ಮಡಿಕೇರಿ ಫೆ.5 : ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಿತು. ಸಂಘದ ಪ್ರಬಾರ ಅಧ್ಯಕ್ಷ ವಿ.ರವೀಂದ್ರ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಡಿ.ಜಗದೀಶ್ ರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಉದ್ಯಮಿ ವಿ.ರವೀಂದ್ರ ರೈ ಅವಿರೋಧ ಆಯ್ಕೆಯಾದರು. ಸಭೆಯ ಆರಂಭದಲ್ಲಿ ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ ಅವರು ಸಂಘ ಮತ್ತು ಟ್ರಸ್ಟ್ನ ಆಸ್ತಿಯ ಬಗ್ಗೆ ವಿವರಣೆ ನೀಡಿದರು. ಜಾಗದ ವಿಚಾರವಾಗಿ ಕೆಲವರು ದುರುದ್ದೇಶಪೂರಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಜಾಗದ ಬಗೆಗಿನ ಎಲ್ಲಾ ನಿಖರ ದಾಖಲೆಗಳು ಸಂಘದ ಬಳಿ ಇದ್ದು, ಯಾರು ಯಾವಾಗ ಬೇಕಾದರೂ ಪರಿಶೀಲಿಸಬಹುದೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ವಿ.ರವೀಂದ್ರ ರೈ ಮಾತನಾಡಿ, ಹಲವು ವರ್ಷಗಳ ಬಳಿಕ ಎಲ್ಲರು ಒಟ್ಟು ಸೇರಿದ್ದೇವೆ. ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಲವೇ ಕೆಲವರು ಸೇರಿ ಸಂಘದ ಸದಸ್ಯರನ್ನು ಗಮನಕ್ಕೆ ತೆಗೆದುಕೊಳ್ಳದೆ ತಾವೇ ಸಂಘ ಎಂದು ಘೋಷಣೆ…
ಲೇಖಕ: admin
ಮಡಿಕೇರಿ ಫೆ.5 : ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ವತಿಯಿಂದ ನಡೆದ “ಸಂತೆ ಮೇಳ” ಭರ್ಜರಿ ಯಶಸ್ಸು ಕಂಡಿತು. ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂಪರ್ಕ ಸಂಸ್ಥೆ ಗ್ರಾಮೀಣ ಪಂಚಾಯತ್ ಹಾಗೂ ರಾಜ್ ಇಲಾಖೆ ಜಿ.ಪಂ., ತಾ.ಪಂ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಸಂಜೀವಿನಿ ಸಂತೆ ಮೇಳವನ್ನು ಕರ್ನಾಟಕ ಬ್ಯಾಂಕ್ ಆವರಣದಲ್ಲಿ ಆಯೋಜಿಸಲಾಗಿತ್ತು. ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಸಂತೆ ಮೇಳವನ್ನು ಉದ್ಘಾಟಿಸಿದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಪುರುಷರು ಯಾವುದೇ ಹುದ್ದೆಯಲ್ಲಿದ್ದರು, ಎಷ್ಟೇ ಹಣಗಳಿಸಿದ್ದರೂ ಸಂಸಾರವನ್ನು ಮುನ್ನಡೆಸುವುದು ಮಹಿಳೆಯರು. ಇಂದಿನ ಮಹಿಳೆಯರು ವ್ಯವಹಾರಿಕವಾಗಿಯೂ ಮುಂದುವರೆಯಲು ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳು ಕಾರಣವಾಗಿವೆ. ಮಹಿಳೆಯರು ಸರ್ಕಾರದ ಆರ್ಥಿಕ ನೆರವು ಮತ್ತು ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕೆಂದು ಕರೆ ನೀಡಿದರು. ಸಂಜೀವಿನಿ ಸಂಘದ ಅಧ್ಯಕ್ಷೆ ಗ್ರೇಸಿ ಡೇವಿಡ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ರಫೀಕ್…
ಚೆಯ್ಯಂಡಾಣೆ ಫೆ.5 : ಇತಿಹಾಸ ಪ್ರಸಿದ್ಧ ಎಡಪಾಲ ಅಂಡತ್ ಮಾನಿ ದರ್ಗಾ ಶರೀಫ್ ನಲ್ಲಿ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಇಂದು ಎಡಪಾಲ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ದ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಮಖಾಂ ಝಿಯಾರತ್ ಹಾಗೂ ದುಆ ನೇತೃತ್ವವನ್ನು ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ವಹಿಸಿದ್ದರು. ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಧಾರ್ಮಿಕ ಉಪನ್ಯಾಸ ನೀಡಿದರು. ಮುದರಿಸ್ ನಿಝರ್ ಫೈಝಿ, ಹಮೀದ್ ದಾರಿಮಿ, ಒಂದನೇ ತಕ್ಕ ಮುಖ್ಯಸ್ಥ ಕುಂಜಾ ಅಹ್ಮದ್ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಫೆ.6 ರಂದು ಸಂಜೆ ಸನ್ಮಾನ ಹಾಗೂ ದುಆ ಮಜ್ಲಿಸ್ ನಡೆಯಲಿದ್ದು, ಸಯ್ಯದ್ ಹಮೀದಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಭಾಷಣವನ್ನು ಅಲ್ ಹಾಜ್ ಕೆ.ಎಂ.ಮೊಯ್ದು ಪೈಝಿ ಮಾಡಲಿದ್ದಾರೆ. ರಾತ್ರಿ ಶಮೀರ್ ಆಶ್ರಫಿ ಕಾಟ್ಟಾಂಬಳ್ಳಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಫೆ.7 ರಂದು ರಾತ್ರಿ ಉಸ್ತಾದ್ ಬಶೀರ್ ಪೈಝಿ ದೇಶ ಮಂಗಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕೊಡಗು ಜಿಲ್ಲಾ ನಾಇಬ್ ಖಾಝಿ…
ಮಡಿಕೇರಿ ಫೆ.5 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 16 ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.4 ಮತ್ತು 5 ರಂದು ಗೋಣಿಕೊಪ್ಪಲಿನ ಸರಕಾರಿ ಶಾಲಾ ಮೈದಾನದಲ್ಲಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಪೊನ್ನಂಪೇಟೆ ತಾಲೂಕು ರಚನೆಯಾದ ಬಳಿಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗೋಣಿಕೊಪ್ಪಲಿನಲ್ಲಿ ನಡೆಸುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು. ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ ಈಗಾಗಲೇ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಗೋಣಿಕೊಪ್ಪಲಿನಲ್ಲಿ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ಜಿ.ಬೋಪಯ್ಯ, ಗೌರವ ಅಧ್ಯಕ್ಷರಾಗಿ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕ ಎಂ.ಪಿ.ಅಪ್ಪಚುರoಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಕಾರ್ಯಾಧ್ಯಕ್ಷರಾಗಿ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಹಾಪ್ರದಾನ ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯಾ…
ಮಡಿಕೇರಿ ಫೆ.5 : ಕಾಡಾನೆ ದಾಳಿಯಿಂದ ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಕೊಡ್ಲಿಪೇಟೆಯ ಶಾಂತಪುರ ಗ್ರಾಮದ ಹೇಮಾವತಿ ಹಿನ್ನೀರಿನ ಬಳಿ ನಡೆದಿದೆ. ಸ್ಥಳೀಯ ಕಾರ್ಮಿಕ ಕುಮಾರ (40) ಮೃತ ದುರ್ದೈವಿ. ಭತ್ತದ ಪೈರು ನಾಟಿ ಮಾಡಲು ಬೆಳಗ್ಗೆ ಕುಮಾರ ಹಾಗೂ ದೊಡ್ಡಯ್ಯ ಎಂಬುವವರು ತೆರಳಿದ್ದರು. ಈ ಸಂದರ್ಭ ಹೊಳೆ ಸಮೀಪದ ಕರಿಕಡ್ಡಿ ಅರಣ್ಯ ಭಾಗದಿಂದ ಬಂದ ಕಾಡಾನೆ ಕುಮಾರ ಅವರ ಮೇಲೆ ದಾಳಿ ಮಾಡಿದೆ. ದೊಡ್ಡಯ್ಯ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್, ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ವರದಿ : ದಿನೇಶ್ ಮಾಲಂಬಿ, ಶನಿವಾರಸಂತೆ)
ಮಡಿಕೇರಿ ಫೆ.4 : ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಎ.ಎ.ಪಿ ರಾಜ್ಯ ಕಾರ್ಯಾಧ್ಯಕ್ಷ ಬಿ.ಟಿ.ನಾಗಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 196 ಕ್ಷೇತ್ರಗಳಿಗೆ 390 ಆಕಾಂಕ್ಷಿಗಳಿದ್ದಾರೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಐವರು ಆಕಾಂಕ್ಷಿಗಳಿದ್ದು, ಮತದಾರರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವ ಜನಪರ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದು ಎಂದರು. ಬಡತನದಿoದ ಹೊರಬರಲು ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಆದರೆ, ಇಂದು ಶಿಕ್ಷಣ ವ್ಯವಹಾರ ಆಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ, ವೈದ್ಯಕೀಯ ಸೀಟ್ ಪಡೆಯುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ, ನಗರ ಪ್ರದೇಶದವರಿಗೆ ಸುಲಭದ ತುತ್ತಾಗಿದೆ. ಈ ರೀತಿಯ ತಾರತಮ್ಯ ಇರಬಾರದು. ಕಟ್ಟಕಡೆಯ ವ್ಯಕ್ತಿಗೂ ಗುಣಾತ್ಮಕ ಶಿಕ್ಷಣ ಸಿಗುವಂತಾಗಬೇಕು ಎಂದು ಹೇಳಿದರು. ಕೇವಲ ಅಕ್ಕಿ, ಬೇಳೆ ನೀಡಿದರೆ ಬಡತನದಿಂದ ಹೊರಬರಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು, ಉಚಿತ ಆರೋಗ್ಯ ಸೇವೆ ನೀಡುವಂತಾಗಬೇಕು. ದೆಹಲಿಯಲ್ಲಿ ಈ ವ್ಯವಸ್ಥೆ ಇದ್ದು, ಇದು ದೇಶವ್ಯಾಪಿ ಪಸರಿಸಬೇಕು ಎಂದರು. ಪ್ರತಿದಿನ ಅಗತ್ಯ…
ಮಡಿಕೇರಿ ಫೆ.4 : ಮುಹಿಯದ್ದೀನ್ ಜುಮ್ಮಾ ಮಸೀದಿ ಪೇರಡ್ಕದಲ್ಲಿ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಫೆ.17 ರಿಂದ 19ರವರೆಗೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಫೆ.17, 18 ಹಾಗೂ 19 ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು. ಫೆ.17 ರಂದು ಜುಮಾ ನಮಾಜಿನ ಬಳಿಕ ಪೇರಡ್ಕ ಎಂ.ಜೆ.ಎo ಅಧ್ಯಕ್ಷ ಎಸ್.ಆಲಿಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಅಪರಾಹ್ನ 2 ಗಂಟೆಗೆ ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಂತರ ಸರ್ವಧರ್ಮ ಸಮ್ಮೇಳನ ಹಾಗೂ ಉಲಮಾ, ಉಮರಾ ಸಂಗಮ ನೆರವೇರಲಿದೆ. ರಾತ್ರಿ ನಡೆಯುವ ಸಭಾ ಕಾರ್ಯಕ್ರಮವನ್ನು ಪೇರಡ್ಕ ಎಂ.ಜೆ.ಎo ಖತೀಬರಾದ ರಿಯಾಝ್ ಫೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಂ.ಜೆ.ಎo ಅಧ್ಯಕ್ಷ ಎಸ್.ಆಲಿಹಾಜಿ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ…
ಮಡಿಕೇರಿ ಫೆ.4 : ಮಡಿಕೇರಿ ನಗರದ ಆಯುರ್ ಜೀವನ್ ಆಯುರ್ ವೇದ ಆಸ್ಪತ್ರೆಯ ಮಾಲೀಕ ಸಿಲ್ವಿ ಜೋಸೆಫ್ (52) ಅವರು ಇಂದು ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರ ಭಾನುವಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ವಿರಾಜಪೇಟೆ ಫೆ.4 : ಅರಣ್ಯ ಇಲಾಖೆ ಹಾಗೂ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಗ್ರಾಮದ ವ್ಯಾಪ್ತಿಯ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕೇರಳದಿಂದ ಕಸವನ್ನು ತಂದು ಸುರಿಯುತ್ತಿದ್ದ ವಾಹನವನ್ನು ತಡೆದು ಚಾಲಕರಿಗೆ ದಂಡ ವಿಧಿಸಿದ್ದಾರೆ. ಶನಿವಾರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೇರಳದ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಚೀಲದಲ್ಲಿ ಕಸವನ್ನು ತಂದು ಸುರಿಯುತ್ತಿದ್ದ ವಿನೋದ್ ಹಾಗೂ ಬಿಜು ಎಂಬುವವರಿಗೆ ರೂ.5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೇರಳದ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಚೀಲದಲ್ಲಿ ಕಸವನ್ನು ತಂದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಪಾಷ ಎಂಬಾತನಿಗೂ ಅಧಿಕಾರಿಗಳು ರೂ.5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಸರಕು ಸಾಗಾಣಿಕೆಯ ವಾಹನಗಳ ಕೆಲ ಚಾಲಕರು ರಾಜ್ಯದಿಂದ ಕೇರಳಕ್ಕೆ ಸರಕನ್ನು ಸಾಗಿಸಿ ಹಿಂದಿರುಗಿ ಬರುವಾಗ ಕೇರಳ ರಾಜ್ಯದಿಂದ ಹಣದ ಆಸೆಗಾಗಿ ಕಸವನ್ನು ತಂದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಸದ ರಾಶಿಯಲ್ಲಿ ಪ್ಲಾಸ್ಟಿಕ್, ವಿಷಕಾರಿ ತ್ಯಾಜ್ಯಗಳು ಸೇರಿದಂತೆ…
ಮಡಿಕೇರಿ ಫೆ.4 : ಮಡಿಕೇರಿ ನಗರಸಭಾ ವ್ಯಾಪ್ತಿಯ 9, 2, 17, 18 ಮತ್ತು 21 ವಾರ್ಡ್‍ಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು. ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ನಂ.09 ರಲ್ಲಿ ಅಂಬೇಡ್ಕರ್ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಮಲ್ಲಿಕಾರ್ಜುನ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಗೆಜ್ಜೆ ಸಂಗಪ್ಪ ಸಮುದಾಯ ಭವನ ಉನ್ನತೀಕರಣ ಕಾಮಗಾರಿ, ಮಲ್ಲಿಕಾರ್ಜುನ ನಗರದಲ್ಲಿ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿ. ವಾರ್ಡ್ ನಂ.02 ರಲ್ಲಿ 110 ಲಕ್ಷ ರೂ. ವೆಚ್ಚದಲ್ಲಿ ಕಾವೇರಿ ಲೇಔಟ್ ಬಡಾವಣೆಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ, ಕಾನ್ವೆಂಟ್ ಜಂಕ್ಷನ್‍ಗಾಗಿ ಮುತ್ತಪ್ಪ ಟೆಂಪಲ್ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿರುವ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.17 ರಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಕೂರ್ಗ್ ಇಂಟರ್‍ನ್ಯಾಷನಲ್ ಹೋಟೆಲ್ ಮುಂಭಾಗದ ರಸ್ತೆಯಿಂದ ಪಿಡಬ್ಲ್ಯೂಡಿ ಕಚೇರಿಗಾಗಿ ಮಾದೇಟಿರ ಉಷಾ…






