ಮಡಿಕೇರಿ NEWS DESK ಫೆ.16 : ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅತ್ಯಧಿಕ ಅನುದಾನವನ್ನು ನೀಡುವ ಮೂಲಕ ಜನಪರ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಎಂದು ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಾಸಕರ ವಿಶೇಷ ಅನುದಾನದಲ್ಲಿ ಇತ್ತೀಚೆಗೆ ಸುಮಾರು 3 ಕೋಟಿ ರೂ.ಗಳನ್ನು ಮೀಸಲಿಟ್ಟ ಶಾಸಕರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದು ಅಭಿನಂದನಾರ್ಹ ಕಾರ್ಯವಾಗಿದೆ. ಈ ಹಿಂದೆ ಇದ್ದ ಶಾಸಕರ ಅವಧಿಯಲ್ಲಿ ಶಾಸಕರ ಅನುದಾದಿಂದ ಇಷ್ಟು ದೊಡ್ಡ ಮೊತ್ತದ ಹಣ ನಗರದ ಅಭಿವೃದ್ಧಿಗೆ ದೊರೆತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಶಾಸಕ ಡಾ.ಮಂತರ್ ಗೌಡ ಅವರು ನಗರದ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದ್ದಾರೆ. ನಗರದ ಬಹುತೇಕ ಎಲ್ಲಾ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದಾರೆ. ಏಪ್ರಿಲ್ ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯನ್ನು ಕೂಡ ನೀಡಿದ್ದಾರೆ. ಈಗಾಗಲೇ…
ಲೇಖಕ: admin
ಸುಂಟಿಕೊಪ್ಪ NEWS DESK ಫೆ.16: ಇಂದಿನ ಹದಿಹರೆಯದ ಮಕ್ಕಳು ದುಶ್ಚಟಗಳ ದಾಸರಾಗದೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯವನ್ನು ಹೊಂದಿ ದೇಶದ ಅಸ್ತಿಯಾಗಬೇಕೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಚ್.ವಿ.ರಮೇಶ್ ಕರೆ ನೀಡಿದ್ದಾರೆ. 7ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮದ್ಯ, ಗುಟ್ಕಾ, ಮಾದಕ ವಸ್ತುಗಳ ಸೇವನೆಯಿಂದ ಯುವಕ ಯುವತಿಯರು ಹಾಳಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಸಂಸ್ಕಾರವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯರಾದ ಎಂ.ಎನ್.ಚಂದ್ರಮೋಹನ್ ಅವರು ಸ್ವಾಸ್ಥ್ಯ ಸಂಕಲ್ಪ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಯೋಜನೆಯ ಜ್ಞಾನ ದೀಪ ಕಾರ್ಯಕ್ರಮದ ಅಡಿಯಲ್ಲಿ ಶೇ.80ರ ರಿಯಾಯಿತಿ ದರದಲ್ಲಿ ನೀಡಲಾದ ಬೆಂಚ್ ಡೆಸ್ಕ್ ಗಳ ಮಂಜೂರಾತಿ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ದಿ ಅಧ್ಯಕ್ಷರಿಗೆ ನೀಡಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ…
ಮಡಿಕೇರಿ NEWS DESK ಫೆ.16 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತುರ್ತು ಔಷಧೀಯ ವಿಭಾಗದ ಪ್ರಾಧ್ಯಾಪಕರಾಗಿ ಕರ್ನಾಟಕ ಸರಕಾರದಿಂದ ನೇಮಕಗೊಂಡಿರುವ ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ನ ಗೌರವ ಅಧ್ಯಕ್ಷರು ಹಾಗೂ ಸಲಹೆಗಾರರಾಗಿರುವ ಮಡಿಕೇರಿಯ ಖ್ಯಾತ ಇ.ಎನ್.ಟಿ ವೈದ್ಯ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಅವರನ್ನು ಬಳಗದ ಪದಾಧಿಕಾರಿಗಳು ಸನ್ಮಾನಿಸಿ, ಅಭಿನಂದಿಸಿ ಗೌರವಿಸಿದರು. ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮೋಹನ್ ಅಪ್ಪಾಜಿ ಅವರು ಮುಂದಿನ ದಿನಗಳಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿಸುವ ಗುರಿ ಹೊಂದಿದ್ದು, ಇದಕ್ಕೆ ಸರ್ವರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಕೊಡಗು ಜಿಲ್ಲಾ ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಉಪಾಧ್ಯಕ್ಷರಾದ ಕೋಲೆಯಂಡ ನಿಶಾ ಮೋಹನ್, ಕಾರ್ಯದರ್ಶಿ ಕೇಚಂಡ ಸುನೀತಾ ಗಣೇಶ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಟ್ರಸ್ಟಿ ಕೆ.ಎಂ.ಬಿ ಗಣೇಶ್, ಈರಮಂಡ ವಿಜಯ್ ಉತ್ತಯ್ಯ, ಬಳಗದ ಸದಸ್ಯರಾದ ಮಂಜುಳಾ ಶಿವಕುಮಾರ್,…
ಮಡಿಕೇರಿ NEWS DESK ಫೆ.16 : ವಾಹನ, ಚಿನ್ನಾಭರಣ ಮತ್ತಿತರ ವಸ್ತುಗಳ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕಕ್ಕಬ್ಬೆ ನಾಲಡಿ ಗ್ರಾಮದ ಕೆ.ಸಿ.ಅಶೋಕ(35), ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿ ನಿವಾಸಿ ಕೆ.ಪಿ.ಕೀರ್ತಿ(25) ಹಾಗೂ ಸೋಮವಾರಪೇಟೆಯ ರೇಂಜರ್ ಬ್ಲಾಕ್ ನ ರಿಯಾಜ್ ಸಾಬು(26) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಬಳಿಯಿಂದ ಕಳ್ಳತನ ಮಾಡಿದ ಸಿಸಿಟಿವಿ ಡಿವಿಆರ್, ಖಜಾನೆ ಬಾಕ್ಸ್, ರೂ.930 ಮೌಲ್ಯದ ಸ್ಟಾಂಪ್ ಗಳು, ಒಂದು ಮಾರುತಿ ಓಮ್ನಿ, ಎರಡು ದ್ವಿಚಕ್ರ ವಾಹನಗಳು, ಒಂದು ಮರ ಕುಯ್ಯುವ ಯಂತ್ರ, ಒಂದು ಏರ್ ಗನ್, 200 ಕೆ.ಜಿ ಕಾಫಿ, 250 ಕೆ.ಜಿ ಕಾಳು ಮೆಣಸು, 30 ಗ್ರಾಂ ಚಿನ್ನ ಮತ್ತು 229 ಗ್ರಾಂ ಬೆಳ್ಳಿಯನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ::: ಪ್ರಕರಣಗಳು ::: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024 ನವೆಂಬರ್ 30 ರಂದು ಬಿಟ್ಟಂಗಾಲ…
ಮಡಿಕೇರಿ NEWS DESK ಫೆ.16 : ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ಮಹಿಳಾ ಆರೋಗ್ಯ ಶಿಬಿರ”ವನ್ನು ಆಯೋಜಿಸಲಾಗಿತ್ತು. ನಗರದ ಹರಿಹರ ಸರ್ವಿಸ್ ಸ್ಟೇಷನ್ ನ ಆವರಣದಲ್ಲಿ ನಡೆದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಹಿಂದೂ ಮಲಯಾಳಿ ಸಂಘದ ಗೌರವ ಸಲಹೆಗಾರ ಟಿ.ಆರ್.ವಾಸುದೇವ್, ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಆರೋಗ್ಯದ ಮೇಲೆ ಕಾಳಜಿ ಇಟ್ಟು ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಈ ರೀತಿಯ ಉಪಯುಕ್ತ ಶಿಬಿರಗಳು ಮತ್ತು ಸಮಾಜಮುಖಿ ಕಾರ್ಯಗಳು ಇನ್ನು ಮುಂದೆಯೂ ನಡೆಯಲಿ ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಮಮತಾ ಎಸ್. ಅವರು ಮಾತನಾಡಿ ಮಹಿಳೆಯರ ಆರೋಗ್ಯ ಸಮಸ್ಯೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಡಾ.ಮಂದಿರಾ ಹಾಗೂ ಡಾ.ಸಿಲಾನ ಶಿಬಿರದಲ್ಲಿ ಭಾಗಿಯಾಗಿದ್ದರು. ಹಿಂದೂ ಮಲಯಾಳಿ…
ಮಡಿಕೇರಿ NEWS DESK ಫೆ.16 : ಕೊಡಗು ಜಿಲ್ಲಾ ವ್ಯಾಪ್ತಿಯ ವಿವಾಹ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ಒಂದು ದಿನದ ಸನ್ನದು ಪಡೆಯಬೇಕು ಎಂದು ಅಬಕಾರಿ ಇಲಾಖೆ ಹೊರಡಿಸಿರುವ ಹೊಸ ಆದೇಶಕ್ಕೆ ವಿರಾಜಪೇಟೆ ಬಿಜೆಪಿ ಮಂಡಲ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ಹೊಸ ಹೊಸ ಆದೇಶಗಳ ಮೂಲಕ ಕೊಡಗಿನ ಸಂಪ್ರದಾಯಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ವಿವಾಹ ಸಮಾರಂಭಗಳು ನಡೆದಿದೆ. ಸಂಪ್ರದಾಯದಂತೆ ಎಲ್ಲೂ ಎಲ್ಲೆ ಮೀರದೆ, ಅಪರಾಧಗಳಿಗೆ ಅವಕಾಶ ನೀಡದೆ ಮತ್ತು ಸಾರ್ವಜನಿಕವಾಗಿ ಅಶಾಂತಿ ಮೂಡಿಸದೆ ಶಿಸ್ತುಬದ್ಧವಾಗಿ ಮದ್ಯವನ್ನು ಬಳಸಲಾಗಿದೆ. ಆದರೆ ಇದೀಗ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದೆ ಎಂಬ ನೆಪವೊಡ್ಡಿ ಸನ್ನದು ಪಡೆಯಬೇಕೆನ್ನುವ ನಿಯಮ ಜಾರಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ವಿವಾಹ ಸಮಾರಂಭದಲ್ಲಿ…
ಮಡಿಕೇರಿ NEWS DESK ಫೆ.16 : ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು, ಮೊಬೈಲ್ ಕಳ್ಳತನ ಹಾಗೂ ನಕಲಿ ಸಿಮ್ ಕಾರ್ಡ್ ಗಳ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಮೊಬೈಲ್ ಅಂಗಡಿಯ ಮಾಲೀಕರಿಗೆ ಹಾಗೂ ಸಿಮ್ ಕಾರ್ಡ್ ವಿತರಕರಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಮ್ ಕಾರ್ಡ್ ವಿತರಣೆ ಹಾಗೂ ಹಳೆಯ ಮೊಬೈಲ್ ಗಳ ಮಾರಾಟ ಹಾಗೂ ಖರೀದಿ ಸಂದರ್ಭದಲ್ಲಿ ನೋಂದಣಿ ಪುಸ್ತಕ ನಿರ್ವಹಣೆ, ಸಂಪೂರ್ಣ ವಿಳಾಸ ಪಡೆದುಕೊಳ್ಳುವುದು, ಗುರುತಿನ ಚೀಟಿ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳುವುದು ಹೀಗೆ ಹಲವು ಅಂಶಗಳ ಬಗ್ಗೆ ಕೊಡಗು ಸಿಇಎನ್ ಠಾಣೆಯ ಡಿಎಸ್ಪಿ ರವಿ ಅವರು ಮಾಹಿತಿ ನೀಡಿದರು.
ಮಡಿಕೇರಿ NEWS DESK ಫೆ.16 : ತಲಕಾವೇರಿ ಉಪ ಠಾಣೆಯ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ಸಿಕ್ಕಿದ ರೂ.40,000 ಹಣ ಮತ್ತು 40,000 ಯುಎಸ್ ಡಾಲರ್ ಇರುವ ಪರ್ಸನ್ನು ಅದರ ವಾರಸುದಾರರಿಗೆ ಹಿಂದಿರುಗಿಸಲಾಯಿತು. ಪರ್ಸ್ ಮತ್ತು ಹಣವನ್ನು ಹಿಂದಿರುಗಿಸಿದ ಭಾಗಮಂಡಲ ಠಾಣೆಯ ಸಿಬ್ಬಂದಿ ಎಸ್.ಎಸ್.ಜಯಪ್ರಕಾಶ್ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
ಮಡಿಕೇರಿ NEWS DESK ಫೆ.16 : ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ 2025ನೇ ಸಾಲಿನ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದ ಮಾದಕ ದ್ರವ್ಯ ಪತ್ತೆ ವಿಭಾಗದಲ್ಲಿ ಕೊಡಗು ಜಿಲ್ಲೆಯ ಶ್ವಾನದಳದ ಎಆರ್ ಎಸ್ಐ ಜಿತೇಂದ್ರ ರೈ ಅವರ ತಂಡ ಪಾಲ್ಗೊಂಡು ಬೆಳ್ಳಿ ಪದಕ ಪಡೆದುಕೊಂಡಿದೆ. ಪದಕ ವಿಜೇತ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.
ಮಡಿಕೇರಿ NEWS DESK ಫೆ.16 : ಚೆಟ್ಟಳ್ಳಿಯ ಪೊನ್ನತ್ ಮೊಟ್ಟೆಯ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರೀ ಶನೈಶ್ಚರ, ಮಹಾಗಣಪತಿ ಹಾಗೂ ನವಗ್ರಹ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಪುತ್ತೂರಿನ ಬ್ರಹ್ಮ ಶ್ರೀ ವೇದಮೂರ್ತಿ ಗಿರೀಶ ತಂತ್ರಿ ಅವರ ನೇತೃತ್ವದಲ್ಲಿ ಫೆ.14 ರಂದು ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ ವಾಚನ, ಆಚಾರ್ಯ ವರ್ಣ, ಪ್ರಸಾದ ಪರಿಗ್ರಹ, ಪಶುದಾನ ಶುದ್ಧಿ, ಅಂಕುರ ಆರೋಹಣ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಕ್ಪಾಲಕ ಬಲಿ, ಮಹಾಗಣಪತಿ, ನವಗ್ರಹ ದೇವರ, ಆದಿವಾಸ ಪೂಜೆ ಶಯನಾದಿವಾಸ ಜರುಗಿತು. ಫೆ.15 ರಂದು ಬೆಳಿಗ್ಗೆ ಅಂಕುರ ಪೂಜೆ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ನವಗ್ರಹ ಶಾಂತಿ ಹೋಮ, ಮಹಾಗಣಪತಿ, ನವಗ್ರಹ ದೇವರ ಪ್ರತಿಷ್ಠಾ ಕಲಶ ಪೂಜೆ, ಮಹಾಗಣಪತಿ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ, ನವಗ್ರಹ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.…






