ಮಡಿಕೇರಿ ಮೇ 9 : ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ರಾಜಕಾರಣಿ ಮಿಟ್ಟು ಚಂಗಪ್ಪ ಹಾಗೂ ಪತ್ನಿ ಯಶಿ ಚಂಗಪ್ಪ ಅವರು ಮೇ 10 ರಂದು ಬೆಳಗ್ಗೆ 7 ಗಂಟೆಗೆ 30 ನೇ ಬಾರಿಗೆ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಲಿದ್ದಾರೆ. ಎಐಸಿಸಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ 82 ವರ್ಷದ ಮಿಟ್ಟು ಚಂಗಪ್ಪ ಅವರು ಯುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ. ಅಭಿಮಾನಿಗಳು ಮಿಟ್ಟು ಅವರನ್ನು ಕೊಡಗು ಕಾಂಗ್ರೆಸ್ ನ ಭೀಷ್ಮ ಎಂದೇ ಕರೆಯುತ್ತಾರೆ.
ಲೇಖಕ: admin
ಮಡಿಕೇರಿ ಮೇ 9 : ವಿಧಾನಸಭಾ ಚುನಾವಣೆ ಹಿನ್ನೆಲೆ ಮೇ, 10 ರಂದು ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಸಾಂಕೇತಿಕವಾಗಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 210 ಹಾಗೂ 211 ನಗರಸಭೆಯ ಹಿರಿಯ ಪ್ರಾಥಮಿಕ ಶಾಲೆ, ಹಿಲ್ ರಸ್ತೆ, ಮಡಿಕೇರಿ ಇಲ್ಲಿನ ಮತಗಟ್ಟೆಯನ್ನು ಮಾದರಿ ಮತಗಟ್ಟೆಯಾಗಿ ವಿನ್ಯಾಸಗೊಳಿಸಲಾಗಿದೆ. ಮಾದರಿ ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳು: ಶಾಲಾ ಕಟ್ಟಡವನ್ನು ಕೊಡಗಿನ ಕಾಫಿ ಸಂಸ್ಕೃತಿಯನ್ನು ಸಾರುವ ಚಿತ್ರಕಲೆ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಶೇಷಚೇತನರಿಗಾಗಿ ರ‍್ಯಾಂಪ್, , ರೈಲಿಂಗ್ಸ್, ವೀಲ್‍ಚೇರ್ ಹಾಗೂ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಮತದಾರರಿಗೆ ಕುಡಿಯಲು ಕಾಫಿ ವ್ಯವಸ್ಥೆ ಮಾಡಲಾಗಿದೆ(ರೂ.10 ಕ್ಕೆ ಫಿಲ್ಟರ್ ಕಾಫಿಯನ್ನು ನಿರೀಕ್ಷಣಾ ಕೊಠಡಿಯಲ್ಲಿ ಕುಳಿತು ಸವಿಯಬಹುದಾಗಿದೆ). ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕಲ್ಪಿಸಲಾಗಿದೆ. ಪೀಠೋಪಕರಣಗಳು, ಫ್ಯಾನ್, ಬೆಳಕಿನ ವ್ಯವಸ್ಥೆಗಳನ್ನೊಳಗೊಂಡಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು…
ಮಡಿಕೇರಿ ಮೇ 9 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ‘ಸೆಲ್ಫಿ ಕಂಟೆಸ್ಟ್’ ಸ್ಪರ್ಧೆ ಆಯೋಜಿಸಿದೆ. ಮತದಾನ ಮಾಡಿದ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯುವಕ ಯುವತಿಯರನ್ನು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ. ಉತ್ತಮ ಫೋಟೋಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ. ಮತದಾನ ಮಾಡಿದ ನಂತರ ಏಕಮಾತ್ರವಾಗಿ ಅಥವಾ ಗುಂಪಿನಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕುಟುಂಬ ವರ್ಗ, ಸ್ನೇಹಿತರೊಂದಿಗೆ ಇರುವ ಫೋಟೋಗಳಿಗೆ ಆದ್ಯತೆ ನೀಡಲಾಗುವುದು. ಮತಗಟ್ಟೆಯ ಒಳಗೆ ಮೊಬೈಲ್ ಪೋನ್ ತೆಗೆದುಕೊಂಡು ಹೋಗುವಂತಿಲ್ಲ. ಮತದಾನ ಮಾಡಿದ ನಂತರವಷ್ಟೇ ತಮ್ಮ ಫೋನನ್ನು ಬಳಸಿ ಮತಗಟ್ಟೆಯ ಹೊರಭಾಗದಲ್ಲಿ ನಿಂತು ಸೆಲ್ಫಿ ತೆಗೆದು ಕಳುಹಿಸಬಹುದು ಎಂದು ಹೇಳಿದ್ದಾರೆ. ಛಾಯಾಚಿತ್ರವನ್ನು ಮೇ, 10 ರ ಮತದಾನದ ದಿನದಂದು ಸಂಜೆ 6 ಗಂಟೆಯೊಳಗೆ ಕಳುಹಿಸಬೇಕು. ಉತ್ತಮವಾದ…
ಮಡಿಕೇರಿ ಮೇ 9 : ವಿಧಾನಸಭಾ ಚುನಾವಣೆ ಸಂಬಂಧ ಮಸ್ಟರಿಂಗ್ ಕಾರ್ಯವು ನಗರದ ಸಂತ ಜೋಸೆಫರ ಶಾಲೆ ಮತ್ತು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸುಸೂತ್ರವಾಗಿ ನಡೆಯಿತು. ವಿಧಾನಸಭಾ ಚುನಾವಣೆ ಸಂಬಂಧ ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ಎಲ್ಲಾ ಹಂತದ ಪೊಲಿಂಗ್ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ತಮಗೆ ಹಂಚಿಕೆಯಾದ ಮತಗಟ್ಟೆಯ ಸಂಖ್ಯೆಯನ್ನು ತಿಳಿದುಕೊಂಡು ನಿಗಧಿಪಡಿಸಿದ ಕೌಂಟರ್‍ಗೆ ತೆರಳಿ ತಮ್ಮ ಮತಗಟ್ಟೆಗೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡರು. ಬಳಿಕ ಸೆಕ್ಟರ್ ಅಧಿಕಾರಿಗಳಿಂದ ಚುನಾವಣೆ ಸಂಬಂಧ ಮಾಹಿತಿ ಪಡೆದು ಮತಗಟ್ಟೆ ಕಾರ್ಯನಿರ್ವಹಣೆಗೆ ಬೇಕಾಗಿರುವ ಸಾಮಗ್ರಿಗಳನ್ನು ಪಡೆದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯವಿಧಾನದ ಬಗ್ಗೆ ಹಲವು ಮಾರ್ಗದರ್ಶನ ಮಾಡಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬನಾ ಎಂ.ಶೇಖ್, ತಹಶೀಲ್ದಾರರಾದ ಪ್ರಶಾಂತ್, ರಾಮಚಂದ್ರ, ಇತರರು ಇದ್ದರು. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ,…
ವಿರಾಜಪೇಟೆ ಮೇ 9 : ಕಳೆದ ಹದಿನೈದು ದಿನಗಳಿಂದ ಬಿ.ಜೆ.ಪಿ. ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಹಿಂದು ಸಂಘಟನೆಯ ಕಾರ್ಯಕರ್ತರು ಇಂದು ಮಡಿಕೇರಿ ತಾಲ್ಲೂಕಿನ ಕರಡದ ಮಲೆತಿರಿಕೆ ದೇವಾಲಯದಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆವರವಣವನ್ನು ಸ್ವಚ್ಚಗೊಳಿಸಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರು ಈ ಬಾರಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಬೇಕೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ವಿರಾಜಪೇಟೆ ಭಾಗದ ಹಿಂದು ಸಂಘಟನೆಯ ಮಾಳೇಟಿರ ಸನ್ನಿ, ತರ್ಮೆ ಮೊಟ್ಟೆ ಪೊನ್ನಪ್ಪ, ಮಂಜೇಶ, ಕಿಶೋರ್ ಪೂಜಾರಿ, ಗಗನ್, ಬಿದ್ದಪ್ಪ, ಕೆ.ಎಂ.ಅಯ್ಯಪ್ಪ(ಮಣಿ) ಇನ್ನಿತ್ತರ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಮೇ 9 : ಮೇ 10 ರ ಚುನಾವಣೆ ದಿನ ಮತದಾನ ಮಾಡಿದವರಿಗೆ ಮಾತ್ರ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಿಗೆ ಪ್ರವೇಶ ನೀಡಲಾಗುವುದು. ನಗರದ ರಾಜಾಸೀಟು, ಸನ್ನಿ ಸೈಡ್ ಮ್ಯೂಸಿಯಂ, ಅಬ್ಬಿ ಫಾಲ್ಸ್, ಮಲ್ಲಳ್ಳಿ ಫಾಲ್ಸ್‍ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಮಕ್ಕಳು ಹಾಗೂ ಹೊರ ರಾಜ್ಯದ ಪ್ರವಾಸಿಗರನ್ನು ಹೊರತು ಪಡಿಸಿ, ಮತದಾನ ಮಾಡಿರುವವರಿಗೆ ಮಾತ್ರ ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಕೊಡಗು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.
ನಾಯಿಕಡಿತವನ್ನು ತಪ್ಪಿಸುವುದು ನಾಯಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕುತೂಹಲ ಹೊಂದಿರುವ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಅಪರಿಚಿತ ನಾಯಿಯನ್ನು ಸಮೀಪಿಸುವುದಾಗಲೀ, ಅದನ್ನು ಮುಟ್ಟುವುದಾಗಲೀ ಅಥವಾ ಆಹಾರ ನೀಡಲು ಪ್ರತ್ನಿಸುವುದಾಗಲೀ ಮಾಡಬಾರದು. (ಅಗತ್ಯವಿದ್ದರೆ ಅದರ ಮಾಲೀಕರ ಸಮಕ್ಷಮದಲ್ಲಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬಹುದು) ಪರಿಚಿತ ನಾಯಿಯೇ ಆಗಲಿ, ಅದನ್ನು ರೇಗಿಸಿಯಾಗಲೀ ಅಥವಾ ಕೀಟಲೆ ಮಾಡಿಯಾಗಲೀ ಕಚ್ಚಲು ಪ್ರೇರೇಪಿಸಬಾರದು. ಮಲಗಿ ನಿದ್ರಿಸುತ್ತಿರುವ/ಆಹಾರ ಸೇವಿಸುತ್ತಿರುವ/ಮರಿಗಳೊಂದಿಗೆ ಇರುವ/ಪರಸ್ಪರ ಕಚ್ಚಾಡುತ್ತಿರುವ ನಾಯಿಗಳಿಂದ ದೂರವಿರಬೇಕು. ದಾರಿಯಲ್ಲಿ ಎದುರಾಗುವ ಅಥವಾ ಹಾದಿಬದಿಯಲ್ಲಿದ್ದು ನಮ್ಮ ಕಡೆ ಬೊಗಳುತ್ತಿರುವ ನಾಯಿಯಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಅದನ್ನು ಹೆಚ್ಚಾಗಿ ಗಮನಿಸದವರಂತೆ ನಿಧಾನವಾಗಿ ಹಾದುಹೋಗಬೇಕು. ನೆನಪಿಡಿ: ನಮ್ಮ ಕಡೆ ತೀಕ್ಷ್ಣವಾಗಿ ನೋಡುತ್ತಿರುವ ಅಥವಾ ಬೊಗಳುತ್ತಿರುವ ನಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ನೋಡಬಾರದು. ಓಡಲಾರಂಭಿಸುವ/ಓಡುತ್ತಿರುವ ಅಥವಾ ವೇಗವಾಗಿ ವಾಹನದಲ್ಲಿ ಚಲಿಸುತ್ತಿರುವ ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುವುದು ಬಹುತೇಕ ನಾಯಿಗಳ ಗುಣ. ನಾಯಿ ನಮ್ಮ ಕಡೆ ಗಮನವಿರಿಸಿ ಬೊಗಳಲಾರಂಭಿಸಿದಾಗ, ಕೂಡಲೇ ತಿರುಗಿ ಅದಕ್ಕೆ ಬೆನ್ನು ತೋರಿಸಿ ವೇಗವಾಗಿ…
ಕುಶಾಲನಗರ, ಮೇ 9: ಕುಶಾಲನಗರದ ಫಾತಿಮ ಪ್ರೌಢಶಾಲೆಯ ಯಶ್ವಿನ್ ಗೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.98.56 ಫಲಿತಾಂಶ ಲಭಿಸಿದೆ. 625 ಅಂಕಗಳಿಗೆ 616 ಅಂಕಗಳನ್ನು ಗಳಿಸಿರುವ ಯಶ್ವಿನ್, ಕನ್ನಡ 122, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 99 ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ 95 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿನಿ ಯಶ್ವಿನ್, ಕುಶಾಲನಗರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಗಣಿತ ವಿಷಯದ ಶಿಕ್ಷಕ ಎ.ಸಿ.ಮಂಜುನಾಥ್ ಹಾಗೂ ನಿಡ್ತ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಡಿ.ಎಂ. ಮಹಾದೇವಿ ದಂಪತಿಯ ಪುತ್ರನಾಗಿದ್ದಾನೆ. ವಿದ್ಯಾರ್ಥಿ ಯಶ್ವಿನ್ ನ ಉತ್ತಮ ಫಲಿತಾಂಶಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಚೆಯ್ಯಂಡಾಣೆ ಮೇ 9 : ಪಾರಾಣೆ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ.100 ಫಲಿತಾಂಶ ದೊರೆತ್ತಿದ್ದು, ಸತತವಾಗಿ ನಾಲ್ಕು ಬಾರಿ ಶೇ.100 ಫಲಿತಾಂಶ ಗಳಿಸಿ ಮಾದರಿ ಶಾಲೆ ಎನಿಸಿಕೊಂಡಿದೆ. ಒಟ್ಟು 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪೈಕಿ 12 ಗಂಡು 14 ಹೆಣ್ಣು ಪರೀಕ್ಷೆ ಬರೆದಿದ್ದಾರೆ. ಉನ್ನತ ಶ್ರೇಣಿಯಲ್ಲಿ ಇಬ್ಬರು, ಪ್ರಥಮ ಹತ್ತೊಂಬತ್ತು, ದ್ವಿತೀಯ ಸ್ಥಾನವನ್ನು ಐವರು ಪಡೆದುಕೊಂಡಿದ್ದಾರೆ. ಕೆ.ಯು.ಮೋಹಿತ್ 576 ಅಂಕ ಪಡೆದು ಶಾಲೆಗೆ ಪ್ರಥಮ, ಡಿ.ಐ.ಫಾತಿಮತ್ ಇರ್ಷಾನ 560 ದ್ವಿತೀಯ, ವೈ.ಎಚ್.ರುಕ್ಷನಾ 522 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವರದಿ : ಅಶ್ರಫ್
ಮಡಿಕೇರಿ ಮೇ 9 : ಬೃಹತ್ ಗಾತ್ರದ ನಾಗರಹಾವೊಂದು ಕೋಳಿಗೂಡಿಗೆ ನುಗ್ಗಿ ಕೋಳಿಯನ್ನು ನುಂಗಿದ ಘಟನೆ ನೆಲ್ಲಿಹುವುದಿಕೇರಿ ಗ್ರಾಮದ ಸಂಪಿಗೆ ಕೊಲ್ಲಿಯಲ್ಲಿ ನಡೆದಿದೆ. ಗ್ರಾಮದ ಬಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಿದ್ದ ಕುಮಾರ್ ಎಂಬವರು ಕೋಳಿ ಗೂಡಿನಿಂದ ಕೋಳಿಗಳನ್ನು ಹೊರಗೆ ಬಿಡಲು ಹೋದ ಸಂದರ್ಭ ಒಂದು ಕೋಳಿ ಸತ್ತು ಬಿದ್ದು ಮತ್ತೊಂದು ಕೋಳಿ ಕಾಣೆಯಾಗಿತ್ತು. ಗೂಡಿನಲ್ಲಿ ಪರಿಶೀಲಿಸಿದ ಸಂದರ್ಭ ನಾಗರಹಾವು ಗೋಚರಿಸಿದೆ. ತಕ್ಷಣ ಗ್ಯಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸುರೇಶ್ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟರು.






