ನಾಪೋಕ್ಲು ಅ.11 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಕಾರದೊಂದಿಗೆ ಬೆಂಗಳೂರಿನ ಗಾಲ್ಫ್ ಕ್ಲಬ್ ನಲ್ಲಿ ಜರುಗಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಗೌರವ ಪ್ರಶಸ್ತಿ ಸಮಾರಂಭದ ಬಗ್ಗೆ ಹಲವು ಸಲಹೆ ಸೂಚನೆಗಳೊಂದಿಗೆ ಚರ್ಚಿಸಿ ನಿರ್ಣಯಗಳನ್ನು ಎಲ್ಲರ ಸಹಮತದೊಂದಿಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಮತ್ತು ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ.ರಾಜೇಶ್ ತೇನನ ಸೇರಿದಂತೆ ಕೊಡಗು ಗೌಡ ಸಮಾಜ, ಯುವ ವೇದಿಕೆ, ಮಹಿಳಾ ಘಟಕ ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಯುವ ವೇದಿಕೆ, ಮಹಿಳಾ ಘಟಕ, ಬೆಂಗಳೂರು, ಗೌಡ ಸಮಾಜ ದಾಸರಹಳ್ಳಿ, ಗೌಡ ಸಮಾಜ ಯಲಹಂಕ, ಕೊಡಗು ದಕ್ಷಿಣ ಕನ್ನಡ ಗೌಡ ಕ್ರೆಡಿಟ್ ಕೋ ಸೊಸೈಟಿ, ಕೆಂಪೇಗೌಡ ರೂರಲ್ ಹೌಸಿಂಗ್ ಸೊಸೈಟಿ, ದಕ್ಷಿಣ ಕನ್ನಡ ಕ್ಷೇಮ ಅಭಿವೃದ್ಧಿ…
ಲೇಖಕ: admin
ವಿರಾಜಪೇಟೆ ಅ.11 NEWS DESK : ವಿರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜು, ಕನ್ನಡ ಭಾಷಾ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ “ಪರಿಸರದಸ್ಮಿತೆ ಪೂಚಂತೇ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿರಾಜಪೇಟೆ ಸ.ಪ್ರ.ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜು ಕೆ. ಸಂಪ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕೃಷಿ ಹಾಗೂ ಸಾಹಿತ್ಯದಲ್ಲಿ ಪರಿಸರ ಹಾಗೂ ಜೀವಸಂಕುಲದ ಅನಾವರಣವಾಗಿರುವ ಬಗ್ಗೆ ಉದಾಹರಣೆಗಳ ಮೂಲಕ ವಿವರಿಸಿದರು. ಪೂರ್ಣಚಂದ್ರ ತೇಜಸ್ವಿಯವರ ಪ್ರತೀ ಬರಹಗಳು ಪ್ರಕೃತಿಯೊಂದಿಗೆ ಅನನ್ಯತೆ ಹೊಂದಿದೆ. ಪರಿಸರ ಜೀವಸಂಕುಲದ ಬಗ್ಗೆ ತೇಜಸ್ವಿಯವರು ಬರೆದಷ್ಟು ಬಹುಶಃ ಯಾವ ಬರಹಗಾರರೂ ಬರೆದಿರಲಾರರು ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಬಿಸಿಎ ವಿದ್ಯಾರ್ಥಿಗಳಾದ ಮಹಮ್ಮದ್ ಸಫ್ವಾನ್, ಆಶಿಕ್, ಮುಸ್ತಾಕ್ ಹಾಗೂ ಶಿಬಿಲ್ ವಿನ್ಯಾಸಗೊಳಿಸಿದ ಕಾಲೇಜಿನ ಕನ್ನಡ ಭಾಷಾ ಮುಖ್ಯಸ್ಥರಾದ ಅರ್ಜುನ್ ಮೌರ್ಯ ಅವರ ವೆಬ್ಸೈಟ್ ಅನ್ನು ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು ಬಿಡುಗಡೆಗೊಳಿಸಿ ಶುಭಹಾರೈಸಿದರು. …
ಮೂರ್ನಾಡು ಅ.11 NEWS DESK : ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ 17ನೇ ವರ್ಷದ ಓಣಂ ಹಬ್ಬಾಚರಣೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಓಣಂ ಹಬ್ಬಾಚರಣೆಯ ಸಮಾರಂಭವನ್ನು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದುಗಳು ತಮ್ಮತಮ್ಮಲ್ಲಿಯೆ ಆಚಾರ-ವಿಚಾರಗಳು ಬೇರೆ ಬೇರೆಯಾಗಿದ್ದರೂ ಎಲ್ಲರೂ ಒಗ್ಗಟಾಗಿ ಸೇರಿದಾಗ ಹಿಂದೂ ಸಮಾಜ ಭದ್ರಗೊಳ್ಳುತ್ತದೆ. ಕೇರಳ ಸಮಾಜದೊಂದಿಗೆ ಕೊಡಗಿನ ನಂಟು ಆಧ್ಯಾತ್ಮಿಕವಾಗಿ ಹಿಂದಿನಿಂದಲೂ ಬೆಸೆದುಕೊಂಡಿದೆ. ಕೇರಳ ಸಮಾಜದವರು ಶ್ರಮಜೀವಗಳು ಮತ್ತು ಬುದ್ದಿವಂತರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ. ಎಲ್ಲರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್ ಮಾತನಾಡಿ, ನಮ್ಮ ಸಂಸ್ಕøತಿ ಆಚಾರ-ವಿಚಾರಗಳನ್ನು ಪರಿಪಾಲನೆ ಮಾಡಿದಲ್ಲಿ ನಮ್ಮ ಮಕ್ಕಳಿಗೆ ಅದರ ಬಗ್ಗೆ ಅರಿವು ಮೂಡುತ್ತದೆ. ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದಾಗ, ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.…
ಮೂರ್ನಾಡು ಅ.11 NEWS DESK : ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್ನ ವತಿಯಿಂದ 101ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟಗಳ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ಲಬ್ನ ವತಿಯಿಂದ ಆಯೋಜಿಸಲಾಗಿದ್ದ ಆಟೋಟಗಳ ಕಾರ್ಯಕ್ರಮಗಳನ್ನು ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಮೂರ್ನಾಡು ಪೊಲೀಸ್ ಉಪಠಾಣೆಯ ಪೊಲೀಸ್ ಅಧಿಕಾರಿ ಪಟ್ರಪಂಡ ಮೊಣ್ಣಪ್ಪ ಉದ್ಘಾಟಿಸಿ, ಮಾತನಾಡಿ ಕೊಡಗಿನ ಯುವ ಜನತೆ ಎಲ್ಲರೂ ಕ್ರೀಡಾಪುಟುಗಳಾಗಬೇಕು. ಮೂರ್ನಾಡು ಪಕ್ಕದಲ್ಲಿಯೆ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿದೆ. ಕೈಲ್ ಮುಹೂರ್ತ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಹಬ್ಬದ ದಿನದಂದು ಎಲ್ಲಾರೂ ಒಟ್ಟಾಗಿ ಸೇರಿ, ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಹೇಳಿದರು. ಮೂರ್ನಾಡಿನ ಪಶು ವೈದ್ಯಾಧಿಕಾರಿ ಡಾ. ಶಿಲ್ಪ ಯಂಕನ ಮಾತನಾಡಿ ಒಂದು ಸಂಘವು ಶತಮಾನೋತ್ಸವ ಆಚರಿಸಿಕೊಂಡಿದೆ ಎಂದರೆ ಅಲ್ಲಿ ವ್ಯವಸ್ಥಿತವಾದ ಆಡಳಿತಾತ್ಮಕತೆ, ಸಂಘಟನೆ ಇದ್ದಾಗ ಮಾತ್ರ ಸಾಧ್ಯ ಎಂದು ಹೇಳಿದರು. ಇಂತಹ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಎಲ್ಲರೂಗೆಲ್ಲಲು…
ಪುತ್ತೂರು ಅ.11 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ದೀಪ್ತಿಲಕ್ಷ್ಮಿ.ಕೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಚೆಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು 2025-26ನೇ ಸಾಲಿನ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಚೆಸ್ ಟೂರ್ನಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಬೆಂಗಳೂರಿನ ಸಾಯಿರಾಂ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದು ಇವರು ತಂಡಕ್ಕೆ ಆಯ್ಕೆಗೊಂಡಿದ್ದಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ತಿಳಿಸಿದ್ದಾರೆ.
ವಿರಾಜಪೇಟೆ ಅ.11 NEWS DESK : ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ವತಿಯಿಂದ ಶ್ರದ್ಧಾಭಕ್ತಿಯಿಂದ ಶಾರದಾ ಪೂಜೆಯನ್ನು ಆಚರಿಸಲಾಯಿತು. ವಿರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಪೂಜೆಯಲ್ಲಿ ಶಾರಾದ ದೇವಿಗೆ ನೈವೇದ್ಯ ಅರ್ಪಿಸಲಾಯಿತು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಮಹಿಳಾ ಸದಸ್ಯರು ದೇವರ ನಾಮ ಹಾಗೂ ಭಜನೆಯನ್ನು ಮಾಡಿದರು. ಪೂಜೆಯ ಬಳಿಕ ನೆರೆದಿದ್ದ ಸದಸ್ಯರುಗಳಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ, ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಯಶೋಧ, ಹೆಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಮಡಿಕೇರಿ NEWS DESK ಅ.10 : ಮಡಿಕೇರಿ ದಸರಾದ ಕೊನೆಯ ದಿನ ದಶಮಂಟಪಗಳಿಗೆ ಬಹುಮಾನ ವಿತರಿಸುವ ಸಂದರ್ಭ ವಕೀಲ ಯಕ್ಷಿತ್ ಕೊತ್ತೋಳಿ ಮೇಲೆ ಪೊಲೀಸ್ ಅಧಿಕಾರಿಗಳಿಂದ ಹಲ್ಲೆಯಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಸಮಿತಿಯ ಸದಸ್ಯ, ವಕೀಲ ಯಕ್ಷಿತ್ ಅವರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಪೊಲೀಸರು ಕಾನೂನು ಮರೆತು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಹಲ್ಲೆ ನಡಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್, ವಕೀಲ ಯಕ್ಷಿತ್ ಕೊತ್ತೋಳಿ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು NEWS DESK ಅ.10 : ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಜೀ ಕುಟುಂಬ ಅವಾರ್ಡ್ – 2025ರ ಸಮಾರಂಭದಲ್ಲಿ ಖ್ಯಾತ ನಟ ಹಾಗೂ ನಿರ್ದೇಶಕ ಶ್ರೀ ರಿಷಭ್ ಶೆಟ್ಟಿ ಅವರನ್ನು ಭೇಟಿ ಮಾಡಿ, ಅವರ ಕಾಂತಾರ – ಅಧ್ಯಾಯ 1ರ ಅದ್ಭುತ ಯಶಸ್ಸಿಗೆ ಅಭಿನಂದಿಸಿದರು. ಈ ಚಿತ್ರಕ್ಕೆ ಸಿಕ್ಕಿರುವ ವ್ಯಾಪಕ ಮೆಚ್ಚುಗೆ ಅವರ ಅಸಾಧಾರಣ ಪ್ರತಿಭೆಗೆ ನಿಜವಾದ ಸಾಕ್ಷಿಯಾಗಿದೆ. ಶೀಘ್ರದಲ್ಲೇ ಕಾಂತಾರ-1 ಚಿತ್ರವನ್ನು ವೀಕ್ಷಿಸಲಿದ್ದೇನೆ ಎಂದರು.
ಮಡಿಕೇರಿ NEWS DESK ಅ.10 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಗ್ರಂಥಾಲಯದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಿತು. ಕಾಲೇಜ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ವಿದ್ಯಾರ್ಥಿಗಳಿಗೆ ಓದು ಮತ್ತು ಸಾಕ್ಷರತೆಯ ಮಹತ್ವದ ಕುರಿತು ವಿವರಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪಂಜಾಬ್ ಅಮೃತಸರ್ ಗುರುನಾನಕ್ದೇವ್ ವಿಶ್ವವಿದ್ಯಾಲಯದ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಪ್ರೊ.ಎಂ.ಪಿ.ಸತೀಜ ಹಾಗೂ ಬೆಂಗಳೂರು ಇಂಡಿಯನ್ ಸ್ಟೇಟಿಸ್ಟಿಕಲ್ ಇನ್ಸ್ಸ್ಟಿಟ್ಯೂಟ್ (ಐ.ಎಸ್.ಐ) ಡಾಕ್ಯುಮೆಂಟೇಶನ್ ಮತ್ತು ರಿಸರ್ಚ್ ಟ್ರೈನಿಂಗ್ ಸೆಂಟರ್ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಮಾತನಾಡಿ ಸಾಕ್ಷರತೆ, ಓದು, ಸಂಶೋಧನಾ ಪ್ರಬಂಧ, ಬರವಣಿಗೆಯ ಮಹತ್ವ, ಬರವಣಿಗೆಯಲ್ಲಿ ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ತಾಂತ್ರಿಕ ಉಪನ್ಯಾಸ ನೀಡಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಅವರು ಕಾಲೇಜ್ ನ ಗ್ರಂಥಾಲಯದ ಡಿಜಿಟಲೀಕರಣ, ಇ-ಬುಕ್ ವ್ಯವಸ್ಥೆ, ಇ.ಲರ್ನಿಂಗ್, ವಿದ್ಯಾರ್ಥಿಗಳಿಗೆ ದೈನಂದಿನ ಬಳಕೆಗೆ ಸುಲಭವಾದ ವ್ಯವಸ್ಥೆಗಳು ಹಾಗೂ ಓದಿನ…
ಮಡಿಕೇರಿ NEWS DESK ಅ.10 : ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಕಾವೇರಿ ತೀರ್ಥೋದ್ಭವವಾಗುತ್ತಿದೆ. ಆದರೆ ಕಾವೇರಿ ತುಲಾಸಂಕ್ರಮಣ ಬಂದರೂ ಮಡಿಕೇರಿ– ತಲಕಾವೇರಿ ರಸ್ತೆಯ ದುರಸ್ತಿ ಕಾರ್ಯಕ್ಕೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಂಡಿಲ್ಲವೆಂದು ಕೊಡಗು ಜಿಲ್ಲಾ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್ ಅವರು ತಲಕಾವೇರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ, ತಲಕಾವೇರಿ ಜಾತ್ರೆಗೆ ಬರುವ ಭಕ್ತರಿಗೆ ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿ ಕಾರ್ಯವೇ ನಡೆದಿಲ್ಲ. ರಸ್ತೆ ಬದಿ ಕಾಡು ತುಂಬಿದ್ದು, ಕಾಡು ಕಡಿಯುವ ಕಾರ್ಯ ಕೂಡ ನಡೆದಿಲ್ಲ. ರಸ್ತೆಗೆ ಮಣ್ಣು ಹಾಕದಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರೂ ಗುಂಡಿ ಮುಚ್ಚಲೆಂದು ಮಣ್ಣು ಸುರಿಯಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದಿಂದ ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಟೀಕಿಸಿದರು. ರಸ್ತೆಗಳ ಅಭಿವೃದ್ಧಿ ಕುರಿತು ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಅಧಿಕ ಮಳೆಯಾದ ಕಾರಣ ಶಾಲೆಗಳಿಗೆ ಹೆಚ್ಚಿನ…






