ಲೇಖಕ: admin

ಮಡಿಕೇರಿ ನ.15 NEWS DESK : ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ಲಾಂಗ್ ಜಂಪ್ ವಿಭಾಗದಲ್ಲಿ ಕೀರ್ತನ ಹೆಚ್.ಆರ್. ದ್ವಿತೀಯ, ಬಾಲಕರ ವಿಭಾಗದ ಲಾಂಗ್ ಜಂಪ್ ನಲ್ಲಿ ಆಶಿಕ್ ಸುನಿಲ್ ದ್ವಿತೀಯ ಸ್ಥಾನ  ಪಡೆದಿದ್ದಾರೆ. ಪ್ರೌಢಶಾಲೆ ವಿಭಾಗದ ಬಾಲಕಿಯರ 3000 ಮೀಟರ್ ಸ್ಪರ್ಧೆಯಲ್ಲಿ ಜಿ.ಎಂ.ಧನ್ಯ ತೃತಿಯ, ತ್ರಿಪಲ್ ಜಂಪ್ ನಲ್ಲಿ ಪವನ್ ಪೊನ್ನಣ್ಣ ಪ್ರಥಮ ಸ್ಥಾನ ಮತ್ತು ಹುರ್ಡಲ್ ನಲ್ಲಿ ತೃತಿಯ ಸ್ಥಾನ,  ಧ್ಯಾನ್.ಡಿ.ಈ. 110 ಮೀಟರ್ ಹುರ್ಡಲ್ ನಲ್ಲಿ ಪ್ರಥಮ ಮತ್ತು 1500 ಮೀಟರ್ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್ ಸಾಗರ್  ಸಂತೋಷ ವ್ಯಕ್ತಪಡಿಸಿದರು.

Read More

ಕಣಿವೆ ನ.15 NEWS DESK : ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸಾಮರ್ಥ್ಯ ಅಭಿವೃದ್ಧಿ ಘಟಕದಡಿಯಲ್ಲಿ ಬೆಂಗಳೂರಿನ ಸ್ವಚ್ಛ ಗೃಹ ಕಲಿಕ ಕೇಂದ್ರಕ್ಕೆ ಕುಶಾಲನಗರದ ಪುರಸಭೆಯ ಪೌರ ಕಾರ್ಮಿಕರ ನಿಯೋಗ ಒಂದು ದಿನದ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಬೆಂಗಳೂರಿನ ಸ್ವಚ್ಛ ಗೃಹ ಕಲಿಕಾ ಕೇಂದ್ರದಲ್ಲಿ ನಡೆಯುತ್ತಿರುವ ದೇವಸ್ಥಾನದ ಕಸವನ್ನು ಹೇಗೆ ಗೊಬ್ಬರವಾಗಿಸಬೇಕು, ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಗೊಬ್ಬರ ಮಾಡುವ ವಿಧಾನಗಳು, ಕಸವನ್ನು ಯಾವ ರೀತಿ ಮನೆಯಲ್ಲಿ ವಿಂಗಡಣೆ ಮಾಡಬೇಕು, ನಾಗರೀಕರೊಂದಿಗೆ ಸಂವಾದ ಹೇಗೆ ನಡೆಸಬೇಕು, ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಿ ತರಬೇಕೆಂದು ತಿಳಿಸಲಾಯಿತು. ಎರೆಹುಳು ಗೊಬ್ಬರ ತಯಾರಿಸುವ ವಿಧಾನ, ಪೈಪ್ ಕಾಂಪೋಸ್ಟಿಂಗ್, ಮೆಶ್ ಕಾಂಪೋಸ್ಟಿಂಗ್ ಬಗ್ಗೆ ತಿಳಿಸಿ ಕೊಡಲಾಯಿತು. ನಂತರ ಮಹಿಳೆಯರ ಮಾಸಿಕ ರುತುಚಕ್ರದ ಸಂದರ್ಭ ಬಳಸುವ ಪ್ಯಾಡ್ ಗಳ ಬಳಕೆ ಮತ್ತು ಆರೋಗ್ಯಕಾರಿಯಾಗಿ ನಿರ್ವಹಣೆಯ ವಿಧಾನಗಳು, ಗೃಹಬಳಕೆಯ ಅನುಪಯುಕ್ತ ಪ್ಲಾಸ್ಟಿಕ್ ಗಳ ವಿಂಗಡಣೆ, ಮರು ಬಳಕೆ ಮಾಡಬಹುದಾದ ಬಗ್ಗೆ ಸಮಗ್ರವಾಗಿ ಮಾಹಿತಿ ಕೊಡಲಾಯಿತು. ಇದೇ ಸಂದರ್ಭ ಸ್ವಚ್ಛ ಕಲಿಕಾ ಕೇಂದ್ರದ ಸಂಪನ್ಮೂಲ…

Read More

ಕುಶಾಲನಗರ ನ.15 NEWS DESK : ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸದೃಢವಾಗುತ್ತಿದೆ. 35 ವರ್ಷಗಳ ಇತಿಹಾಸವಿರುವುದನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದರು. ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನೂತನ ಸ್ಥಾನಿಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನದ್ಯಂತ ಸುಮಾರು 13 ಕ್ಕಿಂತ ಅಧಿಕ ಸ್ಥಾನಿಯ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಕುಶಾಲನಗರ ಘಟಕದ ಅಧ್ಯಕ್ಷರಾದ ಕೆ.ಎಸ್.ನಾಗೇಶ್ ಅವರ ನೇತೃತ್ವದಲ್ಲಿ ಸಾಕಷ್ಟು ಜನಪೋಯೋಗಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸಗಳಿಸಿದೆ ಎಂದು ಶ್ಲಾಘಿಸಿದರು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಅಭಿಯಾನ, ಕುಶಾಲನಗರ ಹಬ್ಬ 2025 ಎನ್ನುವ ವಿಶಿಷ್ಠ ಗ್ರಾಹಕ ಮೇಳ, ಕಾರ್ಮಿಕ ಇಲಾಖೆಯಿಂದ ನೋಟಿಸ್ ಜಾರಿಯಾಗಿದ್ದನ್ನು ಪ್ರಶ್ನಿಸಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದು ಹೀಗೆ ಹಲವು ಯಶಸ್ವಿ ಕಾರ್ಯಕ್ರಮಗಳು ನಡೆದಿರುವ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.…

Read More

ಮಡಿಕೇರಿ ನ.15 NEWS DESK  : ಕೊಡಗು ವಿದ್ಯಾಲಯದ ಯೂತ್ ಕ್ಲಬ್ ವತಿಯಿದ ಸಾಲು ಮರದ ತಿಮ್ಮಕ್ಕ ಅವರ ಪ್ರೀತಿಯ ಸ್ಮರಣಾರ್ಥವಾಗಿ ನಗರದ ‘ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನ ವನ’ದಲ್ಲಿ ಅರ್ಥಪೂರ್ಣವಾಗಿ ವೃಕ್ಷಾರೋಪಣಾ ಜರುಗಿತು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ. ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ., ಕ್ಲಬ್‌ ಇನ್‌ಚಾರ್ಜ್ ಶಿಕ್ಷಕರು, ಹಾಗೂ ಡಿಆರ್‌ಎಫ್ಒ ಸುನಿಲ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ತಿಮ್ಮಕ್ಕ ಅವರು ಜೀವನಪರ್ಯಂತ ಮರಗಳನ್ನು ನೆಟ್ಟು ಪೋಷಿಸಿದ ಮಹತ್ತರ ಸೇವೆಯನ್ನು ಸ್ಮರಿಸುವುದರೊಂದಿಗೆ , ಪರಿಸರ ಸಂರಕ್ಷಣೆಯ ಜವಾಬ್ದಾರಿ, ಪ್ರಕೖತ್ತಿಯ ಮೌಲ್ಯಗಳನ್ನು ಈ ಕಾರ್ಯಕ್ರಮ ತಿಳಿಸಿತ್ತು. ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಸಸಿಗಳನ್ನು ಉತ್ಸಾಹದಿಂದ ನೆಟ್ಟರು. ಜೊತೆಗೆ, ಶಾಲಾ ಆವರಣದಲ್ಲೂ ಮತ್ತೊಂದು ಸಸಿಯನ್ನು ಸಾಲು ಮರದ ಮ್ಮಕ್ಕ ಸ್ಮರಣೆಯಲ್ಲಿ ನೆಡುವ ಮೂಲಕ ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಾಣದತ್ತ ಸಂಸ್ಥೆಯ ಬದ್ಧತೆಯನ್ನು ಸ್ಪಷ್ಟಪಡಿಸಿದರು. ಜೂ.5 ರಂದು ನೆಡಲಾದ ಸಸಿಗಳ ಸಂರಕ್ಷಣೆಯ ಭಾಗವಾಗಿ, ವಿದ್ಯಾರ್ಥಿಗಳು ಉದ್ಯಾನವನ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿ ಸಂರಕ್ಷಣೆ ಕೈಗೊಂಡರು.…

Read More

ಮಡಿಕೇರಿ ನ.15 NEWS DESK : ಕೊಡಗಿನ ಪತ್ರಕರ್ತ ಪ್ರಶಾಂತ್.ಟಿ.ಆರ್ “ವಿರಚಿತ ಬಾಳ ಹಾದಿಯಲಿ ಬೆಳ್ಳಿಚುಕ್ಕಿ” ಕಾದಂಬರಿಗೆ ಯುನೈಟೆಡ್ ಕಿಂಗ್‍ಡಮ್‍ನ ಕೊವೆಂಟ್ರಿ ಕನ್ನಡಿಗರು ನೀಡುವ ಪ್ರಶಸ್ತಿಗೆ ಭಾಜನವಾಗಿದೆ. ಇದೇ ತಿಂಗಳು ಕೊವೆಂಟ್ರಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಹಳ್ಳಿಯಲ್ಲಿ ಬೆಳೆದ ಬಡಹುಡುಗ ಪುಟ್ಬಾಲ್‍ನಲ್ಲಿ ವಿಶ್ವಖ್ಯಾತಿ ಗಳಿಸುವ ಕಥನಾ ಈ ಕಾದಂಬರಿಯ ಕಥಾವಸ್ತವಾಗಿದೆ. ಖ್ಯಾತ ನಟ, ನಿರ್ದೇಶಕ ಅನಿರುದ್ದ್ ಕಾದಂಬರಿಗೆ ಬೆನ್ನುಡಿ ಬರೆದಿದ್ದು, ಬಾಲಿವುಡ್ ನಟ ಭಾಸ್ಕರ್ ಮುನ್ನುಡಿ ಬರೆದಿದ್ದಾರೆ. ಈ ಹಿಂದೆ ಬಾಳ ಹಾದಿಯಲಿ ಬೆಳ್ಳಿಚುಕ್ಕಿ ಕಾದಂಬರಿಗೆ ಇಂಡಿಯನ್ ಐ ಕಾನ್ ಅವಾರ್ಡ್ ಸಂದಿತ್ತು. ಅಲ್ಲದೆ, ಪ್ರಶಾಂತ್ ವಿರಚಿತ ಹೊನ್ನಮ್ಮನ ಕನಸು ಕಾದಂಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಂದಿತ್ತು. ಸದ್ಯ ಪ್ರಶಾಂತ್ ರಚಿಸಿರುವ ವಿಲೇಜ್ ಡಾಕ್ಟರ್ ಕಾದಂಬರಿ, ಶಾಂತಿಯ ಸಾಧನೆಯ ಹಾದಿ ಬಯೋಪಿಕ್ ಹಾಗೂ ಮುಳುಗದ ನೌಕೆ ಕಥಾಸಂಕಲನ ಬಿಡುಗಡೆಗೆ ಸಿದ್ದವಾಗಿದೆ. ವಿಶ್ವವಾಣಿ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಅವರು ಸಾಹಿತ್ಯ ಕೃಷಿಯ ಜತೆಗೆ ಸಿನಿಮಾರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆರ್ಟಿಕಲ್…

Read More

ಮಡಿಕೇರಿ ನ.15 NEWS DESK : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಡಿ ಮಡಿಕೇರಿ ತಾಲ್ಲೂಕಿನಲ್ಲಿ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ.  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಧ್ಯಕ್ಷರಾಗಿರುವ ಸಮಿತಿಯ ಉಪಾಧ್ಯಕ್ಷರಾಗಿ ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ಅವರು ಆಯ್ಕೆಯಾಗಿದ್ದಾರೆ.

Read More

ಸೋಮವಾರಪೇಟೆ ನ.15 NEWS DESK : ವಿದ್ಯಾರ್ಥಿಗಳು ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಅವುಗಳ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಪ್ರಾಚ್ಯ ಪ್ರಜ್ಞೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಸ್ಮಾರಕಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್ ಹೇಳಿದರು. ಕರ್ನಾಟಕ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಸೋಮವಾರಪೇಟೆ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಪ್ರಾಚ್ಯ ಪ್ರಜ್ಞೆ” ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಾಚ್ಯ ವಸ್ತು ಸ್ಮಾರಕಗಳು, ಸಂಗ್ರಹಾಲಯಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಕರ್ನಾಟಕದ ಪ್ರಾಚೀನ ಸ್ಮಾರಕಗಳ ಉಳಿಸುವಿಕೆಯಲ್ಲಿ ಇರುವ ಸವಾಲುಗಳ ಬಗ್ಗೆ ನಾವು ಜಾಗ್ರತರಾಗುವ…

Read More

ಮಡಿಕೇರಿ ನ.15 NEWS DESK : ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 20ನೇ ಮಾನವ ಸರಪಳಿ ಕಾರ್ಯಕ್ರಮವನ್ನು ನ.18 ರಂದು ಕುಟ್ಟದಲ್ಲ್ಲಿ ನಡೆಸಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಕುಟ್ಟದಲ್ಲಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು ಮತ್ತು ಕೊಡವರ ಪರವಾದ ಸಿಎನ್‍ಸಿಯ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಕೊಡವರ…

Read More

ವಿರಾಜಪೇಟೆ ನ.15 NEWS DESK : ಕ್ರೀಡಾಕೂಟಗಳಿಂದ ಪರಸ್ಪರ ಸಾಮರಸ್ಯ ಬೆಳೆಯುದರ ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ವ್ಯಕ್ತಿಯು ಸದೃಢರಾಗಲು ಸಾಧ್ಯ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ಪಿ.ಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟರು. ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಗೋಣಿಕೊಪ್ಪಲಿನ ಕೂರ್ಗ್ ಪಿ ಯು ಕಾಲೇಜಿನ ಸಹಯೋಗದಲ್ಲಿ ಸಂತ ಅನ್ನಮ್ಮ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾಸಂಸ್ಥೆಗಳ ನಡುವೆ ಜರುಗುವ ಕ್ರೀಡಾಕೂಟಗಳಿಂದ ಪರಸ್ಪರ ಸಹಕಾರ, ಅನ್ಯೋನ್ಯತೆ ಬೆಳೆಯುತ್ತದೆ. ಓದಿನ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಕ್ರೀಡಾಕೂಟಗಳು ಭಾಂದವ್ಯದ ಸಂಕೇತಗಳಾಗಿವೆ ಎಂದರು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕು ಎಂದು ಹೇಳಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಶಿಕ್ಷಣದ…

Read More

ಮಡಿಕೇರಿ ನ.15 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನ.23ರಿಂದ 29ರವರೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ ಡೈಮಂಡ್ ಜ್ಯೂಬಿಲಿ ಜಂಬೂರಿ ಹಾಗೂ 19ನೇ ರಾಷ್ಟ್ರೀಯ ಜಂಬೂರಿಗೆ ನಾಪೋಕ್ಲುವಿನ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ನಾಪೋಕ್ಲುವಿನ ಅಂಕೂರ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಮಹೇಶ್ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಸಂಪಾಜೆಯ ಅಧ್ಯಕ್ಷ ಧನಂಜಯ ಎಂ. ಹಾಗೂ ಕಾರ್ಯದರ್ಶಿ ಉಷಾರಾಣಿ ಕೆ.ಬಿ ಅವರು ಅಭಿನಂದಿಸಿದರು. ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಅಂಕೂರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರತ್ನ ಚರ್ಮಣ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More