ಸೋಮವಾರಪೇಟೆ ಡಿ.12 NEWS DESK : ಮಕ್ಕಳಿಗೆ ವಿಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕಲಿಕೆ ಬಹಳ ಮುಖ್ಯವಾಗಿದ್ದು, ಶಿಕ್ಷಕರು ವಿಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಮೂಲಕ ಅವರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಬೋಧನೆಯಲ್ಲಿ ಪ್ರಾಯೋಗಿಕ ಸಲಕರಣೆ ಬಳಸುವ ಮೂಲಕ ಅವರಲ್ಲಿ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನಆಸಕ್ತಿ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಸಲಹೆ ನೀಡಿದರು. ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನಿಗಳ ಆವಿಷ್ಕಾರದ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ತಮ್ಮನ್ನು ಸಂಶೋಧನಾ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ…
ಲೇಖಕ: admin
ಮಡಿಕೇರಿ ಡಿ.12 NEWS DESK : ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಬಂದೂಕಿನಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಂದೂಕಿಗೆ ಸಂಬಂಧಿಸಿದ ಕಾನೂನು ಬದಲಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಹ ನಡೆಯುವ ಸಂದರ್ಭ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳ ಮೇಲೆ ಕೂಡ ಬಂದೂಕಿನಿಂದ ದಾಳಿಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಉತ್ತಮ ನಾಗರೀಕ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಪ್ರಸ್ತುತ ಇರುವ ಬಂದೂಕು ಕಾನೂನು ಅಪರಾಧ ತಡೆಗಟ್ಟಲು ವಿಫಲವಾಗಿದ್ದು, ಜನಸಾಮಾನ್ಯರ ರಕ್ಷಣೆ ಅಸಾಧ್ಯವಾಗಿದೆ. ಕೊಡಗಿನ ಸಂಸ್ಕೃತಿಗೆ ವಿರುದ್ಧವಾದ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಬೇಕು. ನಾಗರೀಕರ ರಕ್ಷಣೆಗಾಗಿ ಬಂದೂಕು ಕಾನೂನು ಬದಲಾವಣೆಗೆ ಒತ್ತಡ ಹೇರಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.
ನಾಪೋಕ್ಲು ಡಿ.12 NEWS DESK : ಬಲ್ಲಮಾವಟಿ ಶ್ರೀ ಭಗವತಿ ದೇವಾಲಯದ ಗರ್ಭಗುಡಿ ಹಾಗೂ ಮುಖ ಮಂಟಪ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶಡಾಧಾರ ಪೂಜೆ ಶಡಾಧಾರ ಪೂಜಾ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಜರುಗಿತು. ದೇವಾಲಯದ ಹೃದಯ ಭಾಗದ ಗರ್ಭಗುಡಿಯ ನಿರ್ಮಾಣಕ್ಕೆ ನೆಲ ಮಟ್ಟದಿಂದ 7.25 ಅಡಿ ಭೂಮಿಯ ಒಳಗಿನಿಂದ ಅಡಿಪಾಯ ಹಾಕಿದ್ದು, ಗರ್ಭಗುಡಿ ಹಾಗೂ ಮುಖ ಮಂಟಪ ಅಡಿಪಾಯಕ್ಕೆ ಉಪ್ಪು ಮಿಶ್ರಿತ ಮರಳು ತುಂಬಿಸುವ ಕಾರ್ಯವನ್ನು ಊರಿನವರು ನೆರವೇರಿಸಿದರು. ಪೂಜೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಕೋಟೆರ ಸುಬ್ಬಯ್ಯ, ನೆರವಂಡ ಭೀಮಯ್ಯ, ಅಧ್ಯಕ್ಷರು ಕೋಟೆರ ಸುಬ್ಬಯ್ಯ, ಉಪಾಧ್ಯಕ್ಷರಾದ ಬೈರುಡ ಮಾಚಯ್ಯ, ಕಾರ್ಯಾಧ್ಯಕ್ಷರು ಮತ್ತು ಖಜಾಂಚಿ ಬೊಟ್ಟೋಳಂಡ ತಿಮ್ಮಯ್ಯ, ಚಂಗೇಟಿರ ಅಪ್ಪಯ್ಯ, ಕಾರ್ಯದರ್ಶಿ ಕೋಟೆರ ಧನುಷ್ ಬೋಪಣ್ಣ, ಮಾಜಿ ಕಾರ್ಯದರ್ಶಿ ಅಪ್ಪಚೆಟ್ಟೊಳಂಡ ರಾಜಭೀಮಯ್ಯ, ತಕ್ಕ ಮುಖ್ಯಸ್ಥರು, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ತಂತ್ರಿ ದಿವಾಕರ್ ಭಟ್, ಮುಖ್ಯ ಅರ್ಚಕ…
ನಾಪೋಕ್ಲು ಡಿ.12 NEWS DESK : ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಹಾಗೂ ಹದಿಹರೆಯದವರ ಸಮಸ್ಯೆಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಸೂಪರ್ವೈಸರ್ ಸುನಿತಾ ಮುತ್ತಣ್ಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ಕಾಯಿಲೆ ಹರಡುವ ಮತ್ತು ತಡೆಗಟ್ಟುವ ವಿಧಾನ, ಚಿಕಿತ್ಸೆ, ಸುರಕ್ಷತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಆರೋಗ್ಯಕರ ಜೀವನ ನಡೆಸುವ ಬಗ್ಗೆ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಲೈಡ್ ಶೋ ಮುಖಾಂತರ ಅರಿವು ಮೂಡಿಸಿದರು. ಏಡ್ಸ್ಅನ್ನು ಜಾಗೃತಿಯಿಂದ ಮತ್ತು ಜ್ಞಾನದಿಂದ ನಿಯಂತ್ರಿಸಬಹುದು. ಯುವ ಪೀಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು. ಹದಿಹರೆಯದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಬರುತ್ತಿದ್ದು ಯಾವುದೇ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಕುಗ್ಗದೆ ತಮ್ಮ ಆರೋಗ್ಯದ ಬಗ್ಗೆ ತಿಳಿದುಕೊಂಡರೆ ಅವರು ಸುರಕ್ಷಿತ ಮತ್ತು ಬಲಿಷ್ಠರಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿ ಆರೋಗ್ಯಕರ ಸಂಬಂಧಗಳ ಬಗ್ಗೆ ಅರಿವು…
ಮಡಿಕೇರಿ ಡಿ.12 NEWS DESK : ಕೊಡಗು ಜಿಲ್ಲೆಯ ಪ್ರಸಿದ್ಧ ಕೇಂದ್ರವಾದ ಮೇಕೇರಿ ಮಸೀದಿಯ ಮಖಾಂ ಉರೂಸ್ ಸಮಾರಂಭವು 2026 ಏ.24 ರಿಂದ 28ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮೇಕೇರಿಯ ಕಿಜರ್ ಜುಮ್ಮಾ ಮಸೀದಿ ಮತ್ತು ಮನವಿರುಲ್ ಇಸ್ಲಾಂ ಅರಬ್ಬಿ ಮದರಸದ ಪ್ರಧಾನ ಕಾರ್ಯದರ್ಶಿ ಎಂ.ಎಲ್.ರಹೀಮ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಮಡಿಕೇರಿ ಡಿ.12 NEWS DESK : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನದ ಸಮಾರೋಪ ಸಮಾರಂಭವು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎಲ್.ಶ್ರೀನಿವಾಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ತಂಬಾಕು ಮುಕ್ತ ಯುವ ಅಭಿಯಾನ ವಿಷಯದ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇ.ಡಾ.ರಾಘವ್ ಬಿ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಎಫ್ಎಂಸಿ ಕಾಲೇಜು ಎನ್ಎಸ್ಎಸ್ ಘಟಕಾಧಿಕಾರಿ ಡಾ.ಶೈಲಾ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಪುನೀತ ರಾಣಿ ಎಸ್. ಹಾಗೂ ಎನ್.ಎಸ್.ಎಸ್ ಅಧಿಕಾರಿ ಅಲೋಕ್ ಬಿಜೈ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಿಬ್ಬಂದಿಗಳು ಹಾಗೂ ಎಫ್.ಎಂ.ಸಿ. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತಾಲ್ಲೂಕು ಹಿರಿಯ…
ಮಡಿಕೇರಿ ಡಿ.12 NEWS DESK : ನಗರದ ಸ್ಪೈಸಸ್ ಅಂಗಡಿಯೊಂದರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನ ಮಾಡುವ ವಿಡಿಯೋವನ್ನು ಚಿತ್ರೀಕರಿಸಿ ವೈರಲ್ ಮಾಡಿರುವ ಪ್ರಕರಣ ವ್ಯಾಪಾರಿ ಕ್ಷೇತ್ರದ ಗೌರವಕ್ಕೆ ದಕ್ಕೆ ಉಂಟು ಮಾಡಿದೆ. ಈ ರೀತಿಯ ಪ್ರಕರಣಗಳು ಮುಂದೆ ನಡೆಯದಂತೆ ವರ್ತಕ ಸಮುದಾಯ ಎಚ್ಚರದಿಂದಿರಬೇಕು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕ ಎಂ.ಧನಂಜಯ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಧಾನಮಂತ್ರಿಗಳನ್ನು ಅವಹೇಳನ ಮಾಡಿರುವ ಪ್ರಕರಣ ರಾಜ್ಯವ್ಯಾಪಿ ಟೀಕೆಗೆ ಗುರಿಯಾಗಿದ್ದು, ವರ್ತಕ ಸಮುದಾಯ ತಲೆ ತಗ್ಗಿಸುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ಞಾವಂತರ ಜಿಲ್ಲೆ ಕೊಡಗಿನ ವರ್ತಕರು ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಕಾನೂನಿಗೆ ವಿರುದ್ಧವಾದ ಈ ರೀತಿಯ ಚಟುವಟಿಕೆಗಳಿಂದ ವ್ಯಾಪಾರೋದ್ಯಮಕ್ಕೂ ಹೊಡೆತ ಬೀಳಲಿದೆ. ನಗರದ ವರ್ತಕರು ಹಾಗೂ ಅಂಗಡಿ ಮಳಿಗೆಗಳ ಮಾಲೀಕರು ತಮ್ಮ ಬಳಿ ಕಾರ್ಯನಿರ್ವಹಿಸುತ್ತಿರುವವರ ಬಗ್ಗೆ ಗಮನ ಹರಿಸಬೇಕು. ಈ ರೀತಿಯ ನಿಯಮಬಾಹಿರ ವರ್ತನೆಗಳಿಗೆ…
ವಿರಾಜಪೇಟೆ ಡಿ.12 NEWS DESK : ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ನಡೆದ ಕಾವೇರಿ ಕಲೋತ್ಸವದ ಕ್ರೀಡಾ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕಿಯರು, ಥ್ರೋಬಾಲ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ತಂಡದಲ್ಲಿ ಸ್ಪರ್ಧಿಸಿದ ಆಟಗಾರ್ತಿಯರು 10ನೇ ತರಗತಿಯ ಮುಲ್ಲೆಂಗಡ ಪೂರ್ವಿಕ ಪೂವಮ್ಮ, ನೀಲಮಾಡ್, ತನ್ಯ ರೈ ಬಿ.ಎಸ್ ,ಹನಾಫಲಕ್ ಎಸ್.ಎಂ.ಕುಟ್ಟನ ಯಶ್ಮಿತ, ಪಳೆಯಂಡ ಕಾಜಲ್ ಪಿ.ಎಸ್, 9ನೇ ತರಗತಿಯ ಚೇಂದಿರ ದರಾನಿಯತ ಸ್ಲಿನ್ಟಿ ಜೆ, ನೆಲ್ಲಚಂಡ ಪೊನ್ನಮ್ಮ ಎನ್, ಗುಡ್ಡಂಡ ಮಾನ್ವಿಮುತ್ತಮ್ಮ, ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ ಹಾಗೂ 8ನೇ ತರಗತಿಯ ನಾಯಕಂಡ ಮಾನ್ಯ ಎನ್.ಬಿ,ಹೋಲಿಕ ಪಿ.ಇವರಿಗೆ ಶಾಲಾ ದೈಹಿಕ ಶಿಕ್ಷಕಿಯರುಗಳಾದ ಮೋನಿಕಾ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿರುತ್ತಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಬೋಧಕ-ಬೋದಕೇತರ ವೃಂದದವರು, ವಿದ್ಯಾರ್ಥಿಗಳ ಪೋಕಷರು ಅಭಿನಂದಿಸಿದ್ದಾರೆ.
ನಾಪೋಕ್ಲು ಡಿ.12 NEWS DESK : ರಾಜ್ಯ ಮಟ್ಟದ ರಿಲೆಯಲ್ಲಿ ಡಿ.ಕೆ.ಭವಿಷ್ಯ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಲಕ್ಕೋದಲ್ಲಿ ನಡೆಯಲಿರುವ 69ನೇ ರಾಷ್ಟ್ರ ಮಟ್ಟದ 4*400 ರಿಲೆ ಆಯ್ಕೆಯಾಗಿದ್ದಾಳೆ. ಡಿ.ಕೆ.ಭವಿಷ್ಯ ದೇರಾಜೆ ಕಿರಣ್ ಹಾಗೂ ಗೀತಾ ದಂಪತಿಗಳ ಪುತ್ರಿ. ವರದಿ : ದುಗ್ಗಳ ಸದಾನಂದ.
ಮಡಿಕೇರಿ, ಡಿ.12 NEWS DESK : ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ, ಡಿ.9 ರಂದು ಉಡುಪಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ, ವಿಜೇತರಾದ ಕೊಡಗು ಜಿಲ್ಲೆಯ ಎಂಟು ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅರ್ವತ್ತೊಕ್ಲಿನ ವಿದ್ಯಾನಿಕೇತನ ಪ.ಪೂ. ಕಾಲೇಜು ಪ್ರಥಮ ಪಿಯುಸಿಯ ಎಂ.ಹರಿಕೃಷ್ಣನ್ ಪ್ರಥಮ ಸ್ಥಾನ ಗಳಿಸಿದ್ದಾನೆ. ಈತ ಚಿಣ್ಣಪ್ಪ- ಶೋಭಾ ದಂಪತಿಯ ಪುತ್ರ. ಇದೇ ಕಾಲೇಜಿನ ಗುಡ್ಡಾಂಡ ಕಾರ್ಯಪ್ಪ ದ್ವಿತೀಯ ಪಿ.ಯು.ಸಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಕಾರ್ಯಪ್ಪ, ಮನೋಹರನ್ – ಶ್ರೀದೇವಿ ದಂಪತಿಯ ಪುತ್ರ. ಚರ್ಚಾ ಸ್ಪರ್ಧೆ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಿಐಟಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪುಗ್ಗೇರ ಕ್ಷಮಾ ಕಾವೇರಮ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಕಿಶನ್ ಪೂವಣ್ಣ – ದಿವ್ಯ ದಂಪತಿಯ ಪುತ್ರಿ. ಜನಪದ ನೃತ್ಯ ವಿಭಾಗದಲ್ಲಿ ಮಡಿಕೇರಿ…






