ಲೇಖಕ: admin

ಮಡಿಕೇರಿ ಏ.4 : ಬಸ್ ವೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರ ವಲಯದ ಆಸ್ಪತ್ರೆ ಬಳಿ ಮಂಗಳವಾರ ನಡೆದಿದೆ. ಮಾಡ್ರಹಳ್ಳಿ ಗ್ರಾಮದ ರಾಜು(45) ಮೃತ ವ್ಯಕ್ತಿಯಾಗಿದ್ದು, ಮತ್ತೊಂದು ಬೈಕ್ ಸವಾರ ಕಿಲಗೆರೆ ಗ್ರಾಮದ ವೆಂಕಟಯ್ಯ(70) ಎಂಬುವವರ ಬಲಗಾಲು ತುಂಡಾಗಿದೆ. ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಅರುಣಾಚಲ ಪ್ರದೇಶ ಮೂಲದ ಬಸ್ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಚಾಲಕ ಹಾಗೂ ನಿರ್ವಾಹಕ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಡಿಕೇರಿ ಏ.4 : ನಿಮ್ಮ ಮನಮೆಚ್ಚುವ  ಆಭರಣ ಸಂಗ್ರಹದೊಂದಿಗೆ ಜಿ.ಎಲ್ ಆಚಾರ್ಯದ ಅತಿದೊಡ್ಡ ವಾರ್ಷಿಕ ಹಬ್ಬ “ಹರುಷದ ವರುಷ” April 03 ರಿಂದ 09 ರವರೆಗೆ ನಡೆಯಲಿದೆ. ಬಗೆಬಗೆಯ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣದ ಸಂಗ್ರಹ ಹಾಗೂ ಆಕರ್ಷಕ ಕೊಡುಗೆಗಳೊಂದಿಗೆ ನಿಮ್ಮನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲು ಜಿ ಎಲ್ ಆಚಾರ್ಯ ಕುಟುಂಬ ಕಾತರದಿಂದ ಕಾದಿದೆ. ತಪ್ಪದೆ ಭೇಟಿ ನೀಡಿ! .

Read More

ಬೆಂಗಳೂರು ಏ.4 : ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಮಂಗಳವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯ ನಂತರ 81 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ನಾಲ್ಕು ಪುಟಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಕಲಿ ಪಟ್ಟಿ ಎಂದು ಬಿಜೆಪಿಯ ಕರ್ನಾಟಕ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬoಧಿಸಿದoತೆ ಏಪ್ರಿಲ್ 8 ರಂದು ಬಿಜೆಪಿ ತನ್ನ ಸಂಸದೀಯ ಮಂಡಳಿ ಸಭೆಯ ನಂತರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

Read More

ಮಡಿಕೇರಿ ಏ.4 : ‘ಕುಲಶಾಸ್ತ್ರ ಅಧ್ಯಯನ’ದ ವಿಚಾರದಲ್ಲಿ ಕೊಡವ ಭಾಷೆಯನ್ನಾಡುವ ಸಮುದಾಯಗಳನ್ನು ತಾರತಮ್ಯದಿಂದ ಕಾಣುವ ಪ್ರಯತ್ನಗಳನ್ನು ಸೇವ್ ಕೊಡಗು ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ. ಇದು ಕೊಡವ ಮನಸ್ಸುಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಇತರ ಜನಾಂಗಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನವೆಂದು ವೇದಿಕೆಯ ಪದಾಧಿಕಾರಿ ಕೆ.ಬಿ.ಬೋಪಣ್ಣ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲಶಾಸ್ತ್ರ ಅಧ್ಯಯನದ ವಿಚಾರದಲ್ಲಿ ಸ್ವಯಂಘೋಷಿತ ನಾಯಕರೊಬ್ಬರು ಕೊಡವ ಭಾಷೆಯನ್ನಾಡುವ ಜನಾಂಗಗಳನ್ನು ಪ್ರಾಣಿಗಳಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವುದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾತು ಮಾತಿಗೂ ಸಮಾನತೆ, ಸಹೋದರತ್ವ ಮತ್ತು ಪ್ರಜಾಸತ್ತಾತ್ಮಕತೆಯ ಬುನಾದಿಯ ಮೇಲೆ ರಚಿತವಾಗಿರುವ ಭಾರತದ ಸಂವಿಧಾನ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಹೇಳುವ ಈ ವ್ಯಕ್ತಿ ಒಂದು ಜನಾಂಗವನ್ನು ಶ್ರೇಷ್ಠವೆಂದು, ಇತರ ಕೊಡವ ಭಾಷಿಕ ಜನಾಂಗಗಳು ಕೀಳೆಂದು ಹೇಳ ಹೊರಟಿರುವುದು ವಿಪರ್ಯಾಸ. ಇದರಲ್ಲಿ ಇತರ ಜನಾಂಗದವರನ್ನು ಕೊಡವ ಸಂಸ್ಕೃತಿಯ ಪರಿಧಿಯಿಂದ ಹೊರದಬ್ಬಿ ಅವರಿಗೆ ತ್ರಿಶಂಕು ಸ್ವರ್ಗ ಸೃಷ್ಟಿಸುವ ಹುನ್ನಾರವಿದೆ ಎಂದು ಆರೋಪಿಸಿದರು. ಕಳೆದ ಎರಡು- ಮೂರು…

Read More

ಮಡಿಕೇರಿ ಏ.4 : ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕುದ್ಕುಳಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ. ಭಾಗಮಂಡಲದಲ್ಲಿ ಮಕ್ಕಳ ತಜ್ಞ ಮೇ. ಡಾ.ಕುಶ್ವಂತ್ ಕೋಳಿಬೈಲು ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರತಿವರ್ಷ ಕೌಟುಂಬಿಕ ಕ್ರೀಡಾ ಕೂಟದಲ್ಲಿ ಆಟಗಾರನಾಗಿ ನಾನು ಭಾಗಹಿಸುತ್ತಿದ್ದೆ. ಇದರಿಂದ ನಮ್ಮ ಕುಟುಂಬದ ಜನರ ಮತ್ತು ಇತರ ಕುಟುಂಬದವರ ಪರಿಚಯ ಹಾಗೂ ಒಡನಾಟ ಹೆಚ್ಚಾಗುತ್ತದೆ. ಕ್ರೀಡೆಯಿಂದ ಆರೋಗ್ಯ ಮತ್ತು ಸೌಹಾರ್ದತೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಕುದ್ಕುಳಿ ಕುಟುಂಬದ ಪ್ರಮುಖರು, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ವಿವಿಧ ಕುಟುಂಬಗಳ ಆಟಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಸುಂಟಿಕೊಪ್ಪ ಏ.4 : ನಿಯಮ ಬಾಹಿರವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಓರ್ವನನ್ನು ಸುಂಟಿಕೊಪ್ಪ ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸುಂಟಿಕೊಪ್ಪದಿಂದ ಹಾಲೇರಿಗೆ ಕೊಂಡೊಯ್ಯುತ್ತಿದ್ದ 42 ಮದ್ಯದ ಪ್ಯಾಕೇಟ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಡಿಕೇರಿ ಏ.4 : ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಸೂಕ್ತ ದಾಖಲೆ ಇಲ್ಲದ 5.30 ಲಕ್ಷ ರೂ.ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Read More

ಮಡಿಕೇರಿ ಏ.4 : ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಏ.1 ರಂದು ಕೊಟ್ಟಿಪಾಡುವುದರೊಂದಿಗೆ ಹಬ್ಬಕ್ಕೆ ಚಾಲನೆ ದೊರೆಯಿತು. ನಂತರ ತಕ್ಕರ ಮನೆಯಿಂದ ಬಂಢಾರ ತರುವುದು, ಮೇಲೇರಿ ಹಾಕುವುದು, ನಾನಾ ತೆರೆ (ಕೋಲ)ಗಳು ನಡೆಯಿತು. ವಿಷ್ಣುಮೂರ್ತಿ ಕೋಲವು ನಡೆದು ದೇವಾಲಯದ ಮುಂದೆ ಸಿದ್ಧಪಡಿಸಲಾಗಿರುವ ಮೇಲೇರಿ ಗುಡ್ಡೆ(ಬೆಂಕಿ ಕೆಂಡದ) ಮೇಲೆ 101 ಬಾರಿ ಮೇಲೇರಿ ಬೀಳಲಾಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಮಧ್ಯಾಹ್ನ ಚಾಮುಂಡಿ ದೇವಿಯ ಕೋಲ ನಡೆಯಿತು. ಉತ್ಸವದ ಕೊನೆಯ ತೆರೆಗೆ ಉದ್ದನೆಯ ಬಿದಿರಿನಿಂದ ತಯಾರಿಸಿದ, ಶೃಂಗಾರಗೊಳಿಸಿದ ಕೆಂಪು ವಸ್ತ್ರದ ಮುಡಿಯನ್ನು ಏರಿಸಲಾಗುತ್ತದೆ. ಸಂಜೆ  ದೇವರ ಬನಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾರ್ಷಿಕ ತೆರೆ ಮಹೋತ್ಸವ ಸಂಪನ್ನಗೊಂಡಿತು. ಕೆದಮುಳ್ಳುರು ಚಾಮುಂಡಿ ಹಬ್ಬ ಎಲ್ಲೆಡೆ ಪ್ರಚಲಿತದಲ್ಲಿದ್ದು, ಅತ್ಯಂತ ಹೆಸರುವಾಸಿಯಾಗಿದೆ. ಉತ್ಸವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು, ದೂರದ ಊರುಗಳಿಂದ ಭಕ್ತರು ಪಾಲ್ಗೊಂಡಿದ್ದರು.

Read More

ಪರಶುರಾಮ ಥೀಮ್ ಪಾರ್ಕ್ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನಲ್ಲಿ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಒಂದು ಪ್ರವಾಸೀ ತಾಣವಾಗಿದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಮೂರ್ತಿಯನ್ನು ಕಂಚಿನಿಂದ ನಿರ್ಮಿಸಿ, ಬೆಟ್ಟದ ಮೇಲೆ ಇರುವ ಕಟ್ಟಡದ ಮೇಲ್ಭಾಗದಲ್ಲಿ ನಿಲ್ಲಿಸಲಾಗಿದೆ. ಈ ಕಂಚಿನ ಮೂರ್ತಿ 33 ಅಡಿ ಎತ್ತರವಿದ್ದು, ಮೂರ್ತಿಯ ಬಲದ ಕೈಯಲ್ಲಿ ಕೊಡಲಿ, ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಎಡಗಾಲನ್ನು ಎತ್ತರಿಸಿ ಇಟ್ಟಿರುವಂತೆ ನಿರ್ಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿದ್ದು, ಪಾರ್ಕ್‌ಗೆ ಸಂಬಂಧಿಸಿದ ಇತರ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಸದ್ಯಕ್ಕೆ ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ, 500 ಆಸನಗಳ ಆಂಫಿಥಿಯೇಟರ್,450 ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಬಗ್ಗೆ ಬಿಡಿಸಲಾದ ಭಿತ್ತಿಚಿತ್ರಗಳನ್ನು ಜೋಡಿಸಿರುವ ಹಜಾರ ಮತ್ತು ರೆಸ್ಟೋರೆಂಟ್ ಹೊಂದಿರುವ ಥೀಂ ಪಾರ್ಕ್ ಸಾಂಸ್ಕೃತಿಕ ಪರಂಪರೆಗೆ ಸೇರ್ಪಡೆಯಾಗಿದೆ. ಗುಡ್ಡದ ಮೇಲೆ…

Read More