ಮಡಿಕೇರಿ ಏ.28 NEWS DESK : ಹವಮಾನದ ವೈಪರಿತ್ಯ ಮತ್ತು ಆರೋಗ್ಯದ ಪರಿಸ್ಥಿತಿ ನಿಭಾಯಿಸಲು ವೈದ್ಯಕೀಯ ಕಾಲೇಜುಗಳ ಪಾತ್ರ ಮಹತ್ವದ್ದು ಎಂದು ಆರೋಗ್ಯ ಮತ್ತು ಕುಟುಂಬಗಳ ಕಲ್ಯಾಣ ಇಲಾಖೆಯ ಜನರಲ್ ಡೈರೆಕ್ಟರ್ ಡಾ.ರವಿಕುಮಾರ್ ಹೇಳಿದರು. ಜಿಮ್ಸ್ ಕಲುಬುರ್ಗಿ ಯುನಿಸೆಫಾ ಹಾಗೂ ಎನ್ ಹೆಚ್ ಎಮ್ ಸಹಾಯೋಗದೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಹವಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷಯದ ಬಗ್ಗೆ ದಕ್ಷಿಣ ಕರ್ನಾಟಕದ ವಿವಿಧ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಿಬ್ಬಂದಿಗಳಿಗೆ ಎರಡು ದಿನಗಳ ತರಬೇತಿ ನಡೆಯಿತು. ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹವಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ರಾಮಚಂದ್ರ ಕಾಮತ್ ಮಾತನಾಡಿ, ದುಷ್ಪರಿಣಾಮಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ವೈದ್ಯಕೀಯ ಸಂಸ್ಥೆಗಳ ಸುಮಾರು 30…
ಲೇಖಕ: admin
ಮಡಿಕೇರಿ NEWS DESK ಏ.27 : ಕೊಡವ ಕೌಟುಂಬಿಕ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಅಂತಿಮ ಪಂದ್ಯ ಮಳೆಯಿಂದ ಬಾಧಿತವಾಗಿ, ನಿಯಮಗಳಂತೆ ಪಂದ್ಯ ನಿಲುಗಡೆಗೂ ಮುನ್ನ ಏಕೈಕ ಗೋಲಿನ ಮುನ್ನಡೆ ಪಡೆದಿದ್ದ ‘ಮಂಡೇಪಂಡ’ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಬೆಳ್ಳಿ ಮಹೋತ್ಸವದ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ಮಂಡೇಪಂಡ ಅಲಂಕರಿಸಿತು. ಕಾರ್ಮೋಡಗಳು ಕವಿದ ವಾತಾವರಣದ ನಡುವೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಹರ್ಷೋದ್ಘಾರಗಳ ನಡುವೆ ಮಂಡೇಪಂಡ ಮತ್ತು ಚೇಂದಂಡ ನಡುವಿನ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿ ಆರಂಭಗೊಂಡಿತು. ಪಂದ್ಯದ ಆರಂಭಿಕ ಕ್ಷಣಗಳಲ್ಲೆ ಚೇಂದಂಡ ತಂಡ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಇದನ್ನು ಗೋಲಾಗಿಸುವಲ್ಲಿ ತಂಡದ ಪ್ರಮುಖ ಮುನ್ಪಡೆ ಆಟಗಾರ, ಒಲಂಪಿಯನ್ ನಿಕಿನ್ ತಿಮ್ಮಯ್ಯ ವಿಫಲರಾದರು. ದಾಳಿಗೆ ಪ್ರತಿ ದಾಳಿ ನಡೆಸಿದ ಮಂಡೇಪಂಡ ತಂಡ, ಆಕರ್ಷಕ ಶಾರ್ಟ್ ಪಾಸ್‌ಗಳ ಮೂಲಕ ಎದುರಾಳಿ ಚೇಂದಂಡ ತಂಡದ ಗೋಲು ಆವರಣವನ್ನು ಪ್ರವೇಶಿಸಿ ಗೋಲು ಗಳಿಕೆಯ ಪ್ರಯತ್ನ ನಡೆಸಿ ಗೋಲು ಗಳಿಸುವ ಪ್ರಯತ್ನದಲ್ಲಿ ವಿಫಲವಾಯಿತು. ಹೀಗಿದ್ದೂ ಮೊದಲ ಪೆನಾಲ್ಟಿ…
ಮಡಿಕೇರಿ ಏ.27 NEWS DESK : ದೇಶ ಮತ್ತು ರಾಜ್ಯದಲ್ಲಿ ಹಾಕಿ ಕ್ರೀಡೆ ಜೀವಂತವಾಗಿರಲು ಕೊಡವರು ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶ್ಲಾಘಿಸಿದ್ದಾರೆ. ಕೊಡವ ಕುಟುಂಬ ತಂಡಗಳ ನಡುವಿನ ಮುದ್ದಂಡ ಕಪ್ ಹಾಕಿ ಉತ್ಸವದ ಅಂತಿಮ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಕಿ ಕ್ರೀಡೆಗೆ 4 ಸಾವಿರ ವರ್ಷಗಳ ಇತಿಹಾಸವಿದೆ, ಈಜಿಪ್ಟ್ ನಲ್ಲಿ ಆರಂಭಗೊಂಡ ಹಾಕಿ ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ಈ ಕ್ರೀಡೆ ಪ್ರಖ್ಯಾತಿಯನ್ನು ಪಡೆದು ದೇಶದ ಕೀರ್ತಿ ಮತ್ತು ಗೌರವವನ್ನು ಕಾಪಾಡಿದೆ. ದೇಶ ಮತ್ತು ರಾಜ್ಯದಲ್ಲಿ ಹಾಕಿ ಜೀವಂತವಾಗಿರಲು ಕೊಡವರು ಕಾರಣಕರ್ತರಾಗಿದ್ದಾರೆ. ಹಾಕಿ ಹಬ್ಬದ ಮೂಲಕ ಹಾಕಿ ಕ್ರೀಡೆಯನ್ನು ಜೀವಂತವಾಗಿಟ್ಟು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿರುವ ಕೊಡವರಿಗೆ ಕೋಟಿ ಕೋಟಿ ನಮನ ಎಂದರು. ಹಿಂದೆ ರಾಜ್ಯವಾಗಿದ್ದ ಕೊಡಗು ಅತ್ಯಂತ ಸಣ್ಣ ಜಿಲ್ಲೆಯಾಗಿದೆ, ಆದರೆ ದೇಶಕ್ಕೆ ದೊಡ್ಡ ದೊಡ್ಡ ಕೊಡುಗೆಯನ್ನೇ ನೀಡಿದೆ. ಸೇನಾ ಕ್ಷೇತ್ರದಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ, ಸೇರಿದಂತೆ ಹಲವು ಅಧಿಕಾರಿಗಳು ಸೇವೆ ಸಲ್ಲಿಸಿದ್ದು,…
ಮಡಿಕೇರಿ ಏ.27 NEWS DESK : ಹಾಕಿ ಇಂಡಿಯಾ ಸಂಸ್ಥೆಗೆ 100 ವಷ೯ಗಳು ತುಂಬಿದ ಹಿನ್ನಲೆಯಲ್ಲಿ ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ನಿಂದ ವಿಶಿಷ್ಯವಾಗಿ ಈ ಸಂಭ್ರಮವನ್ನು ಆಚರಿಸಲಾಯಿತು. ಭಾರತೀಯ ಹಾಕಿ ರಂಗದ ದಿಗ್ಗಜ ಆಟಗಾರರನ್ನು ಗಾಲ್ಪ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತ ಮದ್ರಾಸ್ ಕ್ರಿಕೆಟ್ ಕ್ಲಬ್ ಗಳ ಸಂಯುಕ್ತಾಶ್ರಯದಲ್ಲಿ ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ವಿಶಿಷ್ಟ ಕಾಯ೯ಕ್ರಮ ಆಯೋಜಿತವಾಗಿತ್ತು. ಭಾರತೀಯ ಹಾಕಿ ಕ್ರೀಡೆಗೆ ಶತಮಾನೋತ್ಸವದ ಸಂಭ್ರಮವನ್ನು ಹಾಕಿದಿಗ್ಗಜರಿಗೆ ಸನ್ಮಾನದ ಗೌರವಾಪ೯ಣೆ ಮೂಲಕ ಆಚರಿಸಲಾಯಿತು. ಮಾಳೆಯಂ ಮುತ್ತಪ್ಪ, ಅಂಜಪರವಂಡ ಡಾ. ಬಿ. ಸುಬ್ಬಯ್ಯ. ಮುಕ್ಕಾಟೀರ ತಿಮ್ಮಯ್ಯ ಅಪ್ಪಯ್ಯ. ಬಾಳೆಯಡ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ಮುಕ್ಕಾಟೀರ ವಿನೋದ್ ಚಿಣ್ಣಪ್ಪ, ಕೂತಂಡ ಪೂಣಚ್ಚ, ಪೈಕೇರ ಕಾಳಯ್ಯ, ಮನೆಯಪಂಡ ಸೋಮಯ್ಯ, ಸಿ.ಎಸ್. ಪೂಣಚ್ಚ, ಲೆಫ್ಟಿನೆಂಟ್ ಕನ೯ಲ್ ಬಾಳೆಯಡ ಕೆ. ಸುಬ್ರಹ್ಮಣಿ, ಬಿ.ಪಿ. ಗೋವಿಂದ, ಮೊಹಮ್ಮದ್ ರಿಯಾಜ್, ಮತ್ತು ಪದ್ಮಶ್ರೀ ವಾಸುದೇವನ್ ಭಾಸ್ಕರನ್ ಅವರನ್ನು ಮಕೇ೯ರಾ ಡೌನ್ಸ್…
ಮಡಿಕೇರಿ NEWS DESK ಏ.27 : ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಟಿ.ಕೆ.ಅಶೋಕ್ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸದಸ್ಯರಾದ ಕಾರ್ತಿಕ್, ತೀರ್ಥಾನಂದ, ಯಶೋಧ ಪುಟ್ಟಸ್ವಾಮಿ, ತಸ್ಲೀಂ, ಸುಮಿತ್ರ ಮಹೇಶ್ ಹಾಗೂ ತನ್ಮಯ್ ಅವರುಗಳ ಬೆಂಬಲದಿAದ ಟಿ.ಕೆ.ಅಶೋಕ್ ಅವರು ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಸೋಮವಾರಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್, ಡಿಸಿಸಿ ಬ್ಯಾಂಕ್ ಸದಸ್ಯ ಶರತ್ ಶೇಖರ್, ಸೋಮವಾರಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಂದೀಪ್, ಕಾಂಗ್ರೆಸ್ ಮುಖಂಡರಾದ ಮತ್ತೂರು ಮಹೇಶ್, ಗಂಗಾಧರ್, ಡಿ.ಜೆ.ಈರಪ್ಪ, ಅನಿಲ್ ನಿಡ್ತ, ಶೇಖರ್ ನಿಡ್ತ ಹಾಗೂ ಕಾರ್ಯಕರ್ತರು ಟಿ.ಕೆ.ಅಶೋಕ್ ಅವರನ್ನು ಅಭಿನಂದಿಸಿದರು.
ಮಡಿಕೇರಿ NEWS DESK ಏ.27 : ಮಡಿಕೇರಿ ತಾಲ್ಲೂಕು ಬಂಟರ ಸಂಘದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಬಿ.ಆರ್.ಸದಾಶಿವ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ರೈ ಕತ್ತಲೆಕಾಡು, ಖಜಾಂಚಿಯಾಗಿ ಬಿ.ಬಿ.ದಿವೇಶ್ ರೈ, ಗೌರವಾಧ್ಯಕ್ಷರಾಗಿ ರಮೇಶ್ ರೈ, ಉಪಾಧ್ಯಕ್ಷರಾಗಿ ಬಿ.ಕೆ.ವಿಠಲ್ ರೈ, ಗಿರೀಶ್ ರೈ ಮೂರ್ನಾಡು, ಸಹ ಖಜಾಂಚಿಯಾಗಿ ಬಿ.ಕೆ.ಸುರೇಶ್ ರೈ, ಸಹ ಕಾರ್ಯದರ್ಶಿಯಾಗಿ ವಿದ್ಯಾಧರ ರೈ ಗಾಳಿಬೀಡು ಹಾಗೂ ಗೌರವ ಸಲಹೆಗಾರರಾಗಿ ಬಿ.ಸಿ.ಹರೀಶ್ ರೈ ಆಯ್ಕೆಯಾದರು. ತಾಲ್ಲೂಕು ಸಂಘದ ನಿರ್ಗಮಿತ ಅಧ್ಯಕ್ಷ ರಮೇಶ್ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿಠಲ್ ರೈ ಸ್ವಾಗತಿಸಿ, ದಿನೇಶ್ ರೈ ವಂದಿಸಿದರು.
ಕುಶಾಲನಗರ ಏ.26 NEWS DESK : ತಾವು ಕಲಿತ ವಿದ್ಯಾಸಂಸ್ಥೆಗೆ ಯಾವತ್ತೂ ಕೃತಜ್ಞರಾಗುವ ಮೂಲಕ ಸಂಸ್ಥೆಯ ಪ್ರಗತಿಗೆ ಕಂಕಣ ಬದ್ದರಾಗಬೇಕೆಂದು ಕುಶಾಲನಗರದ ಹಿರಿಯ ನಾಗರಿಕರಾದ ವಿ.ಎನ್.ವಸಂತಕುಮಾರ್ ಹಳೆಯ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನೆನಪು ಎಂಬ ಹಳೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನಲ್ಲಿ ಕಲಿತ, ಆಡಿ ನಲಿದ ನೆನಪುಗಳು ಯಾವತ್ತಿಗೂ ಚಿರಸ್ಮರಣೀಯ. ಕಾಲೇಜಿನಲ್ಲಿ ಕಲಿತು ಇಂದು ಉತ್ತಮ ಭವಿಷ್ಯ ಕಟ್ಟಿಕೊಂಡಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜ ಸೇವೆಗೆ ತಾವು ಕಲಿತ ವಿದ್ಯಾದೇಗುಲಕ್ಕೆ ಮರಳಿಸಿದರೆ ಅದರಷ್ಟು ಪುಣ್ಯದ ಕಾರ್ಯ ಬೇರಾವುದೂ ಇಲ್ಲ ಎಂದು ಅವರು ಹೇಳಿದರು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ಹೆಚ್.ವಿ.ಶಿವಪ್ಪ ಮಾತನಾಡಿ, ಕಾಲೇಜು ಆರಂಭವಾದ ಹೊಸತರಲ್ಲಿ ಸಂಸ್ಥೆಯ ಅಭಿವೃದ್ದಿಗೆ ತಾವು ದುಡಿದ ಸೇವೆಯನ್ನು ಸ್ಮರಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕ ಡಾ.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 2007 – 08 ರ ಸಾಲಿನಲ್ಲಿ ಆರಂಭವಾದ ಕಾಲೇಜು ಇಂದು 18…
ಮಡಿಕೇರಿ ಏ.26 NEWS DESK : ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್‍ನಲ್ಲಿ ಕಂಬೀರಂಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನ ಸಂಖ್ಯೆ 2ರಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 2-1 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯಭೇರಿ ಬಾರಿಸಿತು. ಕಂಬೀರಂಡ ಪರ ಪೊನ್ನಮ್ಮ 2 ಗೋಲು ದಾಖಲಿಸಿದರು. ಕೇಚೆಟ್ಟಿರ ಪರ ತೇಜಸ್ವಿ ಹಾಗೂ ಪಾರ್ವತಿ ತಲಾ 1 ಗೋಲು ಬಾರಿಸಿದರು. ಕೇಚೆಟ್ಟಿರ ಪಾರ್ವತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಏ.21 ರಿಂದ ನಡೆದ ಮಹಿಳೆಯರ 5ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 56 ಕೊಡವ ಮಹಿಳಾ…
ಮಡಿಕೇರಿ ಏ.26 NEWS DESK : ಹದಿನಾಲ್ಕರ ಹರೆಯದ ಪೋರ, ಗೋಲ್ ಕೀಪರ್ ಮಂಡೇಪಂಡ ದ್ಯಾನ್ ಬೆಳ್ಯಪ್ಪ ಅವರ ಅತ್ಯಮೋಘ ಆಟದ ಪ್ರದರ್ಶನದಿಂದ ಮಂಡೇಪಂಡ ಕೊಡವ ಕೌಟುಂಬಿಕ ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ 3 ಬಾರಿಯ ಛಾಂಪಿಯನ್ ಬಲಿಷ್ಠ ಚೇಂದಂಡ ತಂಡವನ್ನು ಎದುರಿಸಲಿದೆ. ‘ಶೂಟೌಟ್’ನಲ್ಲಿ ಎದುರಾಳಿ, ಮೂರು ಬಾರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಛಾಂಪಿಯನ್ ನೆಲ್ಲಮಕ್ಕಡ ತಂಡದ ಎರಡು ಗೋಲಿನ ಅವಕಾಶಗಳನ್ನು ಗೋಲಿ ಮಂಡೇಪಂಡ ಡ್ಯಾನ್ ಬೆಳ್ಯಪ್ಪ ವಿಫಲಗೊಳಿಸುತ್ತಿರುವಂತೆಯೇ ಮಂಡೇಪಂಡ ತಂಡ 5-4 ಗೋಲುಗಳ ಅಂತರದ ಮಹತ್ವದ ಗೆಲುವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸೆಮಿಫೈನಲ್‍ನಲ್ಲಿ ಚೇಂದಂಡ ತಂಡ 3-1 ಗೋಲುಗಳ ಅ0ತರದಿಂದ ಎದುರಾಳಿ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿ ಫೈನಲ್‍ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ಮಂಡೇಪಂಡ-ನೆಲ್ಲಮಕ್ಕಡ- ಆಕ್ರಮಣಕಾರಿ ಆಟದ ಪ್ರದರ್ಶನ ಕಂಡ ಮೊದಲ ಸೆಮಿಫೈನಲ್‍ನಲ್ಲಿ ಮಂಡೇಪಂಡ ಮತ್ತು ನೆಲ್ಲಮಕ್ಕಡ ತಂಡಗಳು ಆರಂಭದಿಂದಲೆ ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೋಲುಗಳಿಸುವ ಪ್ರಯತ್ನಕ್ಕೆ ಇಳಿಯುವುದರೊಂದಿಗೆ ಪಂದ್ಯದ…
ಮಡಿಕೇರಿ ಏ.26 NEWS DESK : ಚೆಯ್ಯಂಡಾಣೆಯ ಚೇಲವಾರ ಗ್ರಾಮದ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಮೇ 3 ಮತ್ತು 4 ರಂದು ದ್ವಿತೀಯ ವರ್ಷದ ನೇಮೋತ್ಸವ ನಡೆಯಲಿದೆ. ಮೇ 3 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಪೂಜೆ, ಸಂಜೆ 5 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, 6 ಗಂಟೆಗೆ ಮಂತ್ರವಾದಿ ಗುಳಿಗ ದೈವದ ಕೋಲ, ರಾತ್ರಿ 9 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ, 10.30 ಗಂಟೆಗೆ ಪಾಷಾಣಮೂರ್ತಿ ದೈವದ ಕೋಲ, ರಾತ್ರಿ 2 ಗಂಟೆಗೆ ಮಯೊಂತಿ ದೈವದ ಕೋಲ ಜರುಗಲಿದೆ. ಮೇ 4 ರಂದು ಬೆಳಿಗ್ಗೆ 7 ಗಂಟೆಗೆ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಸೇವೆಯನ್ನು ನಡೆಸಿಕೊಟ್ಟು ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವಿಶೇಷ ಸೂಚನೆ : ನೇಮೋತ್ಸವದಲ್ಲಿ ಫೋಟೋ,…






