ಲೇಖಕ: admin

ಮಡಿಕೇರಿ ಏ.5 : ಆಮ್ ಆದ್ಮಿ ಪಾರ್ಟಿಯ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದ ಟಿ.ಕೆ.ಸಾಯಿಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಸಿದ್ದಾಪುರದಲ್ಲಿ ಮಧು ಬಂಗಾರಪ್ಪ ಹಾಗೂ ಎ.ಎಸ್.ಪೊನ್ನಣ್ಣ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Read More

ಮಡಿಕೇರಿ ಏ.5 : ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಕಳೆದ ಎರಡು ದಿನಗಳಿಂದ ಕಡಿಮೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೌರಾಯುಕ್ತರಾದ ವಿಜಯ್ ಅವರು ಇಂದು ಕೂಟುಹೊಳೆಗೆ ಭೇಟಿ ನೀಡಿ ವೀಕ್ಷಿಸಿದರು. ನಗರಸಭೆಯ ಸಹಾಯಕ ಅಭಿಯಂತರರು ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿಯಂತರರು ಹಾಗೂ ಸೀನಿಯರ್ ವಾಲ್ ಮೆನ್ ಗಳೊಂದಿಗೆ ಕೂಟುಹೊಳೆ ಜಾಕ್ ವೆಲ್ ಗೆ ಹಾಗೂ ಕುಂಡಮೇಸ್ತ್ರಿ ಜಾಕ್ ವೆಲ್ ಗೆ ಪರಿಶೀಲಿಸಲಾಯಿತು. ಪ್ರಸ್ತುತ ಇದುವರೆಗೂ ಮಳೆಯಾಗದ ಕಾರಣ ಕೂಟುಹೊಳೆಯಲ್ಲಿ ಸಂಪೂರ್ಣ ನೀರಿಲ್ಲದೆ ಬತ್ತಿದ್ದು ಇವಾಗ ಕುಂಡಾಮೇಸ್ತ್ರಿಯಿಂದ ಲಿಫ್ಟ್ ಮಾಡಿ ಕೂಟುಹೊಳೆಯಿಂದ ರನ್ ಮಾಡಿ ನಗರಕ್ಕೆ ನೀರನ್ನು ಒದಗಿಸಲಾಗುತ್ತಿದೆ. ಇದೇ ರೀತಿ ಮಳೆ ಆಗದಿದ್ದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರನ್ನು ಕೊರತೆ ಉಂಟಾಗುವುದರಿಂದ ಇದನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ 23 ವಾರ್ಡ್ ಗಳಲ್ಲಿ ದಿನ ಬಿಟ್ಟು ದಿನ ನೀರನ್ನು ನೀಡುವಂತಹ ಸಲಹೆಗಳು ಬಂದಿವೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

Read More

ನವದೆಹಲಿ ಏ.5 : ಗಣರಾಜ್ಯೋತ್ಸವದ ಹಿನ್ನೆಲೆ ಘೋಷಿಸಲಾದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಾಧಕರಿಗೆ ಪ್ರದಾನ ಮಾಡಿದರು. ಉಮ್ಮತ್ತಾಟ್ ನೃತ್ಯ ಕಲಾವಿದೆ ಕೊಡಗಿನ ಐಮುಡಿಯಂಡ ರಾಣಿ ಮಾಚಯ್ಯ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕದ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಸಾಹಿತಿ, ಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್.ಬೈರಪ್ಪ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿರಿ ಧಾನ್ಯ ಬಳಕೆ ಕುರಿತು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾ.ಖಾದರ್, ಬೀದರ್ ನ ರಶೀದ್ ಅಹಮ್ಮದ್ ಖಾತ್ರಿ ಸೇರಿದಂತೆ ಕರ್ನಾಟಕದ ಒಟ್ಟು 8 ಮಂದಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

Read More

ಮಡಿಕೇರಿ ಏ.5 : ಬೇಸಿಗೆಯ ಹಿನ್ನೆಲೆ ಕೂಟುಹೊಳೆಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿರುವುದರಿಂದ ಮಡಿಕೇರಿ ನಗರಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುವುದು ಎಂದು ಮಡಿಕೇರಿ ನಗರಸಭೆ ತಿಳಿಸಿದೆ.

Read More

ಮಡಿಕೇರಿ ಏ.5 : ಕೊಡಗಿನ ಪುರಾತನ ದೇವಾಲಯಗಳಲ್ಲಿ ಒಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವವು ಏ.6 ರಿಂದ 8ರವರೆಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ಪೂಜಾ ವಿಧಿವಿಧಾನಗಳು ಕುರಿತು ಮಾಹಿತಿ ನೀಡಿದರು. ಏ.6 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಶಕ್ತಿಗಣಪತಿ ದೇವರಿಗೆ 21 ತೆಂಗಿನ ಕಾಯಿಗಳ ಮಹಾ ಗಣಪತಿ ಹೋಮ, 8 ಗಂಟೆಗೆ ಕಲಶ ಪೂಜೆ, ಶ್ರೀ ನಾಗದೇವರಿಗೆ ನೂರುಂಪಾಲುಂ (ನಾಗತಂಬಿಲ) ಸಮರ್ಪಣೆ, 10.30 ಗಂಟೆಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಲಿದೆ. ಸಂಜೆ 4.30 ಗಂಟೆಗೆ ಕೇರಳದ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಶ್ರೀ ಬ್ಲಾತೂರ್ ಚಂದ್ರ್ ಮಡೆಯಚ್ಚನ್ ನೇತೃತ್ವದಲ್ಲಿ ಧ್ವಜಾರೋಹಣದ ಮೂಲಕ ಶ್ರೀ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ದೈವಕೋಲಗಳ ವೀಕ್ಷಣೆಗೆ ದಾನಿಗಳ ಸಹಾಯದಿಂದ…

Read More

ಮಡಿಕೇರಿ ಏ.5 : ಪೊನ್ನಂಪೇಟೆ ತಾಲ್ಲೂಕು ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯ ಬೆಳ್ಳೂರು ಗ್ರಾಮದ ಹೆಮ್ಮಾಡು ಕಾಲೋನಿಯಲ್ಲಿ ಕುಡಿಯುವ ನೀರಿನ ಬವಣೆಯನ್ನು ಪರಿಹರಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್  ತಿಳಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಸಂಬಂಧಿಸಿದಂತೆ ಇತ್ತೀಚೆಗೆ ಸಾರ್ವಜನಿಕರು ಜಿಲ್ಲಾಡಳಿತ ಗಮನಕ್ಕೆ ತಂದಿದ್ದರು. ಆ ದಿಸೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಪೊನ್ನಂಪೇಟೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಸ್ಥಳದಲ್ಲಿಯೇ ‘ನಾನ್ ರಿಟರ್ನ್ ವಾಲ್’ ನಿಂದ ಸಮಸ್ಯೆ ಉಂಟಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಿ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

Read More

ಮಡಿಕೇರಿ ಏ.5 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಂ ಅವರ 116 ನೇ ಜನ್ಮ ದಿನಾಚರಣೆಯನ್ನು ಬುಧವಾರ ಸರಳವಾಗಿ ಆಚರಿಸಲಾಯಿತು. ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಇತರರು ಪುಷ್ಪನಮನ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಮಾತನಾಡಿ ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿದ ಕೀರ್ತಿ ಬಾಬು ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ ಎಂದರು. ದಮನಿತರ ಪರವಾಗಿ ಹೋರಾಟ ನಡೆಸಿದ ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನ್ ರಾಂ ಅವರು ಕೃಷಿ, ರಕ್ಷಣಾ ಸಚಿವರಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾದದ್ದು ಎಂದು ಅವರು ಹೇಳಿದರು. ‘ಅಭಿವೃದ್ಧಿ ಹೊಂದುತ್ತಿರುವ…

Read More

ಮಡಿಕೇರಿ ಏ.5 : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏಪ್ರಿಲ್, 11 ರಿಂದ ಮೇ, 14 ರವರೆಗೆ 29 ದಿನಗಳ ಕಾಲ ನುರಿತ ತರಬೇತುದಾರರಿಂದ ದಿನಕ್ಕೆ ಎರಡು ಗಂಟೆಯಂತೆ ಈಜು ತರಬೇತಿ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಈಜು ಕ್ರೀಡೆಗೆ 8 ವರ್ಷ ಮೇಲ್ಪಟ್ಟಿರಬೇಕು. ಸಮಯ ಬೆಳಗ್ಗೆ 9.30 ರಿಂದ 11.30 ರವರೆಗೆ ಶುಲ್ಕ ರೂ.3 ಸಾವಿರ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-229985, 08272-220986 ಹಾಗೂ ಮಣಿಕಂಠ: 9880989987 ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಏ.5 : ಮೂರ್ನಾಡು 33/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಮರುಗೋಡು ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಏಪ್ರಿಲ್, 6 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಅರೆಕಾಡು, ಹೊಸ್ಕೇರಿ, ಮರಗೋಡು, ಕಟ್ಟೆಮಾಡು, ಐಕೋಳ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.  

Read More

ಮಡಿಕೇರಿ ಏ.5 : ಚೆಟ್ಟಂಗಡ ಕುಟುಂಬ ಆಶ್ರಯದಲ್ಲಿ ನಡೆದ ಕೊಡವ ಕೌಟುಂಬಿಕ ಕೇರ್‌ಬಲಿ ನಮ್ಮೆಯು ಟಿ.ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪುರುಷರ ವಿಭಾಗದಲ್ಲಿ ಮಾಳೇಟಿರ ತಂಡ ಹಾಗೂ ಮಹಿಳೆಯರ ವಿಭಾಗದ ಅಣ್ಣಳಮಾಡ ತಂಡ ಚಾಂಪಿಯನ್ ಪಟ್ಟ ಪಡೆಯುವ ಮೂಲಕ ತಲಾ ರೂ.50 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿತು. ರನ್ನರ್ಸ್ ಪ್ರಶಸ್ತಿ ಹಾಗೂ ತಲಾ ರೂ.30 ಸಾವಿರ ನಗದನ್ನು ಪುರುಷರ ವಿಭಾಗದಲ್ಲಿ ಮಾಳೇಟಿರ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಅಜ್ಜಮಾಡ ತಂಡ ಪ್ರಶಸ್ತಿ ಪಡೆಯಿತು. ಮೂರನೇ ಸ್ಥಾನವನ್ನು ಪುರುಷರ ವಿಭಾಗದಲ್ಲಿ ಚಂಗಲಂಡ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಕಾಂಡಂಡ ತಂಡ ತಲಾ ರೂ.20 ಸಾವಿರ ನಗದು ಮತ್ತು ಪ್ರಶಸ್ತಿ ಪಡೆಯಿತು. ಪಂದ್ಯಾವಳಿಯಲ್ಲಿ 102 ಪುರುಷರ ಮತ್ತು 75 ಮಹಿಳೆಯರ ತಂಡ ಭಾಗವಹಿಸಿದ್ದವು. ಸಮಾರೋಪ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಒಲಂಪಿಯನ್ ನಿವೃತ್ತ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ…

Read More