ಲೇಖಕ: admin

ಸುಂಟಿಕೊಪ್ಪ,ಜೂ.12: ಕೊಡಗಿಗೆ ಮುಂಗಾರು ಪ್ರವೇಶಿಸಿದ್ದು, ಭಾರೀ ಗಾಳಿ ಮಳೆಯಾಗುವ ಮೂನ್ಸೂಚನೆ ಹವಾಮಾನ ಇಲಾಖೆ ವರದಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿ ಬೃಹದಾಕಾರದ ಒಣಗಿದ ಮರಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಚೆಸ್ಕಾಂ ಹಾಗೂ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿ ತೆರವುಗೊಳಿಸುವಂತೆ ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ. ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 275ರ ರಸ್ತೆ ಬದಿ ಒಣಗಿದ ಬೃಹದಾಕಾರದ ಮರಗಳು ವಾಹನ ಸವಾರರು ಹಾಗೂ ಪದಾಚಾರಿಗಳಿಗೆ ಸಂಚಕಾರ ಉಂಟು ಮಾಡುವ ಮೊದಲು ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಬೋಯಿಕೇರಿ, ಸಿಂಕೋನ, ಬಾಳೆಕಾಡು, ಕೆದಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ವಾಹನಗಳ ಮೇಲೆ ಮರ ಬಿದ್ದು ಸಾವು ನೋವು ಸಂಭವಿಸಿದ ಪ್ರಕರಣಗಳು ನಡೆದಿವೆ. ಇಂಥಹ ಘಟನೆಗಳು ಮತ್ತೆ ಮರುಕಳಿಸದಂತೆ ರಸ್ತೆ ಬದಿಗೆ ಬಾಗಿ ನಿಂತ ಮರಗಳನ್ನು ಮುಂಗಾರಿನ ವೇಳೆ ಕಡಿದು ತೆರವುಗೊಳಿಸುವಂತೆ ಪಿ.ಎಂ.ಲತೀಫ್ ಮನವಿ ಮಾಡಿದರು.

Read More

ವಿರಾಜಪೇಟೆ ಜೂ.12 : ಅವೈಜ್ಞಾನಿಕವಾದ ಆಹಾರ ಪದ್ಧತಿ, ಒತ್ತಡದ ಕೆಲಸ ಕಾರ್ಯಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ಯಾವುದೇ ಕಾಯಿಲೆಯನ್ನು ಅಸಡ್ಡೆ ಮಾಡದೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು ಎಂದು ಹಿಲ್ ಬ್ಲೂಮ್ಸ್ ಕ್ಲಿನಿಕ್‍ನ ವೈದ್ಯರಾದ ಡಾ. ಕಿರಣ್ ತಿಳಿಸಿದರು. ನಗರದ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ಮತ್ತು ಹಿಲ್ ಬ್ಲೂಮ್ಸ್ ಕ್ಲಿನಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹೃದಯ ಸಂಬಂಧಿತ ಕಾಯಿಲೆಗಳನ್ನು ಮೊದಲೆ ಗುರುತಿಸುವುದು ಮುಖ್ಯ. ಯಾವುದೇ ಸಂದರ್ಭದಲ್ಲಿ ಉದಾಸೀನ ಮಾಡದೆ ಚಿಕಿತ್ಸೆಗೆ ಮುಂದಾಗಬೇಕು. ಕಾಲಹರಣ ಮಾಡಿದಲ್ಲಿ ಅನಾಹುತ ಸಂಭವಿಸುವುದು ಶತಃಸಿದ್ಧವೆಂದು ತಿಳಿಸಿ, ಸರ್ವರು ಆರೋಗ್ಯದತ್ತ ಗಮನಹರಿಸಿ ಎಂದು ಹೇಳಿದರು. ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಸುಮೇಶ್ ಪಿ.ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಿತಿಯು ಕಲೆ ಮತ್ತು ಸಂಸ್ಕೃತಿಗೆ ಮಾತ್ರ ಸೀಮಿತವಾಗದೆ ಜನಪರ ಕಾಳಜಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಈ…

Read More

ವಿರಾಜಪೇಟೆ ಜೂ.12 : ದೇಶದ ಇತಿಹಾಸದಲ್ಲೇ ಸರಕಾರ ರಚನೆಯಾಗಿ 21 ದಿನಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಮೂಲಕ ವಿರಾಜಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕರ್ನಾಟಕ ಸರಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪೊನ್ನಣ್ಣ, ಮಹಿಳೆಯರಿಗೆ ಉಚಿತವಾಗಿ ರಾಜ್ಯದಾದ್ಯಂತ ಪ್ರಯಾಣ ಮಾಡಲು ರಾಜ್ಯದಲ್ಲಿ ಏಕಕಾಲಕ್ಕೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಚುನಾವಣೆಗೂ ಮುನ್ನ ಕೊಟ್ಟಂತಹ ಎಲ್ಲಾ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಐದು ಗ್ಯಾರಂಟಿಗಳಲ್ಲಿ ಮೊದಲನೆ ಗ್ಯಾರಂಟಿ ಫಲಿಸಿದೆ ಎಂದರು. ಮಹಿಳೆಯರನ್ನು ಬಲಪಡಿಸುವುದು, ಸದೃಢಗೊಳಿಸುವುದು ಸಂವಿಧಾನದ ಆಶಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಈ ಯೋಜನೆ ಜಾರಿಗೆ ತಂದಿದ್ದಾರೆ. ಇದು ಎಲ್ಲಾ ಮಹಿಳೆಯರಿಗೆ ಸದುಪಯೋಗವಾಗಲಿ, ನಾಡಿನ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು. ವಿರಾಜಪೇಟೆ ಪ.ಪಂ ಆಡಳಿತ ಅಧಿಕಾರಿ, ಸಹಾಯಕ ಆಯುಕ್ತ ಉತೀಶ್…

Read More

ಮಡಿಕೇರಿ ಜೂ.12 : ಟಾಟಾ ಮೋಟಾರ್ಸಿನ ಅಧಿಕೃತ ಡೀಲರ್ ಗಳಲ್ಲಿ ಒಂದಾಗಿರುವ ಮಂಗಳೂರಿನ ಅರವಿಂದ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ಭಾಗಮಂಡಲದ ಕೆವಿಜಿ ಐಟಿಐನಲ್ಲಿ ದ್ವಿತೀಯ ವರ್ಷದ ಎಲ್ಲಾ ತರಬೇತುದಾರರಿಗೆ ಕ್ಯಾಂಪಸ್ ಸಂದರ್ಶನ ನಡೆಯಿತು. ಈ ಸಂದರ್ಭ ಮಂಗಳೂರಿನ ಟಾಟಾ ಮೋಟರ್ಸ್ ಲಿಮಿಟೆಡ್ ಪ್ರತಿನಿಧಿಗಳಾದ  ಪ್ರಮೋದ್ ಕುಮಾರ್ (Deputy manager H.R), ಐ.ಜಿ.ಶಿವಕುಮಾರ್ (AGM HR and legal), ಪ್ರಾಂಶುಪಾಲ ಕೆ.ವಿ. ಶ್ರೀಕಾಂತ್ ಕಿರಿಯ ತರಬೇತಿ ಅಧಿಕಾರಿ ಕೃಷ್ಣಮೂರ್ತಿ ಮತ್ತು ಪದ್ಮಕುಮಾರ್ ಹಾಜರಿದ್ದರು.

Read More

ಮಡಿಕೇರಿ ಜೂ.12 : ಮುಂದಿನ ಜನಾಂಗಕ್ಕೆ ಒಳ್ಳೆಯ ವಾತಾವರಣ, ಸಂಸ್ಕಾರ ಜೀವನವನ್ನು ನೀಡುವ ದೂರದೃಷ್ಟಿ ಮತ್ತು ಆಶಯದೊಂದಿಗೆ ಸಿದ್ದಾಪುರದಲ್ಲಿ ದಶಲಕ್ಷ್ಮಿ ಹೋಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಕೊಡಗಿನ ಪರಿಸರ ಮತ್ತು ಜನಜೀವನದ ಸರ್ವೋತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಣ್ಣೂರಿನ ಋಷಿದೇವ್ ಪ್ರತಿಷ್ಠಾನದ ಮುಖ್ಯಸ್ಥ ಸದ್ಗುರು ನರೇಂದ್ರನ್ ಗುರೂಜಿ ಅವರ ಉಪಸ್ಥಿತಿಯಲ್ಲಿ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ದಶಲಕ್ಷ್ಮಿ ಹೋಮ ನಡೆಯಿತು. ಮಾರ್ಚ್ 26 ರಂದು ನಡೆದ ಯಾಗ ಮತ್ತು ಹೋಮಗಳ ಪ್ರಾಮುಖ್ಯತೆ ಮುಂದಿನ ಜನಾಂಗಕ್ಕೆ ನಮ್ಮ ಜವಬ್ಧಾರಿ ಏನು ಎಂಬುದರ ಕುರಿತು ಆಧ್ಯಾತ್ಮಿಕ ಸಮಾಲೋಚನೆಯ ಮುಂದುವರಿದ ಭಾಗವಾಗಿ ಶ್ರೀ ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ, ಧನಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಆರೋಗ್ಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಸಿದ್ಧಿ ಲಕ್ಷ್ಮಿ, ಮೋಕ್ಷಲಕ್ಷ್ಮಿ, ಧೈರ್ಯಲಕ್ಷ್ಮಿ, ನಾಗಲಕ್ಷ್ಮಿ ಒಳಗೊಂಡ ದಶಲಕ್ಷ್ಮಿ ಹೋಮ ನಡೆಯಿತು. ಇದೇ ಸಂದರ್ಭ ಕಳೆದ 25 ವರ್ಷಗಳಿಂದ ಸಾಂಸಾರಿಕವಾಗಿದ್ದು, ಆಧ್ಯಾತ್ಮಿಕದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದ ಬೆಂಗಳೂರಿನ ಶಾರದಾ ಶ್ರೀಧರ್ ಅವರ ಸಾಧನೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ನಂತರ ಸನ್ಮಾನ…

Read More

ಮಡಿಕೇರಿ ಜೂ.12 : ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಜೂ.25ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, 2022-23ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಳಿಸಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಸ್ವ-ವಿವರಗಳೊಂದಿಗೆ ಅರ್ಜಿಯನ್ನು ಮಹಾಸಭೆಯ www.veerashaivamahasabha.in ವೆಬ್‍ಸೈಟ್‍ನಲ್ಲಿ ಜೂ.25ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್‍ಲೈನ್‍ಮೂಲಕ ಬಂದ ಅರ್ಜಿಯನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. 

Read More

ನಾಪೋಕ್ಲು ಜೂ.12 : ನಿಸ್ವಾರ್ಥ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಿತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ವೃದ್ಧಾಶ್ರಮದಲ್ಲಿ ಶ್ರಮದಾನ ನಡೆಯಿತು. ನಾಪೋಕ್ಲು, ಮಡಿಕೇರಿ, ಮರಗೋಡು ಘಟಕಗಳ ಸಹಯೋಗದಲ್ಲಿ ಮಡಿಕೇರಿಯ ತನಲ್ ಕೂರ್ಗ್ ನೆರಳಿನ ಮನೆ ವೃದ್ಧಾಶ್ರಮದಲ್ಲಿ ಘಟಕದ 26 ಸ್ವಯಂ ಸೇವಕರು ತಮ್ಮೆಲ್ಲಾ ವೈಯಕ್ತಿಕ ಕೈoಕರ್ಯಗಳನ್ನು ಬದಿಗೊತ್ತಿ ಮುಂಜಾನೆಯಿಂದ ಮುಸ್ಸಂಜೆವರೆಗೂ ಶ್ರಮದಾನ ಮಾಡಿದರು. 3 ತಂಡವನ್ನು ಮಾಡಿಕೊಂಡು ಒಂದು ತಂಡ ಮಳೆಗಾಲಕ್ಕೆ ಬೇಕಾಗುವ ಸೌದೆ ಕೆಲಸ, ಇನ್ನೊಂದು ತಂಡ ಆಶ್ರಮ ದ ಬದಿಯಲ್ಲಿ ಇದ್ದ ಬಿದಿರು ಮತ್ತು ಗಿಡಗಂಟಿ ಕಾಡುಗಳನ್ನು ಕಡಿದು ಮಳೆಗಾಲಕ್ಕೆ ಯಾವುದೇ ತೊಂದರೆ ಆಗದಂತಹ ಕೆಲಸ, ಮತ್ತೊಂದು ತಂಡ ಆಶ್ರಮದ ಸುತ್ತು ಹೂಗಿಡ ಮತ್ತು ಹಣ್ಣಿನ ಗಿಡ ನೆಟ್ಟು ಸೇವೆಯನ್ನ ಮಾಡಿದರು. ಈ ಸಂದರ್ಭ 3 ಶೌರ್ಯ ತಂಡದ ಸಂಯೋಜಕೀಯರಾದ ಮಮತಾ, ದಿವ್ಯ, ರೋಹಿಣಿ, ಸದಸ್ಯರಾದ ಲತಾ, ಗೀತಾ, ರಮ್ಯಾ, ಹರೀಶ್, ಸುನೀತಾ, ಸುಂದರಿ,ಐತಪ್ಪ, ಧನಂಜಯ, ಕುಮಾರ್, ರಮೇಶ್, ಭಾಸ್ಕರ,,ತಾರಾಮಣಿ, ಲೀಲಾ…

Read More

ಸುಂಟಿಕೊಪ್ಪ ಜೂ.12 : ಪ್ರತಿಯೊಬ್ಬ ಮಕ್ಕಳು ತನ್ನದೇಯಾದ ಪ್ರತಿಭೆಗಳನ್ನು ಹೊಂದಿರುತ್ತಾರೆ. ಆ ಪ್ರತಿಭೆಯನ್ನು ಗುರುತಿಸಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕೆಂದು ಸಮಾಜ ಸೇವಕ ಹರಪಳ್ಳಿ ರವೀಂದ್ರ ಸಲಹೆ ನೀಡಿದರು. ಸುಂಟಿಕೊಪ್ಪ ಗುಂಡುಗುಟ್ಟಿ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಹೋಬಳಿಯ ಮಾದಾಪುರ, ಗರಗಂದೂರು, ಸುಂಟಿಕೊಪ್ಪ, ಚೆಟ್ಟಳ್ಳಿ, ಪೊನ್ನತ್‍ಮೊಟ್ಟೆ, ಕೆದಕಲ್, ಹೊಸಕೋಟೆ, ನಾಕೂರು ಶಿರಂಗಾಲ, ಕಲ್ಲೂರು, ಹೆರೂರು, ಕೊಡಗರಹಳ್ಳಿ, ಕಂಬಿಬಾಣೆ ವಿಭಾಗದ ಸರಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜಿನ 1000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ನಂತರ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೇ ಐಎಎಸ್, ಐಪಿಎಸ್ ತೇರ್ಗಡೆಯಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ಆಗಾದ ಪ್ರತಿಭೆಯಿದೆ. ಅದನ್ನು ಗುರುತಿಸಿ ಅವರಿಗೆ ಅಭಿರುಚಿಗೆ ತಕ್ಕ ಶಿಕ್ಷಣ ನೀಡಿದರೆ ಸಮಾಜದ ಆಸ್ತಿಯಾಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆ, ಕಠಿಣ ಪರಿಶ್ರಮ ರೂಡಿಸಿಕೊಳ್ಳಬೇಕು. ಹಾಗಾದಗ ಮಾತ್ರ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.…

Read More

ಗೋಣಿಕೊಪ್ಪಲು ಜೂ.12 : ಗೋಣಿಕೊಪ್ಪಲಿನ  ಯುನೈಟೆಡ್ ಜಮಾಹತ್  ವತಿಯಿಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಅವರನ್ನು ಸನ್ಮಾನಿಸಲಾಯಿತು. ಹೋಟೆಲ್ ಪ್ರಣವ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಜಮಾಹತ್  ಅಧ್ಯಕ್ಷ  ಶಾಮೀರ್  ಅವರ ನೇತೃತ್ವದಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಜಮಾಹತ್ ಪ್ರಮುಖರು ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಮಾತನಾಡಿ,  ಸಮಾಜದ ಮುಖ್ಯ ವಾಹಿನಿಗಳಲ್ಲಿ ಬರಲು ಸಾಧ್ಯವಾಗದ ಹಲವಾರು ಯುವ ಪೀಳಿಗೆಯನ್ನು ಗುರುತಿಸಿ ಅಂಥವರಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ  ಮಾಡುವುದಾಗಿ ಭರವಸೆ ನೀಡಿದರು. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೇ ಶುದ್ಧ ಹಸ್ತದಿಂದ ಉತ್ತಮ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ  ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದಿರೀರ ನವೀನ್, ನಗರ ಕಾಂಗ್ರೆಸ್ ಅಧ್ಯಕ್ಷ,  ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಪಿ.ಸಿ.ಹಸೆನ್ನಾರ್ ಹಾಜಿ, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಉಸ್ಮಾನ್, ಪ್ರಮೋದ್ ಗಣಪತಿ,  ಕಾಂಗ್ರೆಸ್ ಮುಖಂಡರುಗಳಾದ ಅಜಿತ್ ಅಯ್ಯಪ್ಪ, ಯುನೈಟೆಡ್…

Read More

1. ಕರ್ನಾಟಕ ರಾಜ್ಯದ (Domicile of Karnataka) ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ) ಉಚಿತ ಪ್ರಯಾಣ ಸೌಲಭ್ಯ ಅನ್ವಯಿಸುತ್ತದೆ. ಮಹಿಳಾ ಪ್ರಯಾಣಿಕರ ಪೈಕಿ 1 ವರ್ಷದಿಂದ 13 ವರ್ಷದವರೆನ ಬಾಲಕಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸಹ ಒಳಗೊಂಡಿರುತ್ತಾರೆ. 2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ/ಸಾಮಾನ್ಯ ಮತ್ತು ವೇಗದೂತ (ತಡೆರಹಿತ ಸಾರಿಗೆಗಳು ಒಳಗೊಂಡಂತೆ) ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. 3. ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ‌, ವಿಪರ್‌, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಗ್ರೀಮ್ ಕ್ಲಾಸ್, ಅಂಬಾರಿ ಉತ್ತನ್, ಶ್ರೀ ಬಸ್, ಇವಿ ಪ್ಲಸ್ ಮುಂತಾದ ಪ್ರತಿಷ್ಠಿತ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವು ಅನ್ವಯಿಸುವುದಿಲ್ಲ. 4. ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ದೂರದ ಯಾವುದೇ ಮಿತಿ ಇರುವದಿಲ್ಲ. ಹಾಗೂ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯವಾಗುತ್ತದೆ. 5 ಶಕ್ತಿ ಯೋಜನೆಯು ದೈನಿಕ ನಾನು, ಮಾಸಿಕ ಪಾಸು, ಸಾಂಧರ್ಬಿಕ ಒಪ್ಪಂದ ಹಾಗೂ…

Read More