ಲೇಖಕ: admin

ಮಡಿಕೇರಿ ಆ.2 NEWS DESK : ಭಾಗಮಂಡಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. 2006-2007 ನೇ ಸಾಲಿನಲ್ಲಿ ಏಳನೇ ತರಗತಿ ವರೆಗೆ ಶಾಲೆಯಲ್ಲಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿ ವೃಂದ ವಿದ್ಯೆ ಕಲಿಸಿದ ಗುರುಗಳನ್ನು ಆಹ್ವಾನಿಸಿ ಸನ್ಮಾನ ಮಾಡಿ ಗೌರವಿಸಿದರು. ನಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಹಳೇ ವಿದ್ಯಾರ್ಥಿಗಳು  ರೂಪಾಯಿ 23,000 ವೆಚ್ಚದ ಪ್ರೊಜೆಕ್ಟರ್ ಮತ್ತು ಮಕ್ಕಳಿಗೆ ತಟ್ಟೆ, ಲೋಟ ಗಳನ್ನು ಕೊಡುಗೆಯಾಗಿ ನೀಡಿದರು.  ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳಾದ ಸರ್ಫುದ್ದೀನ್, ನೌಫಲ್, ಶೃತಿ, ಧನಲಕ್ಷ್ಮಿ, ಜೆ.ಎನ್.ಮನೋಜ್ ಸೇರಿದಂತೆ  40ಕ್ಕೂ ಹೆಚ್ಚಿನ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಔತಣಕೂಟ ಏರ್ಪಡಿಸಲಾಗಿತ್ತು.

Read More

ಮಡಿಕೇರಿ ಸೆ.2 NEWS DESK : ಮಡಿಕೇರಿ ನಗರದ ಪುಟಾಣಿನಗರದ ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿ ವತಿಯಿಂದ ಬಡಾವಣೆಯ ನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಡಾವಣೆ ನಿವಾಸಿಗಳು ‌ಮಕ್ಕಳು ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಮಳೆಯನ್ನು ಲೆಕ್ಕಿಸದೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ರಸ್ತೆ ಓಟ, ಕಪ್ಪೆ ಓಟ, ಗಣಪತಿ ಮೂರ್ತಿಯ ಚಿತ್ರಕಲೆ,  ‌ಆದರ್ಶ ದಂಪತಿಗಳಿಗೆ ವಿಶೇಷ ಕ್ರೀಡೆ, ಯುವಕರಿಗೆ ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಟ ಸೇರಿದಂತೆ ವಿವಿಧ  ಕ್ರೀಡಾಕೂಟ ಗಮನ ಸೆಳೆಯಿತು. ಸಂಜೆ ಬಡಾವಣೆಯ ಮಕ್ಕಳು ‌ ಸೇರಿದಂತೆ ಶಾಲಾ ಕಾಲೇಜಿನ ಯುವಕ ಯುವತಿಯರು ನೃತ್ಯ ಪ್ರದರ್ಶನ ಮಾಡಿದರು. ಉದ್ಭವ ಕಲೋತ್ಸವ ಕಾರ್ಯಕ್ರಮಕ್ಕೆ ಅಗಮಿಸಿದ ಮೂಡಾ ಅದ್ಯಕ್ಷ ರಾಜೇಶ್ ಯಲ್ಲಪ್ಪ ಮಾತಾನಾಡಿ, ಪುಟಾಣಿ ನಗರದ ಯುವಕರು ಗಣಪತಿಯನ್ನು ಕಳೆದ 32 ವರ್ಷಗಳಿಂದ ಪ್ರತಿಷ್ಟಾಪನೆ ಮಾಡಿ ಧಾರ್ಮಿಕ ಕಾರ್ಯಗಳೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ‌. ಪುಟಾಣಿ ನಗರದ ಯುವಕರ ಕಾರ್ಯವನ್ನು ಪ್ರತಿವರ್ಷ ಹತ್ತಿರದಿಂದ ನೋಡಿಕೊಂಡು…

Read More

ಮಡಿಕೇರಿ ಸೆ.2  NEWS DESK : ಭಾಗಮಂಡಲ ಶ್ರೀ ವಿನಾಯಕ ಟ್ರಸ್ಟ್ ಹಾಗೂ ಶ್ರೀ ಸದಾಶಿವ ಶಿವಣ್ಣನವರ್ ಮತ್ತು ಸ್ನೇಹಿತರ ಸಹ ಪ್ರಯೋಜಕತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಶೀರ್ಷಿಕೆಯಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.  ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡರು. ಪ್ರಥಮ ಬಹುಮಾನವನ್ನು ಅಟಲ್ ಬಿಹಾರಿ ವಾಜಿಪೇಯಿ ಶಾಲಾ ವಿದ್ಯಾರ್ಥಿಗಳು ಮೂಡಿಗೆರಿಸಿಕೊಂಡರು.  ದ್ವಿತೀಯ ಬಹುಮಾನವನ್ನು ಶ್ರೀ ರಾಜ ರಾಜೇಶ್ವರಿ ಶಾಲೆ, ತೃತೀಯ ಬಹುಮಾನವನ್ನು  ಶ್ರೀ ರಾಜ ರಾಜೇಶ್ವರಿ ಶಾಲೆ,  ಚತುರ್ಥ ಬಹುಮಾನವನ್ನು ಕೋರಂಗಾಲ ಜ್ಞಾನೋದಯ ಶಾಲೆ ಪಡೆದುಕೊಂಡಿತು. ಉಳಿದಂತಹ 6 ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿ ಯೊಂದಿಗೆ ಮೆರವಣಿಗೆ ಸಾಗಿ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ  ಮಾಡಲಾಯಿತು. ಕಾರ್ಯಕ್ರಮಮಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಊರಿನ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Read More

ಮಡಿಕೇರಿ ಸೆ.2 NEWS DESK : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೊನ್ನಂಪೇಟೆ ತಾಲ್ಲೂಕಿನ ನೂತನ ಕಚೇರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು.  ಬಳಿಕ ಮಾತನಾಡಿದ ಶಾಸಕರು, ಒಂದು ಶತಮಾನಕ್ಕೂ ಅಧಿಕ ಇತಿಹಾಸವುಳ್ಳ  ಸ್ವಯಂ ಸೇವಕ ಸಂಸ್ಥೆಯು, ನಾಗರೀಕ ಸೇವೆಯಲ್ಲಿ, ಸಮಾಜಕ್ಕೆ ಒದಗಿದ ವಿವಿಧ ಸಂಕಷ್ಟದ ಸಮಯದಲ್ಲಿ ಹಾಗೂ ಶೋಷಿತ ಸಮಾಜದ ಪರ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಪ್ರಪಂಚದಾದ್ಯಂತ ಉತ್ತಮ ಹೆಸರು ಮಾಡಿರುವ ಈ ಸಂಸ್ಥೆಯ ಪೊನ್ನಂಪೇಟೆ ಘಟಕವು ಯಶಸ್ಸು ಕಾಣುತ್ತಾ, ಜನಮನದಲ್ಲಿ ಛಾಪು ಮೂಡಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಹಶೀಲ್ದಾರರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Read More

ವಿರಾಜಪೇಟೆ NEWS DESK ಸೆ.2 : ವಿರಾಜಪೇಟೆಯಲ್ಲಿ ಇಂದು ಶಾಸಕರ ವಿಶೇಷ ನಿಧಿಯಿಂದ ಕ್ಷೇತ್ರದ ಆಯ್ದ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ದ್ವಿಚಕ್ರವಾಹನವನ್ನು ವಿತರಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿ  ಸಮಾಜದಲ್ಲಿ ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸಲು ಈ ಸೌಲಭ್ಯ ಒದಗಿಸಲಾಗುತ್ತಿದೆ. ವಿಶೇಷ ಚೇತನರು ತಮ್ಮ ನ್ಯೂನತೆಯನ್ನು ಮರೆತು ಸಮಾಜದಲ್ಲಿ ತಮ್ಮ ಕೈಲಾದ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು. ವಿಶೇಷ ಆದ್ಯತೆ ಮೇರೆಗೆ ತಾನು ಸಹಾಯ ಮಾಡಲು ಸದಾ ಸಿದ್ಧವಿರುವುದಾಗಿ ಭರವಸೆ  ನೀಡಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಪುರಸಭೆ ಸದಸ್ಯರಾದ ರಜಿನಿಕಾಂತ್, ರಾಫಿ, ಪಕ್ಷದ ಪ್ರಮುಖ ಜೋಕಿಮ್, ಕುಂದಚೀರ ಮಂಜು ದೇವಯ್ಯ, ಶಬೀರ್, ಮಂಜುನಾಥ್, ಮಹದೇವ, ಅಧಿಕಾರಿಗಳು,  ಫಲಾನುಭವಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಸೆ.2 NEWS DESK : ವಿರಾಜಪೇಟೆ ತಾಲ್ಲೂಕು ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಟ್ಟಳ್ಳಿ ಹಾಡಿ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಧ್ವನಿವರ್ಧಕವನ್ನು ಖರೀದಿಸಿ ಕೊಡುಗೆಯಾಗಿ ನೀಡಿದರು. ಶಾಸಕರ ಕೊಡುಗೆಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ ನಿವಾಸಿಗಳು, ಧನ್ಯವಾದಗಳು ಅರ್ಪಿಸುತ್ತಾ ಕಳೆದ ವರ್ಷವೂ  ಶಾಸಕರು ತಮ್ಮ ಸ್ವಂತ ಹಣದಲ್ಲಿ ನೀಡಿದ ಕೊಡುಗೆಯ ಬಗ್ಗೆಯೂ ಸ್ಮರಿಸಿಕೊಂಡರು.

Read More

ಮಡಿಕೇರಿ, ಸೆ.2 NEWS DESK : ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ‌ ಉಪ ನಿರ್ದೇಶಕ ( ಆಡಳಿತ ) ರಾಗಿ ಬಸವರಾಜು ಅಧಿಕಾರ ಸ್ವೀಕರಿಸಿದರು. ಮಡಿಕೇರಿ ನಗರದ ಡಿಡಿಪಿಐ ಕಛೇರಿಯಲ್ಲಿ ನಿರ್ಗಮಿತ  ಡಿಡಿಪಿಐ ಸಿ.ರಂಗಧಾಮಪ್ಪ ಅವರಿಂದ ನೂತನ ಡಿಡಿಪಿಐ ಬಸವರಾಜು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಡಿಡಿಪಿಐ ಬಸವರಾಜು,ಕೊಡಗಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಶೈಕ್ಷಣಿಕ ಕಾರ್ಯಕ್ರಮಗಳು/ ಚಟುವಟಿಕೆಗಳನ್ನು ಉತ್ತಮವಾಗಿ ನಡೆಸುವ ಮೂಲಕ ಜಿಲ್ಲೆಯಲ್ಲಿ ಉತ್ತಮವಾಗಿ ಶೈಕ್ಷಣಿಕ ಸಾಧನೆಗೆ ಒತ್ತು ನೀಡಲಾಗುವುದು ಎಂದರು. ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಗಳಿಸುತ್ತಾ ಬಂದಿದ್ದು, ಕಳೆದ ಸಲ ಕೂಡ 4 ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕೂಡ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮೂಲಕ ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸಲಾಗುವುದು ಎಂದು ನೂತನ ಡಿಡಿಪಿಐ ಬಸವರಾಜು ತಿಳಿಸಿದರು.…

Read More

ಮಡಿಕೇರಿ ಸೆ.2 NEWS DESK : ಕರಿಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 20 ಕೋಟಿ ರೂ. ಗೂ ಹೆಚ್ಚು ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಕರಿಕೆ ಗ್ರಾಮದ ಪಚ್ಚೆಪಿಲಾವುನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಆಶ್ರಮ ಆದಿವಾಸಿ ಬುಡಕಟ್ಟು ಶಾಲೆ ಕಟ್ಟಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಬುಡಕಟ್ಟು ಆದಿವಾಸಿ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಆ ನಿಟ್ಟಿನಲ್ಲಿ ಕುಗ್ರಾಮಗಳಲ್ಲೂ ಸಹ ವಸತಿ ಶಾಲೆಗಳನ್ನು ಆರಂಭಿಸಿ ಒಳ್ಳೆಯ ಶಿಕ್ಷಣ ನೀಡಲು ಮುಂದಾಗಿದೆ ಎಂದು ಹೇಳಿದರು. ಸರ್ಕಾರ ಎಲ್ಲಾ ವರ್ಗದ ಜನರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಆದಿವಾಸಿ ವಿದ್ಯಾರ್ಥಿಗಳು ಸಹ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಯ ಸದುಪಯೋಗ ಪಡೆದು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ತಿಳಿಸಿದರು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ…

Read More

ಮಡಿಕೇರಿ ಸೆ.1 NEWS DESK : ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ 50ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು. ಕರಿಕೆ ಗ್ರಾಮದ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಲ್ಲಿನ ಸ್ಥಳೀಯರು ಸಾಲಾಗಿ ನಿಂತು ಭೂಮಿ ದುರಸ್ತಿ, ಆರ್‍ಟಿಸಿ ಸರಿಪಡಿಸುವುದು, ರಸ್ತೆ ನಿರ್ಮಾಣ ಮಾಡುವುದು, ಬಸ್ ಸೌಕರ್ಯ ಕಲ್ಪಿಸುವುದು, ವಿದ್ಯುತ್ ಪರಿವರ್ತಕ ನಿರ್ಮಾಣ ಹಾಗೂ ವಿದ್ಯುತ್ ಮಾರ್ಗ ಸರಿಪಡಿಸುವುದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸಿ ಹೆಚ್ಚಿನ ವಿದ್ಯಾರ್ಥಿಗಳ ಸೇರ್ಪಡೆಗೆ ಶ್ರಮಿಸುವುದು, ಜೊತೆಗೆ ಶಿಕ್ಷಕರನ್ನು ನಿಯೋಜಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಬೆಳಕು ಚೆಲ್ಲಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ತಾಲ್ಲೂಕು ಹಾಗೂ ಹೋಬಳಿ ಕೇಂದ್ರದಿಂದ ತುಂಬಾ ದೂರದಲ್ಲಿರುವ ಕರಿಕೆ ಗ್ರಾಮಸ್ಥರ…

Read More

ವಿರಾಜಪೇಟೆ ಸೆ.1 NEWS DESK : ವಿರಾಜಪೇಟೆ ಕೊಡವ ಸಮಾಜದ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕೈಲ್‍ಪೊಲ್ದ್ ನಮ್ಮೆಯನ್ನು ಸೆ.27 ರಂದು ಕೊಡವ ಸಮಾಜ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೊಡವ ಸಮಾಜದ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನಾ ಸುಬ್ರಮಣಿ ಹೇಳಿದರು. ವಿರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮಹಿಳೆಯರಿಗೆ ಮತ್ತು ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಹಗ್ಗಜಗ್ಗಾಟ, ವಾಲಗದ ಕುಣಿತ, ಭಾರದ ಗುಂಡು ಎಸೆತ ಸೇರಿದಂತೆ ಹಲವಾರು ಪೈಪೋಟಿಗಳನ್ನು ನಡೆಸಲಾಗುವುದು. ಪೂರ್ವಹ್ನ 9.30 ನಡೆಯುವ ಕಾರ್ಯಕ್ರಮವನ್ನು ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಮರಣನಿಧಿ ಕಾರ್ಯರ್ಶೀ ಮಾದೇಯಂಡ ಸಂಪಿ ಪೂಣಚ್ಚ ಉಪಸ್ಥಿತರಿದ್ದರು.

Read More