ಮಡಿಕೇರಿ ಜ.2 : ವೈಷ್ಣವಿ ಫುಟ್ಬಾಲ್ ಕ್ಲಬ್ ವತಿಯಿಂದ ಮರಗೋಡುವಿನ ಗ್ರಾ.ಪಂ ಸುತ್ತ ಮುತ್ತ ಸ್ವಚ್ಛತಾ ಶ್ರಮದಾನ ನಡೆಯಿತು. ವಿಷ್ಣವಿ ಫುಟ್ಬಾಲ್ ಕ್ಲಬ್ 15ಕ್ಕೂ ಅಧಿಕ ಕಾರ್ಯಕರ್ತರು ರಸ್ತೆ ಬದಿ ಎಸೆಯಲಾಗಿದ್ದ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಸುಮಾರು 5 ಚೀಲ ಕಸ ಸಂಗ್ರಹಿಸಿ ಪಂಚಾಯಿತಿಗೆ ನೀಡಿದರು. ಶ್ರಮದಾನದಲ್ಲಿ ಕೊಡಗು ಜಿಲ್ಲಾ ಪುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ತೀರ್ಪುಗಾರ ದರ್ಶನ್ ಸುಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಲೇಖಕ: admin
ವಿರಾಜಪೇಟೆ ಜ.2 : ಆಕ್ಸ್‌ಫರ್ಡ್ ಎಫ್.ಸಿ. ವಿರಾಜಪೇಟೆ ಕೊಡಗು ವತಿಯಿಂದ ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ 3ವರ್ಷದ ಅಖಿಲ ಭಾರತ ಪುರುಷರ ಮುಕ್ತ ನೈನ್ಸ್ (09) ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾವಳಿ ನಡೆಯಿತು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಕಾಲ್ಚೆಂಡು ಒದೆಯುವ ಮೂಲಕ ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಹಾರೈಸಿದರು. ಭಾರತೀಯ ಸೇನೆಯ ಸೇನಾಧಿಕಾರಿ ಜೆ.ಸಿ.ಓ ಎಂ.ಎಲ್.ಲೋಹಿತ್ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಕಾಣಬಹುದು. ಕ್ರೀಡೆಯಲ್ಲಿ ಸಾಧನೆ ಮಾಡಿದ ಯುವ ತರುಣರಿಗೆ ಸೇನೆಯಲ್ಲಿ ವಿಫಲ ಅವಕಾಶಗಳಿವೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಾರೀರಿಕ ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೃಡಕಾಯ ದೇಹ ಸಿರಿಯನ್ನು ಗಳಿಸಬಹುದಾಗಿದೆ. ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಿದರು. ವಿರಾಜಪೇಟೆ ಆಕ್ಸ್‍ಫರ್ಡ್ ಎಫ್.ಸಿ.ಅಧ್ಯಕ್ಷ ರೆನ್ಸಾನ್ ಚಾಕೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಗಲ್ಸ್ ಸ್ವೀಚ್‍ಗೆರ್ಸ್‍ನ ಪ್ರಧಾನ ನಿರ್ದೇಶಕರಾದ ಮಧು ನಾಣಯ್ಯ, ಕೊಡಗು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ…
ಮಡಿಕೇರಿ ಜ.2 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯು ಜನವರಿ, 3 ಮತ್ತು 4 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಜನವರಿ, 3 ರಂದು ಬೆಳಗೆ 10.30 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಸಕಾಲ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್, ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ…
ಮಡಿಕೇರಿ ಜ.2 : ಮಡಿಕೇರಿ-ವಿರಾಜಪೇಟೆ 66 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಬೃಹತ್ ಕಾಮಗಾರಿ ವಿಭಾಗ ಕೊಡಗು ಜಿಲ್ಲೆ ಕ.ವಿ.ಪ್ರ.ನಿ.ನಿ. ಮೈಸೂರು ಅವರ ಕೋರಿಕೆಯಂತೆ ಜನವರಿ, 3 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 33 ಕೆವಿ ವಿರಾಜಪೇಟೆ-ಮೂರ್ನಾಡು ಮಾರ್ಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಪಾರಾಣೆ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಮರಗೋಡು, ಬೇತು, ಕಕ್ಕಬೆ, ನೆಲಜಿ, ಹಾಕತ್ತೂರು, ಕಾಂತೂರು, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.
ವಿರಾಜಪೇಟೆ ಜ.2 : ಕುಶಾಲನಗರದ ಹಾರಂಗಿಯಲ್ಲಿರುವ ಜ್ಞಾನ ಗಂಗಾ ವಸತಿ ಶಾಲೆಯಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಅಂತರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗಂಡ, ಅಯ್ಯಪ್ಪ ಎಂ.ಜಿ, ತಹನ್ ಪೂವಯ್ಯ ಸಿ, ಮತ್ತು 8 ನೇ ತರಗತಿ ವಿದ್ಯಾರ್ಥಿ ಸೋಹನ್ ಗೌಡ ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿ ಟ್ರೋಫಿ ಮತ್ತು ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದು, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಮಡಿಕೇರಿ ಜ.1 : 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು-2023ರ ಜ.6, 7, 8 ರಂದು ಹಾವೇರಿಯಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಸಾಧಕರನ್ನು ಸನ್ಮಾನಿಸುವ, ಸಾಹಿತಿಗಳಿಗೆ ಕವನ ವಾಚನ ಮತ್ತು ವಿಷಯ ಮಂಡನೆಗೆ ಅವಕಾಶ ನೀಡಲಾಗಿದೆ. ಜ.6 ರಂದು ಸಂಜೆ 4 ಗಂಟೆಗೆ ಜರಗುವ ಕವಿಗೋಷ್ಠಿಯಲ್ಲಿ ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ ಜಯಪ್ರಕಾಶ್ ಕವನ ವಾಚನ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ನಡೆಯಲಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರಿಯಪ್ಪ ಅವರಿಗೆ ರಕ್ಷಣಾ ಕ್ಷೇತ್ರದಲ್ಲಿ ದೇಶ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸನ್ಮಾನ ನಡೆಯಲಿದೆ. ಇದು ಕೊಡಗು ಜಿಲ್ಲೆಗೆ ಮತ್ತು ಕೊಡಗಿನ ರಕ್ಷಣಾ ಕ್ಷೇತ್ರದ ಸೇವೆಗೆ ನೀಡಿದ ಗೌರವವಾಗಿದೆ. ಜ.7 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ “ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ” ಎಂಬ ವಿಚಾರ ಗೋಷ್ಠಿಯಲ್ಲಿ ಕೊಡಗಿನವರಾದ, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ.ಮಾಧವ…
ಮಡಿಕೇರಿ, ಜ.1 : ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ( ಎನ್.ಸಿ.ಎಸ್.ಟಿ.ಸಿ.), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ( ಕೆ- ಸ್ಟೆಪ್ಸ್ ), ಜಿಲ್ಲಾಡಳಿತ, ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ , ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ಹಾಗೂ ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಸಂಯುಕ್ತಾಶ್ರಯದಲ್ಲಿ “ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ಕೊಡಗು ಜಿಲ್ಲಾಮಟ್ಟದ 30 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ:2022 ನ್ನು ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯಲ್ಲಿ ಜ.3 ರಂದು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮ್ಮೇಳನವನ್ನು ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಉದ್ಘಾಟಿಸಲಿದ್ದು, ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಜಿ.ಎಚ್. ಮಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಸಮಾವೇಶದ ಕುರಿತು…
ಬೇಕಾಗುವ ಸಾಮಾಗ್ರಿಗಳು : ಕುರಿಯ ಕಾಲುಗಳು -4, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ- 3, ಹಸಿರು ಮೆಣಸಿನಕಾಯಿ -4 ರಿಂದ 6, ಟೊಮೆಟೊ 1, ಕೊತ್ತಂಬರಿ ಸೊಪ್ಪು – ಒಂದು ಬಟ್ಟಲು, ಕೆಂಪು ಮೆಣಸಿನ ಪುಡಿ ಒಂದು ಚಮಚ, ಕರಿಮೆಣಸು ಪುಡಿ -1 ಚಮಚ, ಎಣ್ಣೆ 3 ಚಮಚ, ಗರಂ ಮಸಾಲ ಪುಡಿ 1 1/2 ಚಮಚ, ಅರಶಿನ ಪುಡಿ -ಅರ್ಧ ಚಮಚ, ಏಲಕ್ಕಿ 2 ರಿಂದ 4 ಕಾಳುಗಳು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಂತೆ ನೀರು ಮಾಡುವ ವಿಧಾನ : ತಂದು ಇಟ್ಟಿರುವ ಅಂತಹ ಮಟನ್ ಕಾಲುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಅದೇ ಕುಕ್ಕರ್ ಗೆ ಅರಿಶಿನಪುಡಿ ಏಲಕ್ಕಿ ಪುಡಿ ಮತ್ತು ಕರಿಮೆಣಸು ಪುಡಿಯನ್ನು ಸೇರಿಸಿ. ಹಾಗೆ ಮುಂದೆ 5 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುಕ್ಕರ್…
ಮಡಿಕೇರಿ ಜ.2 : ಸೋಮವಾರಪೇಟೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಜ.9 ರಂದು ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಸ್ಸು ನಿಲ್ದಾಣ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಜೆ.ಸಿ.ವೇದಿಕೆಯಿಂದ ವಿವಿಧ ಕಲಾ ತಂಡಗಳು ಹಾಗೂ ಪೂರ್ಣ ಕುಂಭ ಕಳಸದೊಂದಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ನಂತರ 10 ಗಂಟೆಗೆ ತುಮಕೂರು ಶ್ರೀ ಸಿದ್ದಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ವಿರಾಜಪೇಟೆ ಅರಮೇರಿ, ಕಳಂಚೇರ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮತ್ತಿ ಕನ್ನಡಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲುಮಠದ ಸದಾಶಿವ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಸಂಸ್ಥಾನಮಠದ ಸ್ವತಂತ್ರ ಬಸವಲಿಂಗ ಸ್ವಾಮಿಜಿ, ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ, ಅಂಕನಳ್ಳಿ ಮನೆಹಳ್ಳಿಮಠದ ತಪೋಕ್ಷೇತ್ರ ಮಹಾಂತ ಶಿವಲಿಂಗ ಸ್ವಾಮೀಜಿ, ಮಾದ್ರೆ ಮುದ್ದಿನಕಟ್ಟೆಮಠ ಅಭಿನವ ಸಿದ್ದಲಿಂಗ ಶಿವಾರ್ಚರ್ಯ ಸ್ವಾಮೀಜಿ, ಕೆಸವತ್ತೂರುಮಠದ ಬಸವರಾಜೇಂದ್ರ ಸ್ವಾಮಿಜಿ,…
ಮಡಿಕೇರಿ ಜ 2 : ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನಗರದ ಚೌಡೇಶ್ವರಿ ದೇವಾಲಯದ ಬಳಿಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕುಚಿ೯ , ಬೋಡ್೯ ಕೊಡುಗೆಯಾಗಿ ನೀಡಲಾಯಿತು. ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಮಕ್ಕಳಿಗೆ ಉಪಯುಕ್ತವಾದ ಕೊಡುಗೆ ನೀಡಿರುವ ಇನ್ನರ್ ವೀಲ್ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ.ರೇಣುಕಾಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್, ನಿದೇ೯ಶಕಿಯರಾದ ಶಫಾಲಿ ರೈ, ಶಮ್ಮಿ ಪ್ರಭು, ಉಮಾಗೌರಿ, ಮಲ್ಲಿಗೆ ಪೈ, ರಶ್ಮಿ ಪ್ರವೀಣ್ , ಆಗ್ನೇಸ್ ಮುತ್ತಣ್ಣ, ಹಾಜರಿದ್ದರು.






