ಪೊನ್ನಂಪೇಟೆ ಜೂ.13 : ಕೊಡಗು ವಿಶ್ವ ವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕೋತೂರಿನ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ಕಳೆದ ಏಳು ದಿನಗಳಿಂದ ನಡೆದ ಗ್ರಾಮೀಣ ಅಧ್ಯಯನ ಶಿಬಿರ ಭಾನುವಾರ ಸಮಾರೋಪಗೊಂಡಿತು. ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ, ಜನರ ಸಾಮಾಜಿಕ ಸಮಸ್ಯೆಗಳನ್ನು ಬಗೆಯರಿಸುವ ಕೆಲಸ ಮಾಡುವುದೇ ಸಮಾಜ ಕಾರ್ಯ ಆಗಿದ್ದು, ವಿದ್ಯಾರ್ಥಿಗಳು ಗ್ರಾಮೀಣ ಶಿಬಿರದ ಅಧ್ಯಯನದ ಮೂಲಕ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಸಲಹೆ ನೀಡಿದರು. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಜಿಲ್ಲೆಯಲ್ಲಿ ಎಲ್ಲ ಜಾತಿ, ಜನಾಂಗದವರು ವಾಸಿಸುತ್ತಿದ್ದಾರೆ. ಹಾಡಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ಮೂಲ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಅದರ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗಬೇಕೆಂದು ಹೇಳಿದರು. ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಾಲೆಯ ಮುರುಗೇಶ್ ಮಾತನಾಡಿ ಸಮಾಜ ಕಾರ್ಯ…
ಲೇಖಕ: admin
ಮಡಿಕೇರಿ ಜೂ.12 : ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್‍ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಈ ಬ್ರಿಡ್ಜ್‍ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇದು ಕರ್ನಾಟಕದ ಮೊದಲ ಉದ್ದದ ಗಾಜಿನ ಸೇತುವೆಯಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಇಂದು ಆಕರ್ಷಕ ಸೇತುವೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ಜಿಲ್ಲೆಯಾಗಿದೆ. ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂದರು. ಈ ಅಪರೂಪದ ಯೋಜನೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಬಿತರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು. ಗ್ರೀನ್ ಸಿಟಿ ಫೋರಂ ನ ಅಧ್ಯಕ್ಷ ಚೆಯ್ಯಂಡ ಸತ್ಯ, ಉದ್ಯಮಿ ಹೆಚ್.ಎಂ.ನಂದಕುಮಾರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಮಡಿಕೇರಿ ಜೂ.12 : ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು (Consumer’s interaction Meeting) ಸಭೆಯು ಜೂ.13 ರಂದು ಮಧ್ಯಾಹ್ನ 3 ರಿಂದ 04 ಗಂಟೆ ವರೆಗೆ ಮಡಿಕೇರಿ ಉಪ ವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್, ಸೆಸ್ಕ್, ಕೊಡಗು ಮತ್ತು ಚಾಮರಾಜನಗರ ವೃತ್ತರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಡಿಕೇರಿ ಉಪ ವಿಭಾಗ (ಮಡಿಕೇರಿ ತಾಲ್ಲೂಕು) ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಮಡಿಕೇರಿ ಜೂ.12 : ಅಂಚೆ ಅದಾಲತ್‍ನ ಸಭೆಯು ಜೂ.30 ರಂದು ಬೆಳಗ್ಗೆ 11.30 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿ ಸಿದ್ದಾಪುರ ರಸ್ತೆ ಅಶೋಕಪುರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ `ಅಂಚೆ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಜೂ.28 ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಜೂ.30 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಮಡಿಕೇರಿ ಜೂ.12 : ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಮತು ಉಪಾಧ್ಯಕ್ಷರನ್ನು ನಿಗಧಿ ಪಡಿಸುವ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅಧ್ಯಕ್ಷತೆಯಲ್ಲಿ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು. ಮೀಸಲಾತಿ ಸ್ಥಾನ ವಿವರ ಇಂತಿದೆ :: ವಿರಾಜಪೇಟೆ ತಾಲ್ಲೂಕು ಚೆಂಬೆಬೆಳ್ಳೂರು ಗ್ರಾ.ಪಂ.ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟ ಪಂಗಡ), ಬಿಟ್ಟಂಗಾಲ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಎಸ್‍ಸಿ ಮಹಿಳೆ), ಬೇಟೋಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರವರ್ಗ-ಎ ಮಹಿಳೆ), ಆರ್ಜಿ ಅಧ್ಯಕ್ಷ(ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ(ಎಸ್‍ಸಿ), ಕೆದಮುಳ್ಳೂರು ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ), ಕಾಕೋಟುಪರಂಬು ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಕದನೂರು ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಅಮ್ಮತ್ತಿ ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಎಸ್‍ಟಿ ಮಹಿಳೆ), ಕಾರ್ಮಾಡು ಅಧ್ಯಕ್ಷ (ಎಸ್‍ಟಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬಿಳುಗುಂದ ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪ್ರವರ್ಗ-ಎ ಮಹಿಳೆ), ಹೊಸೂರು ಅಧ್ಯಕ್ಷ (ಎಸ್‍ಸಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಪಾಲಿಬೆಟ್ಟ ಅಧ್ಯಕ್ಷ (ಪ್ರವರ್ಗ-ಎ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಕಣ್ಣಂಗಾಲ ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪ್ರವರ್ಗ-ಎ), ಹಾಲುಗುಂದ ಅಧ್ಯಕ್ಷ (ಪ್ರವರ್ಗ-ಬಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ),…
ಮಡಿಕೇರಿ ಜೂ.12 ಜಿಲ್ಲೆಯಲ್ಲಿ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡುಬಂದಲ್ಲಿ ಹತ್ತಿರದ ಶಾಲೆಗೆ ಸೇರಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಡಿ.ಟಿ.ಪುಟ್ಟರಂಗಸ್ವಾಮಿ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪೊಲೀಸ್ ಇಲಾಖೆ, ವಕೀಲರ ಸಂಘ, ಚೈಲ್ಡ್ ಲೈನ್-1098 ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಸೋಮವಾರ ನಡೆದ `ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳು ಕುಟುಂಬದ ಬಡತನದಿಂದ ಶಾಲೆಗೆ ಹೋಗದೇ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಾರೆ. ಇದನ್ನು ತಪ್ಪಿಸುವ ಉದ್ದೇಶಕ್ಕಾಗಿ ಸರ್ಕಾರ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುತ್ತಿದೆ. ಜೊತೆಗೆ ವಿದ್ಯಾರ್ಥಿ ನಿಲಯ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಬೇಕು ಎಂದು…
ಕುಶಾಲನಗರ ಜೂ.12 : ಮಕ್ಕಳಿಗೆ ಅತ್ಯಗತ್ಯವಾದ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಎಂದು ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲ್ ಮುಖ್ಯಸ್ಥ ಸಯ್ಯದ್ ಮುಹಮ್ಮದ್ ಕೋಯಾ ಜಮಲುಲ್ಲಯ್ಲಿ ತಂಜ್ಞಳ್ ಹೇಳಿದರು. ಕುಶಾಲನಗರದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಟ್ಟು 400ಕ್ಕೂ ಹೆಚ್ಚು ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲ್ ನಲ್ಲಿ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುನೈಟೆಡ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸಿ.ಎಂ.ಹಮೀದ್, ವಿದ್ಯೆಗೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ವಿದ್ಯೆ ಬಲ್ಲವ ಎಲ್ಲವನ್ನೂ ಸಾಧಿಸಬಲ್ಲ. ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಈ ಉದ್ದೇಶದಿಂದ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕುಶಾಲನಗರದಲ್ಲಿ ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲನ್ನು ತೆರೆಯಾಗಿದೆ ಎಂದರು. ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮಾತನಾಡಿ, ಅಲ್ಪಸಂಖ್ಯಾತರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುಲು ಹಿಂದೇಟು ಹಾಕುತ್ತಾರೆ. ಸಂವಿಧಾನವು ಶಿಕ್ಷಣದ…
ಮಡಿಕೇರಿ ಜೂ.12 : ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಮಂಡ್ಯ ಜಿಲ್ಲೆಗೆ ಪದೋನ್ನತಿ ಹೊಂದಿ ವರ್ಗಾವಣೆಯಾದ ಪಾರ್ಮಸಿ ಅಧಿಕಾರಿ ಎಂ.ಟಿ.ಪ್ರಸನ್ನ ಕುಮಾರಿ ಅವರನ್ನು ಆರೋಗ್ಯ ಕೇಂದ್ರದ ವತಿಯಿಂದ ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಉತ್ತಪ್ಪ ಭರತ್, ಕೇಂದ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ವರ್ಗಾವಣೆಯಾದ ಪ್ರಸನ್ನ ಕುಮಾರಿ ಅವರ ಕಾರ್ಯ ವೈಖರಿಯನ್ನು ಶ್ಲಾಘೀಸಿ, ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು. ಪ್ರಯೋಗಾಲಯದ ತಂತ್ರಜ್ಞರಾದ ಲೀಲಾವತಿ ಮಾತನಾಡಿ, 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಕಿರಿಯ ಪ್ರಾಯದಲ್ಲಿಯೇ ಪದೋನ್ನತಿ ಹೊಂದಿ ವರ್ಗಾವಣೆಯಾಗುತ್ತಿರುವುದು ಸಂಸ ಎಂದರಲ್ಲದೇ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಆರೋಗ್ಯ ಕೇಂದ್ರದ ಕನಕಾವತಿ, ಮಂಜುಳಾ, ಸಿಎಚ್‍ಒ ಭವ್ಯ, ಆಶಾ ಕಾರ್ಯಕರ್ತೆ ಜಮುನಾ ಮಾತನಾಡಿ, ಶುಭ ಹಾರೈಸಿದರು. ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಸುರಕ್ಷಣಾಧಿಕಾರಿ ಹೇಮಾವತಿ, ಆಶಾ ಕಾರ್ಯಕರ್ತೆಯರು ಹಾಗೂ…
ಮಡಿಕೇರಿ ಜೂ.12 : ಕರಿಕೆ ವ್ಯಾಪ್ತಿಯ ಪಚ್ಚೆಪಿಲಾವ್ ಅಂಗನವಾಡಿ ಕೇಂದ್ರದ ಮೇಲೆ ರಬ್ಬರ್ ಮರದ ಕೊಂಬೆ ಬಿದ್ದು ಭಾಗಶಹ ಹಾನಿಯಾಗಿದ್ದು, ¨ಭಾರಿ ಅನಾಹುತ ತಪ್ಪಿದೆ. ಗಾಳಿ ಮಳೆಯಿಂದಾಗಿ ಸುಮಾರು ಆರು ಸೀಟುಗಳು ತುಂಡಾಗಿ ಬಿದ್ದಿದೆ. ಸ್ಥಳಕ್ಕೆ ಗ್ರಾ.ಪಂ ಸದಸ್ಯ ಕೆ.ಎ.ನಾರಾಯಣ, ಗ್ರಾಮಸ್ಥರಾದ ಎ.ಎಸ್.ಶಿವನ್ ಮತ್ತು ಅಂಗನವಾಡಿ ಕಾರ್ಯಕರ್ತೆ ಉಷಾಲತಾ, ಸಹಾಯಕಿ ರೇಖಾ ಭೇಟಿ ನೀಡಿ ಮರಗಳ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಮಳೆಗೆ ಮುಂಚಿತವಾಗಿ ಅಧಿಕಾರಿಗಳು ಕರಿಕೆ ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಪರಿಶೀಲನೆ ನಡೆಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿರಾಜಪೇಟೆ ಜೂ.12 : ನಗರೋತ್ಥಾನ ಯೋಜನೆಯ ವಿಶೇಷ ಅನುದಾನದಲ್ಲಿ ನಗರದ ವಿವಿಧೆಡೆ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಶಾಸಕರು ಲೋಕಾರ್ಪಣೆ ಮಾಡಿದರು. ನಗರೋತ್ಥಾನ ಅನುದಾನದಲ್ಲಿ ಸುಮಾರು 3 ಕೋಟಿ 69 ಲಕ್ಷ ರೂ. ಅನುದಾನದಲ್ಲಿ ವಿರಾಜಪೇಟೆ ನಗರದ ಡಿಸಿಲ್ವ ನಗರ, ವಿದ್ಯಾನಗರ ಮತ್ತು ಸುಭಾಷ್ ನಗರದಲ್ಲಿ ನಿರ್ಮಿಸಲಾಗಿರುವ ಕಾಂಕ್ರಿಟ್ ರಸ್ತೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಪೊನ್ನಣ್ಣ ವಿರಾಜಪೇಟೆ ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿಹೊಂದುತ್ತಿದೆ. ನಗರದಲ್ಲಿ ರಸ್ತೆ, ಕುಡಿಯುವ ನೀರು, ಬೀದಿದೀಪ ಹೀಗೆ ಹಲವು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಶ್ರಮಿಸಲಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಕಾರ ಅಗತ್ಯ ಎಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜರನ್ನು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಎಲ್ಲಾ ಸೌಕರ್ಯಗಳನ್ನು ಜನರಿಗೆ ಒದಗಿಸುವುದು ಸರ್ಕಾರದ ಕೆಲಸ. ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಮುಂದಿನ…






