ಮಡಿಕೇರಿ ಏ.13 : ಕೊಡಗು ಜಿಲ್ಲೆಯಲ್ಲಿ ನಿರಂತರ ಶೋಷಣೆಗೆ ತುತ್ತಾಗುತ್ತಿರುವ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಶೋಷಿತ ಸಮುದಾಯಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಅಥವಾ ಎರಡೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಏ.14 ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದ್ದಾರೆ. ಇಂದು ಸುಂಟಿಕೊಪ್ಪದ ಮೊಗೇರ ಸಮಾಜದ ಪ್ರಧಾನ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಹಾಗೂ ಸಮುದಾಯಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು ಶುಕ್ರವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದ ನಂತರ ನೊಂದವರ ಪರವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೊಡಗಿನ ಮೊಗೇರ ಸಮುದಾಯ, ಕೊಡಗು ಶೋಷಿತ ಸಮುದಾಯಗಳ ವೇದಿಕೆ, ಬಹುಜನ ಕಾರ್ಮಿಕ ಸಂಘಟನೆಗಳು, ದಲಿತ ಮುಖಂಡರುಗಳು ಹಾಗೂ ಕೊಡಗಿನಲ್ಲಿ ನಿರಂತರ ಶೋಷಣೆಗೆ ಒಳಪಟ್ಟ ಇತರೆ ಸಮುದಾಯಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಶೋಷಿತ ಸಮುದಾಯಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಹೋರಾಟಗಳನ್ನು ನಡೆಸಿವೆ. ಅಹೋರಾತ್ರಿ ಧರಣಿ ಮತ್ತು ಉಪವಾಸ ಸತ್ಯಾಗ್ರಹಗಳನ್ನು ನಡೆಸಿ ನಿವೇಶನ…
ಲೇಖಕ: admin
ಸುಂಟಿಕೊಪ್ಪ,ಏ.13: ಸುಂಟಿಕೊಪ್ಪ ಸಿ.ಎಸ್.ಐ ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ಏ.14 ರಂದು ನೆರವೇರಲಿದೆ. ಇಮ್ಮಾನೂವೆಲ್ ನೂತನ ದೇವಾಲಯದ ಲೋಕಾರ್ಪಣೆ, ದೇವರ ವಾಕ್ಯದ ಸಂದೇಶವನ್ನು ಸಿ.ಐ.ಎಸ್., ಕೆ.ಎಸ್.ಡಿ. ಬಿಷೋಪ್ ರೈಟ್, ರೆವೆ, ಹೇಮಚಂದ್ರಕುಮಾರ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿ.ಐ.ಎಸ್., ಕೆ.ಎಸ್.ಡಿ. ವಿಶ್ರಾಂತ ಬಿಷೋಪ್‍ರುಗಳು, ಪದಾಧಿಕಾರಿಗಳು, ಮಂಗಳೂರು, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ವಲಯದ ಅಧ್ಯಕ್ಷರುಗಳು, ನಮ್ಮ ಸಭೆಯಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರುಗಳು ಹಾಗೂ ಸಭಾಪಾಲಕ ರೆವ, ಅಮೃತರಾಜ್, ಸಭಾ ಸೇವಕರ ಸಂಧ್ಯಾ ಸುಪ್ರಿತ ಆಗಮಿಸಲಿದ್ದಾರೆ.
ಸುಂಟಿಕೊಪ್ಪ,ಏ.13: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್‍ಗಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ನಾಲ್ಕು ದಿನಗಳ ಶಿಬಿರಕ್ಕೆ ರಾಜ್ಯ ಗೈಡ್ ಸಂಸ್ಥೆಯ ಸದಸ್ಯೆ ಡೈಸಿ ಹಾಗೂ ಶಾಲೆಯ ಮುಖ್ಯೋಪಾದ್ಯಾಯನಿ ಸೀಸ್ಟರ್ ವೀರ ಚಾಲನೆ ನೀಡಿದರು.. ಬೇಸಿಗೆ ಶಿಬಿರದಲ್ಲಿ 125 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಪ್ರಾರ್ಥನೆ, ಧ್ವಜಾರೋಹಣ, ಸಭಾ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು, ಪ್ರಥಮ ಚಿಕಿತ್ಸೆ, ಘನವಂದನೆ, ಸಂಸ್ಥೆಯ ಉದ್ದೇಶ, ನಿಯಮ ಪ್ರತಿಜ್ಞೆ, ಪುನರಾವರ್ತನೆ, ಕರಕುಶಲ ವಸ್ತುಗಳ ತಯಾರಿಕೆ, ಹಾಗೂ ಪ್ರದರ್ಶನ, ಗ್ರಾಮ ಸ್ವಚ್ಛತೆ, ಹೊರ ಸಂಚಾರ, ನೃತ್ಯ ಮನರಂಜನೆ ಸೇರಿದಂತೆ ತರಬೇತಿಗಳನ್ನು ್ಲ ನೀಡಲಾಯಿತು. ಕಬ್ಸ್ ಮಾಸ್ಟರ್ ಈವಾ ಜೀತಾ ಬೆನ್ನಿಸ್, ಮಹೇಶ್, ಗೈಡ್ ನಾಯಕಿ ಪ್ರೀತ್ ಜೋಯ್ಸ್ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಮಡಿಕೇರಿ ಏ.13: ಬಿಜೆಪಿ ಹೈ ಕಮಾಂಡ್ ಮೊದಲ ಪಟ್ಟಿಯಲ್ಲೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿಸಿದ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪಕ್ಷ ಪ್ರಮುಖರು ಹಾಗೂ ಆಪ್ತ ವರ್ಗದವರೊಂದಿಗೆ ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ಸಂಪ್ರದಾಯದಂತೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಶ್ರೀ ಭಗಂಡೇಶ್ವರ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ತಲಕಾವೇರಿಗೆ ತೆರಳಿ ಕಾವೇರಿ ಮಾತೆಯ ತೀರ್ಥ ಕುಂಡಿಕೆ ಬಳಿ ವಿಶೇಷ ಪೂಜೆ, ಪ್ರಾರ್ಥನೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೋಪಯ್ಯ, ಮೊದಲ ಪಟ್ಟಿಯಲ್ಲಿಯೇ ಕೊಡಗಿನ ಎರಡೂ ಕ್ಷೇತ್ರಗಳಿಗೆ ಹಾಲಿ ಶಾಸಕರನ್ನೇ ವರಿಷ್ಠರು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಗೆಲ್ಲುವ ವಿಶ್ವಾಸವನ್ನಿಟ್ಟು ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ವಿಶ್ವಾಸವನ್ನು ಉಳಿಸಿಕೊಳ್ಳವ ಕಾರ್ಯವನ್ನು ನಾವು ಮಾಡುತ್ತೇವೆ. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿದರು. ಇದೀಗ ಮಳೆಯ ಕೊರತೆ ಕಂಡು ಬಂದಿದೆ. ಇದರಿಂದಾಗಿ ರೈತಾಪಿ ವರ್ಗ ಹಾಗೂ ಕೃಷಿಕರು ಕಂಗಾಲಾಗಿದ್ದಾರೆ. ಜನರ ನೆಮ್ಮದಿಯ ಬದುಕು ಮತ್ತು…
ಮಡಿಕೇರಿ ಏ.13 : ವಿಧಾನಸಭಾ ಚುನಾವಣಾ ಅಧಿಸೂಚನೆ ಇಂದು ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಕೆಯ ಆರಂಭಿಕ ದಿನದಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಮಿನ್ ಮೊಹಿಸಿನ್ ಅವರು ಮಡಿಕೇರಿ ಕ್ಷೇತ್ರಕ್ಕೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿಗಳಾದ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರಿಗೆ ಅಮೀನ್ ಮೊಹಿಸಿನ್ ನಾಮಪತ್ರವನ್ನು ಸಲ್ಲಿಸಿದರು. ::: ಮೆರವಣಿಗೆ ::: ನಾಮಪತ್ರ ಸಲ್ಲಿಸುವುದಕ್ಕು ಮೊದಲು ಎಸ್‍ಡಿಪಿಐ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ::: ಬ್ಯಾಲೆಟ್ ಹೋರಾಟ ::: ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅಮಿನ್ ಮೊಹಿಸಿನ್, ಕಳೆದ ಒಂದೂವರೆ ದಶಕಗಳಿಂದ ಜನಪರವಾಗಿ ಎಸ್‍ಡಿಪಿಐ ಸಾಕಷ್ಟು ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಇದೀಗ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾಗಿ ‘ಬ್ಯಾಲೆಟ್ ಹೋರಾಟ’ಕ್ಕೆ ಮುಂದಾಗಿರುವುದಾಗಿ ತಿಳಿಸಿದರು. ಇತರೆ ಯಾವುದೇ ರಾಜಕೀಯ ಪಕ್ಷಗಳ ಲಾಭ, ನಷ್ಟಗಳು ಎಸ್‍ಡಿಪಿಐ ಪಕ್ಷಕ್ಕೆ ಸಂಬಂಧಪಡುವುದಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿರುವ ಎಸ್‍ಡಿಪಿಐ ಮೂಲಕ ಜನಪರ ಕಾಳಜಿಯೊಂದಿಗೆ ಚುನಾವಣಾ ಸ್ಪರ್ಧೆಗೆ…
ಮಡಿಕೇರಿ ಏ.13 : ಚುನಾವಣೆಯನ್ನು ಸಮರ್ಪಕವಾಗಿ ನಿಭಾಯಿಸುವ ಸಲುವಾಗಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ವಯಲ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರಚಾರ ಸಮಿತಿ ಸಹಯೋಗದಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಆರು ಬ್ಲಾಕ್‍ನ 273 ಮತಗಟ್ಟೆಯ ಪದಾಧಿಕಾರಿಗಳಿಗೆ, ವಯಲ ಅಧ್ಯಕ್ಷರುಗಳಿಗೆ ಕೆಪಿಸಿಸಿಯ ನುರಿತ ತರಬೇತುದಾರರಿಂದ ಕಾರ್ಯಾಗಾರ ನಡೆಯಲಿದೆ ಎಂದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಕಾರ್ಯಾಗಾರ ನಡೆಯಲಿದ್ದು, ಏ.15 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆ ಬ್ಲಾಕ್‍ನ ಗೋಣಿಕೊಪ್ಪ ಪರಿಮಳ ಕಲ್ಯಾಣ ಮಂಟಪ, ಮಧ್ಯಾಹ್ನ 12.30ಕ್ಕೆ ವಿರಾಜಪೇಟೆ ಬ್ಲಾಕ್‍ನ ಅಭ್ಯರ್ಥಿ ಕಚೇರಿ ಹಾಗೂ 3.30ಕ್ಕೆ ನಾಪೋಕ್ಲು ಬ್ಲಾಕ್‍ನ ಕಾರುಗುಂದ ವಿಎಸ್‍ಎಸ್ ಸಭಾಂಗಣದಲ್ಲಿ ಪೊನ್ನಂಪೇಟೆಯಲ್ಲಿ 96 ಮತಗಟ್ಟೆ, ವಿರಾಜಪೇಟೆಯ 94 ಮತಗಟ್ಟೆ, ನಾಪೋಕ್ಲುವಿನ 83 ಮತಗಟ್ಟೆಯ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಯಲಿದೆ ಎಂದು…
ಮಡಿಕೇರಿ ಏ.13 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾಧಿಕಾರಿಗಳ ಕಚೇರಿ ಆವರಣದ ವ್ಯಾಪ್ತಿಯ 100 ಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ವಾಹನ ನಿಲುಗಡೆ, ಪ್ರವೇಶ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಪಡಿಸಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಸಿಆರ್‍ಪಿಸಿ 1973 ರ ಕಲಂ 144 ರೀತ್ಯಾ ಪ್ರತಿಬಂಧಕಾಜ್ಞೆ ಹೊರಡಿಸಲು ಆರಕ್ಷಕ ವೃತ್ತ ನಿರೀಕ್ಷಕರು, ವಿರಾಜಪೇಟೆ ವೃತ್ತ ಅವರು ಕೋರಿದ್ದು, ಆ ನಿಟ್ಟಿನಲ್ಲಿ ಏಪ್ರಿಲ್ 20 ರವರೆಗೆ ನಾಮಪತ್ರಗಳ ಸ್ವೀಕೃತಿ, ಏಪ್ರಿಲ್, 21 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಏಪ್ರಿಲ್, 24 ರವರೆಗೆ ನಾಮಪತ್ರಗಳ ವಾಪಾಸ್ಸಾತಿಗೆ ಚುನಾವಣಾ ವೇಳಾಪಟ್ಟಿ ಇದೆ. ಈ ಅವಧಿಯಲ್ಲಿ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಾದ ವಿರಾಜಪೇಟೆ ತಾಲ್ಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗುವ ಸಂಭವ ಇರುತ್ತದೆ. ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಅವರ ಬೆಂಬಲಿಗರು ಒಂದೇ ಕಡೆ…
ಮಡಿಕೇರಿ ಏ.13 : ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಗೆ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ಶಲಭ್ ಕಟಿಯಾರ್ (ಐಆರ್‍ಎಸ್) (ಸಿ ಮತ್ತು ಸಿಇ) ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಹಲವು ಮಾಹಿತಿ ಪಡೆದರು. ವೆಚ್ಚಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಕಚೇರಿಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ. ಅಥವಾ ಸಂಚಾರಿ ದೂರವಾಣಿ ಸಂಖ್ಯೆ 9353190721 ಸಂಪರ್ಕಿಸಬಹದಾಗಿದೆ ಎಂದು ವೆಚ್ಚ ವೀಕ್ಷಕರ ಸಂಪರ್ಕ ಅಧಿಕಾರಿ ಎಚ್.ಸಿ.ಗಿರೀಶ್ ಅವರು ತಿಳಿಸಿದ್ದಾರೆ.
ಮಡಿಕೇರಿ ಏ.13 : ಕಡಗದಾಳು ಗ್ರಾಮದ ಆದಿ ಶ್ರೀ ಪನ್ನಂಗಾಲತಮ್ಮೆ ದೇವಾಲಯದ ವಾರ್ಷಿಕ ಉತ್ಸವವು ಏ.15 ರಿಂದ 17ರ ವರೆಗೆ ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಏ.15 ರಂದು ಬೆಳಿಗ್ಗೆ 7 ಗಂಟೆಗೆ ದೇವರ ಭಂಡಾರ ಏರಿಸುವುದು, ಬೆಳಿಗ್ಗೆ 11 ಗಂಟೆಯಿಂದ ಅಮ್ಮೆ ದೇವರ ಕೊಡೆ, ಚೌವುಂಡಿ, ಅಯ್ಯಪ್ಪ, ಹಾಗೂ ಕುರುಂದ ದೇವರುಗಳ ಉತ್ಸವ ನಡೆಯಲಿದ್ದು, ನಂತರ ಎತ್ತು ಪೋರಾಟ, ಕುರುಂದಕಳಿ, ರಾತ್ರಿ ಚವುಂಡಿ ಬಾರಣಿ ನೆರವೇರಲಿದೆ. ಏ.16 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ನಂತರ ದೇವಿಯ ಅವಭ್ರತ ಸ್ನಾನ ನೆರವೇರಲಿದ್ದು, ಏ.17 ರಂದು ಬೆಳಿಗ್ಗೆ ದೇವರ ನುಡಿ ಕೇಳುವುದು, ಹರಿಕೆ ಒಪ್ಪಿಸುವುದು, ಭಂಡಾರ ನೋಡುವ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿ ಕೋರಿದೆ.
ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ವಿಹೆಚ್‍ಪಿಯ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ. ಚೆಟ್ಟಳ್ಳಿ ಸಮೀಪ ಅಬ್ಯಾಲ ಎಂಬಲ್ಲಿ ಕೃಷ್ಣಮೂರ್ತಿಯವರು ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೆ ಯತ್ನಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೃತ್ತಿಪರ ಅಥವಾ ಸಂಘಟನೆಯ ದ್ವೇಷ ಯಾವುದೇ ಇದ್ದರು ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ಗುಂಡು ಹಾರಿಸಿದವರನ್ನು ಶೀಘ್ರ ಬಂಧಿಸಬೇಕು ಮತ್ತು ಕೃಷ್ಣಮೂರ್ತಿ ಅವರಿಗೆ ಪೊಲೀಸರು ಸೂಕ್ತ ಭದ್ರತೆಯನ್ನು ನೀಡಬೇಕು ಎಂದು ವಿಹೆಚ್‍ಪಿ ಒತ್ತಾಯಿಸಿದೆ. ದುಷ್ಕರ್ಮಿಗಳ ಬಂಧನವಾಗದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.






