ಲೇಖಕ: admin

ಮಡಿಕೇರಿ ಏ.28 NEWS DESK : ಮಡಿಕೇರಿಯ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಮಾಂದಲ್‍ಪಟ್ಟಿಗೆ ಚಾರಣವನ್ನು ಆಯೋಜಿಸಲಾಗಿತ್ತು. ವಾಂಡರರ‍್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕುಂಜಿಲ ಗ್ರಾಮದ ಕೋಟೇರ ಎನ್.ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾರಣದಲ್ಲಿ ಶಿಬಿರಾರ್ಥಿ ಪುಟಾಣಿಗಳು, ಪೋಷಕರು, ಶಿಕ್ಷಕರು ಹಾಗೂ ಆಯೋಜಕರು ಸೇರಿದಂತೆ 150ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಹಸಿರ ಪರಿಸರದಲ್ಲಿ ಸಂತೋಷದಿಂದ ಭಾಗಿಯಾಗಿ ಉತ್ತಮ ಅನುಭವ ಪಡೆದುಕೊಂಡರು. ಕಾಲೂರಿನಿಂದ ಮಾಂದಲ್‍ಪಟ್ಟಿ ವರೆಗೆ ಕಾಲ್ನಡಿಗೆಯಲ್ಲೇ ತಲುಪಿ ಸಂಭ್ರಮಿಸಿದ ವಿದ್ಯಾರ್ಥಿಗಳು ನಂತರ ಹಟ್ಟಿಹೊಳೆಯ ಆವಂಡಿ ಜಲಪಾತಕ್ಕೆ ತೆರಳಿ ಪ್ರಕೃತಿ ಸೌಂದರ್ಯದ ನಡುವೆ ನೀರಿನಲ್ಲಿ ಮಿಂದೆದ್ದರು. 20 ಕಿ.ಮೀ ದೂರದ ಚಾರಣದಲ್ಲಿ ಎಲ್‍ಕೆಜಿಯಿಂದ 16 ವರ್ಷದ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದ ಸಂಘಟಕರಾದ ಬಾಬು ಸೋಮಯ್ಯ, ಶ್ಯಾಮ್ ಪೂಣಚ್ಚ, ಕುಡೆಕಲ್ ಸಂತೋಷ್, ಮಹೇಶ್ ಕುಮಾರ್, ವೆಂಕಟೇಶ್,…

Read More

ಪುತ್ತೂರು ಏ.28 NEWS DESK : ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಕಾರ್ಮಿಕ ಭವಿಷ್ಯ ನಿಧಿ ಮತ್ತು ರಾಜ್ಯ ಕಾರ್ಮಿಕರ ವಿಮಾ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಮಂಗಳೂರು ವಿಭಾಗದ ಜಿಲ್ಲಾ ಸಂಪರ್ಕ ಅಭಿಯಾನದ ಅಡಿಯಲ್ಲಿ ನಿಧಿ ಆಪ್ ಕೇ ನಿಕಟ್ ಎನ್ನುವ ಕಾರ್ಯಕ್ರಮದನ್ವಯ ಕಾಲೇಜಿನ ಶ್ರೀ ರಾಮ ಸಭಾಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಕಾರ್ಮಿಕ ಭವಿಷ್ಯ ನಿಧಿಗೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಮತ್ತು ಕಾಲಕಾಲಕ್ಕೆ ಬದಲಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಮಿಕ ಭವಿಷ್ಯ ನಿಧಿ ಮಂಗಳೂರು ವಿಭಾಗದ ಆಯುಕ್ತ ರಜೀಬ್ ಮುಖರ್ಜಿ, ಅಕೌಂಟ್ ಆಫೀಸರ್ ಬಿ.ಬಿ.ವೇಣುಗೋಪಾಲ್ ಮತ್ತು ಡಿಪಿಎ ನೀತಾ ಉದಯಶಂಕರ್ ಮಾಹಿತಿ ನೀಡಿದರು. ರಾಜ್ಯ ಕಾರ್ಮಿಕರ ವಿಮಾ ಯೋಜನೆಯ ಬಗ್ಗೆ ಮಂಗಳೂರು ಕಛೇರಿಯ ಸೋಶಿಯಲ್ ಸೆಕ್ಯೂರಿಟಿ ಆಫೀಸರ್ ನೀಲಯ್ಯ ಹಾಗೂ ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್ ಅಶ್ವಿನ್ ಕುಮಾರ್ ವಿವರವಾಗಿ ತಿಳಿಸಿದರು. ವಿವೇಕಾನಂದ…

Read More

ಮಡಿಕೇರಿ ಏ.28 NEWS DESK : ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಸುಳ್ಯಕೋಡಿ ಚಿನ್ನಪ್ಪ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ  ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.  ಈ ಸಂದರ್ಭ ಮೃತರ ಕುಟುಂಬಕ್ಕೆ ಸರಕಾರದ ವತಿಯಿಂದ ರೂ.15ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು ಶಾಸಕರು ವಿತರಿಸಿದರು.  ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ ಪೂವಯ್ಯ, ಸಿದ್ದಾಪುರ ವಲಯ ಅಧ್ಯಕ್ಷ  ಪ್ರತೀಶ್ ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಏ.28 NEWS DESK : ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವವು  ಮೇ 1 ರಿಂದ 3 ರವರಗೆ  ನಡೆಯಲಿದೆ. ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣ ನಡೆಯಲಿರುವ ಕ್ರೀಡೋತ್ಸವವದಲ್ಲಿ  ಕ್ರಿಕೆಟ್, ಪುರಷರು ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ಕ್ರೀಡೋತ್ಸವಕ್ಕೆ ಮೇ 1 ರಂದು ಪೂರ್ವಹ್ನ 10.30 ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿಲಿದ್ದು, ಮುಖ್ಯ ಅಥಿತಿಗಳಾಗಿ ವಿಶ್ರಾಂತ ಕುಲಪತಿ ಡಾ.ಪಡಿಞರಂಡ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಕೊರಕುಟ್ಟೀರ ಸರಾ ಚಂಗಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳ ಪದಕ ಪಡೆದ ಇಬ್ಬರು ಪೊಲೀಸ್ ಸಬ್ ಇನ್ಸಿಪೆಕ್ಟರ್  ತುದಿಮಾಡ ಸವಿ ಲೋಕೇಶ್ ಮತ್ತು ಚಂಗಚಂಡ ನಿತಿನ್ ಮಾಚಯ್ಯ  ಹಾಗು ಅಗ್ನಿ ಶಾಮಾಕದಳದಲ್ಲಿ ವಿಪ್ಪತ್ತು ನಿರ್ವಾಹಣಾ ಸೇವೆಯಲ್ಲಿನ ಅಪ್ರತಿಮ ಶೌರ್ಯಕ್ಕೆ ಮುಖ್ಯಮಂತ್ರಿಗಳ ಪದಕ ಪಡೆದ ಮಚ್ಚಂಡ ನಂಜಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಗವುದು.…

Read More

ಸಿದ್ದಾಪುರ  ಏ.28 NEWS DESK : ಇಂಜಿಲಗೆರೆ ಗ್ರಾಮದ ಪೊಮಾಡಪುರ ಶ್ರೀ ಮುತ್ತಪ್ಪ ದೇವಾಲಯದ 70ನೇ  ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ  ನಡೆಯಿತು. ಮಹೋತ್ಸವಕ್ಕೆ ಅಮ್ಮತ್ತಿ, ಓಂಟಿಯಂಗಡಿ, ಪಾಲಿಬೆಟ್ಟ, ಗುಹ್ಯ, ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ‌‌ಸುತ್ತಮುತ್ತಲಿನ ಗ್ರಾಮಗಳಿಂದ ‌ಸಾವಿರಾರು ‌ಭಕ್ತರು ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. 2 ದಿನಗಳ ಕಾಲ ನಡೆದ ತೆರೆ ಮಹೋತ್ಸವದಲ್ಲಿ ವಿವಿಧ ದೇವರುಗಳ ಕೋಲಗಳ ತೆರೆಗಳನ್ನು ಭಕ್ತರು ಕಣ್ತುಂಬಿಕೊಂಡರು ಚೆಂಡೆಗಳೊಂದಿಗೆ ವಸೂರಿಮಾಲಾ ತೆರೆ‌ ಗುಳಿಗನ ತೆರೆ ಕುಟ್ಟಿಚಾತನ್ ತೆರೆ ಮತ್ತು ಮುತ್ತಪ್ಪನ ತಿರುವಪ್ಪನ ತೆರೆ ಭಕ್ತರನ್ನು ಹೆಚ್ಚು ಆಕರ್ಷಿಸಿತು ಉಳಿದಂತ‌ ಮುತ್ತಪ್ಪ ತಿರುವಪ್ಪನ ವೆಳ್ಳಾಟಂ ನಡೆದವು.  ಮಹೋತ್ಸವದ ಭಾಗವಾಗಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ತೆರೆ ಮಹೋತ್ಸವದ ಅಂಗವಾಗಿ ಪೊಮಾಡಪುರ ಮುತ್ತಪ್ಪ ದೇವಾಲಯ  ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೆ ವಿವಿಧ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಪಡೆದುಕೊಂಡರು.ಈ ಸಂದರ್ಭ ಪೊಮಾಡಪುರ ಶ್ರೀ ಮುತ್ತಪ್ಪ ದೇವಾಲಯದ ಸಮಿತಿ ಅಧ್ಯಕ್ಷ ಟಿ.ಎ.ಪ್ರಕಾಶ್ ಕಾರ್ಯದರ್ಶಿ…

Read More

ಮಡಿಕೇರಿ ಏ.28 NEWS DESK : ಆಧುನಿಕ ಯುಗದಲ್ಲಿ ಪ್ರತಿ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದ್ದು, ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆರೋಗ್ಯಯುತವಾಗಿ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ಕಾಲೇಜು ಸಭಾಂಗಣದಲ್ಲಿ ಕಲೋತ್ಸವ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಲೇಜು  ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದೊಂದಿಗೆ ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರೊಂದಿಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಶನಕ್ಕೆ ಎಲ್ಲರೂ ಶ್ರಮಪಡಬೇಕು ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಇಂತಹ ಕಲೋತ್ಸವ ಕಾರ್ಯಕ್ರಮಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಡಗಿರುವ ವಿಶೇಷ ಹಾಗೂ ವಿಶಿಷ್ಟವಾದ ಕಲೆಯನ್ನು ಹೊರ ತರುವಲ್ಲಿ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಇರಬೇಕು. ತೆಗೆದುಕೊಂಡ ನಿರ್ಧಾರ ಅಚಲವಾಗಿರಬೇಕು. ಜೀವನದಲ್ಲಿ ಶಿಸ್ತು ಇದ್ದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಎ.ಎಸ್.ಪೊನ್ನಣ್ಣ ಅವರು…

Read More

ಕುಶಾಲನಗರ ಏ.28 NEWS DESK :  ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರ ವಿಧಾನಸಭಾ ಸದಸ್ಯರಾದ ಡಾ ಮಂತರ್ ಗೌಡ ಕರೆ ನೀಡಿದ್ದಾರೆ.  ಕುಶಾಲನಗರ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನ ‘ಕಲಾರಂಭ್’ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಪ್ರತಿಭೆಯನ್ನು ಹೊರಗೆ ಹಾಕುವ ಮನಸ್ಥಿತಿ ಹೊಂದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಕಾರ್ಯಕ್ರಮಗಳ ವೇದಿಕೆಯ ಬಳಕೆ ಮಾಡಿಕೊಳ್ಳುವ ಮೂಲಕ ಧನಾತ್ಮಕ ಚಿಂತನೆ ಹೊಂದಬೇಕು ಎಂದು ಹೇಳಿದರು. ಶಿಕ್ಷಣದ ಜೊತೆಗೆ ಪೂರಕ ಚಟುವಟಿಕೆಗಳೊಂದಿಗೆ ಮಕ್ಕಳ ಬೆಳವಣಿಗೆ ಸಾಧ್ಯ ಎಂದ ಶಾಸಕರು ಶೈಕ್ಷಣಿಕವಾಗಿ ಅಗತ್ಯವಿರುವ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಎನ್ಎನ್ ಶಂಭುಲಿಂಗಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ ಎ ಲಿಖಿತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ತರಗತಿಯಲ್ಲಿ ಅತಿ…

Read More

ಕುಶಾಲನಗರ ಏ.28 NEWS DESK :  ಕಾಶ್ಮೀರದಲ್ಲಿ ನಡೆದ ಅಮಾನವೀಯ ಘಟನೆಯನ್ನು ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರಮುಖರು ಖಂಡಿಸಿದ್ದಾರೆ. ಕುಶಾಲನಗರ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್, ದುಷ್ಕರ್ಮಿಗಳು ನಾಗರಿಕರ ಮೇಲೆ ಏಕಾಏಕಿ ದಾಳಿ ಮಾಡಿ ಹಲವು ಪ್ರವಾಸಿಗರನ್ನು ಹತ್ಯೆ ಮಾಡಿರೋದು ಮಾನವ ಕುಲಕ್ಕೆ ಅಪಮಾನ ಮಾಡಿದಂತಾಗಿದೆ. ಇದನ್ನು ದೇಶದ ಪ್ರತಿಯೊಬ್ಬರು ಖಂಡಿಸಬೇಕಾಗಿದೆ. ಉಗ್ರದ ನಾಶಕ್ಕೆ ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಇಡೀ ದೇಶದ ಪ್ರಜೆಗಳು ಒಮ್ಮತದಿಂದ ಒಗ್ಗಟ್ಟಾಗಿ ಬೆಂಬಲಿಸಬೇಕು ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಪಾಲಿನ ಹೊಣೆಯಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಪ್ರಮುಖರಾದ ಬಿ.ಅಮೃತರಾಜ್, ಇಂದು ಕಾಶ್ಮೀರದಲ್ಲಿ ನಡೆದ ಕೃತ್ಯ ಮುಂದಿನ ದಿನಗಳಲ್ಲಿ ದೇಶದ ಎಲ್ಲೆಡೆ ಸಂಭವಿಸುವ ಆತಂಕ ಎದುರಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮತ್ತು ನೆರೆಯ ಬೈಲುಕುಪ್ಪೆ ಟಿಬೆಟಿಯನ್ ಶಿಬಿರ ಗಳಲ್ಲಿ ಪಾಕ್…

Read More

ನಾಪೋಕ್ಲು ಏ.28 NEWS DESK : ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಿಯನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆಯಲ್ಲಿ ಊರಿನ ಪರ ಊರಿನ ಭಕ್ತರು ಪಾಲ್ಗೊಂಡಿದ್ದರು. ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಈ ಉತ್ಸವಕ್ಕಾಗಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಬ್ಬಿಣದ ರಾಟೆಯಲ್ಲಿ ದೇವರ ವಿಗ್ರಹವನ್ನು ತುಗಲಾಗುತ್ತದೆ. ಈ ಸಂದರ್ಭ ಭಕ್ತರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಉತ್ಸವದ ಅಂಗವಾಗಿ ಭದ್ರಕಾಳಿ ದೇವಿಯ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಮೂರು ತೆರೆ ಮುಡಿ ಕೋಲಗಳು ದೇವಾಲಯದ ಮೈದಾನದಲ್ಲಿ ನೆರವೇರಿತು. ಈ ಸಂದರ್ಭ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿ, ಪ್ರಸಾದ ಸ್ವೀಕರಿಸಿದರು. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಏ.28 NEWS DESK : ಬಲ್ಲಮಾವಟಿ ಪಂಚಾಯತ್ ಪೇರೂರು ಗ್ರಾಮದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಭಾರಂಭಗೊಂಡ ಪೇರೂರಿಯನ್ಸ್ ಸ್ನೇಹಿತರ ಕೂಟದ ಬೇಸಿಗೆ ಉಚಿತ ಹಾಕಿ ಶಿಬಿರವು ಸಮಾರೋಪಗೊಂಡಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಮಂಡೀರ ಜಯ ದೇವಯ್ಯ ಮಾತನಾಡಿ, ಶ್ರೀ ಇಗ್ಗುತ್ತಪ್ಪ ಬೆಟ್ಟದಡಿ ಸಿದ್ಧಗೊಂಡ ಮೈದಾನದಲ್ಲಿ ಶಿಬಿರ ನಡೆಯಲು ಮೂಲ ಕಾರಣಕರ್ತರನ್ನು ಎಷ್ಟು ಅಭಿನಂದಿಸಿದರೂ ಸಾಲದು ಅದೇ ರೀತಿ ಸಾರ್ವಜನಿಕರ ಸಹಕಾರವೂ ಸಹ ಅವಶ್ಯಕ, ಇಂದಿನ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದರಲ್ಲದೆ ತರಬೇತುದಾರರಾದ ಮಣವಟ್ಟಿರ ಮಧು ಅಯ್ಯಪ್ಪ ಅವರನ್ನು ಅಭಿನಂದಿಸಿದರು. ಕಾಫಿ ಬೆಳೆಗಾರರು ಹಾಗೂ ಮಾಜಿ ಮಂಡಲ ಪ್ರಧಾನ ಮೂವೇರ ನಾಣಪ್ಪ ಮಾತನಾಡಿ, ಕೆಲವು ವರ್ಷಗಳ ಹಿಂದೆ ಈ ಮೈದಾನವು ಸಂಪೂರ್ಣವಾಗಿ ಪಾಳು ಬಿದ್ದಿತ್ತು. ಪೇರೂರಿಯನ್ಸ್ ಕೂಟದಿಂದ ಮೈದಾನಕ್ಕೆ ಒಂದು ಕಳೆ ಬಂದಿರುತ್ತದೆ ಆದ್ದರಿಂದ ಸರ್ವರೂ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಪೆÇೀಷಕರು ರಾಜಕೀಯ ಮನೋಭಾವದಲ್ಲಿ ಮುಳುಗಬಾರದು ಮುಂದಿನ ಪೀಳಿಗೆಯ ಮಕ್ಕಳ ಬಾಳಲ್ಲಿ ಬೆಳಕಾಗಬೇಕು…

Read More