ಲೇಖಕ: admin

ಮಡಿಕೇರಿ ಅ.13 NEWS DESK : ಕೊಡಗು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ್ಲಿ PMAY(U)2.0 ಯೋಜನೆಯಡಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಯುತ್ತಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ನಿವೇಶನ ಹೊಂದಿರುವ ಅಥವಾ ಹಳೆಯ ಕಚ್ಚಾ ಮನೆಯಲ್ಲಿ ವಾಸವಿರುವಂತಹ (ಸ್ವಂತ RCC ಮನೆ ಹೊಂದಿರಬಾರದು) ಇದುವರೆಗೂ ಯಾವುದೇ ವಸತಿ ಯೋಜನೆಗಳ ಸೌಲಭ್ಯ ಪಡೆಯದೇ ಇರುವ ವಾರ್ಷಿಕ ರೂ,3.00 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿವಾಹಿತ ಮಹಿಳೆಯರು, ಗೃಹಿಣಿಯರು, ಮಾಜಿ ಸೈನಿಕರು, ವಿಧುದರು, ಅಂಗವಿಕಲರು, ಹಿರಿಯ ನಾಗರೀಕರು ವಿಷೇಶವಾಗಿ ಸಪಾಯಿ ಕರ್ಮಚಾರಿಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯ ಕರ್ತೆಯರು, ಪಿ.ಎಂ.ವಿಶ್ವಕರ್ಮ ಯೋಜನೆಯ ಫಲಾನುಭವಿಗಳು, ಕಟ್ಟಡ ಕಾರ್ಮಿಕರು ಮತ್ತು ಕೊಳಚೆ ಪ್ರದೇಶದ ನಿವಾಸಿಗಳು ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ನಿವೇಶನ/ಹಳೆ ಕಚ್ಚಾ ಮನೆಯ ದಾಖಲೆಗಳು ಹಾಗೂ ಜಾತಿ & ಆಧಾಯ ಪ್ರಮಾಣ ಪತ್ರದೊಂದಿಗೆ PMAY(U)2.0…

Read More

ವಿರಾಜಪೇಟೆ ಅ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವಿರಾಜಪೇಟೆ ತಾಲ್ಲೂಕು, ಮೂರ್ನಾಡು ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪಾರಣೆ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಎ.ಬಿ.ಕಾರ್ಯಕ್ಷೇತ್ರದ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸೈನಿಕರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ.ಎಂ.ಸುಬ್ರಮಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಜನೆ ಕಾರ್ಯಕ್ರಮಗಳು ಜನರ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಯಿಂದ ಕೂಡಿರುತ್ತದೆ. ಅಂತೆಯೇ ಹಿಂದಿನ ಕಾಲದಲ್ಲಿ ಊರಿನ ಜನರುಗಳನ್ನು ಒಗ್ಗೂಡಿಸಲು ಈ ಪೂಜಾ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದು, ಪೂಜೆಗಳು ನಮ್ಮ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ತಿಳಿಸಿದರು. ವಿರಾಜಪೇಟೆ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಹರೀಶ್. ಮಾತನಾಡಿ ಯೋಜನೆಯಲ್ಲಿ ಹತ್ತು ಹಲವು ಜನಮಂಗಳ ಹಾಗೂ ಸಮಾಜಮುಖ ಕಾರ್ಯಗಳು ನಡೆಸಿದ್ದು, ಇವುಗಳಲ್ಲಿ ಜ್ಞಾನದೀಪ ಶಿಕ್ಷಕರ…

Read More

ನಾಪೋಕ್ಲು ಅ.13 NEWSDESK : ನಾಪೋಕ್ಲು  ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿದೆ. ಬೇತು ಗ್ರಾಮದ ನಿವಾಸಿ ಪಾರ್ವತಿ ಎಂಬವರ ದನದ ಕೊಟ್ಟಿಗೆ ಕುಸಿದುಬಿದ್ದಿದ್ದು, ಶೀಟುಗಳು ಪುಡಿಪುಡಿಯಾಗಿ ನಷ್ಟ ಸಂಭವಿಸಿದೆ. ದನಗಳನ್ನು ಮೇಯಲು ಬಿಟ್ಟಿದ್ದ ಕಾರಣ ಅಪಾಯದಿಂದ ಪಾರಾಗಿದೆ ಎಂದು ಪಾರ್ವತಿ ಅವರು ಮಾಹಿತಿ ನೀಡಿದ್ದಾರೆ. ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ ಅ.13 NEWS DESK : ವಿರಾಜಪೇಟೆ ಜನ ಸೇವಾ ಟ್ರಸ್ಟ್, ಕೊಡಗು ಬ್ಲಡ್ ಡೊನರ್ಸ್ ಹಾಗೂ ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ವಿರಾಜಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ  56 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ರಕ್ತದ ಅಭಾವ ಇರುವ ಕಾರಣ ಕೊಡಗು ಬ್ಲಡ್ ಡೋನರ್ಸ್ ನಿಂದ ವಿರಾಜಪೇಟೆಯ ಯುವಕರಲ್ಲಿ ಐದು ಯೂನಿಟ್ ರಕ್ತಕ್ಕಾಗಿ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ವಿರಾಜಪೇಟೆಯ ಯುವಕರ ತಂಡ ನಾವೇ ಶಿಬಿರ ಆಯೋಜಿಸಿ 50ಯೂನಿಟ್ ರಕ್ತವನ್ನು ನೀಡುವುದಾಗಿ ಭರವಸೆ ನೀಡದ್ದರು. ಅದರಂತೆ ಕೇವಲ 24 ಗಂಟೆಗಳಲ್ಲಿ ಶಿಬಿರ ಆಯೋಜಿಸಿ 56 ಯೂನಿಟ್ ರಕ್ತವನ್ನು ಸಂಗ್ರಹಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.  :: ಕರ್ತವ್ಯಕ್ಕೂ ಸೈ ಸಮಾಜ ಸೇವೆಗೂ ಎತ್ತಿದ ಕೈ :: ರಕ್ತದ ಅಭಾವ ಇರುವ ಹಲವು ಸಂದೇಶಗಳನ್ನು ಮನಗಂಡ ವಿರಾಜಪೇಟೆ ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಶಿಬಿರಕ್ಕೆ ಆಗಮಿಸಿ …

Read More

ಮಡಿಕೇರಿ NEWS DESK ಅ.13 : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ಪಲ್ಟಿಯಾಗಿ ಇಬ್ಬರು ವ್ಯಕ್ತಿಗಳು ಹಾಗೂ ಮೂರು ಹಸುಗಳು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ರಸ್ತೆಯ ಕಾಗಡಿಕಟ್ಟೆ ಬಳಿ ನಡೆದಿದೆ. ಇಂದು ನಸುಕಿನಲ್ಲಿ ಈ ಘಟನೆ ನಡೆದಿದ್ದು, ಗೋವುಗಳ ಸಾಗಾಟ ಕುರಿತು ಹಿಂದೂ ಜಾಗರಣಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ. ಪಲ್ಟಿಯಾದ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟವಾಗುತ್ತಿತ್ತು ಎಂದು ಆರೋಪಿಸಿರುವ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಅವರು ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಗೋವುಗಳ ಸಾಗಾಟ, ಹತ್ಯೆ, ಗೋಮಾಂಸ ಮಾರಾಟಕ್ಕೆ ನಿಷೇಧವಿದ್ದರೂ ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳತನ, ಸಾಗಾಟ ಮತ್ತು ಹತ್ಯೆ ಪ್ರಕರಣಗಳು ಮಿತಿ ಮೀರುತ್ತಿದೆ. ಪೊಲೀಸ್ ಇಲಾಖೆ ಇದನ್ನು ನಿಯಂತ್ರಿಸದಿದ್ದಲ್ಲಿ ಹಿಂದೂ ಸಂಘಟನೆಗಳು ಬೃಹತ್ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Read More

ಮಡಿಕೇರಿ ಅ.13 NEWS DESK : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಪ್ರಕರಣವನ್ನು ಖಂಡಿಸಿ ಪ್ರಗತಿಪರ, ಚಿಂತಕರ, ದಲಿತಪರ ಸಂಘಟನೆಗಳ ಒಕ್ಕೂಟ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಒಕ್ಕೂಟದ ಪ್ರಮುಖರು ಹಾಗೂ ಪದಾಧಿಕಾರಿಗಳು ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಕೃತ್ಯವೆಸಗಿದ ವಕೀಲನ ವಿರುದ್ಧ ಕೇಂದ್ರ ಸರಕಾರ ‘ದೇಶ ದ್ರೋಹ’ದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಂಬೇಡ್ಕರ್ ವಿಚಾರವಾದಿ ಸಿ.ಜೆ.ಮೋಹನ್ ಮೌರ್ಯ ಅವರು ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ವಿರುದ್ಧ ನಡೆದಿರುವ ಘಟನೆ ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಲಾಗಿದೆ. ದುಷ್ಕೃತ್ಯವೆಸಗಿದ ವಕೀಲನ ವಿರುದ್ಧ ಕೇಂದ್ರ ಸರ್ಕಾರ ‘ದೇಶ ದ್ರೋಹ’ದ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಪ್ರಗತಿಪರ…

Read More

ಕಣಿವೆ ಅ.13 NEWS DESK : ಓಣಂ ಆಚರಣೆ ಕೇರಳೀಯರ ಪ್ರಮುಖ ಹಬ್ಬವಾಗಿದ್ದು, ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸಿ ಸಾಮರಸ್ಯ ಬೆಸೆಯುವ ಹಾಗೂ ಸಂಬಂಧಗಳನ್ನು ಉದ್ದೀಪನಗೊಳಿಸುವ ಆಚರಣೆಯಾಗಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು. ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ಕಾನ್ ಬೈಲ್ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಯಾವುದೇ ಜಾತಿ ಜನಾಂಗದ ಆಚರಣೆಗಳು ಅವರ ಸಂಪ್ರದಾಯಗಳನ್ನು ಬಿಂಬಿಸುವಂತಿರಬೇಕು. ಮನುಷ್ಯ ಮನುಷ್ಯರಲ್ಲಿ ಉತ್ತಮ ಸಂಬಂಧಗಳ ಉದ್ದೀಪನದ ಜೊತೆಗೆ ದೇಶಭಕ್ತಿ ಹಾಗೂ ದೇಶ ಪ್ರೇಮ ಮೊಳಗಿಸಲು ಇಂತಹ ಅಚರಣೆಗಳು ಕಾರಣೀಭೂತವಾಗುತ್ತವೆ ಎಂದರು. ನಾಕೂರು ಶಿರಂಗಾಲ ಗ್ರಾಪಂ ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ ಓಣಂ ಆಚರಣೆ ಹಿಂದೂ ಧರ್ಮೀಯ ಎಲ್ಲರನ್ನು ಒಂದೆಡೆ ಸೇರಿಸುವ ಹಾಗೂ ಸಾಮರಸ್ಯ ಉಂಟುಮಾಡುವ ಆಚರಣೆಯಾಗಿದೆ ಎಂದರು. ಹಿಂದೂ ಮಲೆಯಾಳಿ ಸಮಾಜದ ಸಲಹೆಗಾರ ಟಿ.ಆರ್.ವಾಸುದೇವನ್ ಮಾತನಾಡಿ, ಓಣಂ ಆಚರಣೆಯ ಮೂಲಕ ಮಲೆಯಾಳಿ…

Read More

ಮಡಿಕೇರಿ ಅ.13 NEWS DESK : ಕುಶಾಲನಗರ ಕೊಡಗು ಹೆಗ್ಗಡೆ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಾಹಸಭೆ ಮತ್ತು ಕೈಲ್‍ಪೊಳ್ದ್ ಒತ್ತರ್ಮೆಕೂಟವು ಸಂಭ್ರದಿಂದ ನಡೆಯಲಿದೆ. ಕುಶಾಲನಗರ ಕೇರಳ ಸಮಾಜದಲ್ಲಿ ನಡೆದ ಮಹಾಸಭೆಯಲ್ಲಿ ಸಮಾಜಕ್ಕೆ ನಿವೇಶನ ಖರೀದಿಸಿ ಆ ನಿವೇಶನದಲ್ಲಿ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಲು ಸಲಹೆಗಳು ಕೇಳಿಬಂದವು.  ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾಂಗಭಾಂದವನ್ನು ಗುರುತಿಸಿ ಸನ್ಮನಿಸಲಾಯಿತು. ಸಂಘದ ಅಧ್ಯಕ್ಷರಾದ ಚಳಿಯಂಡ ಯಶ್ವಥ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ಪ್ರಾದೇಶಿಕ ಸಾರಿಗೆ ನಿಗಮದ ಬ್ರೇಕ್ ಇನ್ಸ್ಪೆಕ್ಟರ್ ಗಳಾದ ಪೊಕ್ಕಳಿಚಂಡ ಮೋಹನ್ ಕುಮಾರ್, ಕುಶಾಲನಗರ ಜೆ.ಸಿ.ಐ ಅಧ್ಯಕ್ಷ ತಂಬಂಡ ತೇಜ ದಿನೇಶ್, ಸಂಘದ ಉಫಾಧ್ಯಕ್ಷರಾದ ಚಂಗಚಂಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕಂಡ ವಿಠಲ್, ಮಂಡೇಡ ದೀಪಕ್, ಖಜಾಂಚಿ ಕೊಂಗೆಪ್ಪಂಡ ನಂಜಪ್ಪ, ನಿರ್ದೆಶಕರುಗಳಾದ ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೊಣ್ಣಪ್ಪ, ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತ ಚಂಗಚಂಡ ನಂಜಪ್ಪ, ಮಂಡೇಯಂಡ ಪಳಂಗಪ್ಪ, ಪ್ರಮುಖರಾದ ಕೊಂಗೆಪ್ಪಂಡ ಶಶಿ ಬೀಮಯ್ಯ,ಪಡಞರಂಡ ಪ್ರಭು ಕುಮಾರ್, ಕೊಪ್ಪಡ ಪಳಂಗಪ್ಪ,…

Read More

ಮಡಿಕೇರಿ ಅ.13 NEWS DESK : ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ  ಕಾರ್ಯಕ್ರಮದ ವೇದಿಕೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ನಾಗರಿಕ ವೇದಿಕೆಯವರು ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನರ ನಾಡಿಮಿಡಿತವನ್ನು ಅರಿತವರಾಗಿದ್ದಾರೆ. ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಗರಿಕ ವೇದಿಕೆ ವತಿಯಿಂದ ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಷಯ. ನಾಗರಿಕ ವೇದಿಕೆಯವರ ಈ ಪ್ರಯತ್ನ ಮುಂದೆಯೂ ಹೀಗೆ ಬೆಳೆದು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭ ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷ ಅರುಣ್ ಮಾಚಯ್ಯ  ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ನಾಗರಿಕ ವೇದಿಕೆ ಅಧ್ಯಕ್ಷ ವಿಶ್ವನಾಥ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪ್ರಮುಖರಾದ ಚೆಪ್ಪುಡೀರ ಪೊನ್ನಪ್ಪ, ಮುಕಳೇರ…

Read More

ಮಡಿಕೇರಿ ಅ.13 NEWS DESK : ರಾಷ್ಟ್ರೀಯ ಸ್ವಯಂ ಸೇವಕ ಸಂಘ 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಸಂಘದ ಘೋಷ್ ಸಹಿತ ಪಥಸಂಚಲನ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಸ್ವಯಂಸೇವಕರು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಿಂದ ಜೂನಿಯರ್ ಕಾಲೇಜ್ ಮುಂಭಾಗ, ಚೌಕ್, ಗಣಪತಿ ಬೀದಿ, ಮಹದೇವ ಪೇಟೆ, ಹಳೆ ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡಿತು. ಬಳಿಕ ಅಲ್ಲಿ ಸಂಘದ ಪ್ರಾರ್ಥನೆ ಮತ್ತು ದ್ವಜ ವಂದನೆಯೊಂದಿಗೆ ಪಥಸಂಚಲ ಕೊನೆಗೊಂಡಿತು. ಈ ಸಂದರ್ಭ ಆರ್ ಎಸ್ ಎಸ್ ನ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನುಕಾವೇರಪ್ಪ, ಜಿಲ್ಲಾ ಕಾರ್ಯವಾಹ ರವಿ ಕುಶಾಲಪ್ಪ, ಸಹಕಾರ್ಯವಾಹ ಕುಟ್ಟಂಡ ಮಿರನ್ ಕಾವೇರಪ್ಪ, ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಷ್, ವಿಭಾಗ ಶಾರೀರಿಕ್ ಪ್ರಮುಖ್ ಡಿ.ಕೆ.ಡಾಲಿ, ವಿಭಾಗ ಸಹಸಂಪರ್ಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ, ಜಿಲ್ಲಾ ಪ್ರಮುಖರಾದ ಕೆ.ಕೆ.ದಿನೇಶ್ ಕುಮಾರ್, ಕೆ.ಕೆ.ಮಹೇಶ್ ಕುಮಾರ್, ಅರುಣ್ ಕುಮಾರ್, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ,…

Read More