ಮಡಿಕೇರಿ ನ.15 NEWS DESK : ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯು ಸಂಭ್ರಮದಿಂದ ಜರುಗಿತು. ಶಿಕ್ಷಕರೇ ಸಂಪೂರ್ಣ ಕಾರ್ಯಕ್ರಮವನ್ನು ನಿವ೯ಹಿಸಿ, ಮಕ್ಕಳಿಗೆ ಹಬ್ಬದ ಸಂಭ್ರಮವನ್ನು ನೆನಪಿಸಿದರು. ಕಲಾ, ಕ್ರೀಡೆ, ಹಾಸ್ಯ ಮತ್ತು ಸಂಭ್ರಮಗಳ ಸಂಯೋಜನೆಯಾಗಿ ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ವಿದ್ಯಾಥಿ೯ಗಳಿಗೂ ಶಿಕ್ಷಕರಿಗೂ ಸ್ಮರಣೀಯ ಅನುಭವ ನೀಡಿತ್ತು. ಶಾಲಾ ನಾಯಕ ಧಾರ್ಮಿಕ್ ಹಾಗೂ ಉಪನಾಯಕ ಶೌರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಶಾಲಾ ಕೌನ್ಸಿಲ್ ಲೀಡರ್ ಗಳು ದೀಪ ಬೆಳಗಿಸಿದರು. ಶಿಕ್ಷಕಿ ಚಿತ್ರ ಮತ್ತು ತಂಡ ಪ್ರಸ್ತುತಪಡಿಸಿದ ಸ್ವಾಗತ ನೃತ್ಯ ಮಕ್ಕಳಲ್ಲಿ ಹೊಸ ಚೈತನ್ಯವನ್ನು ತುಂಬಿದರೆ, ಶಿಕ್ಷಕಿ ಪೊನ್ನಮ್ಮ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದ ಮಾಹಿತಿ ಪ್ರೇರಣಾದಾಯಕವಾಗಿತ್ತು. ದಾಮೋದರ್ ಗೌಡ ಹಾಗೂ ತಂಡದವರು ಪ್ರದರ್ಶಿಸಿದ ಹಾಸ್ಯನಾಟಕ ಪ್ರಮುಖ ಆಕರ್ಷಣೆಯಾಗಿ ಹಾಸ್ಯದ ಹೊನಲನ್ನೇ ಹರಿಸಿತ್ತು. ದಿವ್ಯ ಹಾಗೂ ತಂಡದ ನೃತ್ಯ ಪ್ರದರ್ಶನ ಮತ್ತು ಸಂಗೀತ ಶಿಕ್ಷಕಿ ಪ್ರತಿಭಾ ತಂಡದವರ ಗಾಯನ ಕಾರ್ಯಕ್ರಮವೂ ಮಕ್ಕಳನ್ನು ರಂಜಿಸಿದವು. ಶಾಲೆಯ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್. ಹಾಗೂ ನಾಗರಾಜ್…
ಲೇಖಕ: admin
ಸುಂಟಿಕೊಪ್ಪ ನ.15 NEWS DESK : ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪೋಷಕರು, ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ಸಂತೆ ನಡೆಯಿತು. ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಪೋಷಕರ ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಾಲಕೃಷ್ಣ ಅವರು ಮಾತನಾಡಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಮಕ್ಕಳ ವಿದ್ಯಾರ್ಜನೆಗೆ ಪರಿಶ್ರಮ ವಹಿಸಿದರೆ ಸಾಲದು, ಮಕ್ಕಳ ವ್ಯಾಸಂಗದ ಸಂದರ್ಭದಲ್ಲಿ ಪ್ರಶಾಂತ ವಾತಾವರಣವನ್ನು ಒದಗಿಸಿಕೊಡಬೇಕೆಂದರು. ಆಗ ಮಕ್ಕಳ ಭವಿಷ್ಯವು ಉತ್ತಮವಾಗಿರಲು ಸಾಧ್ಯ ಎಂದರು. ಕಾಲ ಕಲಾಕ್ಕೆ ಪೋಷಕರು ಶಿಕ್ಷಕರೊಂದಿಗೆ ನಿಕಟ ಸಂಪರ್ಕ ಹಾಗೂ ಶಾಲೆಗಳಿಗೆ ಭೇಟಿ ನೀಡುವುದರಿಂದ ಮಕ್ಕಳ ಕಲಿಕೆಯ ಪ್ರಮಾಣವು ಅಭಿವೃದ್ಧಿಗೊಳ್ಳಲು ಸಹಕಾರಿಯಾಗುತ್ತದೆ ಎಂದು ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. :: ಮಕ್ಕಳ ಸಂತೆ :: ಇದೇ ಸಂದರ್ಭ ಶಾಲೆಯಲ್ಲಿ ಮಕ್ಕಳ ಸಂತೆ ಗಮನ ಸೆಳೆಯಿತು. ನಿತ್ಯ ಪಾಠ ಪ್ರವಚನದ ಶಬ್ಧ ಕೇಳಿ ಬರುತ್ತಿದ್ದ ಶಾಲೆಯ ಆವರಣದಲ್ಲಿ ಮಕ್ಕಳ ವ್ಯವಹಾರಿಕ ಜ್ಞಾನವನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಮಕ್ಕಳು ಮನೆ ಹಾಗೂ ತೋಟಗಳಲ್ಲಿ…
ಸೋಮವಾರಪೇಟೆ ನ.15 NEWS DESK : ಮಕ್ಕಳ ದಿನಾಚರಣೆ ಅಂಗವಾಗಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವ್ಯಾಪಾರಿಗಳ ಪಾತ್ರದಲ್ಲಿ ಪಾಲ್ಗೊಂಡು, ತಾವು ತಂದ ತಿಂಡಿ ತಿನಿಸು, ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಶಿಕ್ಷಕಿ ಆಶಾ, ಮಕ್ಕಳ ದಿನವನ್ನು ಪಾಠಶಾಲೆಯ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೇ, ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸುವ ರೀತಿಯಲ್ಲಿ ಆಚರಿಸುವುದೇ ನಮ್ಮ ಉದ್ದೇಶ. ಮಕ್ಕಳ ಸಂತೆ ಎಲ್ಲರಿಗೂ ಹರ್ಷ ನೀಡುತ್ತಿದೆ. ಮಕ್ಕಳು ತಮ್ಮ ಕೈಚಳಕ, ಭಾವನೆ ಮತ್ತು ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದು ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸತೀಶ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ, ಎಸ್‍ಡಿಎಂಸಿ ಉಪಾಧ್ಯಕ್ಷೆ ದಿವ್ಯ, ಸದಸ್ಯರುಗಳಾದ ಆರೀಫ್, ಗಾನವಿ, ಫಾತಿಮಾ, ಸತ್ಯ, ಸರಸ್ವತಿ ಸಹಶಿಕ್ಷಕರಾದ ಸವಿತಾ, ಮೋಹನಕುಮಾರಿ, ಪಲ್ಲವಿ ಹಾಗೂ ಪೆÇೀಷಕರು ಇದ್ದರು ಮಕ್ಕಳಿಂದ ನೃತ್ಯ, ಹಾಡು ಹಾಗೂ ಮನೋರಂಜನ…
ಸೋಮವಾರಪೇಟೆ ನ.14 NEWS DESK : ಸೋಮವಾರಪೇಟೆ ತಾಲ್ಲೂಕು ಹಿಂದೂ ಮಲಯಾಳಿ ಸಮಾಜದ ವತಿಯಿಂದ ನ.16 ರಂದು ಓಣಂ ಉತ್ಸವವನ್ನು ಆಚರಿಸಲಾಗುವುದು ಎಂದು ಸಮಾಜದ ತಾಲ್ಲೂಕು ಅಧ್ಯಕ್ಷ ವಿ.ಎಂ.ವಿಜಯ ಹೇಳಿದರು. ಬೆಳಿಗ್ಗೆ 7 ಗಂಟೆಯಿಂದ 8.30ರ ತನಕ ಪೊಕಳಂ ಸ್ವರ್ಧೆ ಏರ್ಪಡಿಸಲಾಗಿದೆ. 9 ಗಂಟೆಗೆ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಶ್ರೀ ಮುತ್ತಪ್ಪ ದೇವಾಲಯದ ಸಮೀಪದಿಂದ ಓಣಂ ಘೋಷಯಾತ್ರೆ ಪ್ರಾರಂಭವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ವಿಖ್ಯಾತನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೇರಳ ಕಾಞಂಗಾಡು ಗೃಹಸ್ಥಾಶ್ರಮದ ಗಂಗಾಜೀ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಮಂತರ್‍ಗೌಡ, ಎ.ಎಸ್.ಪೊನ್ನಣ್ಣ, ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್‍ಸಿ ಸುಜಾ ಕುಶಾಲಪ್ಪ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಬಿ.ಎ.ಜೀವಿಜಯ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಸಮಿತಿ ಸದಸ್ಯ ಹರಪಳ್ಳಿ ರವೀಂದ್ರ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ…
ಸೋಮವಾರಪೇಟೆ ನ.15 NEWS DESK : ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆ ಸೋಮವಾರಪೇಟೆ ಮಂಡಳ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಮುಖಂಡರಾದ ಎಸ್.ಜಿ.ಮೇದಪ್ಪ, ಮಹೇಶ್ ತಿಮ್ಮಯ್ಯ, ಮನು ಕುಮಾರ್ ರೈ, ದರ್ಶನ್ ಜೋಯಪ್ಪ, ಬಿ.ಜೆ.ದೀಪಕ್, ಎಸ್.ಆರ್.ಸೋಮೇಶ್, ಕಿಬ್ಬೆಟ್ಟ ಮಧು ಇದ್ದರು.
ಕುಶಾಲನಗರ ನ.15 NEWS DESK : ಕುಶಾಲನಗರದ ರಥಬೀದಿಯಲ್ಲಿ ನಡೆಯುವ ರಂಗೋಲಿ ಸ್ಪರ್ಧೆಗೆ ತನ್ನದೇ ಆದ ವಿಶೇಷ ಆಕರ್ಷಣೆಯಿದೆ. ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ನ.23 ರಂದು ರಂಗೋಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಮನವಿ ಮಾಡಿದೆ. ಮೊದಲು ಬಂದ 70 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಕಸಾಪ ದ ಅಧ್ಯಕ್ಷ ಕೆ.ಎಸ್.ನಾಗೇಶ್ 9986073949 ಅವರಲ್ಲಿ ನೋಂದಾಯಿಸಿಕೊಳ್ಳಲು ಕೋರಿದೆ. ಸ್ಪರ್ಧೆಯ ವಿಜೇತರಿಗೆ ಮೊದಲ ಬಹುಮಾನ 6000, ದ್ವಿತೀಯ, 4000, ತೃತೀಯ 2000 ಮತ್ತು ಆಕರ್ಷಕ ಪಾರಿತೋಷಕಗಳನ್ನು ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಕುಶಾಲನಗರ ನ.15 NEWS DESK : ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳೊಂದಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ, ನವೀನ ವಿಧಾನಗಳನ್ನು ಪರಿಚಯಿಸಿ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೋಷಕರ ಮತ್ತು ಉಪನ್ಯಾಸಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉಪನ್ಯಾಸಕರೊಂದಿಗೆ ಪೋಷಕರ ಜವಬ್ದಾರಿ ತುಂಬ ಮಹತ್ವದಾಗಿದೆ. ಮಕ್ಕಳು ಮೊಬೈಲ್ ಗೀಳು ಬೆಳೆಸಿಕೊಳ್ಳದಂತೆ ಎಚ್ಚರಿಕೆ ವಹಿಸಿ, ಮೊಬೈಲ್ ನಮ್ಮ ಬದುಕು ಎಂಬ ವ್ಯಸನ ಆಗಬಾರದು. ಈ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಸೃಜನಶೀಲ ಚಟುವಟಿಕೆಗಳಿಗೆ ಪ್ರೇರಣೆ ನೀಡಬೇಕು. ಅವರಲ್ಲಿರುವ ಸೂಪ್ತ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡಬೇಕು ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್.ಚಿದಾನಂದ ಕುಮಾರ್ ಮಾತನಾಡಿ,ಸರ್ಕಾರಿ ಶಾಲೆ ಓದಿದ ಬಹುತೇಕ ಮಂದಿ ಸಮಾಜದಲ್ಲಿ ಉನ್ನತ…
ಮಡಿಕೇರಿ ನ.15 NEWS DESK : ನಮ್ಮ ಇತಿಹಾಸ ನೋಡಿದಾಗ ಕೇವಲ ಪರಕೀಯರ ದಾಳಿ ಅವರ ಆಳ್ವಿಕೆಯನ್ನು ವೈಭವೀಕರಿಸಿ ಹೇಳಲಾಗಿದೆ ಹೊರತು ಸ್ಥಳೀಯ ವೀರರ ಕುರಿತು ಮಾಹಿತಿ ನೀಡಲಾಗುತಿಲ್ಲ ಎಂದು ವನವಾಸಿ ಕಲ್ಯಾಣ, ಕರ್ನಾಟಕ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಮತ್ತು ವಿರಾಜಪೇಟೆ ಕಾವೇರಿ ಕಾಲೇಜು ಜಂಟಿ ಆಶ್ರಯದಲ್ಲಿ ನಡೆದ ಅಬ್ಬಕ್ಕ@500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ- ಎಸಳು 91 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಮೇಲೆ ದಾಳಿ ನಡೆಸಿ ಆಕ್ರಮಣ ಮಾಡಿಕೊಂಡು ಆಡಳಿತವನ್ನು ನಡೆಸಿದ ಮೊಘಲರಿಂದ ಹಿಡಿದು ಬ್ರಿಟಿಷರವರೆಗಿನ ಎಲ್ಲಾ ಇತಿಹಾಸವನ್ನು ನಾವು ತಿಳಿದುಕೊಳ್ಳುತ್ತೇವೆ. ಇದಕ್ಕೆ ಕಾರಣ ಬ್ರಿಟಿಷರು ಶೈಕ್ಷಣಿಕವಾಗಿ ದೈಹಿಕ ಮತ್ತು ಮಾನಸಿಕ ಗುಲಾಮರನ್ನಾಗಿ ಮಾಡಿಕೊಂಡದ್ದು, ಆದರೆ ಸ್ಥಳೀಯವಾಗಿ ಹೋರಾಟವನ್ನು ನಡೆಸಿದ ವೀರರ ಮೇಲೆ ನಮ್ಮ ಇತಿಹಾಸ ಹೆಚ್ಚಾಗಿ ಬೆಳಕು ಚೆಲ್ಲುತ್ತಿಲ್ಲ. ಶಿವಾಜಿ, ಅಬ್ಬಕ್ಕ , ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹನೀಯರು ನಮ್ಮ…
ವಿರಾಜಪೇಟೆ ನ.15 NEWS DESK : ಅರಮೇರಿಯ ಎಸ್ಎಂಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಂಡಿತ್ ಜವಾಹರ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪ್ರಾಂಶುಪಾಲೆ ಬಲ್ಲಚಂಡ ಕುಸುಮ್ ಟಿಟೋ ಪುಷ್ಪ ನಮನ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. ವಿದ್ಯಾರ್ಥಿಗಳಿಗೆ ಮೈಂಡ್ ಅಂಡ್ ಮ್ಯಾಟರ್ಸ್ ಸಂಸ್ಥೆಯ ವತಿಯಿಂದ ಮಾನಸಿಕ ಆರೋಗ್ಯದ ಕುರಿತಾಗಿ ಕಾರ್ಯಾಗಾರವನ್ನು ನಡೆಸಲಾಯಿತು. ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಶಿಕ್ಷಕಿ ಹೇಮಾವತಿ ಮಕ್ಕಳ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಗೈಡ್ ಕ್ಯಾಪ್ಟನ್ ಮೈಥಿಲಿ ರಾವ್, ಶಿಕ್ಷಕರುಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿರಾಜಪೇಟೆ ನ.15 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಿತಿಮತಿ ಪಿ ಎಂ ಶ್ರೀ ಸರ್ಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆಗೂಡಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೊಡುವುದು ಮತ್ತು ಹಂಚಿಕೊಳ್ಳುವ ಕಲೆಯ ಮಹತ್ವವನ್ನು ತಿಳಿಸಿಕೊಡಲಾಯಿತು. ಪಿ ಎಂ ಶ್ರೀ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಆಡಳಿತ ಮಂಡಳಿಯ ವತಿಯಿಂದ ನರ್ಸರಿ, ಎಲ್ ಕೆ ಜಿ ,ಯುಕೆಜಿ, ಮಕ್ಕಳಿಗೆ ಬರೆಯಲು ಅನುಕೂಲವಾಗುವಂತಹ ವಸ್ತುಗಳನ್ನು ಜೊತೆಗೆ ಶಾಲೆಗೆ ಜಮಖಾನೆ, ಡಿಕ್ಷನರಿ ಇತ್ಯಾದಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್, ಮಕ್ಕಳ ದಿನಾಚರಣೆಯನ್ನು ಪರಸ್ಪರ ಎರಡು ಶಾಲೆಯ ಮಕ್ಕಳು ಜತೆಗೂಡಿ ಸಂಭ್ರಮದಿಂದ ಆಚರಿಸಿದ್ದೇವೆ. ಮಕ್ಕಳಲ್ಲಿ ಪರಸ್ಪರ ಸ್ನೇಹ, ಸಹಕಾರ, ಭ್ರಾತೃತ್ವ ಭಾವನೆ ಮೂಡಿದಾಗ ಮಾತ್ರ ಮೌಲ್ಯಯುತ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದರು. ಮಕ್ಕಳಿಗೆ…






