ಲೇಖಕ: admin

ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಗಜ ಉತ್ಸವ-2023 ಅನ್ನು ಉದ್ಘಾಟಿಸಿದರು. ಬಳಿಕ ಜೀಪ್ ಸಫಾರಿ ನಡೆಸಿದ ರಾಷ್ಟ್ರಪತಿಗಳು, ಆನೆಗಳಿಗೆ ಆಹಾರವನ್ನು ನೀಡಿದರು. ಸಫಾರಿ ವೇಳೆ ರಾಷ್ಟ್ರಪತಿಗಳು ಒಂದು ಕೊಂಬಿನ ಘೇಂಡಾಮೃಗಗಳು, ಕಾಡು ಎಮ್ಮೆಗಳು, ಜಿಂಕೆಗಳು ಮತ್ತು ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳನ್ನು ನೋಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More

ಮಡಿಕೇರಿ ಏ.7 :  ನಾಪೋಕ್ಲುವಿನಲ್ಲಿ ಆಯೋಜಿತ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆ ‘ಅಪ್ಪಚೆಟ್ಟೋಳಂಡ ಹಾಕಿ ಉತ್ಸವ’ದ ಸೆಮಿಫೈನಲ್‍ಗಳಲ್ಲಿ ವೀರೋಚಿತ ಗೆಲುವು ಸಾಧಿಸಿದ ಕುಲ್ಲೇಟಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಏ.9 ರಂದು ಪ್ರಶಸ್ತಿಗಾಗಿ ಸೆಣಸಲಿವೆ. ಕಿಕ್ಕಿರಿದು ನೆರೆದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕುಲ್ಲೇಟಿರ ತಂಡ ಟೈ ಬ್ರೇಕರ್ ಮೂಲಕ ಬಲಿಷ್ಠ ನೆಲ್ಲಮಕ್ಕಡ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು. ಅತ್ಯಂತ ಕುತೂಹಲಕಾರಿಯಾಗಿ ನಡೆದ ಪಂದ್ಯದ ಮೊದಲಾರ್ಧದ 24 ನೇ ನಿಮಿಷ ಕುಲ್ಲೇಟಿರ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್‍ನ್ನು ತಂಡದ ಯಾಶಿಕ್ ಅವರು ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟರು. ದ್ವಿತೀಯಾರ್ಧದ 52ನೇ ನಿಮಿಷ ನೆಲ್ಲಮಕ್ಕಡ ತಂಡದ ಮೊಣ್ಣಪ್ಪ ಅವರು ಸೊಗಸಾದ ಗೋಲು ಬಾರಿಸುವ ಮೂಲಕ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು. ನಂತರ ವಿಜೇತ ತಂಡವನ್ನು ನಿರ್ಧರಿಸಲು ನಡೆದ ಟೈಬ್ರೇಕರ್‍ನಲ್ಲಿ ಕುಲ್ಲೇಟಿರ ತಂಡದ ನಾಚಪ್ಪ, ಯತಿನ್,…

Read More

ಕುಶಾಲನಗರ, ಏ.7: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಂಗ ಸಮಿತಿ ಶ್ರೀ ರಾಮಸೇವಾ ಸಮಿತಿ ವತಿಯಿಂದ ಶ್ರೀ ರಾಮೋತ್ಸವ ಪ್ರಯುಕ್ತ ಸರಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಖ್ಯಾತಿಯ ತಾಳಮದ್ದಳೆ,  ಪುತ್ತೂರಿನ ಆಧೀಶಕ್ತಿ ಯಕ್ಷಗಾನ ಬಳಗದಿಂದ ಶ್ರೀರಾಮ ಪಟ್ಟಾಭಿಷೇಕ ಎಂಬ ಪೌರಾಣಿಕ‌ ಪ್ರಸಂಗ  ಪ್ರೇಕ್ಷಕರ ಗಮನ ಸೆಳೆಯಿತು. ಸುಬ್ರಾಯ ಸಂಪಾಜೆಯವರ ಕಂಚಿನ ಕಂಠದ ಭಾಗವತಿಕೆಗೆ ಪದ್ಮಶ್ರೀ ತಂಡದ ಕಲಾವಿದರು ಪೂರಕವಾದ ಅರ್ಥ ವಿವರಣೆ ನೀಡಿದರು.   

Read More

ಮಡಿಕೇರಿ ಏ.7 :  ವಿಧಾನ ಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿಯಾಗಿದ್ದ ಹರಪ್ಪಳ್ಳಿ ರವೀಂದ್ರ ಅವರು ಕಾಂಗ್ರೆಸ್ ಟಿಕೆಟ್ ತಪ್ಪಿರುವ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ವತೋಮುಖ ಪ್ರಗತಿಯ ಚಿಂತನೆಯಡಿ ಕೊಡಗಿನ ಚಿತ್ರಣವನ್ನೇ ಬದಲಿಸಬೇಕೆನ್ನುವ ಉದ್ದೇಶದಿಂದ ರಾಜಕೀಯ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದೆ. ಕೊನೆಯ ಕ್ಷಣಗಳಲ್ಲಿ ಪಕ್ಷದ ಟಿಕೆಟ್ ವಂಚಿತನಾಗಿದ್ದೇನೆ. ಶನಿವಾರ ಶನಿವಾರಸಂತೆಯಲ್ಲಿ ಬೆಂಬಲಿಗರ ಸಭೆ ನಡೆಯಲಿದ್ದು, ಅಲ್ಲಿನ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸುತ್ತಲೆ, ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಗಳನ್ನು ತೆರೆದಿಟ್ಟು, ಏ.17 ರಂದು ನಾಮಪತ್ರ ಸಲ್ಲಿಕೆ ಮಾಡಬೇಕೆನ್ನುವ ಉದ್ದೇಶವಿದೆಯೆಂದು ತಿಳಿಸಿದರು. ಕಳೆದ ಎರಡೂವರೆ ದಶಕಗಳಿಂದ ಪ್ರಚಾರದ ಹಂಗಿಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದ್ದೇನೆ. ತಾನು ಒಕ್ಕಲಿಗರ ಸಂಘದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವ ಕುಮಾರ್ ಅವರು, ಮಡಿಕೇರಿ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ನೀಡಿ ತನ್ನನ್ನು ಕಾಂಗ್ರೆಸ್‍ಗೆ ಕರೆ ತಂದರು. ಇದೀಗ…

Read More

ನಾಪೋಕ್ಲು ಏ.7 :   ದುಬೈಯ ಹೈ ಗೇಟ್ ಅಂತಾರಾಷ್ಟ್ರೀಯ ಶಾಲೆಯ ವತಿಯಿಂದ ನೀಡಲ್ಪಡುವ 2023ನೇ ಸಾಲಿನ ಉನ್ನತ ಪ್ರಭಾವಶಾಲಿ ಪ್ರಶಸ್ತಿಯನ್ನು ನಾಪೋಕ್ಲುವಿನ ಚೇರಿಯಪರಂಬು ನಿವಾಸಿ ಆಸಿಫ್ ಹಂಝ ಪಡೆದುಕೊಂಡಿದ್ದಾರೆ. ಆಸಿಫ್ ನಾಪೋಕ್ಲು ಸಮೀಪದ ಚೆರಿಯಪಂಬು ಗ್ರಾಮದ ಹಂಝ ಕತ್ತಣೀರ ಹಾಗೂ ಪರವಂಡ ಫಾತಿಮಾ ದಂಪತಿಯ ಪುತ್ರನಾಗಿದ್ದು, ಇವರು ದುಬೈಯ ಸೌಂದರ್ಯ ವರ್ಧಕದ ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿ :ಝಕರಿಯ ನಾಪೋಕ್ಲು   

Read More

ಮಡಿಕೇರಿ ಏ.7 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ 16ನೇ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಏ.21 ಮತ್ತು 22 ರಂದು ನಡೆಯಲಿದೆ. ಕೇರಳದ ಪಯ್ಯನೂರ್ ನ ಶ್ರೀ ಈಶ್ವರಿ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಏ.21 ರಂದು ಸಂಜೆ 6 ಗಂಟೆಗೆ ಆಚಾರ್ಯರ ಆಗಮನ, ದೇವಾಲಯದಲ್ಲಿ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಏ.22 ರಂದು ಬೆಳಿಗ್ಗೆ 7 ಗಂಟೆಗೆ ಮಹಾ ಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾ ಪೂಜೆ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.

Read More

ಮಡಿಕೇರಿ ಏ.7 : ಆಸ್ಟ್ರೇಲಿಯ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗಿನ ಕಲಿಯಂಡ ಚರಿಶ್ಮಾ ಭಾರೀ ಅಂತರದಲ್ಲಿ ಜಯ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಚರಿಶ್ಮಾ ಕೊಳಕೇರಿಯ ಕಲಿಯಂಡ ಮಾದಪ್ಪ ಮತ್ತು ಭಾನುಮತಿಯವರ ಪುತ್ರಿ.

Read More

ಸೋಮವಾರಪೇಟೆ ಏ.6 : ಸೋಮವಾರಪೇಟೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಗದಾಪೂಜಾ ಕಾರ್ಯಕ್ರಮ ಗುರುವಾರ ನಡೆಯಿತು. ಶ್ರೀ ಆಂಜನೇಯನ ಮತ್ತು ಅವನ ಶೌರ್ಯ ಸ್ವರೂಪದ ಆಶೀರ್ವಾದ ಪಡೆಯಲು, ಶ್ರೀ ಹನುಮಂತನ ಚರಣಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಮಾಡಿ, ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಡಿ.ಎಂ. ಪ್ರದೀಪ್, ಬಿ.ಇ. ಅರುಣ್‌ಕುಮಾರ್, ಡಿ.ಕೆ. ಸುರೇಶ್, ಕಿಬ್ಬೆಟ್ಟ ಪವಿತ್ರ, ರಂಜಿನಿ, ಬಿ.ಜಿ. ರವಿ, ಪವಿತ್ರ ಲಕ್ಷ್ಮಿ ಕುಮಾರ್ ಸೇರಿದಂತೆ ಹಲವರು iದ್ದರು.

Read More

ಮಡಿಕೇರಿ ಏ.6 : ಕೊಡಗು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಮೂಡಿದ್ದ ತೀವ್ರ ಕುತೂಹಲಕ್ಕೆ ಕೊನೆಗೂ ಪಕ್ಷದ ವರಿಷ್ಠರು ಅಂತ್ಯ ಹಾಡಿದ್ದಾರೆ. ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ.ಮಂತರ್ ಗೌಡ ಅವರನ್ನು ಘೋಷಿಸಿದ್ದಾರೆ. ಟಿಕೆಟ್‌ಗಾಗಿ ಮಾಜಿ ಸಚಿವ ಬಿ.ಎ.ಜೀವಿಜಯ, ಕೆಪಿಸಿಸಿ ಪ್ರಮುಖ ಹೆಚ್.ಎಸ್.ಚಂದ್ರಮೌಳಿ ಹಾಗೂ ಹರಪಳ್ಳಿ ರವೀಂದ್ರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಪಕ್ಷದ ಆಂತರಿಕ ಸಮೀಕ್ಷೆಯ ಮೂಲಕ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಒಲವು ಡಾ.ಮಂತರ್ ಗೌಡ ಅವರ ಪರ ಇದ್ದ ಕಾರಣ ಇವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಅಲ್ಲದೆ ಮಂತರ್ ಗೆ ಟಿಕೆಟ್ ನೀಡಿದರೆ ಮಾತ್ರ ಪಕ್ಷದ ಪರ ಕೆಲಸ ಮಾಡುವುದಾಗಿ ಪದಾಧಿಕಾರಿಗಳು ಸಂದೇಶವನ್ನು ರವಾನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯ ಸಂಸ್ಥೆಗಳಿoದ 2022 ರಲ್ಲಿ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಪಿ.ಸುಜಾ ಕುಶಾಲಪ್ಪ ವಿರುದ್ಧ ಮಂತರ್ ಗೌಡ ಸ್ಪರ್ಧಿಸಿ 603 ಮತ ಪಡೆದು ಗಮನ ಸೆಳೆದಿದ್ದರು. ಸುಜಾ…

Read More

ಮಡಿಕೇರಿ ಏ.6 : ಕೊಡಗು ಜಿಲ್ಲಾ ಮತದಾರರ ಜಾಗೃತಿ ಸಮಿತಿ ಮತ್ತು ಜಿಲ್ಲಾಡಳಿತವು ಈ ಬಾರಿ ಮತದಾರ ಜಾಗೃತಿ ರಾಯಭಾರಿಗಳನ್ನಾಗಿ ಸಾಮಾನ್ಯರನ್ನೇ ಆಯ್ಕೆ ಮಾಡುವ ಮೂಲಕ ಗಮನ ಸೆಳೆದಿದೆ. ಮೇಕೇರಿ ಗ್ರಾಮದ ಎಸ್.ಕೆ.ಈಶ್ವರಿ, ಏಳನೇ ಹೊಸಕೋಟೆ ಸರ್ಕಾರಿ ಪ್ರೌಢ ಶಾಲೆ ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಹಾಗೂ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ.ರವಿ ಮುತ್ತಪ್ಪ ಇವರು ರಾಯಬಾರಿಯಾಗಿ ಆಯ್ಕೆಯಾಗಿದ್ದು, ಇವರನ್ನು ಸ್ವೀಪ್ ಸಮಿತಿ ವತಿಯಿಂದ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿಯಿಂದ ಹೊರತಂದಿರುವ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು. ಮೇಕೇರಿಯ ವಿಶೇಷ ಚೇತನ ಮಹಿಳೆ ಮೇಕೆರಿ ಗ್ರಾಮದ ಈಶ್ವರಿ, ಕುಶಾಲನಗರದ ಶಿಕ್ಷಕ ಬಸವರಾಜ ಬಡಿಗೇರ್, ಗೃಹರಕ್ಷಕ ದಳದ ಸಿಬ್ಬಂದಿ ರವಿಮುತ್ತಪ್ಪ ಅವರನ್ನು ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆಯ ಮತದಾರರ ಜಾಗೃತಿ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಮೇಕೇರಿ ಗ್ರಾಮದಲ್ಲಿ ನೆಲಸಿರುವ ಎಸ್.ಕೆ.ಈಶ್ವರಿ ಬಾಲ್ಯದಲ್ಲಿಯೇ ವಿಶೇಷಚೇತನರಾಗಿದ್ದು ಛಲಬಿಡದೇ ಹಂತಹಂತವಾಗಿ ಸಾಧನೆಯ ಹಾದಿಯಲ್ಲಿ ಸಾಗಿ 35 ರೀತಿಯ…

Read More