ಲೇಖಕ: admin

ಕುಶಾಲನಗರ, ಏ.14 NEWS DESK : ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆರಂಭಗೊಂಡ ಮೂರನೇ ವರ್ಷದ ಹೊನಲು- ಬೆಳಕಿನ ಕಬಡ್ಡಿ ಉದ್ಘಾಟಿಸಿ ಮಾತನಾಡಿದರು.  ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಿಕೊಡುತ್ತವೆ ಎಂದರು. ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಅವಶ್ಯಕವಾಗಿದೆ. ಇದರಿಂದ ಗ್ರಾಮಗಳಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ, ಒಗ್ಗಟ್ಟು, ಸೌಹಾರ್ದತೆ ಮೂಡುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬಹುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಯುವಕರು ಗ್ರಾಮದಲ್ಲಿ ಕ್ರೀಡೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಆದ್ಯತೆ…

Read More

ಮಡಿಕೇರಿ NEWS DESK ಏ.13 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆದ ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ರ ಫೈನಲ್ ಪಂದ್ಯದಲ್ಲಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಎದುರಾಳಿ ತಂಡ ಟೀಮ್ ಲಿವರೇಜ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಲಿವರೇಜ್ ತಂಡ 17.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 96 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡದ ಅಪ್ಪನೆರವಂಡ ಲೋಚನ್ ಅಪ್ಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೀಸನ್-2ರ ವಿಜೇತರಿಗೆ ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ ನಗದು ಮತ್ತು…

Read More

ಮಡಿಕೇರಿ ಏ.13 NEWS DESK : ಕಕ್ಕಬೆ ವಯಕೋಲ್ ಪುಳಿಜೋಂ ಉರೂಸ್ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿಶೇಷ ಅತಿಥಿಯಾಗಿ ಭಾಗವಹಿಸಿದರು. ಉರುಸ್ ಆಚರಣೆಯ ಸದುದ್ದೇಶದ ಸಂದೇಶ ನಾಡಿನ ಎಲ್ಲೆಡೆ ಪಸರಿಸುವಂತಾಗಲಿ ಎಂದು  ಶಾಸಕರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಂಗ್ರೆಸ್ ಪ್ರಮುಖರು ಹಾಜರಿದ್ದರು.

Read More

*ಮೈದಾನ 1* ಅಜ್ಜೇಟ್ಟಿರ ಮತ್ತು ಪುಳ್ಳಂಗಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಪುಳ್ಳಂಗಡ ಪರ ಮುತ್ತಣ್ಣ 2 ಹಾಗೂ ಮುದ್ದಯ್ಯ 1 ಗೋಲು ದಾಖಲಿಸಿದರು. ಅಜ್ಜೇಟ್ಟಿರ ಪರ ಗೌತಮ್ ಮಂದಣ್ಣ 1 ಗೋಲು ಬಾರಿಸಿದರು. ಅಜ್ಜೇಟ್ಟಿರ ವಿಕ್ರಮ್ ಮುದ್ದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಲ್ಲಪಂಡ ಮತ್ತು ಪಟ್ಟಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಅಲ್ಲಪಂಡ ತಂಡ ವಿಜಯ ಸಾಧಿಸಿತು. ಅಲ್ಲಪಂಡ ಪರ ಬೋಪಣ್ಣ 2, ಬನ್ಸಿ, ರಿಪಿನ್ ಸೋಮಣ್ಣ, ಗಿರಿ ಚೆಂಗಪ್ಪ, ಲಿಖಿತ್ ಮುತ್ತಣ್ಣ ಹಾಗೂ ಪೂರ್ಣ ಚಿಣ್ಣಪ್ಪ ತಲಾ 1 ಗೋಲು ದಾಖಲಿಸಿದರು. ಪಟ್ಟಡ ಯಶ್ವಿನ್ ಅಚ್ಚಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಲ್ಲಚಂಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕುಲ್ಲಚಂಡ ತಂಡ ಜಯ ಸಾಧಿಸಿತು. ಕುಲ್ಲಚಂಡ ಪರ ಪ್ರಕಾಶ್ ಹಾಗೂ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಆಲೆಮಾಡ…

Read More

ಮಡಿಕೇರಿ ಏ.13 NEWS DESK : ಮುದ್ದಂಡ ಕಪ್ ಹಾಕಿ ಉತ್ಸವ : ಏ.14 ರಂದು ನಡೆಯಲಿರುವ ಪಂದ್ಯಾವಳಿಯ ವಿವರ :: ಮೈದಾನ 1 ::  ಬೆಳಿಗ್ಗೆ 9 ಗಂಟೆಗೆ ಮೇರಿಯಂಡ ಮತ್ತು ಕುಟ್ಟಂಡ (ಅಮ್ಮತ್ತಿ), 10 ಗಂಟೆಗೆ ಬೊವ್ವೇರಿಯಂಡ ಮತ್ತು ಅಜ್ಜಿನಂಡ, 11 ಗಂಟೆಗೆ ನೆರವಂಡ ಮತ್ತು ಬೇರೆರ, ಮಧ್ಯಾಹ್ನ 1 ಗಂಟೆಗೆ ಮಂಡೇಡ ಮತ್ತು ಚೆರುಮಾಡಂಡ, 2 ಗಂಟೆಗೆ ಮುರುವಂಡ ಮತ್ತು ಮೂಕಳಮಾಡ, 3 ಗಂಟೆಗೆ ಮಂಡೇಪಂಡ ಮತ್ತು ಪಾಲಂದಿರ ಮೈದಾನ 2 :: ಬೆಳಿಗ್ಗೆ 9 ಗಂಟೆಗೆ ಕುಮ್ಮಂಡ ಮತ್ತು ತಂಬುಕುತ್ತೀರ, 10 ಗಂಟೆಗೆ ಚೀರಂಡ ಮತ್ತು ಪುದಿಯೊಕ್ಕಡ, 11 ಗಂಟೆಗೆ ಚೆಪ್ಪುಡಿರ ಮತ್ತು ಕೈಪಟ್ಟಿರ, ಮಧ್ಯಾಹ್ನ 1 ಗಂಟೆಗೆ ಮೇವಡ ಮತ್ತು ಕರ್ತಮಾಡ, 2 ಗಂಟೆಗೆ ಚಿಂಡಮಾಡ ಮತ್ತು ಅಟ್ರಂಗಡ, 3 ಗಂಟೆಗೆ ಮಳವಂಡ ಮತ್ತು ಅರೆಯಡ

Read More

ಮಡಿಕೇರಿ ಏ.13 NEWS DESK : ಕಾರೊಂದು ಬೆಂಕಿಗಾಹುತಿಯಾದ ಘಟನೆ ಮಡಿಕೇರಿಯ ಸಿಂಕೋನ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ. ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದವರು ತಕ್ಷಣ ಕೆಳಗಿಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಅಗ್ನಿ ಆವರಿಸಿ ಕಾರು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿ ಪುತ್ತೂರಿನ ಅಬ್ದುಲ್ಲ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಿಂದ ಮಡಿಕೇರಿ- ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಏ.13 NEWS DESK : ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಎಡ್ಮ್ಯಾರ್-1 ಹೊಸ ವರ್ಷಾಚರಣೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೇಂಗ್ ನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿತು. ಗ್ರಾಮದ ಕೃಷಿಕ ಕೂಪದಿರ ಎನ್.ಮೋಹನ್ ಅವರ ಗದ್ದೆಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಜೋಡೆತ್ತು ಕೆಂಪಯ್ಯ ಹಾಗೂ ಕರಿಯನ ಮೂಲಕ ಗದ್ದೆ ಉಳುಮೆ ಮಾಡಿ ಭೂಮಿಗೆ ನಮನ ಸಲ್ಲಿಸಿದರು. ಎಡ್ಮ್ಯಾರ್ 1 ಏ.14 ರಂದು ಆದರೂ ಕೊಡವ ಸಂಪ್ರದಾಯದಂತೆ ಕೊಡವರು ಸೋಮವಾರದಂದು ಎತ್ತುಗಳಿಂದ ಉಳುಮೆ ಮಾಡುವುದಿಲ್ಲ. ಈ ಕಾರಣಕ್ಕಾಗಿ ಒಂದು ದಿನ ಮುಂಚಿತವಾಗಿ ಉಳುಮೆ ಮಾಡಿ ಕೊಡವ ಬುಡಕಟ್ಟು ಜನಾಂಗ ಭೂಮಿ ಮತ್ತು ಪ್ರಕೃತಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಕುರಿತು ಸಾಕ್ಷೀಕರಿಸಲಾಯಿತು ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವ ಬುಡಕಟ್ಟು ಜನರು ಸೌರ ಕ್ಯಾಲೆಂಡರ್ ನ್ನು ಅನುಸರಿಸುತ್ತಾರೆ. ಹೊಸ ವರ್ಷದ ಎಡ್ಮ್ಯಾರ್ 1 ಸೇರಿದಂತೆ ಕೊಡವರ ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಕ್ಕೆ…

Read More

ಕುಶಾಲನಗರ ಏ.13 NEWS DESK : ಕೊಡಗು ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಸೋಮವಾರಪೇಟೆ ತಾಲ್ಲೂಕಿನ ಸಹಾಯಕ ನಿರ್ದೇಶಕ ( ಪ್ರೌಢಶಾಲಾ ಮುಖ್ಯ ಶಿಕ್ಷಕರ ತತ್ಸಮಾನ ಹುದ್ದೆ) ಹುದ್ದೆಯಿಂದ ಶಿಕ್ಷಣಾಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದು ಮೈಸೂರಿನ ಸಿಟಿಇ ಕಾಲೇಜಿನ ಉಪನ್ಯಾಸಕ ಹುದ್ದೆಗೆ ನಿಯೋಜನೆಗೊಂಡಿರುವ ಹೆಚ್.ಕಾಳನಾಯಕ್ ಅವರಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಶಾಲೆಯ ವತಿಯಿಂದ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭ ಮಾತನಾಡಿದ ಸೋಮಶೇಖರ್, ಸರಳ, ಸಜ್ಜನಿಕೆ ಹೊಂದಿರುವ ಕಾಳನಾಯಕ್ ‌ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳ ಬಿಸಿಯೂಟ ಯೋಜನೆಯನ್ನು ಸಮರ್ಥವಾಗಿ ನಡೆಸುವ ಮೂಲಕ ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದರು.  ಕಾಳನಾಯಕ್ ಅವರ ಮುಂದಿನ ವೃತ್ತಿ ಜೀವನವು ಉತ್ತಮವಾಗಲಿ ಎಂದು ಶುಭ ಕೋರಿದರು.  ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಪಿ.ಎಂಪೋಷಣ್ ಅಭಿಯಾನದ…

Read More

ಮಡಿಕೇರಿ ಏ.13 NEWS DESK : ಕೊಡಗು ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟ(ಕೊಡ್ಯಾಕ್)ದ ಸಮಾಗಮ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಪ್ರೇರಣಾದಾಯಕ ಮಾತುಗಳನ್ನಾಡಿ, ಶಾಲೆಯ ಇತ್ತೀಚಿನ ಶೈಕ್ಷಣಿಕ ಸಾಧನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗಳ ಕುರಿತು ಹಳೇ ವಿದ್ಯಾರ್ಥಿಗಳ ಸಂಘಕ್ಕೆ ಮಾಹಿತಿ ನೀಡಿದರು. ಸೈನಿಕ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಹಸ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿರುತ್ತಾರೆ ಎಂದು ಹೇಳಿದರು. ಈ ಶಾಲೆಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅವರಲ್ಲಿ ಸ್ಥೈರ್ಯ ಹಾಗೂ ಸಹನಶೀಲತೆಯ ಗುಣವನ್ನು ಬೆಳೆಸುತ್ತದೆ. ಈ ಗುಣಗಳೇ ಅವರ ಬದುಕಿಗೆ ಆದರ್ಶಪ್ರಾಯವಾದ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಳೆಯ ವಿದ್ಯಾರ್ಥಿಗಳು ಬಿಟ್ಟುಹೋಗಿರುವ ಪರಂಪರೆ ಹಾಗೂ ಸಹೋದರತ್ವ ಭಾವನೆ ಇಂದಿನ ವಿದ್ಯಾರ್ಥಿಗಳ ಬದುಕಿಗೆ ಇಂದಿಗೂ ಪ್ರೇರಣೆಯಾಗಿ ಉಳಿದಿದೆ ಎಂದ ಅವರು, ಸಹೋದರತ್ವದ ಭಾವನೆಯೇ ಈ ಶಾಲೆಯ ಬಲವಾದ ಆಧಾರ ಸ್ತಂಭವೆಂದು ತಿಳಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಮಹೇಶ್ ಹಂಚಿನಮನಿ…

Read More

ಮಡಿಕೇರಿ ಏ.13 NEWS DESK : ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಹನ್ನೆರಡನೇ ಶತಮಾನದ ಮಹಾಶಿವಶರಣೆ ಪ್ರಥಮ ಕವಯತ್ರಿ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವನ್ನು ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕ್ಕನಬಳಗದ ಅಧ್ಯಕ್ಷೆ ವದುಂಧರ ಪ್ರಸನ್ನ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ವೈರಾಗ್ಯಮತಿಯಾದ ಮಹಾದೇವಿ ತಮ್ಮಲ್ಲಿನ ಅಗಾಧವಾದ ಜ್ಞಾನದಿಂದಾಗಿ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮ ಪ್ರಭು ಅವರಿಂದ ಅಕ್ಕಾಮಹಾದೇವಿ ಎಂದು ಕರೆಸಿಕೊಂಡ ಶ್ರೇಷ್ಠ ಶಿವಶರಣೆಯ ಆದರ್ಶಗಳನ್ನು ಮಹಿಳೆಯರು ಹಾಗೂ ಮಕ್ಕಳು ಅರಿಯಬೇಕು ಎಂದರು. ಈ ಸಂದರ್ಭ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಕ್ಕನಬಳಗದ ಕಾರ್ಯದರ್ಶಿ ಬಿ.ಎಸ್.ನಾಗರತ್ನ ಶಿವಕುಮಾರ್, ಪದಾಧಿಕಾರಿಗಳಾದ ವಸುಂದರ, ಲೀಲಾ, ರೂಪ, ಶೈಲಾ, ದಿವ್ಯ, ಮಂಜುಳಾ, ಧನ್ಯ, ಕವಿತಾ, ಪ್ರೇಮ, ಶೋಭಾ ಕಮಲಾಮಣಿ, ಗೀತಾ ಬಸವರಾಜು, ಸಾಕಮ್ಮ ಪ್ರಭಾಕರ್, ಕವಿತಾ ಹರೀಶ್, ಪ್ರೇಮಾ ಜಡ.ಕೋಟಿ, ಗೀತಾ ಲೀಲಾ ಉಳ್ಳಾಗಡ್ಡಿ, ಗೀತಾ ದೇವಾಲಯ ಸಮಿತಿ ಅಧ್ಯಕ್ಷರಾದ ರುದ್ರಪ್ರಸನ್ನ, ಕಾರ್ಯದರ್ಶಿ ಪ್ರಶಾಂತ್, ಮಣಿ ಮುರುಗೇಶ್, ಅರ್ಚಕ ಪ್ರಕಾಶ್ ಪೂಜಾರಿ ಪೂಜಾ ವಿಧಿ ನಡೆಸಿಕೊಟ್ಟರು. ಈ…

Read More