ಲೇಖಕ: admin

ಸೋಮವಾರಪೇಟೆ ಜೂ.23 NEWS DESK : ನಿರಂತರ ಯೋಗಕೇಂದ್ರ ಹಾಗೂ ಆಯುರ್ವೇದ ಆಸ್ಪತ್ರೆ ವತಿಯಿಂದ ಮಾನಸ ಹಾಲ್‍ನಲ್ಲಿ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಯೋಗಶಿಕ್ಷಕ ಕಿಬ್ಬೆಟ್ಟ ಗಣೇಶ್, ಆಸ್ಪತ್ರೆಯ ವೈದ್ಯಾಧಿಕಾರಿ ಶ್ವೇತ ಇದ್ದರು. ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು.

Read More

ಗೋಣಿಕೊಪ್ಪ ಜೂ.23 NEWS DESK : ಅಂತಾರಾಷ್ಟ್ರೀಯ 11ನೇ ಯೋಗ ದಿನಾಚರಣೆಯನ್ನು ಚೆಟ್ಟಿಮಾನಿ, ಕುಂದಚೇರಿ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಚರಿಸಲಾಯಿತು. ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿ ಯೋಗದಿನಾಚರಣೆಯನ್ನು ಶಕ್ತಿ ಕೇಂದ್ರದ ಪ್ರಮುಖ್ ಶರತ್ ಪದಕಲ್ಲು ನೇತೃತ್ವದಲ್ಲಿ ಆಚರಿಸಲಾಯಿತು. ಯೋಗ ಗುರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕುದುಪಜೆ ಶಿವಕುಮಾರ್, ಪಂಚಾಯಿತಿ ಅಧ್ಯಕ್ಷ ದಿನೇಶ್ ಪೊಡನೊಳನ, ಯುವ ನಾಯಕ ತೇಜಸ್ (ಚಿಕ್ಕಿ), ಯುವ ಮುರ್ಚಾ ಅಧ್ಯಕ್ಷ ಪರಶುದರ, ಯೋಗಪಟು ಜಿತಿಕ ಕಿರಣ್, ಪದಕಲ್ಲು ಬೂತ್ ಅಧ್ಯಕ್ಷ ಪುರುಷೋತ್ತಮ(ಪುಂಡು), ಕುಂದಚೇರಿ ಬೂತ್ ಅಧ್ಯಕ್ಷ ಸುರೇಶ, ಸಿಂಗತೂರ್ ಬೂತ್ ಕಾರ್ಯದರ್ಶಿ ಸುಬ್ರಮಣಿ ಪಪ್ಪು, ಪದಕಲ್ಲು ಬೂತ್ ಕಾರ್ಯದರ್ಶಿ ಚಿದು ಅಮೆ, ಕುಂದಚೇರಿ ವಿ.ಎಸ್.ಎಸ್.ಎನ್ ನಿರ್ದೇಶಕ ಕೇದಂಬಾಡಿ ಜಯ ಪ್ರಕಾಶ್ ಮತ್ತು ಕಾರ್ಯಕರ್ತರು ಹಾಜರಿದ್ದರು.

Read More

ಚೆಟ್ಟಳ್ಳಿ ಜೂ.23 NEWS DESK : ರೈತರು ಬೆಳೆದ ವಿವಿಧ ಬಗೆಯ ಬೆಣ್ಣೆಹಣ್ಣುಗಳು ಹಾಗೂ ವಿವಿಧ ರೀತಿಯ ಖಾದ್ಯಗಳ ಪ್ರದರ್ಶನವು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಯೋಜಿಸಿದ ಬೆಣ್ಣೆ ಹಣ್ಣಿನ(ಬಟರ್ ಫ್ರೂಟ್) ವೈವಿಧ್ಯತೆಯ ಮೇಳ, ಕ್ಷೇತ್ರೋತ್ಸವ ಮತ್ತು ಪಾಲುದಾರರ ಸಭೆಯಲ್ಲಿ ಕೃಷಿಕರ ಗಮನ ಸೆಳೆದವು. ವಿದೇಶಿ ಹಣ್ಣಿನ ತಳಿಗಳಾದ ಫೀರೈಟೆ, ಪಿಂಕ್ ಕರ್ಟನ್, ಕ್ಯಾರ್ಮೆನ್ ಹ್ಯಾಸ್, ಡಿಗಾನಿಯಾ, ದೇಶೀಯ 78 ವಿಧದ ಹಣ್ಣುಗಳು ಹಾಗು ಕೇಂದ್ರದ ಸಂಶೋದಿತ ತಳಿಗಳಾದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ರವಿ ಹಾಗೂ ಟಿಕೆಡಿ ಪ್ರದರ್ಶನಗೊಂಡರೆ ಮಹಿಳೆಯರು ತಯಾರಿಸಿದ ಬೆಣ್ಣೆ ಹಣ್ಣಿನ ಸೂಫ್ಲೆ, ಕೇಕ್, ಇಡ್ಲಿ, ಕಾಫಿ, ಸ್ಯಾಂಡ್ವಿಚ್, ಚಟ್ನಿ, ಬ್ರೆಡ್ ಸ್ಪೆಡ್,ಸ್ಟಾಟರ್ ಹೀಗೆ ಹಲವು ಬಗೆಯ ಖಾದ್ಯಗಳು ಪ್ರದರ್ಶನಗೊಂಡವು. ಪೊನ್ನಂಪೇಟೆಯ ಸಿಇಟಿ ಕಾಲೇಜಿನ ನಿರ್ದೇಶಕರು ಹಾಗೂ ಪ್ರಗತಿಪರ ಬೆಳೆಗಾರರಾದ ಕುಪ್ಪಂಡ ಎ.ಚಿಣ್ಣಪ್ಪ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿ, ಕೊಡಗಿನವರು ಕಾಫಿ ಹಾಗೂ ಕರಿಮೆಣಸು ಬೆಳೆಯನ್ನು ಆದಾಯದ ಮೂಲವಾಗಿ ರೂಪಿಸಿ ಕೊಂಡಿದ್ದರು. ಆದರೆ ಕೊಡಗಿನ ಕಿತ್ತಳೆಗೆ ಹೆಚ್ಚಿನ…

Read More

ಮಡಿಕೇರಿ NEWS DESK ಜೂ.22 : ಮೈಸೂರಿನಿಂದ ಮಡಿಕೇರಿಗೆ ವಿವಾಹ ಮಾತುಕತೆಗಾಗಿ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾದ ಘಟನೆ ಹುಣಸೂರು-ಮಡಿಕೇರಿ ಹೆದ್ದಾರಿಯ  ಕಲ್‌ಬೆಟ್ಟ ಜಂಕ್ಷನ್‌ನಲ್ಲಿ ಭಾನುವಾರ ನಡೆದಿದೆ. ಮಿನಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಮಿನಿ ಬಸ್ ಉರುಳಿ ಬಿದ್ದಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. 17 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೈಸೂರಿನಿಂದ ಮಡಿಕೇರಿಗೆ ವಿವಾಹ ವಿಚಾರದ ಮಾತುಕತೆಗಾಗಿ ಸುಮಾರು 25 ಮಂದಿ ಇದ್ದ ಮಿನಿ ಬಸ್ ತೆರಳುತ್ತಿತ್ತು. ಈ ವೇಳೆ ಕಲ್ ಬೆಟ್ಟ ಜಂಕ್ಷನ್ ಬಳಿ ವಿರಾಜಪೇಟೆ ರಸ್ತೆ ಕಡೆಯಿಂದ ಬಂದ ಲಾರಿ ಮತ್ತು ಮಿನಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬಸ್ ಉರುಳಿ ಬಿದ್ದಿದೆ. ಈ ನಡುವೆ  ಪಿರಿಯಾಪಟ್ಟಣ ಕಡೆಯಿಂದ ಬರುತ್ತಿದ್ದ ಸುಳ್ಯ ಮೂಲದ ಕಾರು ಕೂಡ ಲಾರಿಗೆ ಡಿಕ್ಕಿಯಾಗಿದೆ. ಕಾರು ಜಖಂಗೊಂಡಿದ್ದು, ಕಾರ್ ಏರ್ ಬ್ಯಾಗ್ ಇದ್ದ ಕಾರಣ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಮಂಜು, ಮೈಸೂರಿನ ಉಮೇಶ್, ರಂಜಿತಾ, ರೂಪಾ, ಜ್ಯೋತಿ,…

Read More

ಸುಂಟಿಕೊಪ್ಪ NEWS DESK ಜೂ.22 : ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಅಪಾರ ಬೆಳೆ ನಷ್ಟವಾಗಿದೆ. ಕಾಡಾನೆಗಳು ತೋಟಗಳಲ್ಲೇ ಬೀಡುಬಿಟ್ಟಿದ್ದು, ಕಾಫಿ, ಬಾಳೆ ಗಿಡ, ಕರಿಮೆಣಸು ಬಳ್ಳಿಗಳನ್ನು ನಾಶಪಡಿಸಿವೆ. ಎಮ್ಮೆಗುಂಡಿ ಗ್ರಾಮದ ಲೈನ್ ಮನೆ ಸಮೀಪ ಬೆಳೆದಿದ್ದ ಬಾಳೆ ಗಿಡಗಳನ್ನು ಕೂಡ ಧ್ವಂಸಗೊಳಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕಾರ್ಮಿಕರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಸುಂಟಿಕೊಪ್ಪದಿಂದ ಎಮ್ಮೆಗುಂಡಿ, ನಾಕೂರು ಶಿರಂಗಾಲ, ಮಳೂರು, ಕಾನ್ ಬೈಲ್, ಅಂದಗೋವೆ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ಸವಾರರು ಕೂಡ ಭಯದಿಂದ ಮುಂದೆ ಸಾಗಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಆತಂಕವನ್ನು ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ಕುಶಾಲನಗರ NEWS DESK ಜೂ. 22 : ಸಿಕಲ್ ಸೆಲ್ ( ಕುಡುಗೋಲು ) ಅನುವಂಶೀಯ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚುವ ಹಾಗೂ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಜೀವವನ್ನು ಉಳಿಸಬಹುದು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಸುಧಾರಿಸಬಹುದು ಎಂದು ಕುಶಾಲನಗರ ತಾಲ್ಲೂಕು  ಆರೋಗ್ಯಾಧಿಕಾರಿ ಡಾ ಇಂದೂಧರ್  ಹೇಳಿದರು.  ಕುಶಾಲನಗರ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ “ಪಿಎಂ ಜನ್ ಮನ್ ಕಾರ್ಯಕ್ರಮ: 2025 ರಡಿ ತಾಲ್ಲೂಕಿನ ನಂಜರಾಯಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ “ವಿಶ್ವ ಸಿಕಲ್ ಸೆಲ್(ಕುಡುಗೋಲು) ದಿನಾಚರಣೆ” ನಡೆಯಿತು. ಸಿಕಲ್ ಸೆಲ್ ಕಾಯಿಲೆ ಕುರಿತು ಆಯೋಜಿಸಿದ್ದ ಆರೋಗ್ಯ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆದಿವಾಸಿ ಸಮುದಾಯದವರಲ್ಲಿ ಹೆಚ್ಚಾಗಿ ಕಂಡು ಬರುವ ಸಿಕಲ್‌ ಸೆಲ್‌ (ಕುಡುಗೋಲು) ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾಯಿಲೆಯ ನಿರ್ಮೂಲನೆಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದರು. ಸಿಕಲ್‌ ಸೆಲ್‌ ಕಾಯಿಲೆಯು ಆದಿವಾಸಿಗಳಲ್ಲಿ ಕಂಡು…

Read More

ಮಡಿಕೇರಿ NEWS DESK ಜೂ.22 : ಅರಣ್ಯ ಇಲಾಖೆಯ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳಿಂದ ಆತಂಕಗೊಂಡಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಕೊಲ್ಲಿ ಹಾಡಿಯ ನಿವಾಸಿಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ಮಾಡಿದರು. ತಾವು ನೆಲೆ ಕಂಡುಕೊಂಡಿರುವ ನೆಲದ ಹಕ್ಕನ್ನು ಕಳೆದುಕೊಳ್ಳುವ ಕುರಿತು ಹಾಡಿ ನಿವಾಸಿಗಳು ಶಾಸಕರ ಬಳಿ ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ಈಗ ಉಂಟಾಗಿರುವ ಸಮಸ್ಯೆಯ ಕುರಿತು ಸರ್ಕಾರ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಅರಣ್ಯ ಇಲಾಖೆಗೂ ಮಾನವೀಯತೆ ತೋರಲು ಸೂಚಿಸಲಾಗಿದೆ. ಹಾಡಿ ನಿವಾಸಿಗಳು ಭಯ ಪಡುವ ಅಗತ್ಯವಿಲ್ಲ ಎಂದರು. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅರಣ್ಯ ನಿವಾಸಿಗಳು ಕೂಡ ತಾವು ಈಗ ವಾಸಿಸುತ್ತಿರುವ ವಿವಾದಿತ ಜಾಗದಲ್ಲಿ ಯಾವುದೇ ರೀತಿಯ ಹೊಸ ನಿರ್ಮಾಣ ಕಾರ್ಯಕ್ಕೆ ಮುಂದಾಗಬಾರದು. ಹೊರಗಿನವರ ಪ್ರವೇಶದ ಬಗ್ಗೆಯೂ ಜಾಗರೂಕರಾಗಿರುವಂತೆ…

Read More

ಚೆಟ್ಟಳ್ಳಿ NEWS DESK ಜೂ.22 : ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಶನಿವಾರ ರಾತ್ರಿ ಚೆಟ್ಟಳ್ಳಿಯಲ್ಲಿ ನಡೆದಿದೆ. ಚೆಟ್ಟಳ್ಳಿಯ ಬಿದ್ದಂಡ ಅಚ್ಚಯ್ಯ ಅವರ ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಕಾಡಾನೆ ಜಖಂಗೊಳಿಸಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಸ್ಥಳೀಯರು ನಿತ್ಯ ಆತಂಕದಿಂದಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅರಣ್ಯ ಇಲಾಖೆ ಕಾಡಾನೆ ದಾಳಿ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ಸುಂಟಿಕೊಪ್ಪ NEWS DESK ಜೂ.22 : ಸುಂಟಿಕೊಪ್ಪ ಮಲಯಾಳಿ ಸಮಾಜದ 2025-26ನೇ ಸಾಲಿನ ಅಧ್ಯಕ್ಷರಾಗಿ ಆರ್.ರಮೇಶ್ ಪಿಳ್ಳೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್.ಅನಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಮಾಜದ ಅಧ್ಯಕ್ಷ  ಎಂ.ಆರ್.ಶಶಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ವಾಸುದೇವ, ಟಿ.ಕೆ.ಹರೀಶ್ , ಖಜಾಂಚಿ ಅನೀಶ್.ಕೆ , ಸಹ ಕಾರ್ಯದರ್ಶಿಗಳಾಗಿ ಗಿರೀಶ್ ಮತ್ತು ಜಿ.ಪಿ.ಅನಿಲ್ ಕುಮಾರ್ ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ರಾಜೇಶ್, ವಿ.ಕೆ.ರಾಜು, ಕ್ರೀಡಾ ಕಾರ್ಯದರ್ಶಿಗಳಾಗಿ ಪಿ.ಸಿ.ಸುರೇಶ್, ಬಿಜು ಪಿ.ಆರ್, ಗೌರವ ಅಧ್ಯಕರಾಗಿ ಭಾಸ್ಕರನ್, ವೇಲಾಯುಧನ್ ಹಾಗೂ 6 ಮಂದಿ ಸಲಹಾ ಸಮಿತಿ ಸದಸ್ಯರು, 8 ಮಂದಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Read More