ಲೇಖಕ: admin

ಸೋಮವಾರಪೇಟೆ ಏ.3 : ದೊಡ್ಡಮಳ್ತೆ ಗ್ರಾಮ ವ್ಯಾಪ್ತಿಯ ರಸ್ತೆ ಮತ್ತು ಚರಂಡಿ ಎರಡು ದಶಕಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು, ಈ ತಿಂಗಳ ಅಂತ್ಯದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಇದಕ್ಕೂ ಸ್ಪಂದಿಸದಿದ್ದಲ್ಲಿ ಚುನಾವಣಾ ಬಹಿಷ್ಕರಿಸಲಾಗುವುದೆಂದು ದೊಡ್ಡಮಳ್ತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖ ಡಿ.ಆರ್.ಪುಟ್ಟರಾಜು, ಕಳೆದ ಎರಡು ದಶಕಗಳಿಂದ ಐತಿಹಾಸಿಕ ಹೊನ್ನಮ್ಮನ ಕೆರೆಯಿಂದ ಸುತ್ತಮುತ್ತಲ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಎಷ್ಟೇ ಮನವಿ ಸಲ್ಲಿಸಿದರು ಅನುದಾನ ಕಲ್ಪಿಸಿಲ್ಲ ಎಂದು ದೂರಿದರು. ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಮಾರ್ಗವಾಗಿ ಸುಳಿಮಳ್ತೆ, ದೊಡ್ಡಮಳ್ತೆ, ಮೂಕನ ಕಟ್ಟೆ, ಬಳಗೇರಿ ಬಸವಣ್ಣ ದೇವಾಲಯ ಸಂಪರ್ಕ ರಸ್ತೆಗಳು ತೀರಾ ಹಾಳಾಗಿದ್ದು, ಬಾಡಿಗೆ ವಾಹನಗಳು ಈ ರಸ್ತೆಗಾಗಿ ಬರುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರು, ಜನಸಾಮಾನ್ಯರಿಗೆ ತೊಂದರೆ ಆಗಿದೆ. ಬಾಡಿಗೆಗೆ ದುಬಾರಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ…

Read More

ಸೋಮವಾರಪೇಟೆ ಏ.3 : ಬಳಗುಂದ-ಕರ್ಕಳ್ಳಿ ಗ್ರಾಮದ ನಿವಾಸಿ ಬಿ.ಡಿ. ಪೂವಪ್ಪ(78) ನಿಧನರಾದರು. ಮೃತರ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ನೆರವೇರಿತು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಸೋಮವಾರಪೇಟೆ ಏ.3 : ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ, ಸೋಮವಾರಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಐಎಸ್‍ಎಫ್ ಬೆಟಾಲಿಯನ್ ಪೊಲೀಸರು, ಇನ್ಸ್‍ಪೆಕ್ಟರ್ ಜಿತೇಂದ್ರ ಚೌಹಾಣ್ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು. ಈ ಸಂದರ್ಭ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಡಿವೈಎಸ್‍ಪಿ ಗಂಗಾಧರಪ್ಪ, ಸೋಮವಾರಪೇಟೆ ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್, ಕುಶಾಲನಗರ ಇನ್ಸ್‍ಪೆಕ್ಟರ್ ಮಹೇಶ್, ಶನಿವಾರಸಂತೆ ಇನ್ಸ್‍ಪೆಕ್ಟರ್ ನಾಗೇಶ್ ಹಾಜರಿದ್ದರು.

Read More

ಮಡಿಕೇರಿ ಏ.3 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ನಿವಾಸಿಗಳು ಚುನಾವಣೆ ಬಹಿಷ್ಕಾರದ ಬಿತ್ತಿಪತ್ರಗಳನ್ನು ಲಗತ್ತಿಸಿ ನಿವೇಶನ ಮತ್ತು ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕೇಂದ್ರದ ಬಳಿ ಆರಂಭಿಸಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿರಿಸಿದೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮತದಾನ ಮಾಡದೆ ಹೋರಾಟವನ್ನು ತೀವ್ರಗೊಳಿಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಪಾಲೇಮಾಡು ನಿವಾಸಿಗಳಿಗೆ ವಿತರಿಸಿದ ನಿವೇಶನದ ಹಕ್ಕು ಪತ್ರವನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ಲೋಪದೋಷಗಳನ್ನು ಸರಿಪಡಿಸಿ ಪ್ರತೀ ನಿವೇಶನ ರಹಿತ ಕುಟುಂಬಗಳಿಗೂ 40*50 ಜಾಗದ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿದರು. 2005 ರಿಂದಲೂ ಸರ್ಕಾರಿ ಜಾಗದಲ್ಲಿ ಪ್ಲಾಸ್ಟಿಕ್ ಗುಡಿಸಲು ನಿರ್ಮಿಸಿಕೊಂಡು ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿರುವ ಪಾಲೇಮಾಡು ನಿವಾಸಿಗಳು ತಮ್ಮ ಬದುಕಿಗಾಗಿ ಹೋರಾಟದಿಂದಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು. ತಾತ್ಕಾಲಿಕ ವಾಸಕ್ಕಾಗಿ ನಿರ್ಮಿಸಿರುವ ಮನೆಗೆ 10*10 ವಿಸ್ತೀರ್ಣದ…

Read More

ಮಡಿಕೇರಿ ಏ.3 : ಕೊಡಗಿನ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಹೆಚ್.ಎಂ.ಸೋಮಪ್ಪ ಅವರ ಹೆಸರನ್ನು ಪಕ್ಷದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಬಿ.ಅಮ್ಜದ್ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಶಾಸನ ಸಭೆಗಳಿಗೆ ಆಯ್ಕೆಯಾಗುತ್ತಿರುವವರು ರೈತರ, ಕಾರ್ಮಿಕರ ಮತ್ತು ಜನಸಾಮಾನ್ಯರ ಧ್ವನಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಜನಪರ ಹೋರಾಟದ ಭಾಗವಾಗಿ ಈ ಬಾರಿ ಸಿಪಿಐ ಕೊಡಗಿನ ಮಡಿಕೇರಿ ಸೇರಿದಂತೆ ರಾಜ್ಯದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದಾಗಿ ತಿಳಿಸಿದರು. ಕೊಡಗಿನ ಮಡಿಕೇರಿ ಕ್ಷೇತ್ರದಿಂದ ಹೆಚ್.ಎಂ.ಸೋಮಪ್ಪ, ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದಿಂದ ಕೆಳಗೂರು ರಮೇಶ್, ವಿಜಯನಗರದ ಕೂಡ್ಲಿಗಿ ಕ್ಷೇತ್ರದಿಂದ ವೀರಣ್ಣ, ತುಮಕೂರಿನ ಶಿರಾ ಕ್ಷೇತ್ರದಿಂದ ಗಿರೀಶ್, ಗುಲ್ಬರ್ಗದ ಜೇವರ್ಗಿಯಿಂದ ಮಹೇಶ್ ಕುಮಾರ್ ರಾಥೋಡ್, ಅಳಂದ ಕ್ಷೇತ್ರದಿಂದ ಮೌಲಾಮುಲ್ಲಾ, ಕೋಲಾರದ ಕೆಜಿಎಫ್ ಕ್ಷೇತ್ರದಿಂದ ಜ್ಯೋತಿ ಬಸು ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಮಾಹಿತಿ ನೀಡಿದರು. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಕೋಮುವಾದ, ಭಷ್ಟಾಚಾರ ಮತ್ತು ದ್ವೇಷವಷ್ಟೆ…

Read More

ಮಡಿಕೇರಿ ಏ.3 : ಮನೆಯೊಂದರ ಮೇಲೆ ಸೋಮವಾರಪೇಟೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 300 ಲೀಟರ್ ಬೆಲ್ಲದ ಪುಳಿಗಂಜಿ ಹಾಗೂ 10 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಚನ್ನಾಪುರ ಗ್ರಾಮ ನಿವಾಸಿ ನಂಜುಂಡಶೆಟ್ಟಿ ಎಂಬವರ ಪುತ್ರ ಚಂದ್ರಶೇಖರ್ ಆರೋಪಿ.  ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆರ್.ಎಂ.ಚೈತ್ರಾ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ. ಕಾರ್ಯಾಚರಣೆಯಲ್ಲಿ  ಅಬಕಾರಿ ಪೇದೆಗಳಾದ ಎ.ಪಿ.ವೀರೇಶ್ ಕುಮಾರ್, ಮಹಾದೇವ ಗಡ್ಡಿ, ಕಾಂತರಾಜ್ ಪಾಲ್ಗೊಂಡಿದ್ದರು.

Read More

ಸುಂಟಿಕೊಪ್ಪ ಏ.3: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸಂಪ್ನಗೊಂಡಿತು. ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ, ಬೆಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವೃತದಲ್ಲಿದ್ದು, ವಾರದ ನಂತರ ದೇವಾಲಯದಲ್ಲಿ ವೃತಾಚರಣೆಯ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಕೊಡವ ಮತ್ತು ಗೌಡ ಮನೆ ತನದ ಪುರುಷರು ಮತ್ತು ಯುವಕರು ಕೊಡಗಿನ ಸಾಂಪ್ರಾದಾಯಿಕ ಕೊಡವರ ಉಡುಪು ಕುಪ್ಯಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಬಿಳಿಉಡುಪ್ಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿ, ನಂತರ ಗ್ರಾಮದ ಜನತೆಯಿಂದ…

Read More

ಮಡಿಕೇರಿ ಏ.3 : ಗಾಳಿಬೀಡು ಅಡ್ಕದಬಾಣೆ ಸ್ನೇಹಿತರ ಯುವಕ ಸಂಘದ 40ನೇ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ, ಜಿಲ್ಲಾ ಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿ ನಡೆಯಿತು. ನೆಹರು ಯುವ ಕೇಂದ್ರ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ ಕೊಡಗು, ತಾಲೂಕು ಯುವ ಒಕ್ಕೂಟ ಮಡಿಕೇರಿ ಹಾಗೂ ಗಾಳಿಬೀಡು ಅಡ್ಕದಬಾಣೆ ಸ್ನೇಹಿತರ ಯುವಕ ಸಂಘ, ಶ್ರೀ ಮಾದುರಪ್ಪ ಶ್ರೀನಿಧಿ ಮತ್ತು ತ್ರಿವೇಣಿ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಗಾಳಿಬೀಡು ಅಡ್ಕದಬಾಣೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದು, ಬ್ಲ್ಯಾಕ್ ಪ್ಯಾಂತರ್ಸ್ ದೇವಸ್ತೂರು ತಂಡ ಪ್ರಥಮ ಮತ್ತು ಸಿಸಿಎಲ್ ಗಾಳಿಬೀಡು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಥ್ರೋಬಾಲ್ ಪಂದ್ಯಾವಳಿಯಲ್ಲಿ ವನಶ್ರೀ ವರಡಾತಂಡ ಪ್ರಥಮ, ಗಾಳಿಬೀಡು ಫ್ರೆಂಡ್ಸ್ ದ್ವಿತೀಯ ಬಹುಮಾನ ಗೆದ್ದುಕೊಂಡಿತು. ಮಕ್ಕಳು ಹಾಗೂ ಹಿರಿಯರು ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇದೇ ಸಂದರ್ಭ…

Read More

ಸುಂಟಿಕೊಪ್ಪ ಏ.3 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ 55ನೇ ವರ್ಷದ ತೆರೆ ಮಹೋತ್ಸವವು ಏ.15 ರಿಂದ 17 ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ. ಏ.15 ರಂದು ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹವನ, 7.15 ಗಂಟೆಗೆ ಶುದ್ಧಿ ಪುಣ್ಯಾಹ, 7.30 ಗಂಟೆಗೆ ಬಾವುಟ ಏರಿಸುವುದು, ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 5 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಚಂಡೆಮೇಳ ನಡೆಯಲಿದೆ. ಏ.16 ರಂದು ಬೆಳಿಗ್ಗೆ 7 ಗಂಟೆಗೆ ವಾದ್ಯಮೇಳ, ಮಧ್ಯಾಹ್ನ 12 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, 2 ಗಂಟೆಗೆ ಶ್ರೀ ಶಾಸ್ತಪ್ಪನ ವೆಳ್ಳಾಟಂ, 3 ಗಂಟೆಗೆ ಶ್ರೀ ಗುಳಿಗನ ವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 6 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ…

Read More

ಕುಶಾಲನಗರ,ಏ.3 : ಶಾಲಾ ಮಕ್ಕಳು ಶಾಲೆ ಮುಗಿದ ನಂತರ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಶಿಬಿರದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಯಾಗಲಿದೆ ಎಂದು ಕೂಡುಮಂಗಳೂರು ಗ್ರಾ‌.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹೇಳಿದರು. ಕೂಡಿಕೆಯ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವತಿಯಿಂದ ಏರ್ಪಡಿಸಲಾಗಿದ್ದ ಎರಡನೇ ವರ್ಷದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳನ್ನು ವಿದ್ಯಾಬ್ಯಾಸ ಎಂಬ ಹೆಸರನ್ನೇಳಿ, ಒತ್ತಡವನ್ನು ಹೇರಬಾರದು. ವಿದ್ಯಾಬ್ಯಾಸದ ಜೊತೆಗೆ ಪಠ್ಯೇತರ‌ ಚಟುವಟಿಕೆಗಳಿಗೂ ಅವಕಾಶ ನೀಡಬೇಕು. ವರ್ಷವಿಡೀ ಓದಿನಿಂದ ದಣಿದಿರುವ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರಗಳು ಹುಮ್ಮಸ್ಸು ನೀಡಲಿದೆ ಎಂದರು. ಬೇಸಿಗೆ ಶಿಬಿರದಲ್ಲಿ ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ತಮ್ಮ ಪ್ರತಿಭೆಯನ್ನು ಕಂಡುಕೊಳ್ಳಲು ಹಾಗೂ ಇರುವ ಪ್ರತಿಭೆಯನ್ನು ವೃದ್ಧಿಸಿಕೊಳ್ಳಲು ಬೇಸಿಗೆ ಶಿಬಿರ ಉತ್ತಮವಾದ ವೇದಿಕೆಯಾಗಿದೆ. ಆದ್ದರಿಂದ ಮಕ್ಕಳು ಮೊಬೈಲ್ ನಿಂದ ದೂರವಿದ್ದು, ಬೇಸಿಗೆ ಶಿಬಿರದಲ್ಲಿ ತಮ್ಮನ್ನು ಅತ್ಯಂತ ಉತ್ಸಾಹದಿಂದ‌ ತೊಡಗಿಸಿಕೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಿವೃತ ದೈಹಿಕ…

Read More