ನಾಪೋಕ್ಲು ಏ.8 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನಸಂಘದ ವತಿಯಿಂದ ಮಳೆಗಾಗಿ ಪರ್ಜನ್ಯ ಹೋಮ ನಡೆಯಿತು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ದೇವತಕ್ಕರಾದ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ಜನರ ಶಾಂತಿ ಸುಭಿಕ್ಷೆಗಾಗಿ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಗಿದೆ. ಜಿಲ್ಲೆಯ ಎಲ್ಲೆಡೆ ಮಳೆಯಾಗಬೇಕು. ಸಮೃದ್ಧಿ ನೆಲೆಸೆಬೇಕು ಎಂಬ ಆಕಾಂಕ್ಷೆಯೊಂದಿಗೆ ತಕ್ಕಮುಖ್ಯಸ್ಥರು ಒಟ್ಟಾಗಿ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಸಂಕಲ್ಪ ಕೈಗೊಂಡಾಗಿನಿಂದ ಅಲ್ಲಲ್ಲಿ ಮಳೆ ಬರಲು ಆರಂಭಿಸಿದೆ ಎಂದರು. ಪುತ್ತೂರಿನ ತಂತ್ರಿ ಗಿರೀಶ್ ಭಟ್ ನೇತೃತ್ವದಲ್ಲಿ ಮುಖ್ಯ ಅರ್ಚಕ ಕುಶಭಟ್, ಶ್ರೀಕಾಂತ್ ಹಾಗೂ ಶ್ರೀನಿವಾಸ್ ಪರ್ಜನ್ಯ ಹೋಮ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿತು. ಈ ಸಂದರ್ಭ ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಪರದಂಡ ಡಾಲಿ, ಪ್ರಹ್ಲಾದ, ವಿಠಲ, ಸದಾ ನಾಣಯ್ಯ, ಜೋಯಪ್ಪ, ಶಂಭು ನಂಜಪ್ಪ, ಪಾಡಂಡ ನರೇಶ್, ಕೇಟೋಳಿರ ಕುಟ್ಟಪ್ಪ, ಕಣಿಯರ ನಾಣಯ್ಯ, ಕಲಿಯಂಡ…
ಲೇಖಕ: admin
ಮಡಿಕೇರಿ ಏ.8 : ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರಂನ ಪುನರ್ ಪ್ರತಿಷ್ಟಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವ ಅಂಗವಾಗಿ ಸಂಜೆ ಕಲಶ ಹಾಗೂ ತಾಲಾ ಪೊಲಿ ಮೆರವಣಿಗೆ ನಡೆಯಿತು. ನಗರದ ಗಾಂಧಿ ಮೈದಾನದಿಂದ ಆರಂಭಗೊಂಡ ಮೆರವಣಿಗೆಗೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುದೀರ್, ಪ್ರಮುಖರಾದ ಕೆ.ಎಸ್.ರಮೇಶ್, ಉನ್ನಿಕೃಷ್ಣ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ವಿ.ಹಿಂ.ಪ ಪ್ರಮುಖರಾದ ಸುರೇಶ್ ಮುತ್ತಪ್ಪ ಹಿಂದೂ ಮಲಯಾಳಿ ಸಂಘದ ವಾಸುದೇವ್, ಚೇತನ್ ಇನ್ನಿತರರು ಇದ್ದರು. ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆಕಟ್ಟೆ, ಕೆಎಸ್‌ಆರ್‌ಟಿಸಿ, ಸಂಪಿಗೆಕಟ್ಟೆ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಮೈತ್ರಿ ಜಂಕ್ಷನ್‍ನಿಂದ ಆಗಮಿಸಿದ್ದ ಮುತ್ತಪ್ಪ ದೇವರ ಕಶದೊಂದಿಗೆ ಮಹಿಳೆಯರು ಹಾಗೂ ಮಕ್ಕಳು ತಾಲಾ ಪೊಲಿಯೊಂದಿಗೆ ಭಾಗವಹಿಸಿದ್ದರು. ಮಂಗಳೂರಿನ ಕಲಾತಂಡಗಳು, ಮುತ್ತಪ್ಪ ದೇವರ ಮೂರ್ತಿಯ ಮಂಟಪದೊಂದಿಗೆ ಚಂಡೆ, ವಾದ್ಯಗಳು ಮೆರವಣಿಗೆಯನ್ನು ಮುನ್ನಡೆಸಿದವು. ವಾಹನ ದಟ್ಟಣೆಯ ನಡುವೆ ಸಾಗಿದ ಮೆರವಣಿಗೆ ಮುತ್ತಪ್ಪ ದೇವಾಲಯದಲ್ಲಿ…
ಮಡಿಕೇರಿ ಏ.8 : ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಚರ್ಚಿನಲ್ಲಿ ಗುಡ್ ಫ್ರೈಡೆ (ಶುಭ ಶುಕ್ರವಾರ)ಆಚರಿಸಲಾಯಿತು. ಸಂತ ಅಂತೋಣಿ ಚರ್ಚಿನಲ್ಲಿ ಸಂಜೆ ಪ್ರಾರ್ಥನೆ ಆರಂಭಿಸಿ ಚರ್ಚ್ ನ ಹಿಂಭಾಗ ಇರುವ ಶಿಲುಬೆಟ್ಟದಲ್ಲಿ 15 ಶಿಲುಬೆಯ ಪ್ರಾರ್ಥನೆಯನ್ನು ಮಾಡಿ ಗುಡ್ ಫ್ರೈಡೆ ಆಚರಿಸಲಾಯಿತು. ಈ ಸಂದರ್ಭ ಫಾದರ್ ಜಾಕಬ್ ಕೊಲ್ಲನೂರು ದೇವರ ಸಂದೇಶವನ್ನು ಭಕ್ತಾದಿಗಳಿಗೆ ಬೋಧಿಸಿದರು. ಯೇಸುವಿನ ಪ್ರೀತಿ, ತ್ಯಾಗ, ಸಂಕೇತವಾಗಿ ಈ ಗುಡ್ ಫ್ರೈಡೆಯನ್ನು ಆಚರಿಸತ್ತೇವೆ ಎಂದು ತಿಳಿಸಿದರು. ಗೋಪಾಲಪುರ ಚರ್ಚ್ ಗುರುಗಳಾದ ಫಾದರ್ ಜಾಕಪ್ ಹಾಜರಿದ್ದರು.
ಸುಂಟಿಕೊಪ್ಪ ಏ.7 : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ ಮತ್ತು ಶುಭ ಶುಕ್ರವಾರ (ಗುಡ್ ಫ್ರೈಡೇ) ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು. ಸಂತ ಮೇರಿ ಶಾಲಾ ಆವರಣದಲ್ಲಿ ನಡೆದ ಪ್ರಾರ್ಥನಾ ಕೂಟವನ್ನು ಮೈಸೂರು ಧರ್ಮಕೇತ್ರದ ಜೇಮ್ಸ್ ಡೊಮಿನಿಕ್ ಹಾಗೂ ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೆಲ್ವಕುಮಾರ್ ನೇರವೇರಿಸಿದರು. ಪವಿತ್ರ ಗುರುವಾರ ಕಡೆಯ ಭೋಜನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆಯೊಂದಿಗೆ ಶಿಷ್ಯರ ಪಾದ ತೊಳೆಯುವ ವಿಧಿ ವಿಧಾನ ನಡೆಯಿತು. ತಾವು ಮರಣ ಹೊಂದುವ ಹಿಂದಿನ ದಿನ ಪ್ರಭುಕ್ರಿಸ್ತರು ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ಸ್ಮರಣೆಯನ್ನು ಮಾಡಲಾಯಿತು. ಮೈಸೂರು ಧರ್ಮಕೇತ್ರದ ಜೇಮ್ಸ್ ಡೊಮಿನಿಕ್, ಅರುಳ್ ಸೆಲ್ವಕುಮಾರ್ ಅವರು ಕ್ರೈಸ್ತ ಬಾಂಧವರ ಪಾದಗಳನ್ನು ತೊಳೆಯುವ ಸಂಪ್ರದಾಯವನ್ನು ನೆರವೇರಿಸಿದರು. ನಂತರ ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ನಡೆಯಿತು. ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭ ಶುಕ್ರವಾರದ ಅಂಗವಾಗಿ ಕ್ರೈಸ್ತ ಬಾಂಧವರು ಸಂತಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.…
ಮಡಿಕೇರಿ ಏ.7 : ನಗರದ ಬಾಲಭವನದ ಮಕ್ಕಳಿಗೆ ಇನ್ನರ್ ವೀಲ್ ಸಂಸ್ಥೆಯಿಂದ ದಂತ ತಪಾಸಣೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಕೈಗೊಳ್ಳಲಾಯಿತು. ಇನ್ನರ್ ವೀಲ್ ಸದಸ್ಯೆ ದಂತ ವೈದ್ಯೆ ಡಾ ವಿ. ದೀಪಾ ಅವರು ಬಾಲಭವನದ ಮಕ್ಕಳ ದಂತ ಆರೋಗ್ಯದ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಿದರು. ದಂತ ಸಂರಕ್ಷಣೆಯ ಬಗ್ಗೆ ಸೂಕ್ತ ಮಾಹಿತಿಯನ್ನೂ ಡಾ.ದೀಪಾ ನೀಡಿದರು. ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್, ಸದಸ್ಯರಾದ ಉಮಾಗೌರಿ, ಮಲ್ಲಿಗೆ ಪೈ, ಶಪಾಲಿ ರೈ ಮತ್ತು ನಮಿತಾ ರೈ ಪಾಲ್ಗೊಂಡಿದ್ದರು.
ಮಡಿಕೇರಿ – ವಿಶ್ವಚಿತ್ರಕಲಾ ದಿನದ ಅಂಗವಾಗಿ ಮತದಾನ ಮಾಡಿ ಸಂದೇಶದ ಚಿತ್ರಕಲಾ ಸ್ಪಧೆ೯. ಮಡಿಕೇರಿ ಏಪ್ರಿಲ್ 7 – ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಏಪ್ರಿಲ್ 15 ರಂದು ವಿಶ್ವಚಿತ್ರ ಕಲಾ ದಿನಾಚರಣೆ ಸಂದಭ೯ ಚಿತ್ರಕಲಾ ಸ್ಪಧೆ೯ಯನ್ನು ಆಯೋಜಿಸಿದೆ ಮಡಿಕೇರಿ ರಾಜಾಸೀಟ್ ನಲ್ಲಿ ಏಪ್ರಿಲ್ 15 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಚಿತ್ರಕಲಾ ಸ್ಪಧೆ೯ ವಿದ್ಯಾಥಿ೯ಗಳು ಮತ್ತು ಸಾವ೯ಜನಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ.ವಿಶ್ವಚಿತ್ರಕಲಾ ದಿನದ ಅಂಗವಾಗಿ ಜಿಲ್ಲೆಯ ಚಿತ್ರಕಲಾವಿದರು ಕೂಡ ವೈವಿಧ್ಯಮಯ ಚಿತ್ರಕಲೆ ರಚಿಸಲಿದ್ದಾರೆ. ವಿದ್ಯಾಥಿ೯ಗಳು ಮತ್ತು ಸಾವ೯ಜನಿಕ ವಿಭಾಗದಲ್ಲಿ ನಡೆಯುವ ಚಿತ್ರಕಲಾ ಸ್ಪಧೆ೯ಯಲ್ಲಿ ಮತದಾನದ ಮಹತ್ವದ ವಿಷಯದಲ್ಲಿ ಚಿತ್ರಕಲೆ ರಚಿಸಬಹುದಾಗಿದೆ. ಪ್ರೌಡಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ವಿದ್ಯಾಥಿ೯ಗಳಿಗೆ ಚಿತ್ರಕಲಾ ಸ್ಪಧೆ೯ ಆಯೋಜಿತವಾಗಿದ್ದರೆ ಸಾವ೯ಜನಿಕರಿಗೆ ಮುಕ್ತವಿಭಾಗದಲ್ಲಿ ಸ್ಪಧೆ೯ ಆಯೋಜಿಸಲ್ಪಟ್ಟಿದೆ. ಚಿತ್ರಕಲೆಗೆ ಅಗತ್ಯ ಪರಿಕರಗಳನ್ನು ಸ್ಪಧಿ೯ಗಳೇ ತರಬೇಕು. ಇದೇ ಸಂದಭ೯ ನಾನು…
ಮಡಿಕೇರಿ ಏ.7 : ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಬೃಹತ್ ಜಾಗತಿಕ ಧಾರ್ಮಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞದ ಕೊಡಗು ಜಿಲ್ಲಾ ಅಭಿಯಾನಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು. ಕುಶಾಲನಗರದ ಶ್ರೀ ವಾಸವಿ ಕನ್ಯಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಠದ ಸಂಕರ್ಷಣ ಪ್ರಖಂಡದ ಗೀತಾ ಪ್ರಚಾರಕ ಶ್ರೀ ರಮಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಭಿಯಾನದ ಜಿಲ್ಲಾ ಗೌರವಾಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಸ್ ಕೆ ಸತೀಶ್ ಅವರನ್ನು ಜಿಲ್ಲಾ ಗೌರವ ಸಲಹೆಗಾರರಾಗಿ ಹಿರಿಯ ಪತ್ರಕರ್ತರಾದ ಜಿ. ಚಿದ್ವಿವಿಲಾಸ್ ಆಯ್ಕೆ ಮಾಡಲಾಯಿತು. ಕೊಡಗು ಜಿಲ್ಲಾ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್ ಕೆ ಸತೀಶ್ ಅವರು ಜಿಲ್ಲಾ ತಾಲೂಕು ಮತ್ತು ಗ್ರಾಮವಾರು ಸಂಯೋಜಕರನ್ನು ಘೋಷಿಸಿದರು. ಜಿಲ್ಲೆಯ ತಾಲೂಕುಗಳಿಗೆ ಹಾಗೂ ಗ್ರಾಮವಾರು ಸಂಯೋಜಕರುಗಳನ್ನು ನೇಮಕ ಮಾಡಲಾಯಿತು. ಕೋಟಿಗೀತಾ ಲೇಖನ ಯಜ್ಞದ ಕೊಡಗು ಜಿಲ್ಲಾ ಮಹಿಳಾ ಘಟಕದ ಸಂಯೋಜಿಕಿಯಾಗಿ ಅಪೇಕ್ಷಿಸುವವರು…
ಮಡಿಕೇರಿ ಏ.7 : ಪಕ್ಷದಲ್ಲಿ ಭಿನ್ನಾಭಿಪ್ರಾಯ ಬದಿಗೊತ್ತಿ ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ಸಿಗೆ ಒಲಿಸಿಕೊಳ್ಳುವ ಮೂಲಕ ಕೊಡಗು ಜಿಲ್ಲೆಯನ್ನು ಬಿಜೆಪಿ ಮುಕ್ತವನ್ನಾಗಿಸಬೇಕಾಗಿದೆ ಎಂದು ಕಾಂಗ್ರೆಸ್ ಪ್ರಮುಖರು ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಎಸ್.ಚಂದ್ರಮೌಳಿ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದಲ್ಲಿ ಅಭ್ಯರ್ಥಿಗಳು ಸಾಂಕೇತಿಕ ಮಾತ್ರ, ಕಾಂಗ್ರೆಸ್ ಪಕ್ಷದ ಗೆಲುವು ಮುಖ್ಯ ಎಂದರು. ಜಿಲ್ಲೆಯಲ್ಲಿರುವ ಬಿಜೆಪಿ ವಿರುದ್ಧದ ಅಲೆಯನ್ನು ಬಂಡವಾಳವನ್ನಾಗಿಸಿಕೊoಡು ಕಾರ್ಯನಿರ್ವಹಿಸಿ ಪ್ರತಿಯೊಬ್ಬರು ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದರು ಈ ನಿಟ್ಟಿನಲ್ಲಿ ಪಕ್ಷದಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದ ಚಂದ್ರಮೌಳಿ, ರಾಜಕಾರಣದಲ್ಲಿ ಆಕಾಂಕ್ಷಿಗಳ ಸಂಖ್ಯೆ ಅಧಿಕವಿದ್ದರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಬೇಕಾಗಿದೆ ಎಂದು ಹೇಳಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದಿಂದ ಡಾ. ಮಂತರ್ ಗೌಡ ಅವರ ಆಯ್ಕೆಯನ್ನು ಸ್ವಾಗತಿಸುತ್ತೇನೆ, ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳೊಂದಿಗೆ ಒಂದು ಪ್ರಬಲ ಸಮುದಾಯದ ಮತಗಳು ಸೇರಿ ಒಟ್ಟಾರೆ ಮಂತರ್ ಗೌಡ ಅವರ ಗೆಲುವಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ತಾನು ಈಗಾಗಲೇ ಕಾರ್ಯಾಂಗ, ನ್ಯಾಯಾಂಗದಲ್ಲಿ…
ಕುಶಾಲನಗರ ಏ.7 : ಕುಶಾಲನಗರದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಮಟ್ಟದ “ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ್” ಪುರಸ್ಕಾರ ಕ್ಕೆ ಆಯ್ಕೆಯಾಗಿದೆ. 2023 ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಗಳನ್ನು ಘೋಷಿಸಲಾಗಿದ್ದು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರವಾಗಿದೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯ್ತಿ ಸತತ ವಿಕಾಸ ಪುರಸ್ಕಾರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುತ್ತಿದ್ದು ಪ್ರಥಮ ಬಹುಮಾನ 1.5 ಕೋಟಿ ಎರಡನೇ ಬಹುಮಾನ 75 ಲಕ್ಷ ಹಾಗೂ ಮೂರನೇ ಬಹುಮಾನ ಮೊತ್ತ 50 ಲಕ್ಷ ರೂಪಾಯಿಗಳಾಗಿರುತ್ತದೆ. 2021-22 ನೇ ಸಾಲಿನಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಗ್ರಾಮ ಪಂಚಾಯಿತಿ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಇದೀಗ 1.5 ಕೋಟಿ ರೂ. ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಿದೆ. ಇದೀಗ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಈ…
ಮಡಿಕೇರಿ ಏ.7 : ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಮಂಥರ್ ಗೌಡ ಅವರ ಹೆಸರು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಮಂತರ್ ಗೌಡ ಅವರ ಪ್ರಭುದ್ಧ ಅಭಿವೃದ್ಧಿ ಯೋಚನೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು ಸಂಪ್ರಾದಾಯಿಕ ಕೃಷಿ ಆಧಾರಿತ ನಾಡು, ಕೃಷಿ ಬಿಕಟ್ಟು ಇಲ್ಲಿನ ಜನತೆಗೆ ತೊಂದರೆ ಮಾಡಿದೆ. ಯುವಕರನ್ನು ಅತಂತ್ರವಾಗಿ ಹೊರ ಜಿಲ್ಲೆಗಳಿಗೆ ತೆರಳುವಂತೆ ಮಾಡಿದೆ ಎಂದರು. ಡಾ. ಮಂಥರ್ ಗೌಡ ಅವರ ಯೋಚನೆ ಹಾಗೂ ಯೋಜನೆಗಳು ಭವಿಷ್ಯದ ಕೊಡಗನ್ನು ನಿರ್ಮಿಸಲು ಹೊರಟಿರುವ ಯೋಜನೆಗಳಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಕೊಡಗಿನ ಗ್ರಾಮೀಣ ಶಾಲೆಗಳಿಗೆ ಮೂಲಭೂತ ಸೌಕರ್ಯ ಒಗಿಸಲು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಕೊಡಗಿನ ಭತ್ತದ ತಳಿಗಳ ಸಂರಕ್ಷಣೆ, ಪ್ರಾಕೃತಿಗೆ ಹಾನಿ ಮಾಡದ ರೀತಿಯಲ್ಲಿ ಸುಸ್ಥಿತ ಪ್ರವಾಸೋದ್ಯಮ, ವಿವಿಧ ತಳಿಯ ತರಕಾರಿಗಳನ್ನು ಬೆಳೆದು ಆಧುನಿಕ ಮಾರುಕಟ್ಟೆಯಲ್ಲಿ ಗಮನ ಸೆಳೆಯುವುದು,…






