ದಾಸವಾಳ ಒಂದು ಸುಂದರವಾದ ಹೂವು. ಈ ಅದ್ಭುತವಾದ ಹೂವು ಅನೇಕ ಆರೊಗ್ಯ ಸಮಸ್ಯೆಗಳಿಂದ ದೂರ ಉಳಿಸುತ್ತದೆ. ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೇ, ಹೃದಯ ರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ. ದಾಸವಾಳ ಹೂವಿನಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಆರೋಗ್ಯಕರ ಅಂಶಗಳಿವೆ ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ. ದಾಸವಾಳ ಹೂವು ತನ್ನ ಒಡಲಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಹಲವಾರು ಆರೋಗ್ಯದಾಯಕ ಗುಣಗಳನ್ನು ಹೊಂದಿದೆ. ಈ ಹೂವು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿರುವುದಲ್ಲದೆ, ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ರಕ್ಷಣೆ ಕೊಡುವ ಆಹಾರವಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಅದರಲ್ಲೂ ಕೂದಲು ಉದುರುವಿಕೆ ನಿವಾರಣೆಗೆ ದಾಸವಾಳವು ಹೇಳಿ ಮಾಡಿಸಿದ ಔಷಧ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಬದಲಾಗಿ ತ್ವಚೆಯಲ್ಲಿನ ವಯಸ್ಸಾದ ಚಿಹ್ನೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ : ದಾಸವಾಳವು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿದೆ. ‘ಜರ್ನಲ್ ಆಫ್ ನ್ಯೂಟ್ರೀಶನ್’ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ದಾಸವಾಳದ ಚಹಾವನ್ನು ಕುಡಿಯುವುದರಿಂದ ಸಿಸ್ಟೋಲಿಕ್ ರಕ್ತದೊತ್ತಡ ಕಡಿಮೆಯಾಗುತ್ತದೆ. ಜತೆಗೆ…
ಲೇಖಕ: admin
ಶ್ರೀನಗರ ಜೂ.13 : ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲಕ್ಕೆ ತೀರ್ಥಯಾತ್ರೆ ಮಾಡುವ ಯಾತ್ರಿಗಳಿಗೆ ಆಹಾರದ ಮೆನುವನ್ನು ಎಸ್ಎಎಸ್‌ಬಿ ಬಿಡುಗಡೆ ಮಾಡಿದೆ. 62 ದಿನಗಳ ಯಾತ್ರೆಯು ಜುಲೈ 1 ರಂದು ದಕ್ಷಿಣ ಕಾಶ್ಮೀರದ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗದಿಂದ ಮತ್ತು ಮಧ್ಯ ಕಾಶ್ಮೀರದ ಅತ್ಯಂತ ಚಿಕ್ಕದಾದ ಬಾಲ್ಟಾಲ್ ಟ್ರ್ಯಾಕ್‌ನಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 31 ರಂದು ರಕ್ಷಾ ಬಂಧನದಂದು ಯಾತ್ರೆ ಮುಕ್ತಾಯಗೊಳ್ಳಲಿದೆ. ವಾರ್ಷಿಕ ಅಮರನಾಥ ಯಾತ್ರೆಯ ಆರಂಭಕ್ಕೂ ಮುನ್ನ, ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್ಎಎಸ್‌ಬಿ) ಎರಡು ತಿಂಗಳ ಸುದೀರ್ಘ ತೀರ್ಥಯಾತ್ರೆಯ ಸಮಯದಲ್ಲಿ ಯಾತ್ರಿಗಳಿಗೆ ಹಲ್ವಾ, ಪೂರಿ, ಸಮೋಸಾ, ಜಿಲೇಬಿ, ಗುಲಾಬ್ ಜಾಮೂನ್, ಪಿಜ್ಜಾ, ದೋಸೆ, ಕರಿದ ರೊಟ್ಟಿ ಮತ್ತು ‘ಇತರ ಜಂಕ್ ಮತ್ತು ಅನಾರೋಗ್ಯಕರ ಆಹಾರ’ ನೀಡುವುದನ್ನು ನಿಷೇಧಿಸಿದೆ. ಆಹಾರ ಮೆನುವಿನ ಪ್ರಕಾರ, ಭಾರಿ ಪಲಾವ್, ಫ್ರೈಡ್ ರೈಸ್, ಪೂರಿ, ಬಾತುರಾ, ಪಿಜ್ಜಾ, ಬರ್ಗರ್, ಪರೋಠ, ದೋಸೆ, ಫ್ರೈಡ್ ರೋಟಿ, ಬೆಣ್ಣೆಯೊಂದಿಗೆ ಬ್ರೆಡ್, ಕ್ರೀಮ್ ಆಧಾರಿತ ಆಹಾರಗಳು, ಉಪ್ಪಿನಕಾಯಿ, ಚಟ್ನಿ, ಕರಿದ ಹಪ್ಪಳ,…
ಬೇಕಾಗುವ ಸಾಮಾಗ್ರಿಗಳು :: ಅನ್ನ – 1 ಬಟ್ಟಲು, ಅಣಬೆ – 150 ಗ್ರಾಂ (ತೊಳೆದು ಹೆಚ್ಚಿಟ್ಟುಕೊಂಡದ್ದು), ಬೆಳ್ಳುಳ್ಳಿ – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ಈರುಳ್ಳಿ – ಅರ್ಧ ಬಟ್ಟಲು (ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ಆಲಿವ್ ಆಯಿಲ್- 2 ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಉಪ್ಪು – ಅಗತ್ಯಕ್ಕೆ ತಕ್ಕಷ್ಟು ಮಾಡುವ ವಿಧಾನ : ಮೊದಲಿಗೆ ಒಂದು ಬಾಣಾಲೆಯಲ್ಲಿ ಆಲಿವ್ ಆಯಿಲ್ ಹಾಕಿಕೊಂಡು ಕಾದ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಹೆಚ್ಚಿದ ಅಣಬೆಗಳನ್ನು ಹಾಕಿಕೊಂಡು ಕಂದು ಬಣ್ಣ ಬರುವವರೆಗೆ ಚನ್ನಾಗಿ ಹುರಿದುಕೊಳ್ಳಿ. ಇದರ ನೀರಿನಾಂಶ ಸಂಪೂರ್ಣವಾಗಿ ಬಿಡುವುದರಿಂದ ಫ್ರೈಡ್‌ರೈಸ್ ಇನ್ನಷ್ಟು ರುಚಿಯನ್ನು ನೀಡುತ್ತದೆ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಯ ನಂತರ ಅದಕ್ಕೆ ಕಾಳುಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬಳಿಕ…
ನಾಪೋಕ್ಲು ಜೂ.13 : ಅಖಿಲ ಕೊಡವ ಸಮಾಜದ ವತಿಯಿಂದ ವಿರಾಜಪೇಟೆಯ ಕಾವೇರಿ ಆಶ್ರಮದ ಹಿರಿಯ ಸ್ವಾಮೀಜಿ ಶತಾಯುಷಿ ಶ್ರೀ ವಿವೇಕಾನಂದ ಶರಣ ಸ್ವಾಮಿ (ಪೂರ್ವಾಶ್ರಮ ಪಳಂಗಂಡ) ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣರಿಗೆ ಸ್ವಾಮೀಜಿ ಶಾಲುಹೊದಿಸಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೆಪಂಡ ಸುಗುಣ ಮುತ್ತಣ್ಣ, ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಹಾಗೂ ಕೀತಿಯಂಡ ವಿಜಯಕುಮಾ (ಶರಿ) ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜೂ.13 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದಿಂದ ಸನ್ಮಾನಿಸಿಸಲಾಯಿತು. ವಿರಾಜಪೇಟೆಯಲ್ಲಿ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲೆಯ ಹಿಂದೂ ಮಲಯಾಳಿ ಸಮಾಜ ಬಾಂಧವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಎ.ಎಸ್ ಪೊನ್ನಣ್ಣ ಭರವಸೆ ನೀಡಿದರು. ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ ವಿಜಯ, ಪ್ರಧಾನ ಕಾರ್ಯದರ್ಶಿ ಪಿ.ಕೆ ಶಶಿಕುಮಾರ್, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಸಲಹೆಗಾರ, ಟಿ.ಆರ್.ವಾಸುದೇವ್, ಟಿ.ಕೆ ಸುಧೀರ್, ಜಿ.ಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ವಿರಾಜಪೇಟೆ ಮಲಯಾಳಿ ಸಮಾಜದ ಅಧ್ಯಕ್ಷ ವಿನೂಪ್, ಕೆ.ಬಾಬು,ಪಿ.ಡಿ ಪ್ರಕಾಶ್, ಕೆ.ವಿ ಸುಬ್ರಮಣಿ, ಶರಂತ್ ಕಾಂತ್,ಎನ್.ಕೆ ಅಜೀಶ್ ಕುಮಾರ್, ಶಾಜು, ದಿನೇಶ್, ಉಣ್ಣಿ, ರಾಜೇಶ್, ಸುಮೇಶ್, ಸದಾನಂದ, ಅಶೋಕ್ ಕುಮಾರ್, ನಂದಾ ಹಾಗೂ ವಿವಿಧ ಭಾಗಗಳ ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಜೂ.13 : ಸುಮಾರು 18 ತಿಂಗಳ ಹೆಣ್ಣು ಹುಲಿ ಮರಿಯೊಂದು ಸಾವನ್ನಪ್ಪಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿ ಮರಿ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಬಿಸಿ-ತರಿಕಿಹಳ್ಳ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾಗ ಹುಲಿ ಸತ್ತು ಬಿದ್ದಿರುವುದು ಕಂಡು ಬಂದಿದೆ. ಮೃತದೇಹದಲ್ಲಿ ಗಾಯಗಳ ಗುರುತು ಕಾಣಿಸಿಕೊಂಡಿದೆ. ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮಡಿಕೇರಿ ಜೂ.13 : ಲಕ್ಷ್ಮಣ ತೀರ್ಥ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಹುಣಸೂರು ನಗರದ ಕರೀಮಾರಮ್ಮ ದೇವಾಲಯದ ಬಳಿಯ ಲಕ್ಷ್ಮಣ ತೀರ್ಥ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಶವದ ಎಡಗೈಯಲ್ಲಿ ಸಾಯಿಕುಮಾರ್ ಹಾಗೂ ಬಲಗೈಯಲ್ಲಿ ಎಸ್.ಜಿ.ಗೀತಾ ಎಂದು ಹಚ್ಚೆ ಹಾಕಲಾಗಿದೆ. ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಬಿಳಿಗೆರೆಯುಳ್ಳ ಶಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ 94808 05034ಗೆ ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕುಶಾಲನಗರ, ಜೂ.13 : ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಪರಿಸರ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಕರೆ ನೀಡಿದರು. ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ., ಜೆ.ಸಿ.ಬೋಸ್ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ( ಎನ್.ಎಸ್.ಎಸ್.) ಹಾಗೂ ಸುಂಟಿಕೊಪ್ಪ ಜೆ.ಸಿ.ಐ.ಘಟಕದ ವತಿಯಿಂದ ‘ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕವಾದ ನಿರ್ವಹಣೆ ಪರಿಸರ ಮತ್ತು ಜೀವ- ಸಂಕುಲದ ಸಂರಕ್ಷಣೆ ‘ ಎಂಬ ಕೇಂದ್ರ ವಿಷಯದಡಿ ‘ವಿಶ್ವ ಪರಿಸರ ದಿನ’ದ ಅಂಗವಾಗಿ ಪ್ರೌಢಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ “ನಮ್ಮನಡೆ ಪರಿಸರದೆಡೆಗೆ” – “ಗೋ ಗ್ರೀನ್ ಅಭಿಯಾನ”ಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ , ಪರಿಸರದ…
ಕೊಚ್ಚಿ ಜೂ.13 : ಹಬ್ಬ, ನಾಗದೇವತೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಕಜಾನ್ ಖಾನ್ ಅವರು ಹೃದಯಾಘಾತದಿಂದ ಕೊಳೆಯುಸಿರೆಳೆದಿದ್ದಾರೆ. ಕಜಾನ್ ಖಾನ್, ನಿಧನದ ಸುದ್ದಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್. ಎಂ ಬಾದುಷಾ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಕಜಾನ್ ಖಾನ್ ಅವರು ಪ್ರಧಾನವಾಗಿ ಖಳನಟನ ಪಾತ್ರಗಳಲ್ಲೇ ನಟಿಸುತ್ತಿದ್ದರು. 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು.
ಮಡಿಕೇರಿ ಜೂ.13 : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷಗಳ ಕಾಲ ಕುಲಪತಿಯಾಗಿ ಸಮರ್ಥ ಆಡಳಿತ ನೀಡಿ ನಿವೃತ್ತರಾದ ಪ್ರೊ. ಯಡಪಡಿತ್ತಾಯ ಅವರಿಗೆ ನಗರದ ಫೀಲ್ಡ್ ಮಾರ್ಪಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭ ಕಾಲೇಜಿನ ನಿವೃತ್ತ ಪ್ರಾಂಶುಪಾಲರ, ಮಾಜಿ ಸಿಂಡಿಕೇಟ್ ಸದಸ್ಯೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ಪ್ರೊ. ಯಡಪಡಿತ್ತಾಯ ಅವರು ಅಧ್ಯಾಪಕರಾಗಿ, ಸಂಶೋಧಕರಾಗಿ, ಆಡಳಿತ ಅಧಿಕಾರಿಯಾಗಿ ಯಶಸ್ಸು ಸಾಧಿಸಿದರು. ಸಿಂಡಿಕೇಟ್ ಸಭೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆ ಮೂಲಕ ಅದನ್ನು ಜಾರಿಗೆ ತರುತ್ತಿದ್ದರು. ನ್ಯಾಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಯೊಂದು ಪುಟಗಳನ್ನು ಓದಿ ಅದರಲ್ಲಿ ಇರುವ ತಪ್ಪು ಒಪ್ಪುಗಳನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ a+ ಶ್ರೇಣಿ ಬರುವಂತೆ ಮಾಡಿದ್ದರು. ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದರು ಇವರು ಕಾಲೇಜು ಅಧ್ಯಾಪಕರಿಗೂ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೊಫೆಸರ್ ಗೆ ಪದೋನ್ನತಿಯನ್ನು ನೀಡಿದರು. ಕೊಡವ ಭಾಷೆಗೆ ಮಹತ್ವವನ್ನು ನೀಡುವ ಉದ್ದೇಶದಿಂದ ಕೊಡವ ಸ್ನಾತಕೋತ್ತರ ಪದವಿ, ಕೊಡವ ಭಾಷೆಯನ್ನು…






