ಲೇಖಕ: admin

ಸುಂಟಿಕೊಪ್ಪ ಜು.15 NEWS DESK : ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸರಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ 2025-26ನೇ ಸಾಲಿಗೆ ಶೈಕ್ಷಣಿಕ ಸಂಸತ್ ಮಂತ್ರಿ ಮಂಡಲ ಶಾಲಾ ನಾಯಕನಾಗಿ ಅಜಿತ್, ಉಪನಾಯಕಿ ವೈಷ್ಣವಿ, ಆಹಾರ ಮಂತ್ರಿಯಾಗಿ ರಿದಾ ಮರಿಯಮ್, ಆಹಾರ ಉಪಮಂತ್ರಿಯಾಗಿ ನಿಶ್ಮಿತಾ, ರಂಜಿತ, ಆರೋಗ್ಯ ಮಂತ್ರಿಯಾಗಿ ಮೊಹಮ್ಮದ್ ಶಹಬಾಸ್, ಆರೋಗ್ಯ ಉಪಮಂತ್ರಿಯಾಗಿ ರೆಹನತ್, ಸ್ಚಚ್ಚತಾ ಮಂತ್ರಿ ಹಾಗೂ ಶಾಲಾ ಭದ್ರತಾ ಸಮಿತಿ ಮಂತ್ರಿಯಾಗಿ ಲೇಖಿಕ್, ಉಪ ಮಂತ್ರಿಯಾಗಿ ಅರ್ಪಿತ ರಾಡ್ರಿಗಸ್, ಕ್ರೀಡಾಮಂತ್ರಿಯಾಗಿ ಶಶಿಕಾಂತ, ಉಪಮಂತ್ರಿಯಾಗಿ ಸೃಜನ, ಸಾಂಸ್ಕೃತಿಕ ಮತ್ತು ವಾರ್ತಾ ಮಂತ್ರಿಯಾಗಿ ದೀಕ್ಷಾ, ವಾರ್ತಾ ಉಪಮಂತ್ರಿಯಾಗಿ ನೌಶಿನ ಅವರುಗಳಿಗೆ ಪ್ರಮಾಣ ವಚನ ಬೋಧಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಸಿ.ಟಿ.ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಬಾಲಕೃಷ್ಣ, ಶಾಲಾಭಿವೃದ್ಧಿ…

Read More

ನ್ಯೂಯಾರ್ಕ್ ಜು.15 NEWS DESK : ಯಶಸ್ವಿ ಬಾಹ್ಯಾಕಾಶ ಯಾನ ಮುಕ್ತಾಯಗೊಳಿಸಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಅವರಿದ್ದ ತಂಡ ಇಂದು ಡ್ರ್ಯಾಗನ್ ನೌಕೆಯ ಮೂಲಕ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. “ನಾವು ಮನೆಗೆ ಮರಳಿದ್ದೇವೆ” ಆಕ್ಸಿಯಮ್ -4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಜುಲೈ 15 ರಂದು ಪೆಸಿಫಿಕ್ ಮಹಾಸಾಗರದ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಡ್ರ್ಯಾಗನ್ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆ ಇಳಿದ ಸ್ವಲ್ಪ ಸಮಯದ ನಂತರ, ಮಧ್ಯಾಹ್ನ 3.02 ಕ್ಕೆ ಆಕ್ಸಿಯಮ್ ಸ್ಪೇಸ್‌ನ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ತಿಳಿಸಿದ ಸಂದೇಶ ಇದಾಗಿದೆ. ಪೆಗ್ಗಿ ವಿಟ್ಸನ್ ಸಂದೇಶಕ್ಕೆ ಕಮಾಂಡ್ ಕೇಂದ್ರ “ಮನೆಗೆ ಸ್ವಾಗತ” ಎಂದು ಉತ್ತರಿಸಿದೆ. ಇದಕ್ಕೆ ಪೆಗ್ಗಿ ಉತ್ತರಿಸುತ್ತಾ, “ಮಹಾ ಸವಾರಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಧನ್ಯವಾದಗಳು.” ಗ್ರೇಸ್‌ನಲ್ಲಿರುವ ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಆಕ್ಸಿಯಮ್ -4 ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕಳೆದ 21 ದಿನಗಳ ನಂತರ, ಮಿಷನ್ ಪೈಲಟ್…

Read More

ಮಡಿಕೇರಿ ಜು.15 NEWS DESK : ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದಿಂದ ಕಥೆ ಹೇಳುವ ಸ್ಪರ್ಧೆ ಆಯೋಜಿಸಲಾಗಿದೆ. ಆ.3 ರಂದು ಭಾನುವಾರ ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ಕಾಮಧೇನು ಗೋ ಶಾಲೆಯಲ್ಲಿ ‘ಕಥಾ ಸಮಯ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸ್ವರಚಿತ ಕಥೆ ವಾಚಿಸಲು ಮೂರರಿಂದ ಐದು ನಿಮಿಷ ಸಮಯದ ಅವಕಾಶವಿರುತ್ತದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ತಮ್ಮ ಹೆಸರನ್ನು ಜು.25 ರೊಳಗಾಗಿ 9353531976, 917760908774 ಸಂಖ್ಯೆಯನ್ನು ಸಂಪರ್ಕಿಸಿ  ನೊಂದಾಯಿಸಿಕೊಳ್ಳ ಬಹುದಾಗಿದೆ.

Read More

ಮಡಿಕೇರಿ ಜು.15 NEWS DESK : ಸಮಾಜದ ಉತ್ತಮ ಅಭಿವೃದ್ಧಿಗೆ ಮತ್ತು ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅಧಿಕಾರಿಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿದಾಗ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಕಾನ್ಸೀರಾಂಜೀ ನಗರದ ಸ್ಥಾಪಕಾಧ್ಯಕ್ಷ ಕೆ.ಮೊಣ್ಣಪ್ಪ ಅಭಿಪ್ರಾಯಪಟ್ಟರು. ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರಾದ ಶೇಖರ್ ಅವರನ್ನು ಹೊದ್ದೂರು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾನ್ಸೀರಾಂಜೀ ನಗರದ ಪಾಲೆಮಾಡುವಿನ ನಿವಾಸಿಗಳ ಪರವಾಗಿ ಸನ್ಮಾನಿಸಿ ಮಾತನಾಡಿದರು. ಅಧಿಕಾರಿಗಳನ್ನು ಸರಕಾರದ ಮಾನದಂಡದಂತೆ ಕರ್ತವ್ಯದ ಧ್ಯೇಯೋದ್ದೇಶದಿಂದ ಪ್ರಮಾಣ ವಚನ ಮಾಡಿ ಬರುತ್ತಾರೆ. ಸರ್ಕಾರಿ ಹುದ್ದೆಯಲ್ಲಿರುವ ಶೇ.75 ರಷ್ಟು ಅಧಿಕಾರಿಗಳು ನಾಮಕಾವಸ್ಥೆಗೆ ಕೆಲಸ ಮಾಡುತ್ತಾ ದರ್ಪ ಮತ್ತು ಬೇಜವಾಬ್ದಾರಿತನದಿಂದ ಕೂಡಿದ್ದು ಅಧಿಕಾರಿಗಳ ಭ್ರಷ್ಟಾಚಾರವು ತಾಂಡವವಾಡುತ್ತಿದೆ. ಇಂತಹ ಅಧಿಕಾರಿಗಳನ್ನು ಸಮಾಜವು ಸೂಕ್ಷ್ಮವಾಗಿ ನೋಡುತ್ತಿದೆ ಎಂಬ ಅರಿವು ಮೂಡಿಸಬೇಕು. ಆದ್ದರಿಂದ, ನಿಷ್ಠಾವಂತ ಅಧಿಕಾರಿಗಳಿಗೆ ಸನ್ಮಾನ ಅಭಿನಂದನೆಯನ್ನು ಸಲ್ಲಿಸುವ ಮೂಲಕ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯವನ್ನು ಹೆಚ್ಚಿಸಿ ಪ್ರಜ್ನಾವಂತ ಸಮಾಜಕ್ಕೆ ಮತ್ತು ಅಧಿಕಾರಿಗಳಿಗೆ…

Read More

ಮಡಿಕೇರಿ ಜು.15 NEWS DESK : ನಾಪೋಕ್ಲು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಯಿತು. ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ಮತ್ತು ನಾಪೋಕ್ಲು ಠಾಣೆಯ ಪಿಎಸ್ಐ ರಾಘವೇಂದ್ರ ಮನೆ ಮನೆಗೆ ಭೇಟಿ ನೀಡಿ ಕಾರ್ಯಕ್ರಮದ ಉದ್ದೇಶ ಮತ್ತು ಸೈಬರ್‌ ಅಪರಾಧ, ಮಾದಕ ವಸ್ತು, ಬಾಲಾಪರಾಧ, ಪೋಕ್ಸೋ ಕಾಯಿದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭ ಠಾಣೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು. 

Read More

ಬೆಂಗಳೂರು ಜು.15 NEWS DESK : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ವಿಧಾನಸೌಧದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾತುಗಳು: • ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. • ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದ್ದರೂ ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು. • ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ. • ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ…

Read More

ಮಡಿಕೇರಿ ಜು.15 NEWS DESK :ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.86 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 58.85 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1713.89 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1188.57 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 41.90 ಮಿ.ಮೀ. ಕಳೆದ ವರ್ಷ ಇದೇ ದಿನ 88.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2510.17 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1739.21 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 10.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 48.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1597.25 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1221.25 ಮಿ.ಮೀ. ಮಳೆಯಾಗಿತ್ತು. ಪೆÇನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 26.32 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 33.02…

Read More

ಬೆಂಗಳೂರು ಜು.15 NEWS DESK : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ “ವಿಶ್ವ ಯುವ ಕೌಶಲ್ಯ ದಿನಾಚರಣೆ 2025 ಹಾಗೂ ವಿಶ್ವ ಕೌಶಲ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ” ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು, ಬಳಿಕ ಕರ್ನಾಟಕ ರಾಜ್ಯ ಶುಶ್ರೂಷಕ ಪರಿಷತ್ತು ವತಿಯಿಂದ ಆಧಾರ್ ಹಾಗೂ ಡಿಜಿ ಲಾಕರ್ ಇ ಕೆವೈಸಿ ಮೂಲಕ ಸಮೂಹದ ವರೆಗೆ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನವನ್ನು ಲೋಕಾರ್ಪಣೆಗೊಳಿಸಿದರು.

Read More

ಮಡಿಕೇರಿ NEWS DESK ಜು.15 : ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಕಾಣೆಯಾಗಿದ್ದ ಮಡಿಕೇರಿ ತಾಲ್ಲೂಕಿನ ಅರೆಕಾಡು ಗ್ರಾಮದ ನಿವಾಸಿ ಕೆ.ಎನ್.ರಘು (38) ಅವರ ಮೃತದೇಹ ಪತ್ತೆಯಾಗಿದೆ. ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕ್ರಿಟಿಕಲ್ ಕೇರ್ ಕಟ್ಟಡದ ನೀರು ತುಂಬಿದ ಗುಂಡಿಯಲ್ಲಿ ರಘು ಅವರ ಮೃತದೇಹ ದೊರೆತ್ತಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ರಘು ಅವರನ್ನು ಅವರ ತಾಯಿ ರತ್ನ ಹಾಗೂ ಪತ್ನಿ ರಾಜೇಶ್ವರಿ ಅವರು ಜು.8 ರಂದು ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಜು.11 ರಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿನಲ್ಲಿ ತಾಯಿಯ ಬಳಿಯಿಂದ 200 ರೂ. ಪಡೆದ ರಘು ಅವರು ಕಾಫಿ ಹಾಗೂ ತಿಂಡಿಯನ್ನು ತರಲು ಹೊಟೇಲ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮರಳಿರಲಿಲ್ಲ, ಅಲ್ಲದೆ ಮನೆಗೂ ಬಂದಿರಲಿಲ್ಲ. ಇದರಿಂದ ಆತಂಕಗೊAಡ ಪತ್ನಿ ರಾಜೇಶ್ವರಿ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು…

Read More

ಕುಶಾಲನಗರ ಜು.15 NEWS DESK : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನುಕೊಲ್ಲಿ ವಿಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಚಿನ್ ನಿಂಬಾಳ್ಕರ್ ಅವರಿಗೆ ಮುಖ್ಯ ಮಂತ್ರಿ ಪದಕ ಲಭಿಸಿದೆ. ಅರಣ್ಯ ಇಲಾಖೆಯಲ್ಲಿ 200ಕ್ಕೂ ಹೆಚ್ಚು ಅರಣ್ಯ ಮೊಕದ್ದಮೆಗಳು, 30ಕ್ಕೂ ಹೆಚ್ಚು ವನ್ಯಜೀವಿ ಪ್ರಕರಣಗಳು ಹಾಗೂ 50ಕ್ಕೂ ಹೆಚ್ಚು ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಅರಣ್ಯ ಕಾನೂನು ಬಗ್ಗೆ ತರಬೇತಿ ಶಾಲೆಯಲ್ಲಿ ಭೋಧನೆಯನ್ನು ಮಾಡಿರುತ್ತಾರೆ.  ಇವರು ಮೂಲತಃ ಬೆಳಗಾವಿ ಜಿಲ್ಲೆ, ಅಥಣಿ ಯವರಾಗಿದ್ದು ಕಳೆದ 8 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಳೆದ ಕೆಲವು ವರ್ಷಗಳ ಕಾಲ ವಿರಾಜಪೇಟೆ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕುಶಾಲನಗರದ ಮೀನುಕೊಲ್ಲಿ ವಲಯದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Read More