ಲೇಖಕ: admin

ಮಡಿಕೇರಿ ಡಿ.17 NEWS DESK : ಕೊಡಗು ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ನಗರದ ಖಾಸಾಗಿ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಜರುಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲವು ಸುತ್ತೋಲೆಗಳಿಂದ ಖಾಸಗಿ ಶಾಲೆಗಳಿಗೆ ಆಗುತಿರುವ ಅನಾನುಕೂಲದ ಬಗ್ಗೆ ಚರ್ಚಿಸಲಾಯಿತು. ಹಾಗೂ ಜಿಲ್ಲೆಯ ಶಾಸಕರ ಮುಖಾಂತರ ಖಾಸಗಿ ಶಾಲೆಗಳ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಮೂಲಕ ಬಗೆ ಹರಿಸಿಕೊಳ್ಳಲು ತಿರ್ಮಾನಿಸಲಾಯಿತು. ಖಾಸಗಿ ಶಾಲೆಗಳ ನಿಯಮಾನುಸಾರ, ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರದೊಂದಿಗೆ ರಾಜ್ಯಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿರ್ಮಾನಿಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಿಮ್ಮಯ್ಯ ಕೋಟ್ರಂಗಡ ಅವಿರೋದವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಣಿ ಮೊಹಮ್ಮದ್,  ಪ್ರಧಾನ ಕಾರ್ಯದರ್ಶಿಯಾಗಿ ಲಿಕಿತ್…

Read More

ಮೈಸೂರು ಡಿ.17 NEWS DESK : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಡಿಸೆಂಬರ್‌ 18ರಿಂದ ಮೂರು ದಿನಗಳ ಕಾಲ “ಆಸ್ಪೈರಿಂಗ್‌ ಮೈಸೂರು” ಎಂಬ ಮೆಗಾ ಪ್ರದರ್ಶನ ನಡೆಯಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ಈ ಮೆಗಾ ಪ್ರದರ್ಶನ ಆಯೋಜನೆಗೊಂಡಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ವಿಕಸಿತ ಭಾರತ 2047 ಕುರಿತು ಜಾಗೃತಿ, ನಾವೀನ್ಯತೆ ಹಾಗೂ ಕೊಡುಗೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯಲಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಈ ಬೃಹತ್‌ ಪ್ರದರ್ಶನ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಆಯೋಜಕರಾದ ವನೀಶ ಗುಪ್ತಾ, ಮೈಸೂರಿನ ನಾಗರಿಕರಿಗೆ ಇದೊಂದು ಸಮೃದ್ಧ ಮತ್ತು ಸಂವಾದಾತ್ಮಕ ವೇದಿಕೆಯಾಗಲಿದೆ ಎಂದರು. ವಿಜ್ಞಾನ-ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಆರೋಗ್ಯ, ಬಂದರು, ಗಣಿಗಾರಿಕೆ, ಕರಕುಶಲ, ಜವಳಿ ಕ್ಷೇತ್ರದಲ್ಲಿನ ಪ್ರಗತಿ, ಯೋಜನೆಗಳ ಬಗ್ಗೆ ಸಮಗ್ರ…

Read More

ಬೆಳಗಾವಿ ಡಿ.17 NEWS DESK : ಕೇಂದ್ರ ಸರ್ಕಾರವು ಅಸ್ತಿತ್ವದಲ್ಲಿರುವ ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಕ್ರಮ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ನಾಯಕರ ವಿರುದ್ಧ ‘ದ್ವೇಷ ರಾಜಕೀಯ’ ನಡೆಸುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್  ಬೃಹತ್ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸುವರ್ಣ ಸೌಧದ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.

Read More

ವಿರಾಜಪೇಟೆ ಡಿ.17 NEWS DESK : ಜನಸಾಮಾನ್ಯರು ಹಾಗೂ ರೈತರ ಸಮಸ್ಯೆಗಳನ್ನು ಅರಿತು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟಗಳನ್ನು ರೂಪಿಸಲು ಸಿಪಿಐ(ಎಂ) ಪಕ್ಷ ಮುಂದಾಗಿದೆ ಎಂದು ಪಕ್ಷದ ಕಾರ್ಯದರ್ಶಿ ಹೆಚ್.ಬಿ.ರಮೇಶ್ ತಿಳಿಸಿದರು. ವಿರಾಜಪೇಟೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ಡಿ.21ರಂದು ಹಮ್ಮಿಕೊಂಡಿರುವ ಹೋರಾಟದ ಕುರಿತು ಡಿ.15ರ ವರೆಗೆ ಮನೆ ಮನೆಗೆ ಭೇಟಿ ಮತ್ತು ಸಹಿ ಸಂಗ್ರಹ ಕಾರ್ಯಕ್ರಮ ಮಾಡಲಾಗಿದೆ. ಜನಸಾಮಾನ್ಯರು, ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಮುಂದೆ ಇಡಬೇಕು ಎಂದು ಪಕ್ಷ ತೀರ್ಮಾನಿಸಿದೆ. ಡಿ.21 ರಂದು 50 ಸಾವಿರಕ್ಕೂ ಹೆಚ್ಚು ಜನರು ಸೇರಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಬಹಿರಂಗ ಸಭೆ ಮೂಲಕ ಸರಕಾರಕ್ಕೆ ಬೇಡಿಕೆಗಳ ಪಟ್ಟಿ ಸಲ್ಲಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಕಾಫಿ ಬೆಳೆಯುವ ಕೊಡಗಿನಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಜಿಲ್ಲೆಯ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಕೊಡಗು ಜಿಲ್ಲೆಗೆ ರೈಲು…

Read More

ವಿರಾಜಪೇಟೆ ಡಿ.17 NEWS DESK : ಮೊಗಳ್ಳಿ ಗಣೇಶ್ ಅವರ ಚಿಂತನೆಗಳು ಹಾಗೂ ಬರಹಗಳು ನಮ್ಮನ್ನು ಹೃದಯಕ್ಕೆ ಇಳಿಸುತ್ತವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಅಭಿಪ್ರಾಯಪಟ್ಟರು. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕನ್ನಡ ವಿಭಾಗ, ನುಡಿ ಉತ್ಸವ ಸಮಿತಿ ಕೊಡಗು ಜಿಲ್ಲೆ, ದಸಾಪ ಕೊಡಗು ಜಿಲ್ಲೆ ಸಹಯೋಗದಲ್ಲಿ ನುಡಿ ಸಾಹಿತ್ಯ ಲಹರಿ ಪ್ರಯುಕ್ತ ನಡೆದ ಮೊಗಳ್ಳಿ ಗಣೇಶ್ ಅವರ ಬದುಕು-ಬರಹ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಮೊಗಳ್ಳಿ ಗಣೇಶ್ ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಸಾಹಿತ್ಯ ಹಾಗೂ ಬರಹಗಳು ಲೋಕಾಂತವಾಗಬೇಕು. ಮಾತ್ರವಲ್ಲದೆ ಸಾಹಿತ್ಯದ ದಾಖಲೀಕರಣವನ್ನು ಮಾಡಬೇಕು. ಮನುಷ್ಯನು ತನ್ನನ್ನು ತಾನು ಪ್ರಶ್ನಿಸುತ್ತಲೆ ಬದುಕಬೇಕು. ಕಥೆ, ಕಾದಂಬರಿಗಳು ವಿಶ್ವಾವ್ಯಾಪಿಯಾಗಬೇಕು ಎಂದು ಹೇಳಿದರು. ಕಲಿಕೆ, ಬದುಕು, ಅನುಭವ, ಸುತ್ತ ಮುತ್ತಲಿನ ಪರಿಸರವು ನಮಗೆ ಪ್ರೇರಣೆಯಾಗಿದೆ ಎಂದರು. ಹೊಸ ಚಿಂತನೆಗಳು ಮೂಡಿದಾಗ ಮಾತ್ರ ಬರಹಗಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ. ಅಂತೆಯೇ ಮೊಗಳ್ಳಿ ಗಣೇಶ್ …

Read More

ಕುಶಾಲನಗರ ಡಿ.17 NEWS DESK : ಮುಂಬರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರ ಆಯ್ಕೆಯಾಗಬೇಕಿದೆ ಎಂದು ಪರಿಷತ್ತಿನ ರಾಜ್ಯ ಪ್ರತಿನಿಧಿ ನಭಿ ಕುಷ್ಟಗಿ ಹೇಳಿದರು. ಸಾಹಿತ್ಯಾಸಕ್ತರ ವೇದಿಕೆಯ ವತಿಯಿಂದ ಜಿಲ್ಲಾದ್ಯಂತ ನಡೆಸುತ್ತಿರುವ ಕಸಾಪಕ್ಕೆ ಡಾ.ಸಿ.ಸೋಮಶೇಖರ್ ಸೂಕ್ತ ಎಂಬ ಆಂದೋಲನದಲ್ಲಿ ಡಾ.ಸಿ.ಸೋಮಶೇಖರ್ ಅವರ ವ್ಯಕ್ತಿ ಪರಿಚಯದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಹಿತ್ಯಾಸಕ್ತರಿಂದ ಡಾ.ಸಿ.ಸೋಮಶೇಖರ್ ಅವರ ಪರವಾದ ಜನಾಭಿಪ್ರಾಯ ಬಹಳ ಉತ್ತಮವಾಗಿ ರೂಪುಗೊಳ್ಳುತ್ತಿದೆ. ಆದ್ದರಿಂದ ಕೊಡಗು ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಕಸಾಪ ಸದಸ್ಯರು ತಮ್ಮ ಮುಂದಿನ ಆಯ್ಕೆಯಾಗಿ ಡಾ.ಸಿ.ಸೋಮಶೇಖರ್ ಅವರನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಬಗ್ಗೆ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸು ಈ ಸಂದರ್ಭ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರ ವ್ಯಕ್ತಿ ಪರಿಚಯದ ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ…

Read More

ಮಡಿಕೇರಿ ಡಿ.17 NEWS DESK : ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆ ಕೊಡಗಿಗೆ ಆಗಮಿಸಿದ್ದು, ರಥಯಾತ್ರೆ ಸಾಗುವ ಹಾದಿ ಮತ್ತು ಕಾರ್ಯಕ್ರಮಗಳ ವಿವರ. ಡಿ.17 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಮಠಾಧೀಶರಿಂದ ಜಾಗೃತಿ ಸಂದೇಶ. ನಂತರ ಪೊನ್ನಂಪೇಟೆಯಿಂದ ಹೊರಟು ಗೋಣಿಕೊಪ್ಫ ಬಸ್ಸ್ ನಿಲ್ದಾಣದಲ್ಲಿ 11 ಗಂಟೆಗೆ ಡ್ರಗ್ಸ್ ವಿರುದ್ಧ ಜನಜಾಗೃತಿ ಭಾಷಣ ನಡೆಯಲಿದೆ. 11.30 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಯುವ ಸಮುದಾಯ ವಿನಾಶಕಾರಿ ಡ್ರಗ್ಸ್ ನಿಂದ ದೂರ ಉಳಿಯುವಂತೆ ಯುವಜಾಗೃತಿ ಭಾಷಣ ಮಾಡಲಿದ್ದಾರೆ. 12.30 ಗಂಟೆಗೆ ಗೋಣಿಕೊಪ್ಪದಿಂದ ಹೊರಡುವ ರಥವು 1.30 ಗಂಟೆಗೆ ವಿರಾಜಪೇಟೆಯ ಸೈಂಟ್ ಆನ್ಸ್ ಕಾಲೇಜಿನಲ್ಲಿ ವಿನಾಶಕಾರಿ ಡ್ರಗ್ಸ್ ಬಗ್ಗೆ ಯುವ ಜಾಗೃತಿ ಮೂಡಿಲಾಗವುದು. ನಂತರ  ಮಧ್ಯಾಹ್ನ 2.30 ಗಂಟೆಗೆ ವಿರಾಜಪೇಟೆಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮಾರಕ ಡ್ರಗ್ಸ್ ವಿರುದ್ಧ ವಿದ್ಯಾರ್ಥಿ ಜಾಗೃತಿ ಭಾಷಣ ನಡೆಯಲಿದೆ. 3.30 ಗಂಟೆಗೆ ಅಮ್ಮತ್ತಿಯ ಸಿದ್ಧಾಪುರ ರಸ್ತೆ ಜಂಕ್ಷನ್ ನಲ್ಲಿ ಡ್ರಗ್ಸ್ ಬಳಕೆಯ ದುಷ್ಫರಿಣಾಮಗಳ…

Read More

ವಾಮಂಜೂರು ಡಿ.17 NEWS DESK : ವಾಮಂಜೂರಿನ ಸಂತೋಷನಗರ ಮೈದಾನದಲ್ಲಿ ಎಸ್‌.ಜೆ.ಸಿ. ಫ್ರೆಂಡ್ಸ್ ವಾಮಂಜೂರು, ರೊ ಇಂಟರ್‌ನ್ಯಾಷನಲ್ ಹಾಗೂ ಗಜಾನನ ಕ್ರಿಕೆಟರ್ಸ್ (ಪ್ರಜ್ವಲ್ ಫಿಲ್ಮ್ಸ್) ಪ್ರಾಯೋಜಕತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಹಂತದ ಎರಡು ದಿನಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಪಂದ್ಯದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಿಂದ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಕ್ರಿಕೆಟ್ ತಂಡವು ಕುಡ್ಲ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಂ ಪಾಲಡ್ಕಾ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪಂದ್ಯಗಳನ್ನು ನ್ಯಾಯಸಮ್ಮತವಾಗಿ ನಡೆಸುವಲ್ಲಿ ಅಂಪೈರ್‌ಗಳಾಗಿ ರಾಜೇಶ್ ಪಡಿಲ್, ಸೈಫ್ ಬಜಾಲ್, ರಂಜೇಶ್ ಉಚಿಲ್, ಆರಿಫ್ ಜೋಕಟ್ಟೆ ಹಾಗೂ ಅಶ್ವತ್ ಕುಂಪಲ ಸಮರ್ಥವಾಗಿ ನಿರ್ವಹಿಸಿದರು.  ಪಂದ್ಯದ ಪ್ರತಿಯೊಂದು ಹಂತವನ್ನೂ ರೋಚಕವಾಗಿಸುವಂತೆ ರಾಜೇಶ್ ಪೆರೇರಾ ಹಾಗೂ ಸಯ್ಯಾದ್ ಗುರುಕಂಬಳ ಅವರು ಮನಮೋಹಕ ಹಾಗೂ ವಿವರವಾದ ಕಾಮೆಂಟ್ರಿ ನೀಡಿದರು. ಆಟಗಾರರು, ಆಯೋಜಕರು ಹಾಗೂ ಪ್ರೇಕ್ಷಕರ ಉತ್ತಮ ಸಹಕಾರದಿಂದ ಕ್ರಿಕೆಟ್ ಪಂದ್ಯಾವಳಿಯು…

Read More

ಮಡಿಕೇರಿ ಡಿ.17 NEWS DESK : ರಾಯಚೂರಿನಲ್ಲಿ ಡಿ.20 ಹಾಗೂ 21 ರಂದು   ಖ್ಯಾತ ಸಾಹಿತಿಗಳಾದ ಡಾ. ಜಯದೇವಿ ಗಾಯಕವಾಡ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಸಾಮಾಜಿಕ ಕಾರ್ಯಕರ್ತೆ ಡಾ.ಕಾವೇರಿ ಹೆಚ್.ಎಂ ಅವರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆಂದು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರ್ಜುನ್ ಮೌರ್ಯ ತಿಳಿಸಿದ್ದಾರೆ.  “ಸಂವಿಧಾನ ಭಾರತ” ಧ್ಯೇಯವಾಕ್ಯದಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಕೊಡಗಿನ ಕವಯಿತ್ರಿ ರಮ್ಯ ಮೂರ್ನಾಡು ಅವರು ಮಹಿಳಾ ಕಾವ್ಯಯಾನಕ್ಕೆ, ಮಾರುತಿ ದಾಸಣ್ಣವರ್ ಪುಸ್ತಕ ಪ್ರಶಸ್ತಿಗೆ, ಸಾಧಕ ಪ್ರಶಸ್ತಿಗೆ ಬರಹಗಾರ್ತಿ ಡಾ.ಮಹಾಲಕ್ಷ್ಮಿ ಟಿ.ಎಸ್, ಸಮ್ಮೇಳನ ಲಾಂಛನ ರಚನೆಗಾಗಿ ಧನುಷ್ ಎ. ಇವರುಗಳನ್ನು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ಕೊಡಗಿನ‌ವರನ್ನು ಪರಿಗಣಿಸದ್ದಕ್ಕಾಗಿ ಆಯ್ಕೆ ಸಮಿತಿಯ ಅಧ್ಯಕ್ಷರೂ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಹಾಗೂ ಎಲ್ಲಾ ಆಯ್ಕೆ ಸಮಿತಿಯ ಪದಾಧಿಕಾರಿಗಳಿಗೆ ಕೊಡಗು…

Read More

ವಿರಾಜಪೇಟೆ ಡಿ.17 NEWS DESK : ಬೇಟೋಳಿ ಗ್ರಾಮದ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಜೆಡಿಎಸ್ ಕಾರ್ಯಕರ್ತರು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಧ್ಯಕ್ಷ, ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ಆಚರಿಸಿದರು. ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಪಿ.ಎ.ಮಂಜುನಾಥ್ ಅವರ ನೇತೃತ್ವದಲ್ಲಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸಿಹಿ ಹಂಚಿ, ಮಧ್ಯಾಹ್ನದ ಬೋಜನ ನೀಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವೃದ್ಧಾಶ್ರಮದ ಹಿರಿಯರೊಂದಿಗೆ ಕೆಲಕಾಲ ಕಳೆದ ಜೆಡಿಎಸ್ ಪಕ್ಷದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.   ಈ ಸಂದರ್ಭ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್, ದೇಶದ ಅಭಿವೃದ್ಧಿ ಜೊತೆಗೆ ಹೆಚ್ಚಿನ ಆದ್ಯತೆಯ ಮೇಲೆ ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರಿಗೆ ದೇವರು ಹೆಚ್ಚಿನ ಆರೋಗ್ಯ ಕರುಣಿಸಲಿ ಎಂದರಲ್ಲದೆ, ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ನೆನಪಿನಲ್ಲಿ ಉಳಿಯುವಂತಹ ಲಾಟರಿ ನಿಷೇಧ, ಸಾರಾಯಿ ನಿಷೇಧ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ…

Read More