ಲೇಖಕ: admin

ಸುಂಟಿಕೊಪ್ಪ,ಏ.15 : ಬುದ್ಧ ಪ್ರತಿಷ್ಠಾನ ಜಿಲ್ಲಾ ಶಾಖೆಯ ವತಿಯಿಂದ  ಡಾ.ಬಿ.ಆರ್.ಅಂಬೇಡ್ಕರ್  ಅವರ 132ನೇ ಜನ್ಮ ದಿನವನ್ನು ಆಚರಿಸಲಾಯಿತು. ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು  ಪ್ರಮುಖರಾದ  ಹೆಚ್.ಟಿ.ಕಾವೇರಪ್ಪ ಉದ್ಘಾಟಿಸಿದರು. ಬುದ್ಧ ಪ್ರತಿಷ್ಠಾನ ಜಿಲ್ಲಾ ಅಧ್ಯಕ್ಷ  ಎಚ್.ಪಿ.ಶಿವಕುಮಾರ್  ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನೆ ಸಂಚಾಲಕರು ಆದ ವಿಶ್ವ, ಕಾವೇರಪ್ಪ, ಸುರೇಶ್ ಹೆಚ್.ಎಂ. , ಎಸ್.ನಿಶಾಂತ್ , ಉಪಸ್ಥಿತರು ಇದ್ದರು.

Read More

ಸುಂಟಿಕೊಪ್ಪ,ಏ.15 : ಸುಂಟಿಕೊಪ್ಪ ಸಿ.ಎಸ್.ಐ. ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ವಿಶೇಷ ಪ್ರಾರ್ಥನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ನೂತನವಾಗಿ ಸಿ.ಎಸ್.ಐ. ಸಭೆಯ ವತಿಯಿಂದ ಇಮ್ಯಾನೂವೆಲ್ ನೂತನ ದೇವಾಲಯದ ಲೋಕಾರ್ಪಣೆ ವಿಧಿ ವಿಧಾನಗಳ ಸಂದರ್ಭ ದೇವರ ವಾಕ್ಯದ ಸಂದೇಶವನ್ನು ಸಿ.ಐ.ಎಸ್., ಕೆ.ಎಸ್.ಡಿ. ಬಿಷೋಪ್ ರೈಟ್, ರೆವೆ, ಹೇಮಚಂದ್ರಕುಮಾರ್ ವಲಯದ ವಿವಿಧ ಭಾಗಗಳಿಂದ ಸಭಾಪಾಲಕರುಗಳು ಆರ್ಶಿವಚನ ನೀಡಿದರು. ಕಾರ್ಯಕ್ರಮದಲ್ಲಿ ಸಿಎಸ್‍ಐ ಸಭೆಯ ಪದಾಧಿಕಾರಿಗಳು, ಮಂಗಳೂರು, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ವಲಯದ ಅಧ್ಯಕ್ಷರುಗಳು, ಸಭೆಯಲ್ಲಿ ಸೇವೆ ಸಲ್ಲಿಸಿದ್ದ ಸಭಾಪಾಲಕರು ಹಾಗೂ ಸಭಾಪಾಲಕ ರೆವ.ಅಮೃತರಾಜ್, ಸಭಾಸೇವಕರ ಸಂಧ್ಯಾ ಸುಪ್ರೀತಾ ಪಾಲ್ಗೊಂಡಿದ್ದರು.

Read More

ಮಡಿಕೇರಿ ಏ.15 : ದೂರದರ್ಶನ ಚಂದನ ವಾಹಿನಿಯ ಸೋದರ ಸಿರಿ ಕಾರ್ಯಕ್ರಮದಲ್ಲಿ ಇಂದು ಮಧ್ಯಾಹ್ನ 2-30 ಗಂಟೆಗೆ  ಕೊಡವ ಕವಿಗೋಷ್ಠಿ ಹಾಗೂ ಕೊಡವ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಬೆಂಗಳೂರು ದೂರದರ್ಶನ ಚಂದನ ವಾಹಿನಿಯ ಪ್ರಕಟಣೆ ತಿಳಿಸಿದೆ. ಮಧ್ಯಾಹ್ನ 2-30ಕ್ಕೆ ಪ್ರಸಾರವಾಗಲಿರುವ “ಸೋದರ ಸಿರಿ” ಕೊಡವ ಕಾರ್ಯಕ್ರಮದಲ್ಲಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ, ತಂಬಾಂಡ ಡ್ಯಾನಿ ನಾಣಯ್ಯ ಹಾಗೂ ಬೊಟ್ಟಂಗಡ ಸುಮನ್ ಸೀತಮ್ಮ ಕವಿಗಳಾಗಿ ಕವನ ವಾಚನ ಮಾಡಲಿದ್ದಾರೆ ಹಾಗೂ ಮೊಣ್ಣಂಡ ಶೋಭ ಸುಬ್ಬಯ್ಯ ಮತ್ತು ತಂಡದವರಿಂದ ಕೊಡವ ಗೀತ ಗಾಯನ ಕಾರ್ಯಕ್ರಮ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Read More

ಮಡಿಕೇರಿ ಏ.14 : ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮಂಡ್ಯದ ಕುಮಾರ(35), ಪತ್ನಿ ಶಿಲ್ಪಾ (29), ಪ್ರಿಯಾಂಕ, ಮಿಶಿಕಾ (8 ತಿಂಗಳು), ಯಶಸ್ ಗೌಡ (8) ಹಾಗೂ ಮನುಶ್ರೀ (3) ಮೃತ ದುರ್ದೈವಿಗಳು. ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಪ್ರ‍್ರಿಯಾಂಕ ಅವರ ಪತಿ ಮಂಜುನಾಥ್ ಅವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು ಬಿಯಾನ್ ಗೌಡ(6)ನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆ ಮಂಡ್ಯದ ಕುಮಾರ್ ಹಾಗೂ ಮಂಜುನಾಥ್ ಕುಟುಂಬದ ಒಟ್ಟು ಎಂಟು ಮಂದಿ ಕಾರಿನಲ್ಲಿ ಮಡಿಕೇರಿಯಿಂದ ಸುಳ್ಯದತ್ತ ಸಾಗುತ್ತಿದ್ದರು. ಇದೇ ಸಂದರ್ಭ ಸುಳ್ಯದ ಕಡೆಯಿಂದ ಮಡಿಕೇರಿಯತ್ತ ಬರುತ್ತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಪಾಜೆಯ ಪೆಟ್ರೋಲ್ ಬಂಕ್ ಬಳಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ…

Read More

ಮಡಿಕೇರಿ ಏ.14 : ಸಾಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಅಮಾನವೀಯವಾದ ‘ಸಾಮಾಜಿಕ ಬಹಿಷ್ಕಾರ’ ಕ್ಕೆ ತುತ್ತಾಗಿರುವ ಬಗ್ಗೆ ಸೋಮವಾರಪೇಟೆ ತಾಲ್ಲೂಕಿನ ಹರಗ ಗ್ರಾಮದ ಕುಟುಂಬವೊಂದು ಅಳಲು ತೋಡಿಕೊಂಡಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಹರಗ ಗ್ರಾಮದ ಬಿ.ಡಿ.ಗಿರೀಶ ಅವರು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಷ್ಟಗಳನ್ನು ತರೆದಿಟ್ಟರು. ಪ್ರಸ್ತುತ ಸಣ್ಣ ಹಿಡುವಳಿ ಮಾಡಿಕೊಂಡು ಬದುಕುತ್ತಿರುವ ತಾನು, ತನ್ನ ಪತ್ನಿ ಬಿ.ಜಿ.ಪವಿತ್ರ, ತಾಯಿ ಬಿ.ಡಿ.ಹೂವಮ್ಮ ಅವರನ್ನು ಗ್ರಾಮದಲ್ಲಿ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ಸಾಮಾಜಿಕ ಬಹಿಷ್ಕಾರದ ಹಿನ್ನೆಲೆ ತಮ್ಮೊಂದಿಗೆ ಗ್ರಾಮಸ್ಥರಾರು ಮಾತನಾಡದಂತೆ, ಮಾತನಾಡಿದರೆ 10 ಸಾವಿರ ದಂಡ ವಿಧಿಸುವ ಬೆದರಿಕೆಯನ್ನು ಅಲ್ಲಿನ ಪ್ರಮುಖರು ಹಾಕಿದ್ದಾರೆ. ಇದರಿಂದ ಗ್ರಾಮಸ್ಥರಾರು ತಮ್ಮೊಂದಿಗೆ ಮಾತನಾಡುವುದಾಗಲಿ, ತಾವು ಇತರರ ಮನೆಗೆ ತೆರಳುವುದಾಗಲಿ ಸಾಧ್ಯವಾಗುತ್ತಿಲ್ಲ. ಕನಿಷ್ಟ ತೋಟದ ಕೆಲಸಕ್ಕೆ ಕಾರ್ಮಿಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ತಿಳಿಸಿದರು. ಗಿರೀಶ್ ಅವರು ಹೇಳುವಂತೆ ಸುಮಾರು ಎರಡು ದಶಕಗಳ ಹಿಂದೆ ತಮ್ಮ ತೋಟದ ಬದಿಯಲ್ಲಿನ ಸುಮಾರು ಎರಡೂವರೆ ಏಕರೆಯಷ್ಟು ಜಾಗಕ್ಕೆ ಬೇಲಿ ಹಾಕಿಕೊಂಡಿದ್ದು, ಕಳೆದ ವರ್ಷವಷ್ಟೆ ಅಲ್ಲಿ ಕಾಫಿ ತೋಟ ಮಾಡಲು…

Read More

ಸೋಮವಾರಪೇಟೆ ಏ.14 : ಸೋಮವಾರಪೇಟೆ ತಾಲ್ಲೂಕು ಅಂಬೇಡ್ಕರ್ ಯುವ ಸೇನೆ, ಹಾಗೂ ಬೆಟ್ಟದಳ್ಳಿ ಸಿದ್ದಾರ್ಥನಗರದ ಗ್ರಾಮಾಭಿವೃದ್ಧಿ ಸಮಿತಿ ಮತ್ತು ಮಾನವತಾ ಯುವಕ ಸಂಘ ವತಿಯಿಂದ ಪಟ್ಟಣದಲ್ಲಿ ದಾದಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರದ ಟ್ಲಾಬ್ಲೊಗಳ ಮೆರವಣಿಗೆ ನಡೆಯಿತು. ಅಭಿಮಾನಿಗಳು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಹಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಬಾಣಾವಾರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭ ಪ್ರಮುಖರಾದ ಮಂಜುನಾಥ್, ಬಿ.ಇ.ಜಯೇಂದ್ರ, ಪ್ರವೀಣ್, ಮನೋಜ್, ರಾಮಚಂದ್ರ, ಎಂ.ಪಿ.ಹೊನ್ನಪ್ಪ, ಆನಂದ್, ರಾಜು, ರವಿ ಇದ್ದರು.

Read More

ಮಡಿಕೇರಿ ಏ.14 : ವಿಧಾನಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯು ಆರಂಭವಾಗಿದ್ದು, ಈ ಸಂಬಂಧ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ. ನಗರದ ಗಾಂಧಿ ಭವನದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್, 20 ಕೊನೆಯ ದಿನವಾಗಿದೆ. ಏಪ್ರಿಲ್, 21 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಏಪ್ರಿಲ್, 24 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. ಆ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೆರವಣಿಗೆ, ಜಾಥ, ರ್ಯಾಲಿ ಮಾಡಿದ್ದಲ್ಲಿ ವೀಡಿಯೋ ಮಾಡಿಕೊಳ್ಳುವುದು ಸೇರಿದಂತೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ…

Read More

ಮಡಿಕೇರಿ ಏ.14 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ‘ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ನಗರದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಇತರರು ದೀಪ ಬೆಳಗಿ, ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಮಾತನಾಡಿ ‘ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ’ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಒತ್ತಿ ಹೇಳಿದ್ದಾರೆ ಎಂದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದಲ್ಲಿಯೇ ಮಾದರಿ ಹಾಗೂ ಅತ್ಯಂತ ಶ್ರೇಷ್ಠ ಸಂವಿಧಾನನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಭಾರತದ ಸಂವಿಧಾನದ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಂವಿಧಾನ ನೀಡಿದ್ದಾರೆ. ಎಲ್ಲರಿಗೂ ಸಮಾನ…

Read More

ನಾಪೋಕ್ಲು ಏ.20 : ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಹಾಗೂ ಲಿಯೋ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು. ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ನಾಪೋಕ್ಲು ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿ ಹಳೆ ತಾಲೂಕಿನ ಬಸ್ಸು ತಂಗುದಾಣವನ್ನು ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ದತ್ತು ಸ್ವೀಕರಿಸಿ ಬಸ್ಸು ತಂಗುದಾಣದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿದರು. ನಂತರ ಲಯನ್ಸ್ ವಲಯ ಅಧ್ಯಕ್ಷ ಮುಕ್ಕಾಟಿರ ಎಂ ವಿನಯ್ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಲಯನ್ಸ್, ಮಲ್ಟಿಪಲ್ ಚೇರ್ಮನ್ ವಸಂತಶೆಟ್ಟಿ, ಲಿಯೋ ಪದಗ್ರಹಣ ಅಧಿಕಾರಿ ಪ್ರೀತಮ್ ಪೊನ್ನಪ್ಪ, ಪ್ರಗತಿಶೆಟ್ಟಿ, ಖಜಾಂಜಿ ಕುಟ್ಟಪ್ಪ ಎಂ.ಬಿ , ಪ್ರಾಂತೀಯ ಅಧ್ಯಕ್ಷ ಕೋಟೆರ ಶಾಶ್ವತ್ ಬೋಪಣ್ಣ, ವಲಯ ಅಧ್ಯಕ್ಷ ಮೋಹನ್ ಕುಮಾರ್, ಪ್ರಾಂತೀಯ ಅಂಬಾಸಿಡರ್ ನವೀನ್ ಅಂಬೆಕಲ್, ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳು : ನೂತನವಾಗಿ ಲಿಯೋ ಕ್ಲಬ್ ಅನ್ನು ಉದ್ಘಾಟಿಸಲಾಯಿತು. ಕ್ಲಬ್ನ ನೂತನ…

Read More

ನಾಪೋಕ್ಲು ಏ.14 :  ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸಂಸ್ಥೆ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ, ಅಂಬೇಡ್ಕರ್ ಜನ್ಮದಿನಾಚರಣೆ ಮತ್ತು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು  ಶಾಲೆಯ ಉಪಪ್ರಾಂಶುಪಾಲ ಎಂ.ಎಸ್ ಶಿವಣ್ಣ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಡಾ.ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಬೇಕೆಂದು ಸಲಹೆ ನೀಡಿದರು. ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹಾರಿಸ್ ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಇಡೀ ವಿಶ್ವವೇ ನಮ್ಮ ದೇಶವನ್ನು ಗಮನಿಸುವಂತೆ ಮಾಡಿದೆ. ಅಲ್ಲದೇ  ಎಲ್ಲರೂ ಸಮಾನತೆಯಿಂದ  ಉನ್ನತ ಸ್ಥಾನಕ್ಕೆರಲು  ಸಾಧ್ಯವಾಗಿದೆ ಎಂದರು. ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆಗಳನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಶ್ರಮಿಸಬೇಕೆಂದರು. ಕಾರ್ಯಕ್ರಮಕ್ಕೂ ಮೊದಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿ ಅಂಬೇಡ್ಕರ್ ಜನ್ಮದಿನ ಆಚರಿಸಿದರು. ಬಳಿಕ ಭಾರತ್ ಸ್ಕೌಟ್ಸ್…

Read More