ಲೇಖಕ: admin

ಮಡಿಕೇರಿ ಸೆ.2 NEWS DESK : ಕೊಡಗು ಪತ್ರಕರ್ತರ ಸಂಘ (ರಿ), ಅಖಿಲ ಕರ್ನಾಟಕ ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘ ಕೊಡಗು ಘಟಕದ ಸಂಯುಕ್ತ ಆಶ್ರಯದಲ್ಲಿ ಸೆ.4 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಯೋಜಿಸಲಾಗಿದೆ. ಗುರುವಾರ ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾದ ಎಸ್.ಎ. ಮುರಳೀಧರ ಅವರು ವಹಿಸಲಿದ್ದು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಪತ್ರಿಕಾ ಭವನ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಎಂ ಪಿ ಕೇಶವ ಕಾಮತ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ ಚಿದ್ವಿಲಾಸ್, ಮಡಿಕೇರಿಯ ಹಿರಿಯ ಓದುಗರಾದ ಪಿ.ಎ.ನಾಣಯ್ಯ ಅಖಿಲ ಕರ್ನಾಟಕ ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘ ಕೊಡಗು ಘಟಕದ  ಅಧ್ಯಕ್ಷ ಟಿ.ಜಿ.ಸತೀಶ್ ಪಾಲ್ಗೊಲಿದ್ದಾರೆ ಎಂದು ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ತಿಳಿಸಿದ್ದಾರೆ.

Read More

ಸೋಮವಾರಪೇಟೆ ಸೆ.2 NEWS DESK : ಇನ್ನರ್‍ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರದ ಮಹತ್ವದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಇನ್ನರ್‍ವೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರೋಗ್ಯವಂತ ಮಗು ದೇಶದ ಸಂಪತ್ತು. ಗರ್ಭಿಣಿಯರು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಬೇಕು. ಒತ್ತಡ ಮುಕ್ತವಾಗಿ ಜೀವನ ಶೈಲಿ ಬೆಳೆಸಿಕೊಳ್ಳುವ ಮೂಲಕ ಆರೋಗ್ಯವಂತ ಮಗು ಜನನಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ಬಳಸಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಾಂಶ ಲಡ್ಡು ಮತ್ತು ಪೌಷ್ಠಿಕ ರೊಟ್ಟಿಯಂತಹ ಕಡಿಮೆ ವೆಚ್ಚದ ಪಾಕವಿಧಾನಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಮಕ್ಕಳು, ಪೋಷಕರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಭಾಗವಹಿಸಿದ್ದರು. ಮಕ್ಕಳಿಗೆ ಬೆಚ್ಚನೆಯ…

Read More

ಸುಂಟಿಕೊಪ್ಪ ಸೆ.2 NEWS DESK : ವಿಸ್ಮಯ ಅವರು ಭಾರತೀಯ ಅರೆಸೇನಾಪಡೆಗೆ ನೇಮಕಗೊಂಡಿದ್ದು, ಅವರನ್ನು ಪೊಲೀಸ್ ಮುಖ್ಯ ಪೇದೆ ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. 7ನೇ ಹೊಸಕೋಟೆಯ ತೊಂಡೂರ್ ನಿವಾಸಿ ದಾಸು ಹಾಗೂ ಬಿಂದು ದಂಪತಿಯ ಪುತ್ರಿ ವಿಸ್ಮಯ ಅವರು ಭಾರತೀಯ ಸೇನೆಗೆ ಆಯ್ಕೆಯಾದ ಹಿನ್ನಲೆ ಗ್ರಾಮಸ್ಥರಾದ ಅಬ್ದುಲ್ ರಜಾಕ್, ರಫೀಕ್, ಉಷಾ ಶ್ರೀಧರ್, ಉಸ್ಮನ್ ಹಾಗೂ ಸುಂಟಿಕೊಪ್ಪ ಠಾಣೆಯ ಪೊಲೀಸ್ ಸಿಬ್ಬಂದಿ ಆಶಾ ಅವರು ಸನ್ಮಾನಿಸಿ, ಗೌರವಿಸಿದರು.

Read More

ನಾಪೋಕ್ಲು ಸೆ.2 NEWS DESK : ಪೇರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಪೇರೂರು ಗ್ರಾಮದ ನಿವಾಸಿ ಬೊಟ್ಟೋಳಂಡ ರವಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ, ಕಾಫಿ, ತೆಂಗು, ಅಡಿಕೆ ಹಣ್ಣಿನ ಗಿಡಗಳನ್ನು ತಿಂದು ಬಾರಿ ನಷ್ಟ ಮಾಡಿವೆ. ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ಪದೇಪದೇ ಕಾಡಾನೆಗಳ ಹಿಂಡು ದಾಳಿ ನಡೆಸುತ್ತಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಕಾಡಾನೆಗಳ ದಾಳಿಯಿಂದ ನಷ್ಟಕ್ಕೊಳಗಾದವರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಪರಿಹಾರ ಇದುವರೆಗೆ ಲಭಿಸಿರುವುದಿಲ್ಲ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡಾನೆಗಳ ನಿಯಂತ್ರಿಸುವಂತೆ ಬೊಟ್ಟೋಳಂಡ ರವಿ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಸೆ.2 NEWS DESK : ಗೌರಿಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಆ.27 ರಂದು ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವದ ಶೋಭ ಯಾತ್ರೆಯು ಅತ್ಯಂತ ಸಂಭ್ರಮದಿಂದ ನಡೆಯಿತು. ಕಕ್ಕುಂದ ಕಾಡಿನ ವೆಂಕಟರಮಣ ದೇವಾಲಯದ ಗಣಪತಿ ಸೇವಾ ವತಿಯಿಂದ 20ನೇ ವರ್ಷದ ಅದ್ದೂರಿ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಮಹಾ ಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸುಳ್ಯದ ನಾಸಿಕ್ ಬ್ಯಾಂಡ್ ಕಲಾತಂಡದೊಂದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪ ಸಾಗಿತು. ಈ ಸಂದರ್ಭ ಸಂತೆ ಮೈದಾನದಲ್ಲಿ ಅನ್ನದಾನ ನಡೆಯಿತು. ಸೇವಾ ಸಮಿತಿ ಅಧ್ಯಕ್ಷ ತಂಗ, ಕಾರ್ಯದರ್ಶಿ ಮಹೇಶ್, ಖಜಾಂಚಿ ಸೂರ್ಯ ಕುಮಾರ್ ಹಾಗೂ ಸಮಿತಿ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು. ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 20ನೇ ವರ್ಷದ ಗೌರಿ ಗಣೇಶ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ಓಂಕಾರ್ ರವಿ ಬಳಗದಿಂದ ಸಂಗೀತ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಜೆ ಪಂಚಮುಖಿ ಗಣಪತಿಯ ಅತ್ಯಾಕರ್ಷಕ ಪ್ರತಿರೂಪ ದೊಂದಿಗೆ…

Read More

ಸಾರ್ವಜನಿಕ ವಲಯದ ಪಂಜಾಬ್-ಸಿಂಧ್ ಬ್ಯಾಂಕ್ ಲೋಕಲ್ ಬ್ಯಾಂಕ್ ಅಧಿಕಾರಿಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳೆಷ್ಟು : : ಒಟ್ಟು 750 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 65 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :: ಸೆಪ್ಟೆಂಬರ್ 4 ರೊಳಗೆ ಅರ್ಜಿ ಸಲ್ಲಿಸ ಬಹುದಾಗಿದೆ.(ಇಂದೆ ನೊಂದಾಯಿಸಿಕೊಳ್ಳಿ) ಗಮನಿಸಿ: ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿದವರಿಗೆ ಮಾತ್ರ ಈ ಉದ್ಯೋಗ ನೀಡಲಾಗುತ್ತದೆ. ವಿದ್ಯಾರ್ಹತೆಗಳೇನು…? :: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲೆ, ವಿಜ್ಞಾನ,ವಾಣಿಜ್ಯ, ಎಂಜನೀಯರಿಂಗ್, ಅಥವಾ ಯಾವುದೇ ವಿಭಾಗದಲ್ಲಿ ಭಾರತ ಸರಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನಿಗದಿತ ಪದವಿ ಹೊಂದಿರುವುದು ಕಡ್ಡಾಯ. ಅವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೆಲಸದ ಅನುಭವ :: ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ನಲ್ಲಿ ಅಧಿಕಾರಿ ವರ್ಗದಲ್ಲಿ 18 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕೆಲಸದ ಅನುಭವ. ಅದರೆ ಓಃಈಅಗಳು, ಸಹಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ಸಣ್ಣ ಹಣಕಾಸು…

Read More

ಮಡಿಕೇರಿ ಸೆ.2 NEWS DESK :  ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ 21 ದಿನಗಳ ಕಾಲ ಬಾಳೆಲೆಯಲ್ಲಿ ವಾಸ್ತವ್ಯ ಹೂಡಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಬೆಳೆಗಾರರಿಗೆ  “ಜೇನು ಕೃಷಿ ಕಾರ್ಯಾಗಾರ” ನಡೆಯಿತು.  ಬಾಳೆಲೆ ಪಂಚಾಯಿತಿಯ ಆಡಳಿತ ಮಂಡಳಿಯ ಸಭಾ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಕಾಫಿ ರೈತರಿಗೆ ಜೇನು ಸಾಕಾಣಿಕೆಯ ಮಹತ್ವವನ್ನು ತಿಳಿಸುವುದರ ಜೊತೆಗೆ, ಕಾಫಿ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಿಸುವ ಮೂಲಕ ಉತ್ಪಾದನೆ ವೃದ್ಧಿ ಹಾಗೂ ಸಣ್ಣ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು.  ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಆರ್.ಎನ್.ಕೆಂಚರೆಡ್ಡಿ ಭಾಗವಹಿಸಿ, ವೈಜ್ಞಾನಿಕ ಜೇನು ಸಾಕಾಣಿಕೆ ತಂತ್ರಜ್ಞಾನ ಕುರಿತು  ಅನುಭವ ಹಂಚಿಕೊಂಡರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಹತ್ತಿರ ಸಂಪರ್ಕವನ್ನು ಒದಗಿಸಿ, ಗ್ರಾಮಾಭಿವೃದ್ಧಿಗೆ ಕೈಜೋಡಿಸಲು ಪ್ರೇರೇಪಿಸುತ್ತದೆ ಎಂದರು. ಕಾರ್ಯಾಗಾರದಿಂದ ಕಾಫಿ ಬೆಳೆಗಾರರು ಮತ್ತು ಸಣ್ಣ ರೈತರು  ಲಾಭದಾಯವಾಗಿದ್ದು, ಜೇನು ಸಾಕಾಣಿಕೆಯನ್ನು ಪೂರಕ ಜೀವನೋಪಾಯವಾಗಿ ಅಳವಡಿಸಿಕೊಳ್ಳುವ ಮೂಲಕ ಆದಾಯ…

Read More

ಮಡಿಕೇರಿ ಸೆ.2 NEWS DESK : ಸಕಲೇಶಪುರದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ಪ್ರಥಮ ಸ್ಥಾನ ಗಳಿಸಿದೆ. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಾದ ಅಭಿರಾಮ್ ಆರ್ಯ, ಮೊನಾಲಿ, ಸಾನ್ವಿಕ, ದಿಶಾ,  ಆಧ್ಯಾಶ್ರೀ, ನಿಶ್ಮಿತಾ, ಲೀಶ, ಜೈಷ್ಣವ್,  ವರ್ಷ, ಯಾನ ಶೆಟ್ಟಿ, ಪ್ರೇಕ್ಷ, ಶಿವ ಕುಮಾರ್, ಕೀರ್ತನ್, ತೇಜಸ್, ತಶ್ಮಿತ, ಭಾವನಾ ರೈ, ತ್ರಿಷ್ಯ, ಶ್ರವಣ್, ಅಶ್ವಧಿ, ಪ್ರಜ್ಞಾ, ಪ್ರೀತಮ್ ಹಾಗೂ ಅಮೃತ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದರು.   ಸಕಲೇಶಪುರದ ಶ್ರೀ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಹಾಗೂ ರೀದಮ್ ಕೀಪಜ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು.

Read More

ಮಡಿಕೇರಿ ಸೆ.2 NEWS DESK : ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢ ವಿಭಾಗದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ಬೊಳ್ಳೆಪಂಡ ದೀಪ್ತಿ ತಂಗಮ್ಮ, ಮೂಕಂಡ ಕಾವೇರಮ್ಮ ಮತ್ತು ಹನಾ ಫಲಕ್ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಮೋನಿಕ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಸ್.ಸುದೇಶ್, ಕಾರ್ಯದರ್ಶಿ ಪಿ.ಎನ್.ವಿನೋದ್, ಮುಖ್ಯ ಶಿಕ್ಷಕಿಯಾದ ಪಿ.ಯು.ಪಾರ್ವತಿ , ಸಂಯೋಜಿಕಿ ಅಮೃತ ಅರ್ಜುನ, ಬೋದಕ ಬೋದಕೇತರ ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

Read More

ಭಾಗಮಂಡಲ ಸೆ.2 NEWS DESK : ಕೆವಿಜಿ ಐಟಿಐ ಭಾಗಮಂಡಲದಲ್ಲಿ 2025-27 ನೇ ಸಾಲಿಗೆ ಪ್ರವೇಶ ಪಡೆದ ನೂತನ ತರಬೇತಿದಾರರಿಗೆ ಸ್ವಾಗತ  ಮತ್ತು ಪೋಷಕರ ಸಭೆ ನಡೆಯಿತು. ಸಂಸ್ಥೆಯ ಸಭಾಂಗಣದಲ್ಲಿ ಪ್ರಾಂಶುಪಾಲರಾದ ಕೆ.ವಿ.ಶ್ರೀಕಾಂತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಸಂಸ್ಥೆಯ ನೀತಿ ನಿಯಮಗಳ ಬಗ್ಗೆ, ವಿದ್ಯಾರ್ಥಿಗಳ ಮತ್ತು ಪೋಷಕರ ಜವಾಬ್ದಾರಿಗಳ ಕುರಿತು ಮಾತನಾಡಿದರು. ಕಿರಿಯ ತರಬೇತಿ ಅಧಿಕಾರಿ ಪುನೀತ್ ಕುಮಾರ್  ಸಂಸ್ಥೆಯ, ತರಬೇತಿಯ ಸಂಪೂರ್ಣ ಮಾಹಿತಿ ನೀಡಿದರು. ಕಿರಿಯ ತರಬೇತಿ ಅಧಿಕಾರಿ ಎಂ.ಕೆ.ವೆಂಕಟೇಶ್  ಸ್ವಾಗತಿಸಿದರು, ಕೆ.ಜಿ.ಜಯಪ್ರಕಾಶ್ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಶ್ರೀ ಕೃಷ್ಣಮೂರ್ತಿ ಜೆ ಕಾರ್ಯಕ್ರಮ ನಿರೂಪಿಸಿದರು.

Read More