ಮಡಿಕೇರಿ ಮಾ.25 NEWS DESK : ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ರೂ.10 ಸಾವಿರ ಗೌರವಧನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಆಶಾಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು. ರಾಜ್ಯ ಉಪಾಧ್ಯಕ್ಷೆ ಉಮಾದೇವಿ ಮಾತನಾಡಿ, ರೂ.15,000 ನಿಶ್ಚಿತ ಗೌರವಧನಕ್ಕಾಗಿ ಆಗ್ರಹಿಸಿ ಬೆಂಗಳೂರಿನ ಫ್ರಿಡಂ ಪಾರ್ಕ್‍ನಲ್ಲಿ ನಡೆಸಿದ ಹೋರಾಟದಲ್ಲಿ ರಾಜ್ಯದ 40,000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜನವರಿ 10 ರಂದು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಯ ಉನ್ನತ ಅಧಿಕಾರಿಗಳು, ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆಯಂತೆ…
ಲೇಖಕ: admin
ಮಡಿಕೇರಿ ಮಾ.25 NEWS DESK : ಮುಸಲ್ಮಾನರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮಾಜಿ ಶಾಸಕರುಗಳು, ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಗಳು ಸಂಪುಟದಿಂದಲೆ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಸಂವಿಧಾನದ ರಕ್ಷಕರು ತಾವೆನ್ನುವ ಕಾಂಗ್ರೆಸ್ ಪರಿಶಿಷ್ಟರು ಮತ್ತು ಡಾ.ಅಂಬೇಡ್ಕರ್ ಅವರುಗಳ ಹೆಸರನ್ನು ಹೇಳುತ್ತಲೆ ಅವರನ್ನು ತುಳಿಯುವ ಕೆಲಸವನ್ನು ಈ ಹಿಂದಿನಿಂದಲು ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಅಲ್ಪಸಂಖ್ಯಾತರಿಗೆ ಗಣನೀಯ ಸವಲತ್ತು ಒದಗಿಸುವ ಸಿದ್ದರಾಮಯ್ಯ ಅವರ ಬಡ್ಜೆಟ್ ಅವರೇ ಹೇಳುವಂತೆ ಚರಿತ್ರಾರ್ಹವಾದ ಬಡ್ಜೆಟ್ ಎಂದು ವ್ಯಂಗ್ಯವಾಡಿದರು. ಅಲ್ಪಸಂಖ್ಯಾತರ…
ಮಡಿಕೇರಿ ಮಾ.25 NEWS DESK : ಎ.ಕೆ.ಎಸ್ ಲೀಗಲ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಸಿಎಸ್ ಆರ್ ನಿಧಿ ಅಡಿ ‘ಗ್ರಾಮೀಣಾಭಿವೃದ್ಧಿ ಉದ್ದೇಶಕ್ಕೆ’ ಎ.ಎಸ್.ಪೊನ್ನಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಮೂಲಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ 23 ಲಕ್ಷ ರೂ.ಚೆಕ್ ಅನ್ನು ಹಸ್ತಾಂತರಿಸಿದರು.
ಮಡಿಕೇರಿ ಮಾ.25 NEWS DESK : ಕರ್ನಾಟಕ ಪೀಪಲ್ ಎಜುಕೇಷನ್ ಸೊಸೈಟಿ ಕಲಬುರಗಿ ಈ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಮಿಲಿಂದ ಪದವಿ ಪೂರ್ವ ಕಾಲೇಜು, ಕಲಬುರಗಿ ಈ ಕಾಲೇಜಿನಲ್ಲಿ ಖಾಲಿ ಇರುವ ಆಂಗ್ಲಭಾಷಾ ಉಪನ್ಯಾಸಕರ ಹುದ್ದೆಗೆ ಆಡಳಿತ ಮಂಡಳಿ ನಿಗದಿಪಡಿಸಿದ ರಿಕ್ತಸ್ಥಾನ-8ರ ಸಾಮಾನ್ಯ ಅಂಗವಿಕಲ (ದೃಷ್ಟಿಮಾಂದ್ಯ) ಅಭ್ಯರ್ಥಿಯನ್ನು ಭರ್ತಿ ಮಾಡಿಕೊಳ್ಳಲು ಅವಕಾಶವಿರುವುದರಿಂದ ಜಿಲ್ಲೆಯಲ್ಲಿ ಇರುವ ಈ ಹುದ್ದೆಗೆ ಅರ್ಹ ಅಂಗವಿಕಲ ದೃಷ್ಟಿದೋಷವಿರುವ ಅಭ್ಯರ್ಥಿಗಳು ನೇರವಾಗಿ ಅಧ್ಯಕ್ಷರು/ ಕಾರ್ಯದರ್ಶಿಗಳು ಕರ್ನಾಟಕ ಪೀಪಲ್ ಎಜುಕೇಷನ್ ಸೊಸೈಟಿ ಕಲಬುರಗಿ ಈ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಮಿಲಿಂದ ಪದವಿ ಪೂರ್ವ ಕಾಲೇಜು, ಕಲಬುರಗಿ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಮಡಿಕೇರಿ, ಕೊಡಗು ಜಿಲ್ಲೆ ಇವರ ದೂರವಾಣಿ ಸಂಖ್ಯೆ. 08272-295829ನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮಡಿಕೇರಿ ಮಾ.25 NEWS DESK : ಕಳೆದ 20 ವರ್ಷಗಳಿಂದ ಬಹುಜನ ಸಮಾಜ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಕೆ.ಮೊಣ್ಣಪ್ಪ ಹಾಗೂ ಸಂಗಡಿಗರು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಹಾಗೂ ಕಾರ್ಯದರ್ಶಿ ಗೋಪಿನಾಥ್ ಅವರುಗಳು ಬೆಂಗಳೂರಿನಲ್ಲಿರುವ ರಾಜ್ಯ ಕಚೇರಿಯಲ್ಲಿ ಕೆ.ಮೊಣ್ಣಪ್ಪ ಸೇರಿದಂತೆ ಬೆಂಬಲಿಗರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷರನ್ನಾಗಿ ಕೆ.ಮೊಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ.ಕುಸುಮಾವತಿ, ಉಪಾಧ್ಯಕ್ಷರುಗಳಾಗಿ ಟಿ.ಜಗದೀಶ್ ಕಿರಣ್, ಹೆಚ್.ಜಿ.ಮಾದೇಶ ಹಾಗೂ ಕಾರ್ಯದರ್ಶಿಯನ್ನಾಗಿ ಎಂ.ಕೆ.ಮೊಹಮ್ಮದ್ ಹನೀಫ್ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಆದೇಶ ಹೊರಡಿಸಿದ್ದಾರೆ. ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಕೆ.ಮೊಣ್ಣಪ್ಪ ಅವರು ಬಹುಜನ ಸಮಾಜ ಪಾರ್ಟಿಯಲ್ಲಿ ಸುಮಾರು 20 ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಬಿ.ಎಸ್.ಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಕೆಲವು ಪಕ್ಷ ವಿರೋಧಿ ನಾಯಕರುಗಳಿಂದ ಪಕ್ಷದ ಅಸ್ತಿತ್ವಕ್ಕೆ…
ಮಡಿಕೇರಿ ಮಾ.25 NEWS DESK : ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಗೆ ಬಾಳೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. 24 ಕುಟುಂಬಗಳ ಐನ್ ಮನೆಗಳಿಗೆ ಮ್ಯಾರಥಾನ್ ಮೂಲಕ ತಲುಪಲುಪಿಸುವ ನಿಟ್ಟಿನಲ್ಲಿ ಇಂದು ಅಳಮೇಂಗಡ ಐನ್ ಮನೆಗೆ ಆಗಮಿಸಿದ ಕ್ರೀಡಾ ಜೋತಿಯನ್ನು ಬಾಳೆಲೆ ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಮುಂಭಾದಲ್ಲಿ ಅಳಮೇಂಗಡ ವಕ್ಕ, ಬಾಳೆಲೆ ಕೊಡವ ಸಮಾಜ ಮತ್ತು ವಿವಿಧ ಸಂಘಸಂಸ್ಥೆಗಳು ಆರತಿ ಬೆಳಗಿ, ಮೆರವಣಿಗೆ ಮೂಲಕ ಅಳಮೇಂಗಡ ಐನ್ ಮನೆಗೆ ಬರಮಾಡಿಕೊಂಡು. ಈ ಸಂದರ್ಭ ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ದೇವಯ್ಯ, ಅಳಮೇಂಗಡ ಕುಟುಂಬದ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಉಪಾಧ್ಯಕ್ಷ ಅಳಮೇಂಗಡ ಸತೀಶ್ ಕಾರ್ಯಪ್ಪ, ಕಾರ್ಯದರ್ಶಿ ಅಳಮೇಂಗಡ ತಮ್ಮು ಸೋಮಯ್ಯ, ಹಿರಿಯರಾದ ಅಳಮೇಂಗಡ ಪೊನ್ನಪ್ಪ, ಪ್ರಮುಖರಾದ ಅಳಮೇಂಗಡ ನಧೀರ ಸೋಮಯ್ಯ, ಅಳಮೇಂಗಡ ದಿಲು, ಅಳಮೇಂಗಡ ರಮೇಶ್, ರಾಜಪ್ಪ, ಸುರೇಶ್ ಸುಬ್ಬಯ್ಯ, ಮುದ್ದಂಡ ಕುಟುಂಬದ ಪಟ್ಟೆದಾರರಾದ ಡಾಲಿ ತಿಮ್ಮಯ್ಯ, ಕಾರ್ಯಧ್ಯಕ್ಷ ರಸೀನ್ ಸುಬ್ಬಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಕಾರ್ಯದರ್ಶಿ ಮಾಲೇಟಿರ ಶ್ರೀನಿವಾಸ್,…
ಮಡಿಕೇರಿ ಮಾ.25 NEWS DESK : ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಕ್ರೀಡಾಜ್ಯೋತಿಯನ್ನು ಕೊಡವ ಹಾಕಿ ಹಬ್ಬದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್ ಮನೆಯಲ್ಲಿ ಉದ್ಘಾಟಿಸಲಾಯಿತು. ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಮತ್ತು ಕೊಡವ ಹಾಕಿ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಕ್ರೀಡಾಜ್ಯೋತಿಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಕೊಡಗಿನ ಜನತೆಯ ಪ್ರಮುಖ ಕಾರ್ಯಚಟುವಟಿಕೆಗಳಲ್ಲಿ ಕ್ರೀಡೆಯೂ ಒಂದಾಗಿದ್ದು, ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭದಲಿಮುದ್ದಂಡ ಹಾಕಿ ಉತ್ಸವ ಅತ್ಯಂತ ಯಶಸ್ಸು ಕಂಡು ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಹಾಕಿ ಕ್ರೀಡಾಕೂಟದಲ್ಲಿ ಒಂದು ವಿಭಿನ್ನ ರೀತಿಯ ಪ್ರಯೋಗವನ್ನು ಮಾಡುತ್ತಿರುವ ಮುದ್ದಂಡ ಹಾಕಿ ಉತ್ಸವದ ಆಯೋಜಕರ ಪ್ರಯತ್ನ ಶ್ಲಾಘನೀಯ. ಮುಂದಿನ ತಿಂಗಳಾಂತ್ಯದವರೆಗೆ ನಡೆಯುವ ಹಾಕಿ ಉತ್ಸವವು, ನಾಡಿನ ಯುವ ಹಾಕಿಪಟುಗಳ ಪ್ರತಿಭೆಯನ್ನು…
ಮಡಿಕೇರಿ ಮಾ.25 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮಹಾವಿದ್ಯಾಲಯದ ಅಮೃತ ಮಹೋತ್ಸವದ ಅಂಗವಾಗಿ ಕೊಡಗು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿನೂತನ 5ನೇ ಸಮ್ಮೇಳನವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರನ್ನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕರು, ನಾಡಿನ ಹಾಗೂ ದೇಶದ ಪ್ರಗತಿಗೆ ವಿಶ್ವವಿದ್ಯಾಲಯಗಳು ನೀಡುವ ಕೊಡುಗೆ ಅಪಾರ ಎಂದು ಬಣ್ಣಿಸಿದರು. ವಿಶ್ವವಿದ್ಯಾಲಯಗಳು ಇಂದಿನ ಪರಿಸ್ಥಿತಿಗೆ ಹಾಗೂ ಜಾಗತಿಕ ಬೇಡಿಕೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವುದರೊಂದಿಗೆ, ಸಮೃದ್ಧ ಸಮಾಜ ನಿರ್ಮಾಣಕ್ಕೆ ನೀಡುವ ಕೊಡುಗೆ ಬಗ್ಗೆ ಸದಾ ಗಮನಹರಿಸಬೇಕು ಎಂದು ಹೇಳಿದರು. ಕರ್ನಾಟಕ ಸರಕಾರವು…
ಮಡಿಕೇರಿ NEWS DESK ಮಾ.25 : ನೀಮಾ ಕೊಡಗು ಹಾಗೂ ನೀಮಾ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಲಯನ್ಸ್ ಮಡಿಕೇರಿ, ಕೊಡಗು ಬ್ಲಡ್ ಡೋನರ್ಸ್ ಮತ್ತು ಕೊಡಗು ಹವ್ಯಕ ವಲಯದ ಸಹಯೋಗದೊಂದಿಗೆ ಮಾ.30 ರಂದು ಮಡಿಕೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನೀಮಾ ಕೊಡಗು ಅಧ್ಯಕ್ಷ ಡಾ.ರಾಜರಾಮ್ ಎ.ಆರ್ ಅವರು ಹುತಾತ್ಮರಾದ ಸುಖದೇವ್, ರಾಜ್ ಗೋಪಾಲ್ ಹಾಗೂ ಭಗತ್ ಸಿಂಗ್ ಸ್ಮರಣಾರ್ಥ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವೇದನ-2 ಎಂಬ ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯುತ್ತಿದ್ದು, ಇದರ ಪ್ರಯುಕ್ತ ಮಡಿಕೇರಿಯಲ್ಲೂ ಶಿಬಿರವನ್ನು ಆಯೋಜಿಸಲಾಗಿದೆ. ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದಾಗಿದೆ. ರಕ್ತದಾನ ಮಹಾದಾನವಾಗಿದ್ದು, ಶಿಬಿರದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 1 ರವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಹಾ ಕಾರ್ಯದಲ್ಲಿ ಕೈಜೋಡಿಸುವಂತೆ ತಿಳಿಸಿದ್ದಾರೆ. ಇದೇ ದಿನ ವಿಶ್ವದ 8…
ಮಡಿಕೇರಿ ಮಾ.25 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಮಡಿಕೇರಿ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಅರಮನೆ ಪಾಲೆರ ಕೆ.ಮಂದಣ್ಣ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನಿರ್ದೇಶನದಂತೆ ಮಡಿಕೇರಿ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ದಿನೇಶ್ ಪೆಗ್ಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು ಹಾಗೂ ಸದಸ್ಯರಾಗಿ ಕೂಡಕಂಡಿ ಓಂ ಶ್ರೀದಯಾನಂದ, ಬೊಟ್ಟೋಳಂಡ ನಿವ್ಯ ಕಾವೇರಮ್ಮ, ಸುಮಿತ್ರಾ ಮೂರ್ನಾಡು, ಚೇನಂಡ ಜಯಂತಿ ಹರೀಶ್, ಲವೀನ್ ಲೋಪೇಜ್, ಎನ್.ಬಿ.ದಿಲೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂದಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






