ಪೊನ್ನಂಪೇಟೆ ಮಾ.22 NEWS DESK : ಹನ್ನೆರಡನೇ ಶತಮಾನದಲ್ಲಿ ಇದ್ದ ರಾಜಪ್ರಭುತ್ವದ ವಿರುದ್ಧ ಪ್ರಜಾಪ್ರಭುತ್ವದ ಬೀಜ ಬಿತ್ತಿದ ಶರಣರು ಈ ರಾಷ್ಟ್ರ ಕಂಡ ಪ್ರಪ್ರಥಮ ಸ್ವಾಂತಂತ್ರ್ಯ ಚಳುವಳಿಗಾರರು ಎಂದು ವಿರಾಜಪೇಟೆ ತಾಲ್ಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಬಿಜಾಪುರದ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕಿನ ವತಿಯಿಂದ ಸ್ಥಾಪಿಸಿರುವ ವಚನ ಸಾಹಿತ್ಯ ಸಂವರ್ಧಕ ಡಾ.ಫ.ಗು.ಹಳಕಟ್ಟಿ ಅವರ ಜೀವನ ಹಾಗೂ ಸಾಧನೆ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಪ್ರಭುತ್ವದ ಕಾಲದಲ್ಲಿ ಅಸಮಾನತೆಯಿಂದ ಜನ ಬಳಲಿದ್ದರು. ವೇದ, ಆಗಮ, ಉಪನಿಷತ್ತುಗಳು ಸಂಸ್ಕ್ರತ ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಅಂತಹ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯ ವಚನಗಳ ಮೂಲಕ ಬಹುದೊಡ್ಡ ಕ್ರಾಂತಿಯನ್ನು ಮಾಡಿದ ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ ಹಾಗೂ ಮಹಿಳಾ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಜನರಲ್ಲಿ ಹೇರಿದ್ದ ಮೂಢನಂಬಿಕೆಗಳ ವಿರುದ್ಧವೂ ಸಮರ ಸಾರಿದ ಶರಣರು ಪುರೋಹಿತಶಾಹಿ…
ಲೇಖಕ: admin
ಕುಶಾಲನಗರ ಮಾ.22 NEWS DESK : ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಅಭಿಯಾನ ಯೋಜನೆಯ ಜಲ ಜೀವನ್ ಮಿಷನ್ , ಶಾಲಾ ಶಿಕ್ಷಣ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಷ್ಟ್ರೀಯ ಹಸಿರು ಪಡೆ ( ಎನ್.ಜಿ.ಸಿ.),ಇಕೋ ಕ್ಲಬ್ , ಕೂಡುಮಂಗಳೂರು ಗ್ರಾಮ ಪಂಚಾಯತಿ, ಹಾಸನದ ಸೀಕೋ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ( ಮಾ.22 ರಂದು ) ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.), ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ, ಎಸ್.ಡಿ.ಎಂ.ಸಿ. ಹಾಗೂ ಇಕೋ ಕ್ಲಬ್ ನ ವತಿಯಿಂದ ಕೂಡ್ಲೂರು ಗ್ರಾಮದಲ್ಲಿ ವಿಶ್ವ ಜಲ ದಿನವನ್ನು ಆಚರಿಸಲಾಯಿತು. ಶಾಲಾ ಪ್ರಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಶ್ವ ಜಲ ದಿನದ ಮಹತ್ವ ಹಾಗೂ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಅತ್ಯಮೂಲ್ಯ ಸಂಪತ್ತಾದ…
ಮಡಿಕೇರಿ ಮಾ.22 NEWS DESK : ಪೊನ್ನಂಪೇಟೆ ತಾಲ್ಲೂಕಿನ ಐತಿಹಾಸಿಕ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಹನ್ನೆರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಮಾ.8 ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ 12 ತಳಿಯತಕ್ಕಿ, ಬೊಳ್‍ಚ್ಚ, ದುಡಿಕೊಟ್ಟ್ ಪಾಟ್‍ನೊಂದಿಗೆ ಹಬ್ಬಕ್ಕೆ ಚಾಲನೆ ದೊರೆಯಿತು. ನಂತರ ಹನ್ನೊಂದು ದಿನಗಳ ಕಾಲ ನಿತ್ಯಪೂಜೆ, ಶತರುದ್ರಾಭಿಷೇಕ, ಶುದ್ಧ ಕಲಶ, ಉತ್ಸವ ಮೂರ್ತಿ ದರ್ಶನ, ನಿತ್ಯಪೂಜೆ, ತೂಚಂಬಲಿ ಭಂಡಾರ ಬರುವುದು, ಇರುಬಳಕು, ತುಲಭಾರ ಸೇವೆ ನೆರವೇರಿತು. “ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ”, ಶಾಸ್ತ್ರೋಕ್ತವಾಗಿ 12 ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ, ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಊರಿನ ಪ್ರತಿ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಪಿನೊಂದಿಗೆ ತಳಿಯತಕ್ಕಿ ಬೊಳಕ್‍ನೊಂದಿಗೆ ಉತ್ಸವ ಮೂರ್ತಿಗೆ ಸ್ವಾಗತ ಕೋರಿದರು.…
ಮಡಿಕೇರಿ ಮಾ.22 NEWS DESK : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕರಲ್ಲಿ ಒಬ್ಬರಾದ ಎ.ಟಿ.ರಘು ಎಂದೇ ಖ್ಯಾತರಾಗಿದ್ದ ಆಪಾಡಂಡ ರಘು ನಿಧನಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂತಾಪ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕನ್ನಡ ಚಿತ್ರರಂಗದ ದೈತ್ಯ ನಾಯಕ ಅಂಬರೀಶ್ ಅವರಿಗೆ ಸುಮಾರು 27 ಚಿತ್ರಗಳನ್ನು ನಿರ್ದೇಶಿಸಿದ್ದ, ಒಟ್ಟು ಸುಮಾರು 55 ಚಿತ್ರಗಳ ನಿರ್ದೇಶನ ಮಾಡಿ, ಹಲವು ಚಿತ್ರಗಳಲ್ಲಿ ನಟಿಸಿದ್ದೂ ಅಲ್ಲದೆ, ಸ್ವತಃ ತಾವೇ ನಿರ್ಮಾಣವನ್ನೂ ಮಾಡಿ ಸೈ ಎನಿಸಿಕೊಂಡಿದ್ದ, ಪ್ರತಿಷ್ಠಿತ ಪುಟ್ಟಣ ಕಣಗಾಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಬಿರುದುಗಳಿಗೆ ಭಾಜನರಾಗಿದ್ದ, ಎ.ಟಿ.ರಘು ಅವರು ನಿಧನರಾಗಿದ್ದು, ನಾಡಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕೊಡವ ಜನಾಂಗದ ಅನರ್ಘ್ಯ ರತ್ನವೊಂದು ಇಂದು ಕಳಚಿದಂತಾಗಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ ಎಂದು ಆಶಿಸಿದ್ದಾರೆ.
ಮೈಸೂರು, ಮಾ.22 NEWS DESK : ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನ್ನುವುದು ಪ್ರತೀತಿ. ಅದಕ್ಕಾಗಿ ನಮ್ಮ ಮೈಸೂರು ಒಡೆಯರ್ ಸಂಸ್ಥಾನ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತಿತ್ತು. ಇದೇ ಕಾರಣಕ್ಕೆ ಮೈಸೂರು ವಿಶ್ವದ ಪ್ರಮುಖ ವಿದ್ಯಾನಗರಿಗಳಲ್ಲಿ ಒಂದಾಗಿದೆ. ಇಂಥ ಮೈಸೂರಿನ ಸಂಸ್ಥೆಯಾಗಿರುವ “ಕಲಿಸು” ಫೌಂಡೇಶನ್ ಮಕ್ಕಳಿಗೆ ಹಾಗೂ ಯುವ ಸಮೂಹಕ್ಕೆ ಜ್ಞಾನಾರ್ಜನೆ ಮಾಡಲು ಮುಂದಾಗಿ, ನವದೆಹಲಿಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ “ಕಲಿಸು” ಫೌಂಡೇಶನ್ನ 125ನೇ ಗ್ರಂಥಾಲಯಕ್ಕೆ ಚಾಲನೆ ನೀಡಿದ ನಂತರ ಸಂಸದರು ಭಾಷಣ ಮಾಡಿದರು. ಕಲಿಸು ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಜ್ಞಾನ ಹರಡುವ ಯಜ್ಞದಲ್ಲಿ ತೊಡಗಿದೆ. ಈ ಮಹತ್ಕಾರ್ಯದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಈ ಸಂಸ್ಥೆಯ ರಾಯಭಾರಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲಾಗುತ್ತಿದೆ. ನಿಜಕ್ಕೂ ಇದೊಂದು ಪುಣ್ಯದ ಕೆಲಸ ಎಂದು ತಿಳಿಸಿದ್ದಾರೆ. ವ್ಯಾಪ್ತಿ ವಿಸ್ತರಿಸಿದ ಕಲಿಸು :: ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ (ಲೈಬ್ರರಿ)…
ಮಡಿಕೇರಿ ಮಾ.22 NEWS DESK : ದೇಹ ಮತ್ತು ಮನಸ್ಸಿನ ನಿಯಂತ್ರಣವೇ ಯಶಸ್ಸಿನ ಕೀಲಿ ಕೈ ಎಂದು ತರಬೇತುದಾರ, ವ್ಯಕ್ತಿತ್ವ ವಿಕಸನದ ಮಾರ್ಗದರ್ಶಕ ಎಂ.ಆರ್.ಸೋಮಣ್ಣ ಹೇಳಿದರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕುರಿತು ಒಂದು ದಿನದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಲು ಪ್ರಾಣಾಯಾಮ, ಯೋಗಾಸನ ಹಾಗೂ ಕ್ರೀಡೆಗಳ ಮಹತ್ವ ತಿಳಿಸಿದರು. ಪ್ರತಿ ಗಂಟೆಗೆ ಒಮ್ಮೆ ನೀರನ್ನು ಕುಡಿಯಿರಿ, ಮನಸ್ಸನ್ನು ನಿರಂತರವಾಗಿ ಒತ್ತಡಕ್ಕೆ ಒಳಪಡಿಸುವುದರಿಂದ ಪರಿಣಾಮಕಾರಿಯಾಗಿ ಯೋಚಿಸಲು ಆಗುವುದಿಲ್ಲ ಎಂದರು. ಊಟ ಮತ್ತು ನಿದ್ರೆ ಎರಡು ಮೂಲಭೂತ ಅವಶ್ಯಕತೆಗಳಾಗಿದ್ದು, ಮೂರು ಬಾರಿ ಊಟ, ಏಳು ಗಂಟೆಗಳ ನೆಮ್ಮದಿಯ ನಿದ್ರೆಯು ಆರೋಗ್ಯವಂತರ ಲಕ್ಷಣ ಎಂದು ತಿಳಿಸಿದರು. ಮಕ್ಕಳ ಮನೋತಜ್ಞೆ ಡಾ.ಮನ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ನಡುವೆ ಸಂಬಂಧವಿದೆ. ನಮ್ಮ ಆಲೋಚನೆಗಳು, ಭಾವನೆಗಳು, ನಂಬಿಕೆಗಳು ದೇಹದಲ್ಲಿ ಹಾರ್ಮೋನುಗಳ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು ಇದು ರೋಗನಿರೋಧಕ ಕಾರ್ಯದ ಮೇಲೆ…
ಮಡಿಕೇರಿ ಮಾ.22 NEWS DESK : ಇಂದಿನ ಇಂಟರ್ನೆಟ್ ಯುಗದಲ್ಲಿ ಕೆಲ ಸಮಯವಾದರೂ ವಿದ್ಯಾರ್ಥಿಗಳು ಗ್ರಂಥಾಲಯದ ಮೊರೆ ಹೋಗಬೇಕು. ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಓದಬೇಕು ಎಂದು ಗಾಳಿಬೀಡಿನ ನವೋದಯ ವಿದ್ಯಾಲಯದ ಉಪನ್ಯಾಸಕರು ಹಾಗೂ ಸಾಹಿತಿ ಮಾರುತಿ ದಾಸಣ್ಣನವರ್ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ನಾ ಡಿಸೋಜಾ ಮಕ್ಕಳ ಸಾಹಿತ್ಯ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾ ಡಿಸೋಜಾ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ನಾ ಡಿಸೋಜಾ ಅವರ ಮಕ್ಕಳ ಸಾಹಿತ್ಯ ವಿಶಿಷ್ಟವಾದದ್ದು, ಮಕ್ಕಳ ಬಗ್ಗೆ ಹಲವಾರು ಕಥೆಗಳನ್ನು ರಚಿಸಿದ್ದಾರೆ. ಅವರು ಪಂಚತಂತ್ರದ ಕಥೆಗಳ ಮುಂದೆ ಯಾವುದೇ ಮಕ್ಕಳ ಕಥೆಗಳು ಇಲ್ಲ ಎನ್ನುವ ಮಾತನ್ನು ಕೂಡ ಹೇಳಿದ್ದರು. ಅಲ್ಲದೆ ಕನ್ನಡ ಸಾರಸ್ವತ ಲೋಕದಲ್ಲಿ ಹಲವಾರು ಹಿರಿಯ…
ಮಡಿಕೇರಿ ಮಾ.22 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಸುಂಟಿಕೊಪ್ಪ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪ ನಾಡ್ ಕೊಡವ ನಮ್ಮೆ ಸಂಭ್ರಮದಿಂದ ನಡೆಯಿತು. ಸುಂಟಿಕೊಪ್ಪ ಅಯ್ಯಪ್ಪ ದೇವಾಲಯದಿಂದ ಮುಖ್ಯ ಪಟ್ಟಣದ ಮೂಲಕ ಕೊಡವ ಸಮಾಜದವರೆಗೆ ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಬಿಂಬಿಸುವ ಕೊಡವ ಸಾಂಪ್ರದಾಯಿಕ ದುಡಿಕೊಟ್ಟ್, ಕೊಂಬ್-ಆಟ್, ವಾಲಗದೊಂದಿಗೆ ಕೊಡವ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡವ ಜನಾಂಗದ ಮೂಲ ಸಾಂಪ್ರದಾಯಿಕ ಆಚಾರ, ವಿಚಾರ, ಸಂಸ್ಕೃತಿ, ಭಾಷೆ, ಉಡುಪು ತೊಡುಪನ್ನು ಉಳಿಸಿಕೊಂಡಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ. ಹಿರಿಯರು ಕಟ್ಟಿಕೊಟ್ಟ ಐನ್ ಮನೆ, ಕೈಮಾಡ, ಅರೋಡ, ಮಂದ್ ಮಾನಿ ಕೊಡವರ ಮೂಲನೆಲೆಯಾಗಿಯೇ ಉಳಿಯಬೇಕೆಂದರು. ಕೊಡವರ ಒಗ್ಗಟ್ಟಿನ ಪ್ರದರ್ಶನದ ಮೂಲಕ ಸಂಸ್ಕೃತಿಯ ಪ್ರದರ್ಶನದ ವೇದಿಕೆಯೇ ಈ ಕೊಡವ ನಮ್ಮೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವಿವಿಧೆಡೆ ಹಲವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿ ಕೊಡವ…
ವಿರಾಜಪೇಟೆ ಮಾ.22 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ವಿರಾಜಪೇಟೆ ತಾಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಕ್ರಮ ಅಮ್ಮತ್ತಿ ವಲಯದ ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದಲ್ಲಿ ನಡೆಯಿತು. ಚೆಂಬೆಬೆಳ್ಳೂರು ಗ್ರಾಮದ ಕೃಷ್ಣಪ್ಪ ಅವರ ಕೃಷಿ ತಾಕುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಣ್ಣು ವಿಜ್ಞಾನ ವಿಷಯ ತಜ್ಞ ಡಾ. ಕೆ.ಟಿ.ಮೋಹನ್ ಕುಮಾರ್ ಮಾತನಾಡಿ, ಮಣ್ಣು ಪರೀಕ್ಷೆ, ಮಣ್ಣು ಆರೋಗ್ಯ ಕಾರ್ಡ್ ಬಗ್ಗೆ ವಿವರಿಸಿ ಆರೋಗ್ಯಕರ ಮಣ್ಣು ಆರೋಗ್ಯಕರ ನಾವು- ಮಣ್ಣೆ ಜೀವನದ ಮೂಲ. ಸಸ್ಯ ಪೋಷಕಾಂಶಗಳು ಮಣ್ಣು ಪರೀಕ್ಷೆ ಮಹತ್ವ ಮಣ್ಣು ಮಾದರಿ ಸಂಗ್ರಹಿಸಲು ಗಮನಿಸಬೇಕಾದ ಅಂಶಗಳು. ಮಣ್ಣು ಮಾದರಿ ಸಂಗ್ರಹಣೆ ಪ್ರಕ್ರಿಯೆ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಅಮ್ಮತ್ತಿ ವಲಯದ ಮೇಲ್ವಿಚಾರಕರಾದ ದನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್, ಚೆಂಬೆಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಲಾ, ಒಕ್ಕೂಟದ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸುಮ, ಶೌರ್ಯ…
ನಾಪೋಕ್ಲು ಮಾ.22 NEWS DESK : ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಮನರಂಜನಾ ಕೂಟದ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಮೂರನೇ ವರ್ಷದ ಮುಕ್ತ ಬ್ಯಾಡ್ಮಿಂಟನ್ ಸ್ಪರ್ಧೆಯ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಸುಳ್ಳಿಮಾಡ ದೀಪಕ್ ಮತ್ತು ಕುಪ್ಪಂಡ ರಚನ ಪ್ರಶಸ್ತಿ ಪಡೆದರು. ಪುರುಷರ ಓಪನ್ ಡಬಲ್ಸ್ ನಲ್ಲಿ ಬೊಪ್ಪೆರ ರಿತೇಶ್ ಮತ್ತು ಮೂಕೊಂಡ ಅಯ್ಯಪ್ಪ ವಿನ್ನರ್ಸ್, ರನ್ನರ್ಸ್ ಆಗಿ ಬೊಬ್ಬೆರ ರಿತೇಶ್ ಮೇಚಿಯಂಡ ದೇವಯ್ಯ, 20 ವರ್ಷ ವಯೋಮಾನದ ಒಳಗಿನವರಲ್ಲಿ ಬೊಪ್ಪೆರ ರಿತೇಶ್ ಮತ್ತು ಮೂಕೊಂಡ ಅಯ್ಯಪ್ಪ ವಿಜೇತರಾಗಿ ಪ್ರಶಸ್ತಿ ಪಡೆದುಕೊಂಡರು. ಪೊನ್ನಕಚ್ಚಿರ ಭೀಮಯ್ಯ ಮತ್ತು ಮುಕ್ಕಾಟಿರ ಮುತ್ತಣ್ಣ ರನ್ನರ್ ಅಪ್ ಪ್ರಶಸ್ತಿ ಪಡೆದರು. 35-50 ವಯೋಮಿತಿಯ ವಿಭಾಗದಲ್ಲಿ ಕೀಕಿರ ಧನ್ಯ ಮತ್ತು ಕಳ್ಳಂಗಡ ಅಪ್ಪಣ್ಣ ವಿಜೇತರಾದರೆ ಬಾಚಮಂಡ ಅಪ್ಪಣ್ಣ ಮತ್ತು ಪಟ್ಟಡ ಶರತ್ ರನ್ನರ್ ಅಪ್ ಪ್ರಶಸ್ತಿ ಪಡೆದರು. 50 ವರ್ಷ ಮೇಲ್ಪಟ್ಟವರಲ್ಲಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮತ್ತು ಬೊಬ್ಬೆರ ಜಯ ಉತ್ತಪ್ಪ ವಿಜೇತರಾದರು. ಕನ್ನಂಭೀರ ಸುಧಿ ಮತ್ತು…






