ಮಡಿಕೇರಿ ಜೂ.24 NEWS DESK : ಗ್ರಾಮ ಪಂಚಾಯ್ತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೈಜ್ಞಾನಿಕ ರೂಪದ ಕನಿಷ್ಟ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಮತ್ತು ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಸಂಘದ ಸದಸ್ಯರು ಹಾಗೂ ಗ್ರಾ.ಪಂ ನೌಕರರು ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಸಂಘÀಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ರಾಜ್ಯದಾದ್ಯಂತ ಆಯೋಜಿತ ಮುಷ್ಕರದ ಭಾಗವಾಗಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ವರ್ಷಗಳಿಂದ ಗ್ರಾಮ ಪಂಚಾಯ್ತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಇಲ್ಲಿಯವರೆಗು ಸರ್ವೋಚ್ಛ ನ್ಯಾಯಾಲಯದ ಸೂಚನೆಗಳಿದ್ದರು ಕನಿಷ್ಟ ವೇತನ ಪಾವತಿಯಾಗುತ್ತಿಲ್ಲ. ಪ್ರಸ್ತುತ ಪಂಚಾಯ್ತಿಗಳಲ್ಲಿ ನೌಕರರು ‘ಜೀತದಾಳು’ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ದಿನದಿಂದ ದಿನಕ್ಕೆ ನಿತ್ಯೋಪಯೋಗಿ ವಸ್ತುಗಳ…
ಲೇಖಕ: admin
ನವದೆಹಲಿ ಜೂ.24 NEWS DESK : ನಟ-ನಿರ್ದೇಶಕ ಅಮೀರ್ ಖಾನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಬಾಲಿವುಡ್ ನ ಸಂವೇಧನಾಶೀಲ ನಟ-ನಿರ್ದೇಶಕ ಅಮೀರ್ ಖಾನ್ ಮುಖಾಮುಖಿ ಭೇಟಿಯಾಗಿದ್ದು, ಪರಸ್ಪರ ಕುಶಲೋಪರಿ ವಿಚಾರಿಸಿ ಶುಭ ಹಾರೈಸಿದರು.
ಮಡಿಕೇರಿ ಜೂ.24 NEWS DESK : ವಿರಾಜಪೇಟೆಯ ತ್ರಿವೇಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರರಾಷ್ಟ್ರೀಯ 11ನೇ ಯೋಗ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಆಪಾಡಂಡ ಕಾರ್ಯಪ್ಪ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಅರಸು ಅಚ್ಚಮ್ಮ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಫ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಕಾವೇರಮ್ಮ ದಿನದ ಮಹತ್ವ, ಯೋಗ ಅಂತರಾಷ್ಟ್ರೀಯ ಮಹತ್ವ ಪಡೆದುಕೊಂಡ ಬಗ್ಗೆ ವಿವರಿಸಿದರು. ಶಿಕ್ಷಕರಾದ ಸವೆಂಟಿ ಅಗಸ್ಟಿನ್ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿ, ವಂದಿಸಿದರು. ಯೋಗ ತರಬೇತುದಾರರಾದ ಬಿಂದು ಮಾರ್ಗದರ್ಶನದಲ್ಲಿ ಮುಖ್ಯಶಿಕ್ಷಕರುಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಲಾಯಿತು.
ಮಡಿಕೇರಿ ಜೂ.24 NEWS DESK : ಭಾರತದಲ್ಲಿ ಬ್ಯಾಂಕಿಂಗ್ ವೃತ್ತಿಯನ್ನು ಆರಿಸಿಕೊಳ್ಳುವ ಹೊಸಬರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. ಬ್ಯಾಂಕ್‍ಗಳು ತನ್ನ ಉದ್ಯೋಗಿಗಳಿಗೆ ಸುಂದರವಾದ ಪ್ಯಾಕೇಜ್‍ಗಳು, ಆಕರ್ಷಕ ಸಂಬಳ, ಉದ್ಯೋಗ ಭದ್ರತೆಯ ಜೊತೆಗೆ ಇತರ ಸವಲತ್ತುಗಳನ್ನು ನೀಡುತ್ತವೆ ಎಂಬುದು ಬಹಿರಂಗ ಸತ್ಯವಾಗಿದೆ. ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲ ಅಭ್ಯರ್ಥಿಗಳಿಗೆ ಇವು ಮೀಸಲಾಗಿವೆ. ಉಳಿದ ಹುದ್ದೆಗಳಿಗೂ ಆಯಾ ರಾಜ್ಯಗಳ ಭಾಷಾ ನಿಯಮ ಅನ್ವಯವಾಗಲಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಾಕಾಂಕ್ಷಿಗಳಿಗೆ, ಈ ಹಿಂದೆ ಮೇ ತಿಂಗಳಲ್ಲಿ ಈ ಕುರಿತು ಅಧಿಸೂಚನೆ ಪ್ರಕಟಿಸಿತ್ತು. ಮೇ ಕೊನೆಯ ವಾರದಲ್ಲಿ ಅರ್ಜಿ ಸಲ್ಲಿಕೆ ಕೊನೆಗೊಳಿಸಿದ್ದರೂ, ಇದೀಗ ಅದೇ ಅಧಿಸೂಚನೆಗೆ ಮತ್ತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಕೋರಿದೆ. ಹೊಸ ಪ್ರಕಟಣೆಗಳ ಪ್ರಕಾರ, ಅಭ್ಯರ್ಥಿಗಳು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯ ವಿರುವುದಿಲ್ಲ,…
ನಾಪೋಕ್ಲು ಜೂ.24 NEWS DESK : ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಪರದಾಡುವಂತಾಗಿದೆ. ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಿರಂತರ ದಾಂಧಲೆ ನಡೆಸುತ್ತಿದ್ದು, ಕಾಫಿ, ತೆಂಗು, ಬಾಳೆ ಗಿಡಗಳನ್ನು ನಾಶಪಡಿಸಿವೆ. ಗ್ರಾಮದ ನಿವಾಸಿ ಮರದಾಳು ರಾಮಚಂದ್ರ ಅವರ ಮನೆಯ ಸುತ್ತಮುತ್ತ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ತೆಂಗು, ಬಾಳೆ ಗಿಡಗಳನ್ನು ಸಂಪೂರ್ಣ ಧ್ವಂಸಗೊಳಿಸಿವೆ. ಅಲ್ಲದೆ ಕೃಷಿ ಪಸಲುಗಳಿಗೆ ಹಾನಿ ಉಂಟು ಮಾಡಿದೆ. ಇತ್ತೀಚೆಗೆ ನೆಟ್ಟ ಹಣ್ಣಿನಗಿಡಗಳೂಧ್ವಂಸವಾಗಿವೆ. ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಜೂ.24 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಣ್ಯ ಇಲಾಖೆ ಸೋಮವಾರಪೇಟೆ ವಲಯದ ಜಂಟಿ ಆಶ್ರಯದಲ್ಲಿ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಶಾಲೆಯ ಅವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದ ಅರಣ್ಯಇಲಾಖೆಯ ಅರಣ್ಯ ಪಾಲಕರಾದ ಚಂದ್ರಶೇಖರ್, ಎಲ್ಲರೂ ಪರಿಸರವನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು. ಒಂದು ದಿನದ ಕಾರ್ಯಕ್ರಮವಾಗಿ ಆಚರಿಸದೆ ಪ್ರತಿನಿತ್ಯ ಒಂದೊಂದು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣಗೆ ಪಣತೊಡಬೇಕು ಎಂದು ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯ ಶಿಕ್ಷಕರಾದ ಸರಳಕುಮಾರಿ, ಕೃಷಿ ಮೇಲ್ವಿಚಾರಕರಾದ ಹರೀಶ್ ಕುಮಾರ್ ಹಾಜರಿದ್ದರು. ಕೃಷಿ ಮೇಲ್ವಿಚಾರಕರಾದ ಹರೀಶ್ ನಿರೂಪಿಸಿದರು, ಸೇವಾಪ್ರತಿನಿಧಿ ಚೆನ್ನಮ್ಮ ರಾಜು ಸ್ವಾಗತಿಸಿದರು. ಶಿಕ್ಷಕಿ…
ಗೋಣಿಕೊಪ್ಪ ಜೂ.24 NEWS DESK : ಹೆಣ್ಣು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಪೋಷಕರು ಹೆಣ್ಣುಮಕ್ಕಳ ಭದ್ರತೆಯ ಬಗ್ಗೆ ಗಮನ ಹರಿಸಬೇಕು ಎಂದು ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ.ಕುಮಾರ್ ಕರೆ ನೀಡಿದರು. ಶಾಲೆಯ ಆವರಣದಲ್ಲಿ ನಡೆದ ಪೋಷಕರ ಸಭೆ ಮತ್ತು ಶಾಲಾಭಿವೃದ್ಧಿ ಸಮಿತಿ ರಚನಾ ಸಭೆಯಲ್ಲಿ ಪೋಷಕರ ಉದ್ದೇಶಿಸಿ ಮಾತನಾಡಿದರು. ಹೆಣ್ಣುಮಕ್ಕಳು ಮನೆಯಲ್ಲಿರುವುದರಿಂದ ಆಘಾತಕಾರಿ ಘಟನೆಗಳು ನಡೆಯುವ ಸಂಭವಗಳು ಹೆಚ್ಚಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಸುರಕ್ಷತೆಗೆ ಪೋಷಕರು ಜಾಗೃತೆ ವಹಿಸಬೇಕು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ಪೋಷಕರು ತಮ್ಮ ಮಕ್ಕಳ ಭದ್ರತೆ ಆತಂಕದಿಂದ ದೂರ ಇರಬಹುದು ಎಂದು ಸಲಹೆ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿ ರಚನೆ :: ನಂತರ ನಡೆದ ಶಾಲಾ ಅಭಿವೃದ್ಧಿ ಸಮಿತಿ ರಚನೆ ನಡೆಯಿತು. ಸಮಿತಿ ಅಧ್ಯಕ್ಷರಾಗಿ ಕೆ.ಬಿ.ಜಗದೀಶ್, ಉಪಾಧ್ಯಕ್ಷರಾಗಿ ಬಿ.ಆರ್.ದಿವ್ಯ ಮತ್ತು ಸದಸ್ಯರುಗಳಾಗಿ ಪಿಂಟು ಸಿಂಗ್, ರಾಕೇಶ್, ಅರುಣ್ ಕುಮಾರ್ ವಿ, ಸೌಮ್ಯ, ತೇಜಸ್ವಿನಿ, ದೀಪಿಕಾ, ಅನಿತಾ, ಪಿ.ಬಿ.ಮೀನಾ, ಮಂಜುಳಾ, ರೆಜಿಯ ಸುಲ್ತನ್,…
ಕುಶಾಲನಗರ ಜೂ.23 NEWS DESK : ಕುಶಾಲನಗರ ಲಯನ್ಸ್ ಇಂಟರ್ನ್ಯಾಷನಲ್ ನೂತನ ಅಧ್ಯಕ್ಷರಾಗಿ ಎನ್.ಟಿ.ನಾರಾಯಣ, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಡಾ.ಶರತ್ ಕುಮಾರ್ ಮ್ಯಾಥ್ಯೂ ನೇಮಕಗೊಂಡಿದ್ದಾರೆ. 2025-26 ರ ಆಡಳಿತ ಮಂಡಳಿಯ ತಂಡದ ಪ್ರತಿಜ್ಞಾವಿಧಿ ಸಮಾರಂಭ ಜೂ.24ರಂದು ಕುಶಾಲನಗರ ಗೌಡ ಸಮಾಜದಲ್ಲಿ ನಡೆಯಲಿದೆ. ಲಯನ್ಸ್ ಇಂಟರ್ನ್ಯಾಷನಲ್ ಹಿಂದಿನ ಸಾಲಿನ ಜಿಲ್ಲಾ ರಾಜ್ಯಪಾಲ ಎಂ.ಬಿ.ಸದಾಶಿವ ಪ್ರತಿಜ್ಞಾವಿಧಿ ಭೋದಿಸಲಿದ್ದಾರೆ.
ಮಡಿಕೇರಿ ಜೂ.23 NEWS DESK : ಪುಣ್ಯಭೂಮಿ ‘ಕೊಡವಲ್ಯಾಂಡ್’ ನ ರಕ್ಷಣೆ ಆದಿಮಸಂಜಾತ ಏಕ-ಜನಾಂಗೀಯ ಕೊಡವ ಸಮುದಾಯದ ಹೊಣೆಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಸಿಎನ್‍ಸಿ ವತಿಯಿಂದ ಪೊನ್ನಂಪೇಟೆಯಲ್ಲಿ ನಡೆದ 6ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಷ್ಟ್ರೀಯ ಜನಗಣತಿಯೊಂದಿಗೆ ಜಾತಿವಾರು ಸಮೀಕ್ಷೆಯ ಸಂದರ್ಭ ಆದಿಮಸಂಜಾತ ಏಕ-ಜನಾಂಗೀಯ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಲಮ್‍ಅನ್ನು ಅಳವಡಿಸಬೇಕು. ಹೀಗೆ ಮಾಡುವುದರಿಂದ ಮಾತ್ರ ಕೊಡವರ ಹಾಗೂ ಕೊಡವಲ್ಯಾಂಡ್ ನ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕೊಡವಲ್ಯಾಂಡ್ ನ್ನು ಸಂರಕ್ಷಿಸಲು ಸಮಸ್ತ ಕೊಡವರು ಜಾಗೃತರಾಗಬೇಕು ಮತ್ತು ಸಂವಿಧಾನದತ್ತವಾದ ಹಕ್ಕುಗಳ ಪರ ಸಂಘಟಿತರಾಗಬೇಕು. ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಲಮ್‍ಅನ್ನು ಅಳವಡಿಸುವುದು 2026ರ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿದೆ. ಇದನ್ನು ಕೊಡವರು ಸೂಕ್ಷ್ಮವಾಗಿ ಅವಲೋಕಿಸಬೇಕು ಮತ್ತು ಈ ಬೇಡಿಕೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ಜಾತಿವಾರು ಜನಗಣತಿಯಲ್ಲಿನ ಪ್ರತ್ಯೇಕ “ಕೋಡ್ ಮತ್ತು ಕಾಲಮ್”…
ಮಡಿಕೇರಿ ಜೂ.23 NEWS DESK : ವಿರಾಜಪೇಟೆ 66/33 ಕೆ.ವಿ. ವಿದ್ಯುತ್ ವಿತರಣಾ ಉಪ ಕೇಂದ್ರ ಮಗ್ಗುಲದಲ್ಲಿ ಜೂನ್, 24 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 4.30 ಗಂಟೆಯವರೆಗೆ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ 33/11 ಕೆವಿ ವಿದ್ಯುತ್ ಉಪಕೇಂದ್ರ ಮೂರ್ನಾಡುವಿನಿಂದ ಹೊರಹೊಮ್ಮುವ ಪಾರಾಣೆ, ನಾಪೋಕ್ಲು, ಮೂರ್ನಾಡು, ಹೊದ್ದೂರು, ಮರಗೋಡು ಫೀಡರ್‍ಗಳ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ. ಹಾಗೆಯೇ ವಿರಾಜಪೇಟೆ 66/33 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರ ಮಗ್ಗುಲದಲ್ಲಿ ಜೂನ್, 24 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 4.30 ಗಂಟೆಯವರೆಗೆ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿರಾಜಪೇಟೆ, ಸಿದ್ದಾಪುರ ಮತ್ತು ಅಮ್ಮತ್ತಿ ಶಾಖಾ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.…






