ಲೇಖಕ: admin

ಮಡಿಕೇರಿ ಏ.6 : ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಜಾಥ, ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಚುನಾವಣೆ ಘೋಷಣೆಯಾಗಿ ಮೇ, 10 ರಂದು ಮತದಾನ ನಡೆಯಲಿದ್ದು, ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮತದಾನ ಹೆಚ್ಚಳಕ್ಕೆ ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬ ಬಗ್ಗೆ ಸಲಹೆ ನೀಡುವಂತೆ ಕೋರಿದರು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ.74 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.80 ಕ್ಕಿಂತ ಹೆಚ್ಚು ಮತದಾನ ಆಗಲು ಹೆಚ್ಚಿನ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಮತದಾನದ…

Read More

ಮಡಿಕೇರಿ ಏ.6 : ಜನಾಂಗದ ಮೂಲವನ್ನು ಅರಿತಾಗ ಮಾತ್ರ ನಮ್ಮ ಸಂಸ್ಕೃತಿ, ಭಾಷೆ, ಆಚಾರ, ವಿಚಾರ ಪದ್ದತಿ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹೇಳಿದರು. ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ ಕೊಡವ ಚಲನಚಿತ್ರ “ಬೇರ್” (The Root) ಚಿತ್ರದ ಮುಹೂರ್ತ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ ಮೊಣ್ಣಂಡ ಶೋಭಾ ಸುಬ್ಬಯ್ಯ, ಕೊಡವರು ತಮ್ಮ ಸಂಸ್ಕೃತಿಯನ್ನು ಯಾವುದಾದರೊಂದು ರೂಪದಲ್ಲಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಿ ಮತ್ತೊಬ್ಬರಿಗೆ ಪ್ರೇರಣೆ ನೀಡಬೇಕು ಎಂದರು. ಕೊಡವ ಭಾಷೆಯಲ್ಲಿ ಪ್ರಸ್ತುತ ಹಲವು ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಕೊಡವ ಭಾಷೆಯ ಚಲನಚಿತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೆ ಕೊಡವ ಸಿನಿಮಾಗಳು ಬಂದ ನಂತರ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಚಿತ್ರದ ಕಥೆ-ನಿರ್ದೇಶಕರಾದ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ ಮಾತನಾಡಿ,…

Read More

ಮಡಿಕೇರಿ ಏ.6 :  ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ‘ಅಪ್ಪಚೆಟ್ಟೋಳಂಡ ಹಾಕಿ ಉತ್ಸವ’ ಕೊನೆಯ ಘಟ್ಟವನ್ನು ಪ್ರವೇಶಿಸುತ್ತಿದ್ದು, ಪಂದ್ಯಾವಳಿಯ ಸೆಮಿ ಫೈನಲ್ಸ್ ಏ.7 (ಇಂದು) ಮತ್ತು ಅಂತಿಮ ಪಂದ್ಯ ಏ.9 ರಂದು ನಡೆಯಲಿದೆಯೆಂದು ಪಂದ್ಯಾವಳಿ ಆಯೋಜನಾ ಸಮಿತಿಯ ಸಂಚಾಲಕ  ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಇಪ್ಪತ್ತು ದಿನಗಳಿಂದ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ನೋಂದಾಯಿಸಿಕೊಂಡ 336 ತಂಡಗಳ ಪೈಕಿ 329 ತಂಡಗಳು ಪಾಲ್ಗೊಂಡಿದ್ದು, ವಿವಿಧ ಕುಟುಂಬಗಳ 5 ಸಾವಿರ ಆಟಗಾರರು ಪಾಲ್ಗೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 957 ಗೋಲುಗಳು ವಿವಿಧ ಪಂದ್ಯಗಳಲ್ಲಿ ದಾಖಲಾಗಿದೆ. 49 ಪಂದ್ಯಗಳಲ್ಲಿ ವಿಜೇತ ತಂಡಗಳನ್ನು ಟೈಬ್ರೇಕರ್ ಮೂಲಕ ನಿರ್ಧರಿಸಲಾಗಿದೆ. ಒರಟಾಟಕ್ಕಾಗಿ 67 ಹಸಿರು, 11 ಹಳದಿ ಕಾರ್ಡ್‍ಗಳನ್ನು ತೋರಿಸಲಾಗಿದೆ. ತಾಂತ್ರಿಕ ತಂಡದಲ್ಲಿ 27 ಮಂದಿ ಕಾರ್ಯನಿರ್ವಹಿಸುತ್ತಿರುವುದಾಗಿ ಮಾಹಿತಿಯನ್ನಿತ್ತರು. ಯುವಕರನ್ನು ನಾಚಿಸಿದ ವೃದ್ಧರು- ಪಂದ್ಯಾವಳಿಯಲ್ಲಿ ನಾಪನೆರವಂಡ ಕುಟುಂಬ ತಂಡದಲ್ಲಿ 87ರ ಪ್ರಾಯದ ಪೊನ್ನಪ್ಪ, ಚೀಯಕಪೂವಂಡ ತಂಡದಲ್ಲಿ 84 ರ ಪ್ರಾಯದ ಉತ್ತಪ್ಪ ಅವರು ಪಾಲ್ಗೊಂಡು ಯುವಕರನ್ನು…

Read More

ಮಡಿಕೇರಿ ಏ.6 :   ರಾಷ್ಟ್ರದ ಗಡಿಗಳನ್ನು ಕಾಯ್ದು ನಿವೃತ್ತರಾಗಿರುವ ಮಾಜಿ ಸೈನಿಕರು ಒನ್ ರ‍್ಯಾಂಕ್ ಒನ್ ಪೆನ್ಶನ್(ಒಆರ್‍ಒಪಿ) ಯೋಜನೆಯ ನ್ಯೂನ್ಯತೆಗಳಿಂದ ಅನ್ಯಾಯಕ್ಕೆ ಒಳಗಾಗಿದ್ದು, ಯೋಜನೆಯ ಲೋಪಗಳನ್ನು ಸರಿಪಡಿಸುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಒಆರ್‍ಒಪಿ ಯೋಜನೆಯಡಿ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ಯೋಧ ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರ ಪಿಂಚಣಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿದೆ. ಅದನ್ನು ಸರಿಪಡಿಸುವ ಮೂಲಕ ತಾರತಮ್ಯವನ್ನು ನೀಗಬೇಕೆಂದು ಮನವಿ ಮಾಡಿದರು. ರಕ್ಷಣಾ ಪಡೆಗಳ ಮಾಜಿ ಸೈನಿಕರುಗಳಿಗೆ ಒಆರ್‍ಒಪಿ 2 ನ್ನು ಕೇಂದ್ರ ಸರ್ಕಾರ 2019 ರ ಜುಲೈ1 ರಿಂದ ಜಾರಿಗೆ ತಂದಿದೆ. ಇದರಲ್ಲಿ ರಕ್ಷಣಾ ಪಡೆಗಳಲ್ಲಿ ಕೆಳಸ್ತರದಲ್ಲಿ ಕಾರ್ಯನಿರ್ವಹಿಸಿದ ಸೈನಿಕರ ಪಿಂಚಣಿಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಸೈನ್ಯದಲ್ಲಿ 15 ರಿಂದ 20 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದಾತ ನಿವೃತ್ತವಾಗಿ ಪಡೆಯುತ್ತಿರುವ…

Read More

ಕುಶಾಲನಗರ  ಏ.6 :  ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆ ಹಾಗೂ ಅಟ್ಟಹಾಸದ ವಿರುದ್ಧ ಸಮರ ಸಾರಿದ ಮೊದಲ ಮಹಿಳಾ ಧ್ವನಿ ಅಕ್ಕಮಹಾದೇವಿ ಎಂದು ಕಸಾಪ ಜಿಲ್ಲಾ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಹೇಳಿದರು. ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ಬಸವೇಶ್ವರ ದೇವಾಲಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹನ್ನೆರಡನೆಯ ಶತಮಾತನದ ಶಿವಶರಣರು ಹಾಗೂ ಶರಣೆಯರು ಲೋಕಕ್ಕೆ ನೀಡಿದ ವಚನಾಮೃತವನ್ನು  ಮಕ್ಕಳಿಗೆ ಕಲಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ಕಟ್ಟಬಹುದಾಗಿದೆ. ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳು ಪ್ರತಿ ನಿತ್ಯವು ವಚನಗಳ ಸಾಲುಗಳನ್ನು ಹೇಳುವ ಮೂಲಕ ಅದರ ಸಾರದಂತೆ ಬದುಕಬಹುದು ಎಂದರು. ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಕನ್ನಡದ ನೆಲದಲ್ಲಿ ಒಂದು ಸಾವಿರ ವರ್ಷಗಳ ಹಿಂದೆ 430 ವಚನಗಳನ್ನು ಬರೆಯುವ ಮೂಲಕ ಮೊದಲ ಕವಯತ್ರಿಯಾದ ಅಕ್ಕಮಹಾದೇವಿಯವರ ವಚನಗಳಲ್ಲಿ ಇಹಪರವಾದ ಮತ್ತು ಸಾಮಾಜಿಕವಾದ ಚಿಂತನೆಗಳು ಅಡಕವಾಗಿವೆ. ಆದ್ದರಿಂದ ವಚನಗಳ ಪಠಣ ಪ್ರತಿ ಮನೆ ಮನಗಳಲ್ಲಿ…

Read More

ವಿರಾಜಪೇಟೆ ಏ.6 : ಬಿಟ್ಟಂಗಾಲ ಗ್ರಾಮದಲ್ಲಿ ನೆಲೆ ಕಂಡಿರುವ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಸ್ಥಾನದ 31ನೇ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕತಿಯಿಂದ ನೆರೆವೇರಿತು. ಏ.4 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾದ ತೆರೆ ಮಹೋತ್ಸವಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಿತು. ಸಂಜೆ ಶ್ರೀ ಮುತ್ತಪ್ಪನ್ ವೆಳ್ಳಾಟಂ, ಗುಳಿಗ ವಸೂರಿಮಾಲ ತೆರೆಗಳು ನಡೆದವು. ದೇವಾಲಯದ ಸನೀಹದ ಕಿರುಹೊಳೆಯಲ್ಲಿ ವಸೂರಿಮಾಲ ತೆರೆಯ ಜಳಕದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಹಿಳೆಯರ ದೀಪಾರಾಧನೆಯು ಮೆರೆಗು ನೀಡಿತು. ವಾಸೂರಿ ಮಾಲ ತೆರೆ ದೇಗುಲ ಪ್ರವೇಶವಾಗಿ ದೈವ ನರ್ತನ ನಡೆಯಿತು. ದೇಗುಲದ ಆಡಳಿಯ ಮಂಡಳಿಯ ವತಿಯಿಂದ ಸಿಡಿಮದ್ದು ಪ್ರದರ್ಶನವಾಯಿತು. ಇಂದು ಪ್ರಾಥ:ಕಾಲ ಗುಳಿಗನ್ ವೆಳ್ಳಾಟಂ, ಮುತ್ತಪ್ಪನ್ ವೆಳ್ಳಾಟಂ, ತಿರುವಪ್ಪನ್ ತೆರೆಗಳು ನಡೆಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮ, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ನಗರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ವರದಿ : ಕಿಶೋರ್ ಕುಮಾರ್ ಶೆಟ್ಟಿ  

Read More

ವಿರಾಜಪೇಟೆ ಏ.6 : ಸಮೂದಾಯದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಹಾಗೂ ಬದ್ಧತೆ ನೀಡುವ ನಿಟ್ಟಿನಲ್ಲಿ ಬಂಟರ ಸಂಘ ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ, ವಕೀಲ ಬಿ.ರತ್ನಾಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಹೊರ ವಲಯದ ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಅವರ ಕಷ್ಟಗಳನ್ನು ಅರಿತು ಸಂಘವು ಸಹಾಯ ಮಾಡಬೇಕಾಗಿರುವ ಅನಿವಾರ್ಯತೆಯಿದೆ. ಕೆಲವು ಪಟ್ಟಬದ್ಧ ಹಿತಾಶಕ್ತಿಗಳ ವ್ಯಕ್ತಿಗಳು ತಾನು, ತನ್ನದೇ ತನ್ನಿಂದಲೇ ಎನ್ನುವ ಹುನ್ನಾರದಿಂದ ಸಂಘಟನೆಯನ್ನು ಹುಟ್ಟಾಕಿ ಇಂದು ಜನಾಂಗ ಬಾಂಧವರನ್ನು ದಿಕ್ಕು ತಪ್ಪಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಸಂಘಟನೆಯು ಎಂದಿಗೂ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಂತಾಗಬೇಕು. ಕೇವಲ ಭರವಸೆಯ ಗೂಡಗಬಾರದು. ಜಿಲ್ಲಾ ಬಂಟರ ಸಂಘವು ಸಾರ್ವತ್ರಿಕ ಚುನಾವಣೆಯ ನಂತರ ಜನಾಂಗ ಬಾಂಧವರಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮುಂಬರುವ ದಿನಗಳಲ್ಲಿ ಯೋಜನೆಗಳು ಕಾರ್ಯಗತವಾಗುತ್ತದೆ ಎಂದು ಹೇಳಿದರು.…

Read More

ಚೆಯ್ಯಂಡಾಣೆ  ಏ.6 :  ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ  ಗುಡುಗು ಸಹಿತ  ಮಳೆಯಾಗಿದೆ. ಗ್ರಾಮದ ನರಿಯಂದಡ, ಚೇಲಾವರ,ಕರಡ ಗ್ರಾಮದಲ್ಲಿ ಸಾದಾರಣ ಮಳೆಯಾಗಿದ್ದು ಬಿಸಿಲಿನಿಂದ ಒಣಗುತ್ತಿದ್ದ ಗಿಡಗಳಿಗೆ ತಂಪೆರಗಿದಂತಿದೆ. ವರ್ಷದ ಮೊದಲ ಮಳೆ ಸುರಿದಿದ್ದು, ಕೊಡಗು ಜಿಲ್ಲೆಯ ಹಲವೆಡೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ವರದಿ : ಅಶ್ರಫ್ 

Read More

ವಿರಾಜಪೇಟೆ ಏ.6 : ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಸರ್ಕಾರ ರದ್ದು ಮಾಡಿದ ನಿರ್ಧಾರ ಸಂವಿಧಾನ ವಿರೋಧಿಯಾಗಿದೆ ಎಂದು ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಪ್ರಮುಖ, ಅಲ್ಪಸಂಖ್ಯಾತ ಮುಖಂಡ ಕುಂಜಿಲದ ನಾಸರ್ ಮಕ್ಕಿ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಮರಿಗಿದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡಿರುವುದು ಜನದ್ರೋಹದ ಕ್ರಮವಾಗಿದೆ. ಮುಸ್ಲಿಮರಿಗೆ 2(ಬಿ) ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ ಹಂಚಿರುವುದು ಅತ್ಯಂತ ಅವೈಜ್ಞಾನಿಕ. ಇದು ಸಮಾಜದಲ್ಲಿ ಕೆಟ್ಟ ಸಂದೇಶ ರವಾನೆಯಾದಂತಾಗಿದೆ ಎಂದರು. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತವಾಗಿ ಕೈಗೊಂಡ ನಿರ್ಧಾರ ಇದಾಗಿದೆ ಎಂದು ಆರೋಪಿಸಿದ ಅವರು, ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ತೆಗೆದಿರುವುದು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದಲ್ಲೂ ಕಡು ಬಡವರು ಮತ್ತು ಬಡವರು ಇದ್ದಾರೆ. ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿರುವುದರಿಂದ ಸಮುದಾಯದ ಪ್ರತಿಭಾವಂತರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಲಿದ್ದಾರೆ ಎಂದು…

Read More

ಮಡಿಕೇರಿ ಏ.6 :  2023 ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ಬಸ್‌ ಹಾಗೂ ಇತರೆ ಯಾವುದೇ ವಾಹನಗಳ ಮೇಲೆ, ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಅಥವಾ ಪಕ್ಷಗಳನ್ನು ಬಿಂಬಿಸುವ ಬ್ಯಾನರ್, ಬಿತ್ತಿಪತ್ರಗಳು ಹಾಗೂ ಇತರೇ ಚಿತ್ರಗಳನ್ನು ಪೂರ್ವಾನುಮತಿ ಇಲ್ಲದೆ ಪ್ರದರ್ಶಿಸುವಂತಿಲ್ಲ ಹಾಗೂ ಪ್ರದರ್ಶನದ ಬ್ಯಾನರ್/ ಕಟೌಟ್ ಇತರೆ ಚಿತ್ರಗಳನ್ನು 24 ಗಂಟೆಗಳ ಒಳಗಾಗಿ ಕಡ್ಡಾಯವಾಗಿ ತೆರವುಗೊಳಿಸುವುದು. ತಪ್ಪಿದಲ್ಲಿ ಅಂತಹ ವಾಹನಗಳನ್ನು ಚುನವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೆಂದು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು  ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ನೋಡೆಲ್ ಅಧಿಕಾರಿ ಎಸ್‌.ಎನ್ . ಮಧುರ ತಿಳಿಸಿದ್ದಾರೆ.   

Read More