ಲೇಖಕ: admin

ವಿರಾಜಪೇಟೆ ಡಿ.17 NEWS DESK : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದ ವಿರಾಜಪೇಟೆಯ ವಿದ್ಯುತ್ ಗುತ್ತಿಗೆದಾರ ಬಿ.ಎಂ. ಗಣೇಶ್ ಅವರನ್ನು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿರಾಜಪೇಟೆಯ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ವಿರಾಜಪೇಟೆಯ ತಾಲೂಕು ಸಮಿತಿ ಕಚೇರಿಯಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಸಿ. ಭರತ್, ಉಪಾಧ್ಯಕ್ಷ ಕೆ. ಎಂ. ಹಂಸ, ಕಾರ್ಯದರ್ಶಿ ಎನ್.ಜಿ. ಚಂದ್ರಶೇಖರ್, ಸಹ ಕಾರ್ಯದರ್ಶಿ ಸಿ.ಜಿ. ಹರೀಶ್. ಖಜಾಂಚಿ ಎಂ.ಎಂ. ಸರ್ಫು, ಸಂಘಟನಾ ಕಾರ್ಯದರ್ಶಿ ಬಿ.ಎಂ. ರಮೇಶ್, ಸದಸ್ಯರಾದ ಬಿ.ಸಿ. ಕಿರಣ್, ಎಂ.ಡಿ. ರಫೀಕ್, ಅಲೆಕ್ಸ್, ಬಿ.ಎಸ್. ಚಂದ್ರಶೇಖರ್. ಸಿ.ಜಿ. ಜೋಯ್, ಬಿ.ಆರ್. ಮನು, ಬಿ.ಎಂ. ಮ್ಯಾಥ್ಯೂ, ಬಿ.ಬಿ. ಹೊನ್ನಪ್ಪ ಹಾಗೂ ರಾಜಶೇಖರ ಇವರುಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಡಿ.16 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ 2025-26 ನೇ ಸಾಲಿನ ಬೇಟಿ ಬಚಾವೋ ಬೇಟಿ ಪಡಾವೋ ಕಾಯಕ್ರಮದಡಿಯಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಅವರು ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವುದು, ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವುದು, ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಸಮಾನತೆಯನ್ನು ಪ್ರೋತ್ಸಾಹಿಸುವುದು, ಹೆಣ್ಣು ಮಗು ಶಾಲೆಗೆ ಹೋಗುವುದನ್ನು ಕಾಪಾಡುವುದು, ಲಿಂಗ ಪತ್ತೆ ಪರೀಕ್ಷೆ…

Read More

ಮಡಿಕೇರಿ ಡಿ.16 NEWS DESK : ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯನ್ನು ನಿಖರವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು, ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಈ ಕಾರ್ಯ ಆಗಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು ಗ್ರಾಮೀಣ ಭಾಗದಲ್ಲಿ 2015 ರ ಏ.1 ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ…

Read More

ಮಡಿಕೇರಿ ಡಿ.16 NEWS DESK : ರಾಜಪೇಟೆ ಉಪ ಖಜಾನೆಯ ನೂತನ ಕಚೇರಿಯು ವಿರಾಜಪೇಟೆ ತಾಲ್ಲೂಕು ಆಡಳಿತ ಸೌಧದಲ್ಲಿ ನಿರ್ಮಾಣಗೊಂಡಿದ್ದು, ಖಜಾನೆ ಆಯುಕ್ತರ ಅನುಮತಿ ನೀಡಿರುವ ಮೇರೆಗೆ ಈ ಉಪ ಖಜಾನೆಯು ಹಾಲಿ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡದಿಂದ ವಿರಾಜಪೇಟೆ ತಾಲ್ಲೂಕು ಆಡಳಿತ ಸೌಧದ ನೆಲ ಮಹಡಿಯಲ್ಲಿರುವ ನೂತನ ಕಚೇರಿಗೆ ಡಿ.12 ರಂದು ಸ್ಥಳಾಂತರಗೊಂಡು ಕಚೇರಿ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿರುತ್ತದೆ ಎಂದು ವಿರಾಜಪೇಟೆ ಉಪ ಖಜಾನೆಯ ಪತ್ರಾಂಕಿತ ಉಪ ಖಜಾನಾಧಿಕಾರಿ ಅವರು ತಿಳಿಸಿದ್ದಾರೆ. ಉಪ ಖಜಾನೆಗೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳು ಹಾಗೂ ಖಜಾನೆ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪತ್ರಾಂಕಿತ ಉಪ ಖಜಾನಾಧಿಕಾರಿಗಳು, ಉಪ ಖಜಾನೆ ಕಚೇರಿ, ನೆಲ ಮಹಡಿ, ತಾಲ್ಲೂಕು ಆಡಳಿತ ಸೌಧ, ವಿರಾಜಪೇಟೆ-571218. ವಿಳಾಸದ ವಿವರವುಳ್ಳ ನೂತನ ಕಚೇರಿಯನ್ನು ಸಂಪರ್ಕಿಸುವಂತೆ ವಿರಾಜಪೇಟೆ ಉಪ ಖಜಾನೆ ಪತ್ರಾಂಕಿತ ಉಪ ಖಜಾನಾಧಿಕಾರಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಡಿ.16 NEWS DESK : 66/ 11 ಕೆ.ವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1-ದೊಡ್ಡಮಳ್ತೆ ಫೀಡರ್‍ನಲ್ಲಿ ಡಿಸೆಂಬರ್, 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‍ನಿಂದ ಹೊರಹೊಮ್ಮುವ ಬಿಳಿರೆಕೊಪ್ಪ, ಮಟ್ನಳ್ಳಿ, ಕಿಬ್ಬೆಟ್ಟ, ಅಯ್ಯಪ್ಪ ಕಾಲೋನಿ, ದೊಡ್ಡಹನಕೋಡು, ಗೆಜ್ಜೆಹನಕೋಡು, ಕಾಡುಮನೆ, ಚಿಕ್ಕತೊಳೂರು, ಕಾಗಡೀಕಟ್ಟೆ, ದೊಡ್ಡಮಳ್ತೆ, ಒಳಗುಂದ, ಸುಳಿಮಳ್ತೆ, ಹೊನ್ನಾವಳ್ಳಿ, ಕೂಗೆಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More

ಬೆಳಗಾವಿ ಡಿ.16 NEWS DESK : ಕೊಡಗು ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಪಟ್ಟೆದಾರರ ಹೆಸರನ್ನು ಪಹಣಿಯಲ್ಲಿ ನಮೂದಿಸಿರುವ ಸಮಸ್ಯೆಗೆ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವು ಪರಿಹಾರವಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು. 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಪರಿಶೀಲನಾ ಸಮಿತಿ ಶಿಫಾರಸು ಮಾಡಿದಂತೆ, ಬೆಳಗಾವಿಯ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಂಡಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ವಿಧೇಯಕವನ್ನು ಸ್ವಾಗತಿಸುವುದಾಗಿ ಹೇಳಿದರು, ಕೊಡಗಿನ ಬಹಳಷ್ಟು ವರ್ಷಗಳ ಅತ್ಯಂತ ಜಟಿಲವಾದ ಸಮಸ್ಯೆ ಇದರಿಂದ ಪರಿಹಾರವಾಗಲಿದೆ ಎಂದು ಬಣ್ಣಿಸಿದರು. ಕಂದಾಯ ಸಚಿವರ ಇಚ್ಚಾ ಶಕ್ತಿ ಹಾಗೂ ಕಾಳಜಿಯಿಂದ ಈ ಕಾಯ್ದೆ ಜಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕೊಡಗಿನ ಜನತೆಯ ಪರವಾಗಿ ಸಚಿವರಿಗೆ ಹಾಗೂ ಪರಿಶೀಲನಾ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರಲ್ಲದೆ, ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಪರಿಶೀಲನಾ ಸಮಿತಿ ಸಭೆಯಲ್ಲಿ…

Read More

ಮಡಿಕೇರಿ ಡಿ.16 NEWS DESK : ಕರ್ನಾಟಕ ಟೆಕ್ವಾಂಡೋ ವತಿಯಿಂದ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಟೆಕ್ವಾಂಡೋ ಕಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‍ನ ವಿದ್ಯಾರ್ಥಿಗಳು ಸ್ಪರ್ಧಿಸಿ ಚಾಂಪಿಯನ್ ಶಿಪ್ ಕಪ್‍ನ್ನು ಗೆದ್ದುಕೊಂಡಿದ್ದಾರೆ. ಸಬ್ ಜೂನಿಯರ್ ವಿಭಾಗದ 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯದ ಜಿವಿನ್ ಅಯ್ಯಪ್ಪ, 10 ವರ್ಷದೊಳಗಿನ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಆಲಿಯಾ ಪರ್ವಿನ್, 12 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಪಾವನಿ, ಎನ್.ಕೆ.ದಿವಿತ್, ಅಖಿಲ ರವಿ, ಲಕ್ಷಾ ಎ., ದಾನೀಶ್, ಜೀಯ ಬೋಜಮ್ಮ, ರಾಯಿಕ ಅಕ್ಕಮ್ಮ ಸ್ಪರ್ಧಿಸಿ ಕೊಡಗಿಗೆ ಕೀರ್ತಿ ತಂದಿದ್ದಾರೆ. 14 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಅಯಾನ್ ಖಾನ್, ದಕ್ಷ್ ಸೋಮಯ್ಯ, ಕೇಂದ್ರೀಯ ವಿದ್ಯಾಲಯದ ರೃತ್ವಿಸನ, ನವನ್ಯ ಮತ್ತು ಸಂತ ಮೈಕಲರ ಶಾಲೆಯ ಆರೂಶ್ ಪರ್ವಿನ್ ಮತ್ತು 17 ವರ್ಷದೊಳಗಿನ ವಿಭಾಗದಲ್ಲಿ ಕೇಂದ್ರೀಯ ವಿದ್ಯಾಲಯ ಅವಿನಾಶ್ ಪದಕವನ್ನು ಪಡೆದು ಕೊಡಗಿಗೆ ಚಾಂಪಿಯನ್ ಶಿಪ್ ಕಪ್ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. …

Read More

ಸುಂಟಿಕೊಪ್ಪ ಡಿ.16 NEWS DESK : ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮಾದಾಪುರ ಕ್ಲಸ್ಟರ್ ಕೇಂದ್ರದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಾಗೂ ಕಲೋತ್ಸವ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳನ್ನು ತೊಟ್ಟು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳು ಪ್ರೇಕ್ಷಕರ ಗಮನ ಸೆಳೆದರು. ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಪೊನ್ನಣ್ಣ, ಮಕ್ಕಳ ಇಂತಹ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಕರ ಜತೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಸ್ಟರ್ ಸಿಆರ್ ಪಿ, ಟಿ.ಈ. ಮಂಜುನಾಥ್ , ಮಕ್ಕಳ ಕಲಾ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು. ಶಾಲಾ ಮುಖ್ಯ ಶಿಕ್ಷಕಿ…

Read More

ನಾಪೋಕ್ಲು ಡಿ.16 NEWS DESK : ಅರೆಭಾಷೆ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಸಹಯೋಗದಲ್ಲಿ ಕಾರುಗುಂದ ಗೌಡ ಸಮಾಜದಲ್ಲಿ ಅರೆಭಾಷೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಭಾಷಣಗಾರರಾಗಿ ಗೌಡ ಸಾಂಸ್ಕೃತಿಕ ಅಕಾಡೆಮಿಯ ಮಾಜಿ ಅಧ್ಯಕ್ಷ ತುಂತಜೆ ವೆಂಕಟೇಶ (ಗಣೇಶ್) ಅವರು ಮಾತನಾಡಿ, ಮಾತೃ ಭಾಷೆ ಉಳಿಯುವುದು ಮನೆಯಿಂದ. ಪ್ರತಿ ಮನೆಯಲ್ಲೂ ಮಕ್ಕಳಿಗೆ ಮಾತೃ ಭಾಷೆಯನ್ನು ಕಲಿಸಿದಲ್ಲಿ ಭಾಷೆ ಉಳಿಯುವುದು. ಹಾಗೆಯೇ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಕೈಬಿಡಬಾರದು ಎಂದು ಕಿವಿ ಮಾತು ಹೇಳಿದರು. ಶಿಕ್ಷಕಿ ತಳೂರು ಉಷಾ ಕಾಶಿ ಅವರು ಮಾತನಾಡಿ, ಭಾಷೆ, ಸಂಸ್ಕೃತಿಯನ್ನು ಮರೆತರೆ ಆ ಜನಾಂಗವನ್ನು ಮಾರಿಕೊಂಡಂತೆ. ಆದ್ದರಿಂದ ಆಯಾ ಜನಾಂಗಕ್ಕೆ ಸಂಬಂಧಪಟ್ಟ ಭಾಷೆ, ಉಡುಪು ಪದ್ದತಿ…

Read More

ವಿರಾಜಪೇಟೆ ಡಿ.16 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್, ವಿರಾಜಪೇಟೆ ತಾಲ್ಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಕ್ರಮ ಕಾನೂರು ವಲಯದ ನಿಟ್ಟೂರು ಕಾರ್ಯಕ್ಷೇತ್ರದ ಕಾವೇರಿ ಅವರ ಕೃಷಿ ತಾಕುವಿನಲ್ಲಿ ನಡೆಯಿತು. ಮಣ್ಣು ವಿಜ್ಞಾನದ ವಿಷಯ ತಜ್ಞರಾದ ಡಾ.ಮೋಹನ್ ಕುಮಾರ್ ಕೆ.ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿ ಮಣ್ಣು ಪರೀಕ್ಷೆ ಮತ್ತು ಮಣ್ಣು ಆರೋಗ್ಯ ಕಾರ್ಡ್, ಸಸ್ಯ ಪೋಷಕಾಂಶಗಳು, ಪೋಷಕಾಂಶ ಅಸಮತೋಲನದ ಪರಿಣಾಮಗಳು, ಮಣ್ಣು ಪರೀಕ್ಷೆಯ ಮಹತ್ವ ಮಣ್ಣು ಮಾದರಿ ಸಂಗ್ರಹಿಸಲು ಗಮನಿಸಬೇಕಾದ ಅಂಶಗಳು, ಮಣ್ಣು ಮಾದರಿ ಸಂಗ್ರಹಣೆ ಪ್ರಕ್ರಿಯೆ ಹೇಗೆ ಮಾಡಬೇಕು ಮತ್ತು ಆಮ್ಲ ಮಣ್ಣು ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕರಾದ ಸುಜೀರ್, ಕೃಷಿ ಮೇಲ್ವಿಚಾರಕರಾದ ವಸಂತ್, ನಿಟ್ಟೂರು ಸೇವಾ ಪ್ರತಿನಿಧಿ ಸರೋಜ, ಬ್ರಹ್ಮಗಿರಿ ಸೇವಾ ಪ್ರತಿನಿಧಿ ಉದಯ್, ಪ್ರಗತಿಪರ ಕೃಷಿಕರು ನಿಟ್ಟೂರು ಒಕ್ಕೂಟದ ಪದಾಧಿಕಾರಿ ಕಾವೇರಿ ಸಂಘದ…

Read More