಪಿಎಸ್ ಪ್ರೌಢಶಾಲೆ ಶೇ.80.39, ಹೊದವಾಡ ಸರ್ಕಾರಿ ಪ್ರೌಢಶಾಲೆ ಶೇ.88.8 ಫಲಿತಾಂಶ ಪಡೆದುಕೊಂಡಿದೆ. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಮೇ 9 :  ಪರಿಸರ ಸಂರಕ್ಷಣಾ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ  ಸಂಯುಕ್ತಶ್ರಯದಲ್ಲಿ ಪರಿಸರ ಸಂರಕ್ಷಣೆ ಹಾಗೂ  ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ಎಫ್.ಎಂ.ಕೆ.ಎಂ.ಸಿ. ಕಾಲೇಜು ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಪರಿಸರ ಅಧಿಕಾರಿ ಎಂ. ಜಿ. ರಘುರಾಮ್  ವಿದ್ಯಾರ್ಥಿಗಳಿಗೆ  ಪ್ರತಿಜ್ಞೆ ವಿಧಿ  ಬೋಧಿಸಿದರು. ನಂತರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ನ ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ  ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋದಿಸಿದರು.   ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಆಯುಕ್ತ  ಬೇಬಿ ಮ್ಯಾಥ್ಯೂ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ  ಮೇಜರ್ ಡಾ. ಬಿ.ರಾಘವ  ಸ್ವಾಗತಿಸಿದರು. ಕಾಲೇಜಿನ ಎಂ.ಎ.ಕೊಡವದ ಸಂಯೋಜಕ  ಮೇಚಿರ ರವಿಶಂಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಜಂಟಿ ಕಾರ್ಯದರ್ಶಿ  ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಮಡಿಕೇರಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಅಜ್ಜಮಕ್ಕಡ ಎಂ.…

Read More

ಮಡಿಕೇರಿ ಮೇ 9 :  ಮೇಲಿನ ಎರಡೂ ಕೃತಿಗಳು ಅಂಕಣ ಬರಹಗಳ ಸಂಗ್ರಗಳಾಗಿದ್ದು, ‘ಕೊಡವ ಮಕ್ಕಡಕೂಟ(ರಿ)’ ಅವರಿಂದ ಪ್ರಕಟವಾದ ಕೊಡವ ಸಾಹಿತ್ಯ ಮಾಲೆ ಸರಣಿಯ 61 ಮತ್ತು 62ನೇ ಪುಸ್ತಕಗಳಾಗಿವೆ. ಲೇಖಕ ಬಾಳೆಯಡ ಶ್ರೀ ಕಿಶನ್ ಪೂವಯ್ಯ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಅವಳಿ ಪುಸ್ತಕಗಳನ್ನು ಇದೆ 2023 ರ, ಫೆಬ್ರವರಿ ತಿಂಗಳಿನಲ್ಲಿ ಸಾಹಿತ್ಯಲೋಕಕ್ಕೆ ಅನಾವರಣಗೊಳಿಸಿದ್ದಾರೆ. ಕೊಡವ ಮಕ್ಕಡ ಕೂಟ(ರಿ) ಸಂಸ್ಥೆಯ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ತಮ್ಮ ಅಧ್ಯಕ್ಷರ ನುಡಿಯಲ್ಲಿ ಲೇಖಕ ಕಿಶನ್ ಪೂವಯ್ಯ ನವರ ಬಹುಮುಖ ಪ್ರತಿಭೆಯನ್ನು ವರ್ಣಿಸಿದ್ದಾರೆ. ಅಂತೆಯೇ, “ಶಕ್ತಿ” ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಪ್ರತಿಯೊಂದು ಲೇಖನz ಬಗ್ಗೆ ಸಂಕ್ಷಿಪ್ತವಾದ ಅಭಿಪ್ರಾಯವನ್ನುಗಟ್ಟಿಯಾಗಿ ವ್ಯಕ್ತಪಡಿಸಿ, ನನ್ನ ವಿಮರ್ಶೆಯನ್ನು ತೆಳುವಾಗಿಸಿದ್ದಾರೆ. ಇನ್ನು ವಿದ್ವಾಂಶರು, ಹಿರಿಯ ವಕೀಲರಾದ ಗೌರವನ್ವಿತ ಬಾಲಸುಬ್ರಮಣ್ಯ ಕಂಜರ್ಪಣೆಯವರು ತಮ್ಮ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ಪ್ರಕೃತಿಯನ್ನು, ನೆಲ-ಜಲಸಂಪತ್ತನ್ನು, ವನಸಿರಿಯಜೊತೆಗೆ ಪ್ರಾಣಿಪಕ್ಷಿಗಳ ಸಹಬಾಳ್ವೆಯನ್ನು ಕೊಂಡಾಡುತ್ತಾ, “ಅಲ್ಲಿಗೆ ಸಲ್ಲದ ಏಕೈಕಜೀವಿ, ಮನುಷ್ಯನ” ಸ್ವಾರ್ಥಬುದ್ಧಿ, ಕಪಟತನ, ರಾಜಕೀಯ ಇತ್ಯಾದಿಗಳು, ಅದರ ಕುರಿತು ಬರೆದ ಲೇಖಕರ “ಜನಹಿತ,…

Read More

ಮಡಿಕೇರಿ ಮೇ 9 : ಉದ್ಯಮಿ ಹಾಗೂ ಬಿಜೆಪಿ ಪ್ರಮುಖ ಮಡಿಕೇರಿಯ ಎಸ್.ಸಿ.ಸುಬ್ರಮಣಿ (70) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮಡಿಕೇರಿ ಪಟ್ಟಣ ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಈ ಹಿಂದೆ ಪುರಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದಸರಾ ಸಮಿತಿಯಲ್ಲೂ ಸಕ್ರಿಯರಾಗಿದ್ದರು.

Read More

ಸುಂಟಿಕೊಪ್ಪ ಮೇ 9 : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವ ಅಂಗವಾಗಿ ಚಿಕ್ಕಮಗಳೂರು ಧರ್ಮಕ್ಷೇತ್ರದ ವಂ. ಗುರುಗಳಾದ ವಿನಯ್ ಕುಮಾರ್ ವಿಶೇಷ ಪ್ರಭೋದನೆ ಮತ್ತು ಬಲಿಪೂಜೆಯನ್ನು ಸಮರ್ಪಿಸಿದರು. ಧ್ವಜಾರೋಹಣ ನೇರವೇರಿಸುವ ಮೂಲಕ ಬಲಿಪೂಜೆಯನ್ನು ಅರ್ಪಿಸುವ ಮೂಲಕ ದೇವಾಲಯದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ನಂತರ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾಧಿಗಳು ಸಲ್ಲಿಸಿದರು. ಸಂಜೆ ಸಂತ ಅಂತೋಣಿಯವರ ದೇವಾಲಯದಲ್ಲಿ ಹಬ್ಬದ ಅಡಂಬರ ಗಾಯನ ಬಲಿಪೂಜೆ ಮತ್ತು ಪರಮಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಶೇಷ್ಠ ಗುರುಗಳಾದ ರೇವರೆಂಡ್ ಅಲ್ಪ್ರೆಡ್ ಜಾನ್ ಮೆಂಡಾನ್ಸಾ, ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಫಾಧರ್ ದೀಪಕ್, ಆಗಮಿಸಿದ್ದ ಧರ್ಮಗುರುಗಳು ಒಗ್ಗೂಡಿ ನೇರವೇರಿಸಿದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ಹೂಗಳು ಹಾಗೂ ಲೈಂಟಿಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಾಗಳಿಂದ ಅಲಂಕಾರಿಸಲಾಗಿತ್ತು. ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ, 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸುನಿಲ್,…

Read More

ಸುಂಟಿಕೊಪ್ಪ ಮೇ 9 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಪ್ರೌಢಶಾಲೆಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಮಕ್ಕಳು ಪೋಷಕರು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಮತ್ತು ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 74 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ್ತ ಶ್ರೇಣಿಯಲ್ಲಿ 39 ಮಕ್ಕಳು ಮತ್ತು ಪ್ರಥಮ ದರ್ಜೆಯಲ್ಲಿ 35 ಮಕ್ಕಳು ಉತ್ತೀರ್ಣರಾಗಿದ್ದು, ಈ ಪೈಕಿ ಎಂ.ವಿ. ಶ್ರೀ ಲಕ್ಷ್ಮಿ 604 ಅಂಕಗಳಿಸಿ ಶೇ.96.64 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕೆ.ಎಸ್.ತಮ್ಮಯ್ಯ ಶೇ.96.32 ಅಂಕಗಳನ್ನು ಗಳಿಸಿದ್ದಾರೆ, ಯಶಸ್ವಿನಿ ಶೆಟ್ಟಿ, ಅನನ್ಯ ಅರವಿಂದ್ ಮತ್ತು ನೇಹಾ ಅವರುಗಳು ಶೇ.95.02 ಅಂಕಗಳೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸಂತಮೇರಿ 90 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ 11 ಮಂದಿ ಬಾಲಕರು 17 ಮಂದಿ ಬಾಲಕಿಯರು ಒಟ್ಟು 28 ಮಂದಿ ತೇರ್ಗಡೆಗೊಂಡರೇ, ಪ್ರಥಮ ಶ್ರೇಣಿಯಲ್ಲಿ…

Read More

ಮಡಿಕೇರಿ ಮೇ 9 :  ಕರ್ನಾಟಕ ಸರ್ಕಾರದ ವೇತನ ಅನುದಾನಕ್ಕೊಳಪಟ್ಟ ಭಾಗಮಂಡಲ ಕೆವಿಜಿ ಸಂಸ್ಥೆಯಲ್ಲಿ 2023-24ನೇ ಸಾಲಿಗೆ ಮೆಕ್ಯಾನಿಕ್ (ಮೋಟಾರ್ ವೆಹಿಕಲ್), ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹಾಗೂ ಎಲೆಕ್ಟ್ರಿಷಿಯನ್ ವೃತ್ತಿಗಳಿಗೆ ಸೇರಬಯಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವೇಶವು ಎಲ್ಲಾ ಅಭ್ಯರ್ಥಿಗಳಿಗೆ ಮುಕ್ತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಾಂಶುಪಾಲರು : 9900902141

Read More

ಮಡಿಕೇರಿ ಮೇ 8 : ಇತ್ತೀಚೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಅವರ ಪುತ್ರ, ಸೋಮವಾರಪೇಟೆ ತಾ.ಪಂ ಮಾಜಿ ಸದಸ್ಯ ಕೆ.ಐ.ಮೊಹಮ್ಮದ್ ರಫೀಕ್ ಅವರಿಗೆ ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ನೀಡಿದ ಆದೇಶ ಪತ್ರವನ್ನು ಪಕ್ಷದ ಮುಖಂಡ ಹೆಚ್.ಡಿ.ರೇವಣ್ಣ ಅವರ ಬಳಿಯಿಂದ ಮೊಹಮ್ಮದ್ ರಫೀಕ್ ಪಡೆದುಕೊಂಡರು. ಕಾಂಗ್ರೆಸ್ ಪಕ್ಷ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು, ಆದರೆ ಜಾತ್ಯತೀತ ಜನತಾದಳ ನನಗೆ ಈ ದೊಡ್ಡ ಹುದ್ದೆಯನ್ನು ನೀಡಿದ್ದು, ಸಂಘಟನೆಯ ಮೂಲಕ ಪಕ್ಷ ನಿಷ್ಠೆಯನ್ನು ಪ್ರದರ್ಶಿಸುವುದಾಗಿ ಮೊಹಮ್ಮದ್ ರಫೀಕ್ ಹೇಳಿದರು.

Read More