ಲೇಖಕ: admin

ಮೈಸೂರು NEWS DESK ಏ. 18: ಕರ್ನಾಟಕ ಸಾಂಸ್ಕೃತಿಕ ಹಾಗೂ ಪಾರಂಪರಿಕ ರಾಜಧಾನಿ ಮೈಸೂರಿನಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮವನ್ನು ತೀವ್ರವಾಗಿ ಖಂಡಿಸಿರುವ *ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ಅವರು ಈ ಸಂಬಂಧ ನಿರ್ಧಾರ ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಜರಾಬಾದ್‌ ವ್ಯಾಪ್ತಿಯ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ವೃತ್ತದ ಬಳಿ 40 ಮರಗಳನ್ನು ಕಡಿದಿರುವ ಬಗ್ಗೆ ಇನ್ನಷ್ಟು ಮರಗಳಿಗೆ ಕೊಡಲಿ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಯದುವೀರ್‌ ಒಡೆಯರ್‌, “ಮರ”ಮೇಧ ನಿಲ್ಲಿಸಲು ನಡೆಯುತ್ತಿರುವ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸಾಧುವಲ್ಲ. ಪರಿಸರ ಹಾಗೂ ಪ್ರಕೃತಿಯನ್ನು ಸಂರಕ್ಷಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಮರಗಳನ್ನು ಕಡಿಯಲು ಬಿಡುವುದಿಲ್ಲ. ಒಂದು ವೇಳೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ತಿಳಿಸಿದರೆ ಇದಕ್ಕೆ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸದರು ತಿಳಿಸಿದ್ದಾರೆ. ಪರಿಸರ ತಜ್ಞರು,…

Read More

ಸಿದ್ದಾಪುರ NEWS DESK ಏ.18 : ಹುಲಿ ದಾಳಿಗೆ ಒಂದೂವರೆ ವರ್ಷದ ಕರುವೊಂದು ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಗ್ರಾಮದ ಸಿ.ಟಿ.ಪೊನ್ನಪ್ಪ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಕಳೆದ ಒಂದು ತಿಂಗಳಲ್ಲಿ ಮಾಲ್ದಾರೆ ಮತ್ತು ಚೆನ್ನಯ್ಯನ ಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಐದು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಜೀವಭಯದಲ್ಲಿರುವ ಈ ಭಾಗದ ಜನ ಅರಣ್ಯ ಇಲಾಖೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಹುಲಿಯನ್ನು ಶೀಘ್ರ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಹುಲಿಯ ಚಲನವಲನ ಪರಿಶೀಲಿಸಲು ಕ್ಯಾಮರಾ ಅಳವಡಿಸಲಾಗಿದ್ದು, ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆರ್.ಎಫ್.ಒ ಗಂಗಾಧರ್ ನೇತೃತ್ವದಲ್ಲಿ ಡಿಆರ್‌ಎಫ್‌ಒ ಶಶಿ, ರಾಜೇಶ್, ವಾಚರ್ ಸುನಿಲ್, ಆರ್‌ಆರ್‌ಟಿ ತಂಡದ ಶಂಕರ್, ಮುತ್ತ, ರಂಜಿತ್, ಭರತ್, ರೋಷನ್, ಪ್ರದೀಪ್ ಇದ್ದರು.

Read More

ಮಡಿಕೇರಿ NEWS DESK ಏ.18 : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರು ಕೊಡವ ಸಮಾಜದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು. ಎ.ಎಸ್.ಪೊನ್ನಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿ ಪ್ರಮುಖ ಖಾತೆ ನೀಡುವಂತೆ ಒತ್ತಾಯಿಸಿ ಕೊಡವ ಸಮಾಜ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಮುಖರು ಸಚಿವ ಸ್ಥಾನದ ಅಗತ್ಯತೆಯ ಬಗ್ಗೆ ವಿವರಿಸಿದರು. ಅಲ್ಪಸಂಖ್ಯಾತ ಕೊಡವ ಜನಾಂಗದ ಪ್ರಮುಖ ಹಾಗೂ ಬಲಿಷ್ಠ ಪ್ರತಿನಿಧಿಯಾಗಿರುವ ಎ.ಎಸ್.ಪೊನ್ನಣ್ಣ ಅವರು ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹಗಾರರಾಗಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಅವರು ಸಚಿವ ಸ್ಥಾನಕ್ಕೆ ಯೋಗ್ಯರು ಎಂಬ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಭಾಷಿಕ ಅಲ್ಪಸಂಖ್ಯಾತರೂ ಆಗಿರುವ ಕೊಡವ ಜನಾಂಗದವರು ಶತಮಾನಗಳಿಂದ ಕ್ರೀಡೆ, ಸೈನ್ಯ ಹಾಗೂ ಇನ್ನಿತರ ಪ್ರಮುಖ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಕೊಡವ ಸಮುದಾಯದ ಪ್ರತಿನಿಧಿಯಾಗಿರುವ ಪೊನ್ನಣ್ಣ ಅವರಿಗೆ ಪ್ರಮುಖ ಖಾತೆಯನ್ನು ನೀಡಿ ಸಚಿವರನ್ನಾಗಿಸಿ ತಮ್ಮ…

Read More

ಮಡಿಕೇರಿ ಏ.18 NEWS DESK : ಸ್ನೇಹಿತರ ಯುವಕ ಸಂಘದ 42ನೇ ವರ್ಷದ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಗಾಳೀಬೀಡು ಗ್ರಾಮದ ಅಡ್ಕದ ಬಾಣೆಯಲ್ಲಿ ಯಶಸ್ವಿಯಾಗಿ ನಡೆಯಿತು. ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ ಇದರ ಸಹಯೋಗದೊಂದಿಗೆ ಸ್ನೇಹಿತರ ಯುವಕ ಸಂಘದ ಅಧ್ಯಕ್ಷ ಕೋಳುಮುಡಿಯದ ಎ.ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಡಿವೈಎಸ್‍ಪಿ ಯಾಲದಾಳು ಕೇಶವಾನಂದ  ಉದ್ಧಾಟಿಸಿದರು. ಸಭಾಕಾರ್ಯಕ್ರಮದ ನಂತರ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಮುಕ್ತ ಹಗ್ಗಜಗ್ಗಾಟ ನಡೆಯಿತು. ಅಲ್ಲದೇ, ಪುರುಷರಿಗೆ ವಾಲಿಬಾಲ್ ಪಂದ್ಯಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಿತು. ಪುರುಷರಿಗೆ, ಮಹಿಳೆಯರಿಗೆ, ಹಿರಿಯ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಿತು. ಅಲ್ಲದೇ, ಬಾರದ ಕಲ್ಲು ಎಸೆತ, ಬಕೇಟ್‍ಗೆ ಚೆಂಡು ಹಾಕುವುದು, 1,500 ಮೀಟರ್ ಓಟ, 100*4 ರಿಲೆ ಓಟ, ವಯಸ್ಕರಿಗೆ ಓಟ, ಪಟ್ಟಣಕ್ಕೆ ಬಾಂಬ್, ಕೋಳಿ ಜಗಳ ಸೇರಿದಂತೆ…

Read More

ಮಡಿಕೇರಿ NEWS DESK ಏ.18 : ಕೊಡಗು ಗೌಡ ಸಮಾಜಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆನಂದ್ ಕರಂದ್ಲಾಜೆ ಅಧಿಕಾರ ಸ್ವೀಕಾರಿಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಅಧಿಕಾರ ಹಸ್ತಾಂತರಿಸಿದರು.

Read More

*ಮೈದಾನ 1 :: ಚೋಯಮಾಡಂಡ ಮತ್ತು ಕೋಟೇರ ನಡುವಿನ ಪಂದ್ಯದಲ್ಲಿ ಕೋಟೇರ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೋಟೇರ ಪರ ಕೌಶಿಕ್ 1 ಗೋಲು ದಾಖಲಿಸಿದರು. ಚೋಯಮಾಡಂಡ ಬಿಪಿನ್ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಮ್ಮಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಪ್ರಧಾನ್ ಸೋಮಣ್ಣ ಹಾಗೂ ಸೂರತ್ ಬೋಜಣ್ಣ ತಲಾ 1 ಗೋಲು ದಾಖಲಿಸಿದರು. ಕುಮ್ಮಂಡ ಬೋಸು ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುಕ್ಕಾಟಿರ (ಬೋಂದ) ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಚಂಗುಲಂಡ ಗೆಲುವು ಸಾಧಿಸಿತು. ಚಂಗುಲಂಡ ಪರ ಡಿಶಿನ್ ಗಣಪತಿ ಹಾಗೂ ಗೌತಮ್ ತಲಾ 1 ಗೋಲು ದಾಖಲಿಸಿದರು. ಮುಕ್ಕಾಟಿರ ಪರ ನಿಶಾಂತ್ ತಿಮ್ಮಯ್ಯ 1 ಗೋಲು ಬಾರಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಟ್ರಂಗಡ ಮತ್ತು ಮಳವಂಡ ನಡುವಿನ…

Read More

*ಮೈದಾನ 1 :: ಬೆಳಿಗ್ಗೆ 9 ಗಂಟೆಗೆ ಚೆಪ್ಪುಡಿರ ಮತ್ತು ಕರ್ತಮಾಡ, 10 ಗಂಟೆಗೆ ಮಾದಂಡ ಮತ್ತು ಮೇಚಿಯಂಡ, 11 ಗಂಟೆಗೆ ಬೊಳ್ಳಂಡ ಮತ್ತು ಬೊಟ್ಟೋಳಂಡ, ಮಧ್ಯಾಹ್ನ 12 ಗಂಟೆಗೆ ಕೊಂಗೇಟಿರ ಮತ್ತು ಚೇಂದಂಡ, 1 ಗಂಟೆಗೆ ಐಚೆಟ್ಟೀರ ಮತ್ತು ನಾಳಿಯಂಡ, 2 ಗಂಟೆಗೆ ನೆಲ್ಲಮಕ್ಕಡ ಮತ್ತು ನಾಪಂಡ, 3 ಗಂಟೆಗೆ ಕೋಳೇರ ಮತ್ತು ಚೆಕ್ಕೇರ *ಮೈದಾನ 2 ::  ಬೆಳಿಗ್ಗೆ 8.30 ಗಂಟೆಗೆ ಪರದಂಡ ಮತ್ತು ಐನಂಡ, 9 ಗಂಟೆಗೆ ಬಯವಂಡ ಮತ್ತು ಕರವಂಡ, 10 ಗಂಟೆಗೆ ಕಳ್ಳಿಚಂಡ ಮತ್ತು ಕಂಬೀರಂಡ, 11 ಗಂಟೆಗೆ ಕೋನೇರಿರ ಮತ್ತು ಇಟ್ಟೀರ, ಮಧ್ಯಾಹ್ನ 1 ಗಂಟೆಗೆ ಕಾಂಡಂಡ ಮತ್ತು ಕುಲ್ಲೇಟಿರ, 2 ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ಮತ್ರಂಡ

Read More

ಮಡಿಕೇರಿ ಏ.18 NEWS DESK : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಲ್ಲಿ ಸಹಾಯಕ ಇಂಜಿನಿಯ್‌ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆಯಾದ ಎ.ಆರ್.‌ ಸಂಪತ್‌ ಅವರಿಗೆ ಗ್ರೀನ್‌ ಸಿಟಿ ಫೋರಂ ವತಿಯಿಂದ ಬೀಳ್ಕೊಡಲಾಯಿತು. 2015ರಿಂದ ಸುದೀರ್ಘ ಅವಧಿವರೆಗೆ ಸಹಾಯಕ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದ ಸಂಪತ್‌ ಅವರು ಸರ್ಕಾರದ ಆದೇಶದಂತೆ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕಚೇರಿಯಲ್ಲಿ ಭೇಟಿಯಾದ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ ಹಾಗೂ ಲೈನ್‌ಮನ್‌ಗಳು ಶಾಲು ಹೊಸಿದಿ ಫಲ ತಾಂಬೂಲ ನೀಡಿ ಗೌರವಿಸಿದರು.  ಸಂಪತ್‌ ಅವರ ಕಾರ್ಯನಿರ್ವಹಣೆಯ ಅವಧಿ ಸುಲಭದ್ದಾಗಿರಲಿಲ್ಲ. 2018ರ ನಂತರ ಪ್ರಕೃತಿ ವಿಕೋಪ, ಪ್ರವಾಹದಂತಹ ಕಠಿಣ ಪರಿಸ್ಥಿತಿಯಲ್ಲಿ ಜನರಿಗೆ ಹೆಚ್ಚು ಸಮಸ್ಯೆಯಾಗದ ರೀತಿ ಕಾರ್ಯ ನಿರ್ವಹಿಸಿದ್ದಾರೆ. ಕಠಿಣ ಸಂದರ್ಭದಲ್ಲಿ ತನ್ನ ಸಿಬ್ಬಂದಿಯನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಜನ ಮನ್ನಣೆ ಗಳಿಸಿದ್ದಾರೆಂದು ಸತ್ಯ ಗಣಪತಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮಧ್ಯೆ ಸಂಪತ್‌ ಅವರು ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಲಾಭಕ್ಕಾಗಿ ಸಮಯ ಕಳೆಯುವುದಕ್ಕಿಂತ…

Read More

ಮಡಿಕೇರಿ ಏ.18 NEWS DESK : ವಕ್ಫ್ ಮಂಡಳಿಗಳಿಗೆ ಸದಸ್ಯರ ನೇಮಕ ಮಾಡದಂತೆ ಮತ್ತು ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ತಾರದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮುಂದಿನ ಆದೇಶದವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್ ಕ್ರಮ ಸ್ವಾಗತಾರ್ಹವೆಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ನಮಗೆ ಅಪಾರ ಗೌರವವಿದೆ. ನ್ಯಾಯಾಲಯದ ಮೇಲೆ ನಾವು ಹೊಂದಿರುವ ವಿಶ್ವಾಸಕ್ಕೆ ವಕ್ಫ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವೇ ಸಾಕ್ಷಿಯಾಗಿದೆ. ಅರ್ಜಿಗಳ ವಿಚಾರಣೆಯ ನಂತರ ಮುಸಲ್ಮಾನರ ಧಾರ್ಮಿಕ ನಂಬಿಕೆಗೆ ಜಯ ಸಿಗಲಿದೆ ಎನ್ನುವ ಬಲವಾದ ವಿಶ್ವಾಸವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಕಾನೂನು ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಬಳಿಕ…

Read More

ಮಡಿಕೇರಿ ಏ.18 NEWS DESK : ಲಾರಿ ಮತ್ತು ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕೊಡಗಿನ ಹಾತೂರು ಗ್ರಾಮದಲ್ಲಿ ನಡೆದಿದೆ. ಬಿ.ಶೆಟ್ಟಗೇರಿ ಗ್ರಾಮದ ಅರ್ಚಕ ದಿ.ಪುಂಡರಿಕಾಕ್ಷ ಅವರ ಪತ್ನಿ ಲಲಿತ(70) ಹಾಗೂ ಪುತ್ರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ(42) ಮೃತ ದುರ್ದೈವಿಗಳು. ಮೈಸೂರಿನತ್ತ ಹೋಗುತ್ತಿದ್ದ ತರಕಾರಿ ಲಾರಿ ಮತ್ತು ಗೋಣಿಕೊಪ್ಪಲಿನಿಂದ ಬಿ.ಶೆಟ್ಟಿಗೇರಿಯತ್ತ ಬರುತ್ತಿದ್ದ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓಮ್ನಿಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಓಮ್ನಿ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More