ಮಡಿಕೇರಿ ಮೇ 10 NEWS DESK : ಸಮುದಾಯ ಬಾಂಧವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಸೌಹಾರ್ದ ಸಂಬಂಧಗಳೊಂದಿಗೆ ಸಂಘಟನೆಯನ್ನು ಸದೃಢಗೊಳಿಸುವ ಚಿಂತನೆಯಡಿ ಕೊಡಗು ಜಿಲ್ಲಾ ಬಂಟರ ಸಂಘ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿತ ‘ಬಂಟೆರೆನ ಸಮ್ಮಿಲನ’ ಕ್ರೀಡಾಕೂಟಕ್ಕೆ ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯುಕ್ತ ಚಾಲನೆ ದೊರೆಯಿತು. ಬಂಟೆರೆನ ಸಮ್ಮಿಲನ ಕ್ರೀಡಾಕೂಟವನ್ನು ಗಾಳಿಬೀಡು ನಿವೃತ್ತ ಯೋಧ ಬಾಬು ಪ್ರಸಾದ್ ರೈ ಮತ್ತು ಕೊಡಗು ಬಂಟರ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಿರೀಶ್ ರೈ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಸದಾನಂದ, ರೈ ಸಮುದಾಯ ಬಾಂಧವರ ಸಂಘಟನೆ ಮತ್ತು ಪರಸ್ಪರ ಸೌಹಾರ್ದತೆಗಾಗಿ ಕ್ರೀಡಾಕೂಟ ಆಯೋಜಿಸಲಾಗಿದ್ದು, ಇದರ ಯಶಸ್ಸಿಗೆ ಸಮುದಾಯ ಬಾಂಧವರು ಶ್ರಮಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ, ವಿಶ್ಮ ರೆಸಾರ್ಟ್ ಮಾಲೀಕ ನಿತಿನ್ ಶೆಟ್ಟಿ, ಬಂಟರ ಸಂಘದ ನಗರ ಕಾರ್ಯದರ್ಶಿ ಸುಜಾತ ಗಣೇಶ್ ರೈ, ನಿಕಟಪೂರ್ವ ಅಧ್ಯಕ್ಷೆ…
ಲೇಖಕ: admin
ಮೂರ್ನಾಡು ಮೇ 10 NEWS DESK : ಕ್ರೀಡೆಗಳಿಗೆ ಸಮುದಾಯದ ಬಾಂಧವ್ಯ ಬೆಸೆಯುವ ಶಕ್ತಿಯಿದ್ದು, ಮುಂದೆಯು ಹೆಚ್ಚಿನ ಕ್ರೀಡಾಕೂಟಗಳು ಆಯೋಜನೆಯಾಗಬೇಕೆಂದು ಬೆಳೆಗಾರರಾದ ಟಿ.ಎನ್.ಲೋಕನಾಥ್ ಅಭಿಪ್ರಾಯಿಸಿದರು. ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜ ಬಾಂಧವರು ವಿರಳವಾಗಿದ್ದರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮಾಜ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಕರೆತರುವಂತೆ ಮಾಡುವ ಶಕ್ತಿ ಕ್ರೀಡೆಗಿದೆ ಎಂದರು. ಮೂರ್ನಾಡು ಬೆಳೆಗಾರರಾದ ಗಣೇಶ್ ನಾಯ್ಡು ಮಾತನಾಡಿ, ಕ್ರೀಡಾಕೂಟ ಕೇವಲ ಕ್ರೀಡೆಗೆ ಮಾತ್ರ ಸಿಮಿತವಾಗದೆ. ಸಮಾಜದ ಕುಟುಂಬಗಳನ್ನು ಒಂದು ಮಾಡುವ ಸಮ್ಮಿಲನ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಿಸಿದರು. ನಾಯ್ಡುಸ್ ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ಟಿ.ಜಿ.ಹರ್ಷ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 8 ತಂಡಗಳು ಭಾಗವಹಿಸಿವೆ. ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆಯೆಂದರು. ವೇದಿಕೆಯಲ್ಲಿ ನಾಯ್ಡುಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ…
ಮಡಿಕೇರಿ ಮೇ 10 NEWS DESK : ಕುಶಾಲನಗರ ಪುರಸಭೆ ವ್ಯಾಪ್ತಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‍ಗೌಡ ಉದ್ಘಾಟಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ ಹಾಗೂ ಮತ್ತಿತರರು ಹಾಜರಿದ್ದರು.
ನವದೆಹಲಿ NEWS DESK : ಪಾಕಿಸ್ತಾನವು ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಈ ಯುದ್ಧದ ಸಮಯದಲ್ಲಿ ಹಬ್ಬಿಸುತ್ತಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದಾರೆ, ಇಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸೂರತ್‌ನಲ್ಲಿ ಭಾರತದ ಎಸ್-400 ವ್ಯವಸ್ಥೆ ಮತ್ತು ವಾಯುನೆಲೆಗಳನ್ನು ನಾಶಪಡಿಸಿದ ಪಾಕಿಸ್ತಾನದ ಹೇಳಿಕೆ ಸುಳ್ಳು ಎಂದಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಗುರುತಿಸಲಾದ ಮಿಲಿಟರಿ ಗುರಿಗಳ ಮೇಲೆ ಮಾತ್ರ ನಿಖರವಾದ ದಾಳಿ ನಡೆಸಿವೆ. ಪಾಕಿಸ್ತಾನವು ನಿರಂತರ ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡುತ್ತಿದೆ, ಭಾರತೀಯ ಎಸ್-400 ವ್ಯವಸ್ಥೆಯನ್ನು ನಾಶಪಡಿಸಲಾಗಿದೆ, ಸೂರತ್‌ಗಢ ಮತ್ತು ಸಿರ್ಸಾದಲ್ಲಿನ ವಾಯುನೆಲೆಗಳನ್ನು ನಾಶಪಡಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಗಳು ಸುಳ್ಳು ಎಂದರು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕೂಡ ಇದನ್ನು ದೃಢಪಡಿಸಿದರು, ಪಾಕಿಸ್ತಾನವು ಸುಳ್ಳು, ತಪ್ಪು ಸುದ್ದಿಯನ್ನು ಹರಡುತ್ತಿದೆ ಎಂದರು. ಪಾಕಿಸ್ತಾನ ಕೈಗೊಂಡ ಚಟುವಟಿಕೆಗಳ ಬಗ್ಗೆ ಪಾಕಿಸ್ತಾನದ ಹೇಳಿಕೆಗಳು ಸುಳ್ಳು, ತಪ್ಪು ಮಾಹಿತಿ ಮತ್ತು ಪ್ರಚಾರದಿಂದ ತುಂಬಿವೆ. ಪಾಕಿಸ್ತಾನ ಸರ್ಕಾರದ ಬೆಂಬಲಿತ ಸಂಸ್ಥೆಗಳು ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಿವೆ.…
ಮಡಿಕೇರಿ ಮೇ 10 NEWS DESK : ಸಿದ್ದಾಪುರ ಮಟ್ಟ ಗ್ರಾಮದ ಗ್ರೀನ್ ಸ್ಟಾರ್ ಯೂತ್ ಕ್ಲಬ್ ವತಿಯಿಂದ ಆಯೋಜನೆಗೊಂಡಿರುವ ವಾಲಿಬಾಲ್ ಪಂದ್ಯಾವಳಿಯಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಕೊಡಗಿನಾದ್ಯಂತ ಯುವಕರು ಕ್ರೀಡೆಗೆ ಹೆಚ್ಚು ಆಕರ್ಷಿತರಾಗಿದ್ದು, ಕ್ರೀಡೆಯಲ್ಲಿ ಅದ್ಭುತ ಸಾಧನೆಗಳನ್ನು ಕೂಡ ಮಾಡುತ್ತಿದ್ದಾರೆ. ಇಂತಹ ಪಂದ್ಯಾವಳಿಗಳು ಯುವ ಜನತೆಗೆ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಪಂದ್ಯಾವಳಿಯ ಆಯೋಜಕರನ್ನು ಅಭಿನಂದಿಸುತ್ತ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶಾಸಕರು ಶುಭ ಕೋರಿದರು. ಈ ಸಂದರ್ಭ ವಲಯ ಅಧ್ಯಕ್ಷರು, ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
ನಾಪೋಕ್ಲು ಮೇ 10 NEWS DESK : ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಒಳಿತಾಗಲಿ ಎಂದು ಪಾಲೂರಿನ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಯೋತ್ಪಾದಕರ ಶಿಬಿರಗಳ ಮೇಲೆ “ಆಪರೇಷನ್ ಸಿಂಧೂರ” ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯು ಯಶಸ್ವಿಯಾದ ಹಿನ್ನೆಲೆ ಭಾರತೀಯ ಸೇನಾ ಯೋಧರಿಗೆ ಮತ್ತಷ್ಟು ಶಕ್ತಿಯನ್ನು ಶ್ರೀ ಮಹಾಲಿಂಗೇಶ್ವರ ಅನುಗ್ರಹಿಸಲಿ ಎಂದು ಕ್ಷೇತ್ರದ ಮುಖ್ಯ ಪುರೋಹಿತರಾದ ದೇವಿಪ್ರಸಾದ್ ಪ್ರಾರ್ಥನೆ ಹಾಗೂ ಸಂಕಲ್ಪ, ರುದ್ರಾಭಿಷೇಕ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮೇ 10 NEWS DESK : ವಿರಾಜಪೇಟೆ ನಗರ ವ್ಯಾಪ್ತಿಯ, ವಿಜಯನಗರ 3ನೇ ಹಂತದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣ್ಣಚ್ಚ, ಪುರಸಭೆ ಅಧ್ಯಕ್ಷ ದೇಚಮ್ಮ ಕಾಳಪ್ಪ ಹಾಗೂ ಪುರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಮಡಿಕೇರಿ ಮೇ 10 NEWS DESK : ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ವತಿಯಿಂದ ತೃತೀಯ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯವು ಮೇ 17 ಹಾಗೂ 18 ರಂದು ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್) ನಡೆಯಲಿರುವ ಪಂದ್ಯಾವಳಿಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷರಾದ ಪಿ.ಸಿ.ಗಣೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಎನ್.ರಾಮು, ಕೊಡಗು ಮೊಗೇರ ಜಿಲ್ಲಾ ಅಧ್ಯಕ್ಷ ಜನಾರ್ಧನ್, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಪಿ.ಎಂ.ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಕ್ರೀಡಾ ಅಧ್ಯಕ್ಷ ಎಂ.ಜಿ.ಚಂದ್ರ ಹಾಗೂ ಸಮಾಜದ ಗೌರವ ಅಧ್ಯಕ್ಷರಾದ ಗೌತಮ್, ಶಿವಪ್ಪ ಅಕ್ಕಮ್ಮ ಮೂರ್ತಿ, ಸದಾನಂದ ಮಾಸ್ಟರ್, ವಸಂತ್, ಪಿ.ಕೆ. ಚಂದ್ರು, ದಾಮೋದರ್ ಅನೇಕ ಗಣ್ಯವ್ಯಕಿಗಳು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯಲ್ಲಿ ಮೊಗೇರ ಬಾಂಧವರಿಗೆ ಮಾತ್ರ ಅವಕಾಶ ಇದ್ದು, ಒಟ್ಟು 40 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯದ ಶುಲ್ಕ…
ಮೈಸೂರು ಮೇ 10 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹುಣಸೂರು ಮತ್ತು ಪಿರಿಯಾ ಪಟ್ಟಣದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಗಾರರು ಇದ್ದು, ಅವರಿಗೆ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರು, ಬೆಳಗಾರರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎಂಬುದೇ ನಮ್ಮ ಮುಖ್ಯ ಗುರಿ ಎಂದು ತಿಳಿಸಿದ್ದಾರೆ. ತಂಬಾಕು ಬೆಳೆಗಾರರಿಗೆ ನಿರಂತರವಾಗಿ ರಸಗೊಬ್ಬರ ಪೂರೈಸಲಾಗುತ್ತಿತ್ತು. ರೈತರಿಗೆ ಅನುಕೂಲವಾಗಲೆಂದು ಈ ಭಾನುವಾರವೂ ಅಂದರೆ ಮೇ 11ರಂದು ರಸಗೊಬ್ಬರ ಪೂರೈಕೆ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ತಂಬಾಕು ಬೆಳೆಗಾರರು ಭಾನುವಾರವೂ ನೀಡಲಾಗುತ್ತಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಯದುವೀರ್ ತಿಳಿಸಿದ್ದಾರೆ. ತಂಬಾಕು ಬೆಳೆಗಾರರ ಪರ ಸಂಸದರ ದನಿ :: ತಂಬಾಕು ಬೆಳಗಾರರ ಪರವಾಗಿ ಸಂಸತ್ತಿನ ಅಧಿವೇಶನದಲ್ಲಿ ದನಿ ಎತ್ತಿ ಹಾಗೂ ಸಂಬಂಧಪಟ್ಟ…
ಮಡಿಕೇರಿ ಮೇ 24 NEWS DESK : ಮುಂಗಾರು ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿ ಸ್ಪರ್ಶಿಸದೇ) ತಕ್ಷಣ ಚಾ.ವಿ.ಸ.ನಿನಿ.ಯ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸ್‍ಅಪ್ ಮೂಲಕ ಪೋಟೋ ಸಂದೇಶ ನೀಡಬಹುದಾಗಿದೆ. ಕೊಡಗು ಜಿಲ್ಲೆಯ (24*7) ಸಹಾಯವಾಣಿ ಸಂಖ್ಯೆ ಸರ್ವೀಸ್ ಸೆಂಟರ್‍ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665. ಮಡಿಕೇರಿ ತಾಲ್ಲೂಕಿನ ಮಡಿಕೇರಿ ತಾಳತ್‍ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಹಾಗೂ ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ 9449598602, ಸಹಾಯಕ/ ಜೂನಿಯರ್ ಎಂಜಿನಿಯರ್‍ಗಳು ಮಡಿಕೇರಿಗೆ ಚೈತ್ರ 9449598603, ತಾಳತ್‍ಮನೆ ಹೇಮಂತ್ ರಾಜ್ 9449598604, ಮೂರ್ನಾಡು ಶಾಖೆಗೆ ತೇಜ 9449598605, ಸಂಪಾಜೆಗೆ ಅನಿಲ್ ಕುಮಾರ್ 9448994851, ಭಾಗಮಂಡಲ…






