ನಾಪೋಕ್ಲು ಏ.4 : ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್.ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋಟ್ಸ್ ಅಂಡ್ ಗೇಮ್ಸ್ ವತಿಯಿಂದ 12ನೇ ವರ್ಷದ ಹಾಕಿ ಬೇಸಿಗೆ ಶಿಬಿರವನ್ನು ಏಕಲವ್ಯ ಪ್ರಶಸ್ತಿ ವಿಜೇತ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ರೀಡಾಪಟುಗಳಲ್ಲಿ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಇರಬೇಕು. ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯನ್ನು ಕೇವಲ ಮನೋರಂಜನೆಗಾಗಿ ಮಾತ್ರವೆಂದು ಪರಿಗಣಿಸಿದೆ ಪೂರ್ಣಕಾಲಿಕ ಉದ್ಯೋಗವಾಗಿ ಮಾರ್ಪಾಡು ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬಹುದೆಂದು ಕಿವಿ ಮಾತುಹೇಳಿದ ಪ್ರಧಾನ್ ಕ್ರೀಡೆಯಲ್ಲಿ ಯಶಸ್ಸು ಕಾಣಲು ಪೋಷಕರ ಸಹಕಾರ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭ ಜನರಲ್ ಕೆ.ಎಸ್. ತಿಮ್ಮಯ್ಯ ಅಕಾಡೆಮಿಯ ನಿರ್ದೇಶಕ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಸಂಸ್ಥೆಯ ನಿರ್ದೇಶಕ ಮೂಡೇರ ಕಾಳಯ್ಯ, ಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಹಾಗೂ ತರಬೇತುದಾರರು ಹಾಗೂ ಶಿಕ್ಷಕ ವರ್ಗದವರು ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು. ಶಿಬಿರವು ಪ್ರತಿದಿನ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ನಡೆಯಲಿದೆ. ವರದಿ : ದುಗ್ಗಳ…
ಲೇಖಕ: admin
ನಾಪೋಕ್ಲು ಏ.4 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನಸಂಘದ ವತಿಯಿಂದ ಏ.7 ರಂದು ಮಳೆಗಾಗಿ ಪರ್ಜನ್ಯ ಹೋಮ ನಡೆಯಲಿದೆ. ನಾಡಿನ ಸುಭೀಕ್ಷೆಗಾಗಿ ಮಳೆ ಬೆಳೆಗಳ ವರದಾತ ರೋಗ ನಿವಾರಕ ಶ್ರೀ ಈಶ್ವರ ಇಗ್ಗುತ್ತಪ್ಪ ದೇವರಿಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರಿಂದ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ದೇವಾಲಯದಲ್ಲಿ ಬೆಳಿಗ್ಗೆ ಏಳರಿಂದ ಎಂಟು ಗಂಟೆಯವರೆಗೆ ಅಭಿಷೇಕ ಪೂಜೆ, ಬಳಿಕ ಪರ್ಜನ್ಯ ಹೋಮ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ನಿತ್ಯ ಮಹಾಪೂಜೆ ಜರುಗಲಿದೆ. ದೇವಾಲಯಕ್ಕೆ ಒಳಪಟ್ಟ ಪಾಡಿನಾಡಿನ ಎಲ್ಲ ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘದ ಪದಾಧಿಕಾರಿಗಳು, ಕೊಡಗಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಪರದಂಡ ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಏ.4 : ಆಕಸ್ಮಿಕವಾಗಿ ಕಾಫಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಫಸಲು ನಾಶವಾಗಿರುವ ಘಟನೆ ಚೆರಿಯಪರಂಬುವಿನಲ್ಲಿ ನಡೆದಿದೆ. ಗ್ರಾಮದ ಬಾಳೆಯಡ ಸುಬ್ರಮಣಿ ಎಂಬವರ ಕಾಫಿ ತೋಟ ಬೆಂಕಿಗೆ ಆಹುತಿಯಾಗಿದ್ದು, ಕೆಲವು ಗಿಡಗಳು ನಾಶವಾಗಿ ನಷ್ಟ ಸಂಭವಿಸಿದೆ. ಪಕ್ಕದ ಕಾಡಿನಲ್ಲಿ ಆಕಸ್ಮಿಕ ಬಿದ್ದ ಬೆಂಕಿ ಇವರ ತೋಟಕ್ಕೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಈ ಸಂದರ್ಭ ಮಡಿಕೇರಿಯ ಅಗ್ನಿಶಾಮಕದಳದ ಸಿಬ್ಬಂದಿಗಳು ಫೈಯರ್ ಇಂಜಿನ್ ವಾಹನದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಏ.4 : ಜಿಲ್ಲಾಡಳಿತ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ‘ಭಗವಾನ್ ಮಹಾವೀರ ಜಯಂತಿ’ಯನ್ನು ಸರಳವಾಗಿ ಆಚರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಬಲರಾಜ್ ರಂಗರಾವ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಯನ, ಚುನಾವಣಾ ತಹಶಿಲ್ದಾರ್ ರವಿಶಂಕರ, ಎನ್ ಐ ಸಿ ಅಧಿಕಾರಿ ಅಜಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್, ಮಧುಕರ್ ಇತರರು ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಮಡಿಕೇರಿ ಏ.4 : ಭಾರತೀಯ ವಾಯುಪಡೆಯಲ್ಲಿ ಏರ್‌ಕಮಡೋರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗಿನ ಐಚೆಟ್ಟಿರ ಅಯ್ಯಪ್ಪ (ಪ್ರದೀಪ್) ಅವರು ಏರ್‌ವೈಸ್ ಮಾರ್ಷಲ್ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. ಇದೀಗ ಅವರು ವಾಯುಪಡೆಯ ಕೇಂದ್ರ ಕಚೇರಿ ನವದೆಹಲಿಗೆ ನಿಯೋಜಿಸಲ್ಪಟ್ಟಿದ್ದಾರೆ. ಕೊಡಗಿನವರಾದ ನಿವೃತ್ತ ಬ್ರಿಗೇಡಿಯರ್ ಐಚೆಟ್ಟಿರ ಕುಟ್ಟಪ್ಪ ಮತ್ತು ಸೀತಾ (ತಾಮನೆ : ಕೋದಂಡ) ಅವರ ಪುತ್ರರಾಗಿರುವ ಅಯ್ಯಪ್ಪ ಅವರು ಎನ್‌ಡಿಎ ವಿದ್ಯಾರ್ಥಿಯಾಗಿ ವಾಯುಪಡೆಯನ್ನು ಸೇರಿ ಮಿಗ್ ಫೈಟರ್ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಾಯುಸೇನಾ ಮೆಡಲ್ ಮತ್ತು ವಿಶಿಷ್ಟ ಸೇವಾ ಮೆಡಲ್ ಸೇವಾ ಪುರಸ್ಕಾರಗಳಿಗೆ ಪಾತ್ರರಾಗಿರುವ ಅಯ್ಯಪ್ಪ ಅವರು ವಾಯು ಸೇನೆಯಲ್ಲಿ ಉನ್ನತ ಹುದ್ದೆಗೇರುವ ಮೂಲಕ ಕೊಡಗಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಮಡಿಕೇರಿ ಏ.4 : ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡೋತ್‌ಮೊಟ್ಟೆ ಗ್ರಾಮದ ಬೆಟ್ಟದಲ್ಲಿ ರಾತ್ರಿ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 2-3 ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೀಡಿ ಅಥವಾ ಸಿಗರೇಟ್ ಕಿಡಿಯಿಂದ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರ ಸಹಕಾರದೊಂದಿಗೆ ಆಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.ಲೀಡಿಂಗ್ ಫೈಯರ್ ಮೆನ್ ಚೀಯಣ್ಣ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಾಲಕ ಶಹೀದ್, ಸಿಬ್ಬಂದಿಗಳಾದ ಬರ್ಮ, ಆನಂದ, ಶಿವರಾಜ್, ಗೃಹರಕ್ಷಕ ಸಿಬ್ಬಂದಿ ಅರುಣ ಇದ್ದರು.
ಸಿದ್ದಾಪುರ ಏ.4 : (ಅಂಚೆಮನೆ ಸುಧಿ) ಅಭ್ಯತ್‍ಮಂಗಲದ ಶ್ರೀ ವೈದ್ಯನಾಥೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ನೇಮೋತ್ಸವವು ಏ.8, 9 ಮತ್ತು 10 ರಂದು ನಡೆಯಲಿದೆ. ಏ.8 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ, ರಾತ್ರಿ 10ಗಂಟೆಗೆ ಕೋಟೆದ ಬಬ್ಬುಸ್ವಾಮಿ ಮತ್ತು ತಂಗಡಿ ತನ್ನಿಮಾನಿಗ ದೈವಗಳ ನೇಮೋತ್ಸವ ಜರುಗಲಿದೆ. ಏ.9 ರಂದು ರಾತ್ರಿ ಶ್ರೀ ಚಾಮುಂಡೇಶ್ವರಿ ಕತ್ತಲಕಾನದ ಗುಳಿಗ ಮತ್ತು ಜಾಗದ ಗುಳಿಗ ಹಾಗೂ ಪಂಜುರ್ಲಿ ಗುಳಿಗ ನೇಮೋತ್ಸವ ನಡೆಯಲಿದ್ದು, ಏ.10 ರಂದು ಬೆಳಿಗ್ಗೆ ರಾಹುಗುಳಿಗ ನೇಮೋತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ. ::: ವೈದ್ಯನಾಥೇಶ್ವರ ದೇವಾಲಯದ ಹಿನ್ನೆಲೆ ::: ಅಭ್ಯತ್ ಮಂಗಲದಲ್ಲಿ ವೈದ್ಯನಾಥೇಶ್ವರ ದೇವಾಲಯದ ದೈವಗಳಿಗೆ ನೆಲೆ ಕಲ್ಪಿಸಲು ಇಲ್ಲಿನ ಗ್ರೀನ್ ಫೀಲ್ಡ್ ಎಸ್ಟೇಟ್ ನ ಮಾಲೀಕರು ಜಾಗವನ್ನು ದಾನವಾಗಿ ನೀಡಿದ್ದಾರೆ. ದಕ್ಷಿಣ ಕನ್ನಡ ಭಾಗದಿಂದ ಕಾರ್ಮಿಕರಾಗಿ ಬಂದು ಬದುಕು ಕಂಡುಕೊಂಡಿರುವ ಮುಂಡಾಳ ಜನಾಂಗದ ಮಂದಿ ಈ…
ಸುಂಟಿಕೊಪ್ಪ ಏ.3 : ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸದಾ ನಾವು ಸಿದ್ಧರಿದ್ದೇವೆ ಎಂದು ಕೊಡಗು ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ ಸಿಬ್ಬಂದಿಗಳು ಜಂಟಿಯಾಗಿ ಸುಂಟಿಕೊಪ್ಪದಲ್ಲಿ ಪಥಸಂಚಲನ ನಡೆಸಿ ಗಮನ ಸಳೆದರು. ಸೋಮವಾರ ಸಂಜೆ ಗದ್ದೆಹಳ್ಳದ ಬಳಿ ಆನೇಕ ಪೊಲೀಸ್ ವಾಹನಗಳು ಏಕಾಏಕಿ ನಿಂತವಲ್ಲದೆ ನೂರಾರು ಮಂದಿ ಸಮವಸ್ತç ಧರಿಸಿದ ಸಾಲಾಗಿ ಇಳಿದರು. ಕೆಲವೇ ಕ್ಷಣಗಳಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಕುಶಾಲನಗರ ವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ವೃತ್ತನಿರೀಕ್ಷಕರಾದ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಡಿ.ಎಸ್.ಪುನೀತ್ ಅವರೊಂದಿಗೆ ಸಿಐಎಫ್‌ನ ಅಧಿಕಾರಿ ಚೌಹಣ್ 100 ಕ್ಕೂ ಹೆಚ್ಚು ಮಂದಿಯ ಶಸ್ತಾçಸಜ್ಜಿತÀ ತುಕಡಿ ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಸಾಗಿದ ಪಥಸಂಚಲನ 1ನೇ ವಿಭಾಗದ ಗುಡ್ಡಪ್ಪ ರೈ ಬಡಾವಣೆ, ಪಂಪ್‌ಹೌಸ್, ಮಧುರಮ್ಮ ಬಡಾವಣೆಗಾಗಿ ಸಾಗಿ ಮರಳಿ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು. ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಸುಂದರ್‌ರಾಜ್ ಅವರು ಕೊಡಗಿನ ಜನತೆ…
ಗುಡ್ಡೆಹೊಸೂರು ಏ.3 : ಉರಿ ಬಿಸಿಲ ಬೇಸಿಗೆಯಲ್ಲಿ ಜಾನುವಾರು ಸಾಕಾಣೆಗಾರರು ಮೇವಿನ ಕೊರತೆಯನ್ನು ಎದುರಿಸುವುದು ಸಾಮಾನ್ಯವಾಗಿರುವ ಹಿನ್ನೆಲೆ, ಮೇವಾಗಿ ಬಳಸಲ್ಪಡುವ ಭತ್ತದ ಹುಲ್ಲನ್ನು ಯಾವುದೇ ಕಾರಣಕ್ಕೂ ಶುಂಠಿ ಕೃಷಿಯಲ್ಲಿ ಬಳಕೆ ಮಾಡದಿರುವುದು ಒಳ್ಳೆಯದು. ಶುಂಠಿ ಕೃಷಿಯಲ್ಲಿ ನಾಟಿ ಮಾಡಿದ ಬಳಿಕ, ಶುಂಠಿ ಬೀಜ ಮೊಳಕೆಯೊಡೆಯುವುದಕ್ಕೆ ಪೂರಕವಾಗಿ, ಅದರ ಮೇಲೆ ಬಿಸಿಲು ಬೀಳದಂತೆ ಭತ್ತದ ಹುಲ್ಲನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ರೀತಿ ಶುಂಠಿ ಕೃಷಿಯಲ್ಲಿ ಬಳಸುವ ಹುಲ್ಲನ್ನು ಮತ್ತೆ ಮೇವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಒಂದಷ್ಟು ಸಮಯದ ಬಳಿಕ ಆ ಹುಲ್ಲು ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಜಿಲ್ಲೆಯಾದ್ಯಂತ ರೈತ ಕುಟುಂಬಗಳು ಗೋಸಾಕಾಣೆಯನ್ನು ಬದುಕಿನ ಭಾಗವಾಗಿ ಇಂದಿಗೂ ಪರಿಗಣಿಸಿದ್ದರೆ, ಜಿಲ್ಲೆಯ ಕೆಲವೆಡೆಗಳಲ್ಲಿರುವ ಗೋಶಾಲೆಗಳವರು ತಮ್ಮಲ್ಲಿರುವ ರಾಸುಗಳಿಗೆ ಅಗತ್ಯ ಮೇವಿಗಾಗಿ ದಿನನಿತ್ಯ ಪರದಾಡುವ ಪರಿಸ್ಥಿತಿಗಳಿವೆ. ಇಂತಹ ಪರಿಸ್ಥಿತಿಗಳನ್ನು ಅರಿತು ಭತ್ತದ ಬೆಳೆಗಾರರು ತಮ್ಮಲ್ಲಿನ ಭತ್ತದ ಹುಲ್ಲನ್ನು ಗೋಶಾಲೆಗಳಿಗೆ ಇಲ್ಲವೇ ಅಗತ್ಯವಿರುವ ರೈತರಿಗೆ ಒದಗಿಸುವ ಚಿಂತನೆ ನಡೆಸುವುದು ಅವಶ್ಯ. ಪ್ರಸ್ತುತ ಜಿಲ್ಲೆಯ ಹಲವಡಡೆಗಳಲ್ಲಿನ ಶುಂಠಿ ಕೃಷಿಯಲ್ಲಿ ಭತ್ತದ ಹುಲ್ಲನ್ನು…
ಮಡಿಕೇರಿ ಏ.3 : ವಿಧಾನಸಭಾ ಚುನಾವಣೆಯ ದಿನಾಂಕ ಈಗಾಗಲೇ ಪ್ರಕಟಗೊಂಡಿದ್ದು, ಸ್ಪರ್ಧಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ಯೋಗ್ಯರಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎನ್.ಯೋಗೇಶ್ ಕುಮಾರ್ ಕರೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚುನಾವಣೆ ಬಂದಾಗಲೆಲ್ಲ ದುರ್ಬಲರು, ಅನಕ್ಷರಸ್ಥರು, ಕಡು ಬಡವರು ಹಾಗೂ ಅಮಾಯಕರ ಮತಗಳನ್ನು ಹಣದಿಂದ ಅಳೆಯಲಾಗುತ್ತದೆ. ಮತ ಖರೀದಿಯ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ನೊಂದವರ ಸಮಸ್ಯೆಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಮತದಾರ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಸಂದರ್ಭ ರಾಜಕಾರಣಿಗಳಿಗೆ ಪ್ರಜೆಗಳೇ ಪ್ರಭುಗಳಾಗುತ್ತಾರೆ. ಇಲ್ಲದ ಆಮಿಷಗಳನ್ನೊಡ್ಡಿ ಹಾದಿ ತಪ್ಪಿಸುತ್ತಾರೆ. ಇದರಿಂದ ಪ್ರಶ್ನೆ ಮಾಡುವ ಹಕ್ಕನ್ನೇ ಕಳೆದುಕೊಳ್ಳುವ ಮತದಾರ ಅಭಿವೃದ್ಧಿ ಶೂನ್ಯ ಆಡಳಿತದಿಂದ ಪರಿತಪಿಸಬೇಕಾಗುತ್ತದೆ. ಸಮಸ್ಯೆಗಳಿದೆ ಎಂದು ಗೆದ್ದವರ ಬಳಿ ಜನ ಹೋದರೆ ಹಣ ನೀಡಿ ಗೆದ್ದಿದ್ದೇನೆ ಎನ್ನುವ ಅಹಂ ಪ್ರದರ್ಶಿಸುತ್ತಾರೆ. ಒಂದು ನಿಮಿಷ ಮಾಡುವ ತಪ್ಪಿನಿಂದ ಇಡೀ ಐದು ವರ್ಷ…






