ಮಡಿಕೇರಿ ಫೆ.6 : ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಫೆ.12 ರಂದು 2021-22ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸರ್ಕಾರಿ ಜಮೀನುಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಉದ್ಘಾಟಿಸಲಿದ್ದು, ಕೊಡಗು ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕುಂದಲ್ಪಾಡಿ ಜೆ.ದಿವಾಕರ, ಅತಿಥಿಗಳಾಗಿ ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಸಹಾಯಕ ನಿಯಂತ್ರಕ ಸೂದನ ಎ.ಜಾಜಯ್ಯ, ಚೆಟ್ಟಿಮಾನಿ ಕುಂದಚೇರಿ ಗ್ರಾಮದ ಕೆದಂಬಾಡಿ ಪುಷ್ಪಾವೇಣಿ ಶಿವಾಜಿ, ಮಡಿಕೇರಿ ಆರೋಗ್ಯ ಇಲಾಖೆಯ ನಿವೃತ್ತ ಫಾರ್ಮಸಿಸ್ಟ್ ಕಲ್ಲಂಬಿ ಯು.ವೆಂಕಪ್ಪ ಹಾಗೂ ತಾಳತ್ತಮನೆಯ ಪಾಣತ್ತಲೆ ಭೀಮಯ್ಯ ಪಾಲ್ಗೊಂಡು ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ. ::: 1908 ರಲ್ಲಿ ಸ್ಥಾಪನೆ ::: ಶತಮಾನೋತ್ಸವ ಕಂಡ ಸಂಸ್ಥೆಯು…
ಲೇಖಕ: admin
ಮಡಿಕೇರಿ ಫೆ.6 : ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ವಿವಿಧ ಹಾಡಿ ಹಾಗೂ ಕಾಲೋನಿಗೆ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮಂಜೂರಾದ 77ಲಕ್ಷ ರೂಪಾಯಿ ವೆಚ್ಚದಲ್ಲಿ 2 ಒವರ್ ಹೆಡ್ ಟ್ಯಾಂಕ್ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಚಾಲನೆ ನೀಡಿದರು. ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕಾರ್ಮಾಡು, ದಾಳಿಂಬೆ ಕೊಲ್ಲಿಹಾಡಿ, ಬೆಂಡೆಕುತ್ತಿ, ಕಟ್ಟೇಹಾಡಿ, ಹೊಸ ಕಾಲೋನಿ, ವಡ್ಡರಮಾಡು ಕಟ್ಟೆಕಾಲೋನಿ ಭಾಗದ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾ.ಪಂ ಸದಸ್ಯರೊಡನೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಬಡವರ್ಗದ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯು ಶ್ಲಾಘನೀಯವಾಗಿದ್ದು, ಪ್ರತಿ ಮನೆಗಳಿಗೆ ಯೋಜನೆಯ ನಿಯಮದಂತೆ ಮೀಟರ್ ಅಳವಡಿಕೆ ಕಾರ್ಯ ಅಗಲಿದೆ. ಗ್ರಾಮಸ್ಥರು ಜಲಮೂಲಗಳನ್ನು ಇತಿಮಿತಿಯಲ್ಲಿ ಬಳಸಿಕೊಂಡು ಈ ಯೋಜನೆಯ ಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು. ಗ್ರಾ.ಪಂ ಸದಸ್ಯರುಗಳಾದ ಚಕ್ಕೇರ ಸೂರ್ಯ ಅಯ್ಯಪ್ಪ, ಪಡಿಞರಂಡ ಕವಿತಾ ಪ್ರಭು, ಅಮ್ಮಯ್ಯ,…
ಮಡಿಕೇರಿ ಫೆ.6 : ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಆರ್. ಭಂಡಾರಿ ಮಂಡಿಸಿದ “ಪಾಲಿಸಿಸ್ ಆಂಡ್ ಪ್ರಾಕ್ಟಿಸಸ್ ಆಫ್ ಎಂಪ್ಲೋಯೀ ರೇಟೆನ್ಷನ್ ಮೆನೇಜ್ಮೆಂಟ್ ಇನ್ ಟೆಲಿಕಾಂ ಸೆಕ್ಟರ್” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ಉಡುಪಿ ಜಿಲ್ಲೆ ಕಾಪು ತಾಲೂಕಿನ ದಿ. ರವೀಂದ್ರ ಭಂಡಾರಿ ಹಾಗೂ ದಿ. ಸುಜಯ ಭಂಡಾರಿಯವರ ಪುತ್ರರಾಗಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಸ್. ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 41 ನೇ ಘಟಿಕೋತ್ಸವದಲ್ಲಿ ಪಿ. ಎಚ್.ಡಿ ಪ್ರಮಾಣ ಪತ್ರವನ್ನು ಸ್ವೀಕರಿಸಲಿದ್ದಾರೆ.
ಮಡಿಕೇರಿ ಫೆ.6 : ವಿಜಯಪುರದಲ್ಲಿ ನಡೆದ ರಾಜ್ಯಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಯನ್ನು ಕೊಡಗಿನ ಪತ್ರಕರ್ತರಾದ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಜಗದೀಶ್ ಜೋಡುಬೀಟಿ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 37ನೇ ಕರ್ನಾಟಕರಾಜ್ಯ ಸಮ್ಮೇಳನದಲ್ಲಿ ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ ಯನ್ನು ವಿಜಯ ಕರ್ನಾಟಕ ವರದಿಗಾರ ಜಗದೀಶ್ ಜೋಡುಬೀಟಿ ಪಡೆದರೆ ವೀರಸೇನಾನಿಯ ಬಗೆಗಿನ ಅತ್ಯುತ್ತಮವರದಿಗೆ ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿಗೆ ಶಕ್ತಿವರದಿಗಾರ ಪುತ್ತರಿರ ಕರುಣ್ ಕಾಳಯ್ಯ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಬಸವನ ಬಾಗೇವಾಡಿ, ಶಾಸಕ ಶಿವಾನಂದ ಪಾಟೀಲ್ , ಜಿಲ್ಲಾಧಿಕಾರಿ ಡಾ.ವಿಜಯಮ ಹಾಂತೇಶ ದಾನಮ್ಮ , ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಮಾಜಿ ಶಾಸಕ ಡಾ.ಮಕ್ಬೂಲ್ ಬಾಗವಾನ,…
ಮಡಿಕೇರಿ ಫೆ.6 : ಚೇರಂಬಾಣೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೀಮಿತವಾದ ಎಬಿಸಿ ಕ್ರಿಕೆಟ್ ಲೀಗ್ ಪಂದ್ಯಾವಳಿ ಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿ, ಶುಭ ಹಾರೈಸಿದರು.
ಮಡಿಕೇರಿ ಫೆ.6 : ಕೆದುಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ತೋಮರ ಗ್ರಾಮದ ಕ್ರೀಡಾ ಸಂಘದವರು ಆಯೋಜಿಸಿರುವ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ, ಶುಭ ಕೋರಿದರು.
ನಾಪೋಕ್ಲು ಜ.4 : ಜಿಲ್ಲೆಯಲ್ಲಿ ಸುರಿದ ದಿಢೀರ್ ಮಳೆಯಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಾಫಿ ಕೊಯ್ಲು ಕೆಲಸ, ಭತ್ತದ ಒಕ್ಕಣೆ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಸುರಿದ ಮಳೆ ರೈತರಿಗೆ ಸಮಸ್ಯೆ ತಂದೊಡ್ಡಿದೆ. ಕಾಫಿಯ ಹೂವುಗಳು ಅರಳುತ್ತಿದ್ದು, ಕಾಫಿ ಕೊಯ್ಲು ಕೆಲಸಕ್ಕೆ ಅಡ್ಡಿಯಾಗಿದೆ. ನಿಗದಿತ ಅವಧಿಗಿಂತ ಮೊದಲು ಮಳೆ ಸುರಿದ ಪರಿಣಾಮ ಗಿಡಗಳಲ್ಲಿ ಹಣ್ಣಾದ ಕಾಫಿ ಉದುರುತ್ತಿದೆ. ಅಲ್ಪ ಪ್ರಮಾಣದ ಮಳೆಯಿಂದ ಮುಂದಿನ ವರ್ಷದ ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹೂಮಳೆ ಸುರಿದರೆ ಕಾಫಿ ಫಸಲು ನಿಶ್ಚಿತ ಎಂದು ಬೆಳೆಗಾರರು ದೃಢವಾಗಿ ನಂಬಿದ್ದಾರೆ. ಈ ವೇಳೆಗೆ ಕಾಫಿ ಕೀಳುವ ಕೆಲಸ ಪೂರ್ಣಗೊಂಡಿದ್ದು, ಕಾಫಿಯ ಮೊಗ್ಗುಗಳು ಅರಳಲು ಸಿದ್ಧವಾಗಿರುತ್ತವೆ. ಆ ವೇಳೆಗೆ ಮಳೆ ಸುರಿದರೆ ಬೆಳೆಗಾರರು ಸಂಭ್ರಮಿಸುತ್ತಾರೆ.ನೀರಿನ ವ್ಯವಸ್ಥೆ ಉಳ್ಳವರು ತುಂತುರು ನೀರಾವರಿ ಮೊರೆ ಹೋಗುತ್ತಾರೆ.ಆದರೆ ಈ ವರ್ಷ ಕಾಫಿ ಕೊಯ್ಲು ಆಗುತ್ತಿರುವಾಗಲೇ ಜನವರಿ ತಿಂಗಳಲ್ಲಿ ಮಳೆಯಾಗಿದೆ.…
ಶ್ರೀಮಂಗಲ ಫೆ.6 : ಶ್ರೀಮಂಗಲ ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಯು ಕೊನೆಗೊಂಡಿತು. ಶ್ರೀಮಂಗಲ ಕೊಡವ ಸಮಾಜ ಮೈದಾನದಲ್ಲಿ ನಡೆದ ಲೀಗ್ ನಿಯಮಗಳನ್ನ ಒಳಗೊಂಡ ಪಂದ್ಯಾವಳಿಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಗ್ರಾಮೀಣ ಮಟ್ಟದಲ್ಲಿ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಪಂದ್ಯಾವಳಿಯಲ್ಲಿ ಸಿ ವೈ ಸಿ ಕುಟ್ಟ ತಂಡವು ಮೊದಲ ಸ್ಥಾನ ಪಡೆದುಕೊಂಡರೆ, ಹೈಸೊಡ್ಲುರು ಸ್ಟ್ರೈಕರ್ಸ್ ಹಾಗೂ ಟೀಮ್ ಎ ಬಿ ಡಿ ಶ್ರೀಮಂಗಲ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಕೊಂಡವು. ಕಾರ್ಯಕ್ರಮದಲ್ಲಿ ಪೆಮ್ಮಂಡ ರಾಜ, ಆಲೆಮಾಡ ಸೋಮಣ್ಣ , ಕಾಳಿಮಾಡ ಸೀಮಾ ಪ್ರಶಾಂತ್ , ಚೋನಿರ ರತನ್ , ಅಜ್ಜಮಡ ಬೋಪಣ್ಣ , ಮಾಧಿರ ಸುಧಿ ಹಾಗೂ ಇತರರು ಭಾಗಹಿಸಿದ್ದರು.
ಮಡಿಕೇರಿ ಫೆ.6 : ವಿಜಯಪುರದಲ್ಲಿ ನಡೆದ ರಾಜ್ಯಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಯನ್ನು ಕೊಡಗಿನ ಪತ್ರಕರ್ತರಾದ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಜಗದೀಶ್ ಜೋಡುಬೀಟಿ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 37ನೇ ಕರ್ನಾಟಕರಾಜ್ಯ ಸಮ್ಮೇಳನದಲ್ಲಿ ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ ಯನ್ನು ವಿಜಯ ಕರ್ನಾಟಕ ವರದಿಗಾರ ಜಗದೀಶ್ ಜೋಡುಬೀಟಿ ಪಡೆದರೆ ವೀರಸೇನಾನಿಯ ಬಗೆಗಿನ ಅತ್ಯುತ್ತಮವರದಿಗೆ ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿಗೆ ಶಕ್ತಿವರದಿಗಾರ ಪುತ್ತರಿರ ಕರುಣ್ ಕಾಳಯ್ಯ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಬಸವನ ಬಾಗೇವಾಡಿ, ಶಾಸಕ ಶಿವಾನಂದ ಪಾಟೀಲ್ , ಜಿಲ್ಲಾಧಿಕಾರಿ ಡಾ.ವಿಜಯಮ ಹಾಂತೇಶ ದಾನಮ್ಮ , ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಮಾಜಿ ಶಾಸಕ ಡಾ.ಮಕ್ಬೂಲ್…
ಮಡಿಕೇರಿ ಫೆ.5 : ಕೊಡಗಿನ ಗಡಿಭಾಗದ ಮಾಕುಟ್ಟ ಅರಣ್ಯದ ಸಮೀಪ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದ ಕೇರಳದ ಲಾರಿ ಮತ್ತು ಪಿಕ್ ಅಪ್ ವಾಹನವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಕೇರಳದ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವ ಪ್ರಕರಣಗಳನ್ನು ಇತ್ತೀಚೆಗೆ ಹೆಚ್ಚಾದ ಕಾರಣ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತ್ಯಾಜ್ಯದಿಂದಾಗಿ ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಗಳು ತೀವ್ರ ನಿಗಾ ವಹಿಸಿದ್ದವು. ಕಳೆದ ವಾರವಷ್ಟೆ ಕಸತುಂಬಿದ ಕೇರಳ ಟಿಪ್ಪರ್ ನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೆ 2 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಕುಟ್ಟದಲ್ಲಿ ಚೆಕ್‌ಪೋಸ್ಟ್ ಇದ್ದರೂ ನಿಯಮ ಬಾಹಿರವಾಗಿ ತ್ಯಾಜ್ಯ ತುಂಬಿದ ಕೇರಳದ ವಾಹನಗಳು ಕೊಡಗನ್ನು ಪ್ರವೇಶಿಸಲು ಹೇಗೆ ಸಾಧ್ಯ ಎಂದು ದಕ್ಷಿಣ ಕೊಡಗಿನ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯಲು ಕಠಿಣ ಕ್ರಮಗಳನ್ನು…






