ಲೇಖಕ: admin

ಮಡಿಕೇರಿ ಮಾ.20 NEWS DESK : ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ-ನಾಪೋಕ್ಲ್ಲು ರಸ್ತೆಯಲ್ಲಿ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲಿಸರು ಬಂಧಿಸಿದ್ದಾರೆ. ಕುಂಜಿಲ ಗ್ರಾಮದ ನಿವಾಸಿ ಮೊಹಮ್ಮದ್ ಅಶ್ರಫ್ ಕೆ.ಯು.(37) ಹಾಗೂ ಅಯ್ಯಂಗೇರಿ ಗ್ರಾಮದ ನಿವಾಸಿ ಅಸ್ಕರ್ ಪಿ.ಕೆ. (24) ಬಂಧಿತ ಆರೋಪಿಗಳಾಗಿದ್ದು, ಇವರ ಬಳಿಯಲ್ಲಿದ್ದ 1 ಕೆ.ಜಿ 151 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಸೂರಜ್.ಪಿ.ಎ., ಮಡಿಕೇರಿ ಗ್ರಾಮಾಂತರ ವೃತ್ತದ ಪ್ರಬಾರ ಸಿಪಿಐ ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್‍ಐ ಶೋಭಾ ಲಮಾಣಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Read More

ಸಿದ್ದಾಪುರ ಮಾ.20 NEWS DESK : ಸಿದ್ದಾಪುರ ಮುಸ್ಲಿಂ ಜಮಾ ಅತ್ ನೇತೃತ್ವದಲ್ಲಿ ಮುಸ್ಲಿಂ ಯೂತ್ ಮೂಮೆಂಟ್ ವತಿಯಿಂದ ಬೃಹತ್ ಇಫ್ತಾರ್ ಕೂಟ ನಡೆಯಿತು. ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ನಡೆದ ಬೃಹತ್ ಇಫ್ತಾರ್ ಸಂಗಮದಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಾಂದವರು ಪಾಲ್ಗೊಂಡರು.  ಇಫ್ತಾರ್ ಅಂಗವಾಗಿ ವಿವಿಧ ಬಗೆಯ ಹಣ್ಣು ಹಂಪಲುಗಳು, ತಿಂಡಿ ತಿನಿಸುಗಳು ತಂಪು ಪಾನೀಯ ಸೇರಿದಂತೆ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು.  ಕೇಂದ್ರ ಮುಸಾವರ ಸದಸ್ಯ ಹಾಗೂ ಕೊಡಗು ಜಿಲ್ಲಾ ಉಪ ಖಾಝಿ ಎಂ.ಎಂ.ಅಬ್ದುಲ್ಲ ಪೈಜಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಮಸೀದಿಯ ಖತೀಬ್ ನೌಫಲ್ ಹುದವಿ, ಸಿದ್ದಾಪುರ ಮುಸ್ಲಿಂ ಜಮಾಆತ್ ಅಧ್ಯಕ್ಷ ಯು.ಎಂ.ಮುಸ್ತಫಾಜಿ, ಮುಸ್ಲಿಂ ಯುತ್ ಮೊಮೆಂಟ್ ಅಧ್ಯಕ್ಷ ಹ್ಯಾರಿಸ್ ಸೇರಿದಂತೆ  ಮುಸ್ಲಿಂ ಜಮಆತ್ ಕಮಿಟಿಯ ಪ್ರಮುಖರು ಹಾಗೂ ಯೂತ್ ಮೊಮೆಂಟ್ ಪದಾಧಿಕಾರಿಗಳು ಸ್ಥಳೀಯರು ಹಾಜರಿದ್ದರು.

Read More

ಮಡಿಕೇರಿ ಮಾ.20 NEWS DESK : ಜೈ ಭೀಮ್ ವತಿಯಿಂದ ಮಾ.30 ರಂದು ಮಡಿಕೇರಿಯಲ್ಲಿ “ಭೀಮ ಕಪ್” ಸೀಸನ್-1 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ನಗರದ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ ನಾಕೌಟ್ ಮಾದರಿಯ ಪಂದ್ಯಾವಳಿ ನಡೆಯಲಿದೆ. ಮಡಿಕೇರಿ ತಾಲ್ಲೂಕಿನ ಎಲ್ಲಾ ತಂಡಗಳಿಗೆ ಆಡಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, 4 ಓವರ್‍ಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಬ್ಬರಿಗೆ ಒಂದು ಓವರ್‍ಗಳನ್ನು ಸೀಮಿತಗೊಳಿಸಲಾಗಿದೆ. ಒಂದು ತಂಡದಲ್ಲಿ ಆಡಿದವರಿಗೆ ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ ಎಂದು ಪಂದ್ಯಾವಳಿಯ ಆಯೋಜಕರು ತಿಳಿಸಿದರು. ಪಂದ್ಯಾವಳಿಯ ವಿಜೇತರಿಗೆ ಪ್ರಥಮ ರೂ.10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರೂ.6 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಸೇರಿದಂತೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಆಸಕ್ತ ತಂಡಗಳು ಮಾ.25ರ ಒಳಗೆ ಮೈದಾನ ಶುಲ್ಕ ರೂ.1,500 ಪಾವತಿಸಿ ತಂಡದ ಹೆಸರನ್ನು ನೋಂದಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ ಸಂಪತ್ ರಾಜ್-9449989900, ಅರ್ಜುನ್ -9449660010 ಸಂಪರ್ಕಿಸಬಹುದಾಗಿದೆ.

Read More

ಪುತ್ತೂರು ಮಾ. 20 NEWS DESK : ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳು ಸಾಕಷ್ಟು ಚೇತರಿಸಿಕೊಂಡಿದ್ದು, ಈ ವಿಭಾಗಗಳಲ್ಲಿ ನುರಿತ ತಂತ್ರಜ್ಞರ ಕೊರತೆ ಕಾಡುತ್ತಿದೆ ಎಂದು ಬೆಂಗಳೂರು ಮೇದಿನಿ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಬೆಂಗಳೂರಿನ ಮೇದಿನಿ ಟೆಕ್ನಾಲಜೀಸ್ ಲಿಮಿಟೆಡ್ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತಾಡಿದರು. ಇಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಹೊರಬರುವ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಮತ್ತು ಉದ್ಯಮಕ್ಕೆ ಸಿದ್ದರಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಇದನ್ನು ನಿರ್ಮಿಸಲಾಗಿದ್ದು, ಸುಧಾರಿತ ತಾಂತ್ರಿಕ ಕೌಶಲ್ಯಗಳ ತರಬೇತಿ, ವಿನ್ಯಾಸ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಪಡೆಯುವುದಕ್ಕಾಗಿ ಬೇಕಾದ ತರಬೇತಿಗಳು, ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಕ್ಕೆ ಸಂಬಂಧಿಸಿದಂತೆ ನೂತನ ಸಾಫ್ಟ್‍ವೇರ್‍ಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ವಿದ್ಯಾರ್ಥಿಗಳು ಉದ್ಯೋಗವನ್ನೇ ಅರಸಿ…

Read More

ಮಡಿಕೇರಿ ಮಾ.20 NEWS DESK :  ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ  ಏ.26 ಮತ್ತು 27 ರಂದು ಕುಶಾಲನಗರ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ  ಕ್ರಿಕೆಟ್ ಪಂದ್ಯಾವಳಿಯ ಲೋಗೋ ವನ್ನು ಬಿಡುಗಡೆ ಮಾಡಲಾಯಿತು. ಬೈಚನಹಳ್ಳಿ ಮುತ್ತಪ್ಪ ದೇವಸ್ಥಾನ ಆವರಣದಲ್ಲಿ ಸಂಘದ ಗೌರವ ಅಧ್ಯಕ್ಷ ಬಿ.ಟಿ.ರಮೇಶ್ ಹಾಗೂ ಅಧ್ಯಕ್ಷ ಸುದೀರ್ ಪಂದ್ಯಾವಳಿಯ ಲೋಗೋ ಬಿಡುಗಡೆ ಗೊಳಿಸಿ ಪಂದ್ಯಾವಳಿಗೆ ಶುಭಹಾರೈಸಿದರು. ಈ ಸಂದರ್ಭ ಸಮಾಜದ ಪ್ರಮುಖರು, ಪಂದ್ಯಾವಳಿಯ ಆಯೋಜಕರು ಹಾಜರಿದ್ದರು.

Read More

ಗೋಣಿಕೊಪ್ಪ ಮಾ.20 NEWS DESK : ಅರುವತ್ತೋಕ್ಲು ಮೈಸೂರಮ್ಮ ನಗರದ ಶ್ರೀ ಆಶೀರ್ವಾದ ಮುತ್ತಪ್ಪ ಭಕ್ತ ಮಂಡಳಿ ವತಿಯಿಂದ ಮಾ.22 ಮತ್ತು 23ರಂದು ಶ್ರೀ ಮುತ್ತಪ್ಪ ದೇವರ ವಾರ್ಷಿಕೋತ್ಸವ ಜರುಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ದೇವಾಲಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ 14ನೇ ವಾರ್ಷಿಕೋತ್ಸವ ನಡೆಯಲಿದೆ. ಮಾ.22 ರಂದು ಬೆಳಗ್ಗೆ 6.30ಕ್ಕೆ ಗಣಪತಿ ಹೋಮ, 8.30ಕ್ಕೆ ಧ್ವಜಾರೋಹಣ, 9.30ಕ್ಕೆ ಬಾವಿಕಟ್ಟೆಯ ಬಳಿ ಕಳಸ ಪೂಜೆ, 4.30ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಸಂಜೆ 6.30ಕ್ಕೆ ಮತ್ತಪ್ಪ ದೇವರ ವೆಳ್ಳಟಂ, 7.30ಕ್ಕೆ ಬಾಲಕಿಯರ ತಾಲಪ್ಪೂಲಿ ಅರತಿ ಪೂಜೆಗೆ ಹೂರಡುವುದು, 8.30ಕ್ಕೆ ವಸೂರಿಮಲ ಅಮ್ಮನವರ ತೆರೆ ಹೊರಡುವುದು, 9.30ಕ್ಕೆ ಅನ್ನಸಂತಾರ್ಪಣೆ, 10.30ಕ್ಕೆ ಗುಳಿಗ ದೇವರ ವೆಳ್ಳಟಂ, 11 ಗಂಟೆಗೆ ಭಗವತಿ ದೇವರ ವೆಳ್ಳಟಂ ನಡೆಯಲಿದೆ. ಮಾ.23 ರಂದು ಬೆಳಿಗ್ಗೆ 6.30ಕ್ಕೆ ಮುತ್ತಪ್ಪನ ಮತ್ತು ತಿರುವಪ್ಪನ ವೆಳ್ಳಟಂ, 11 ಕ್ಕೆ ವಸೂರಿಮಲ ಅಮ್ಮನ ತೆರೆ, 11.30ಕ್ಕೆ ಭಗವತಿ ಅಮ್ಮನ ತೆರೆ,…

Read More

ಗೋಣಿಕೊಪ್ಪ ಮಾ.20 NEWS DESK : ಅಸ್ಸಾಂ ವಲಸೆ ಕಾರ್ಮಿಕರಿಂದ ಕೊಡಗಿನ ವಾತಾವರಣದ ನೆಮ್ಮದಿಯಲ್ಲಿ ಕಲುಷಿತ ಕಾಣುತ್ತಿದೆ ಎಂದು ಪೊನ್ನಂಪೇಟೆ ತಾಲ್ಲೂಕು ಕೃಷಿ ಸಮಾಜದ ಗೌರವ ಕಾರ್ಯದರ್ಶಿ, ತಾಲ್ಲೂಕು ಬಗರ್‍ಹುಕಂ ಸಮಿತಿ ಮಾಜಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸೆ ಕಾರ್ಮಿಕರು ಈ ನೆಲದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಕಾರ್ಮಿಕರ ಆಗಮನವಾಗುತ್ತಿರುವ ಪರಿಣಾಮ ಹೆಚ್ಚು ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತಿದೆ. ಕಾಫಿ ತೋಟ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಕಾರ್ಮಿಕರಾಗಿ ಜಿಲ್ಲೆಗೆ ಆಗಮಿಸಿರುವ ವಲಸಿಗರು ಈ ಭಾಗದಲ್ಲಿ ಸ್ವಂತ ನೆಲೆ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಕೆಲಸ ನಿರ್ವಹಿಸಲು ಬಂದವರು ಇತ್ತೀಚಿನ ಬೆಳವಣಿಗೆಯಲ್ಲಿ ಗೋಣಿಕೊಪ್ಪ ಸಂತೆಗಳಲ್ಲಿ ವ್ಯಾಪಾರಿಗಳಾಗಿ ಬದಲಾಗುತ್ತಿರುವುದು ಸಹ ನಾವು ಕಾಣಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ಆತಂಕಕಾರಿಯಾದ ಬೆಳವಣಿಗೆಯಾಗಿದೆ ಎಂದರು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ ಸಲ್ಲ. ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ. ತೋಟದ ಮಾಲೀಕರು ತಮ್ಮ ತೋಟದಲ್ಲಿನ ಕಾರ್ಮಿಕರ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸಿಕೊಡಬೇಕಾಗಿದೆ. ಇಲ್ಲವಾದಲ್ಲಿ…

Read More

ಮಡಿಕೇರಿ ಮಾ.20 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.20 ರಿಂದ ಮೇ 4ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ “ಜಿಪಿಎಲ್ ಗೌಡ ಪ್ರೀಮಿಯರ್ ಲೀಗ್” ಲೆದರ್ ಬಾಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಗೌಡ ಯುವ ವೇದಿಕೆ ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು. 2023ರಲ್ಲಿ ಮೊದಲ ಬಾರಿಗೆ ಜನಾಂಗದ ಯುವ ಪೀಳಿಗೆಗೆ ಎಂಟರ್‍ಟೈನ್‍ಮೆಂಟ್ ಕ್ರಿಕೆಟ್‍ನಿಂದ ಪ್ರೊಫೆಶನಲ್ ಕ್ರಿಕೆಟ್‍ಗೆ ಉತ್ತೇಜನ ನೀಡುವ ಸಲುವಾಗಿ ಲೆದರ್‍ಬಾಲ್ ಕ್ರಿಕೆಟನ್ನು ಪರಿಚಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಮೂಡಿಬರುತ್ತಿರುವ ಕ್ರೀಡಾಕೂಟ ಈಗಾಗಲೇ ಜನಮನ ಗೆದ್ದಿದೆ ಹಾಗೂ ಪಟ್ಟಣಕ್ಕೆ ಸೀಮಿತವಾಗಿದ್ದ ಲೆದರ್‍ಬಾಲ್ ಕ್ರಿಕೆಟ್ ಈಗ ಹಲವಾರು ಗ್ರಾಮಗಳಲ್ಲಿ ಬೇಸಿಕ್ ಸೌಲಭ್ಯಗಳನ್ನು ಒದಗಿಸಿಕೊಂಡು ಯುವ…

Read More

ಮಡಿಕೇರಿ ಮಾ.20 NEWS DESK : ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾ.ಪಂ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ದುಡಿಯುತ್ತಿರುವ,  ಶ್ರೀ ಕೃಷ್ಣದೇವರಾಜ ಒಡೆಯರ್ ಸದ್ಭಾವನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಂ.ಎಂ.ಇಸ್ಮಾಯಿಲ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಗ್ರಾಮೀಣ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸೀತಾ, 36 ವರುಷಗಳ ಕಾಲ ಬೇಟೋಳಿ ಗ್ರಾ.ಪಂ ವ್ಯಾಪ್ತಿಯ ಆರೋಗ್ಯ ಸಹಾಯಕಿಯಾಗಿ ಉತ್ತಮ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೆ.ಕೆ.ರಮಿತಾ,  ಬೇಟೋಳಿ ಗ್ರಾಮ ಪಂಚಾಯಿತಿಯ ಕರ ವಸೂಲಿಗಾರರಾಗಿ ಅತ್ಯುತ್ತಮ ಸೇವೆಗೆಯುತ್ತಿರುವ ಬಿ.ಎಸ್.ದಿನೇಶ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಆಗಿ ಅತ್ಯುತ್ತಮ ಸೇವೆಗೆಯುತ್ತಿರುವ ಕೆ.ಬಿ.ರಮ ಅವರನ್ನು ಪಂಚಾಯಿತಿ ಅಧ್ಯಕ್ಷ ಅಚ್ಚಪ್ಪಂಡ ಬೋಪಣ್ಣ, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ,…

Read More

ಮಡಿಕೇರಿ ಮಾ.20 NEWS DESK : ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾ.21 ರಂದು  ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಕಾವೇರಿ ತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Read More