ಲೇಖಕ: admin

ಬೆಂಗಳೂರು ಫೆ.17 NEWS DESK : ಅತಿ ಹೆಚ್ಚು ಉದ್ಯೋಗ ಅವಲಂಭನೆ ಇರುವುದು ಕೃಷಿಯಲ್ಲೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮದು ಪ್ರಥಮ ಆಧ್ಯತೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ  ಮಾತನಾಡಿ, ರೈತರ ಬೇಡಿಕೆಗಳನ್ನು ನಿರಂತರವಾಗಿ ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ. ಸದಾ ರೈತ ಕುಲದ ಪರವಾಗಿ ಇರ್ತೇನೆ ಎಂದು ಭರವಸೆ ನೀಡಿದರು.   ಮೈಕ್ರೋ ಫೈನಾನ್ಸ್ ಗಳ ಬಲವಂತದ ವಸೂಲಿಗೆ ಕಡಿವಾಣ ಹಾಕಿದ್ದಕ್ಕಾಗಿ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಸುಮೂಲಕಗ್ರೀವಾಜ್ಞೆರ್ಕಾರವನ್ನು ಒಕ್ಕೋರಲಿನಿಂದ ಅಭಿನಂಧಿಸಿದರು.ಸಭೆಯ ಪ್ರಾರಂಭಕ್ಕೂ ಮುನ್ನ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Read More

ಮಡಿಕೇರಿ ಫೆ.17 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಪರಿಷತ್ತಿನ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯನ್ನು ಆಚರಿಸುವ ಕುರಿತು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ತಾಲ್ಲೂಕು ಅಧ್ಯಕ್ಷರು ಮತ್ತು ಹೋಬಳಿ ಅಧ್ಯಕ್ಷರುಗಳಿಗೆ ಜವಾಬ್ದಾರಿ ಹಂಚಿದ್ದು, ಸ್ವಾಗತ ಸಮಿತಿ ಆಹಾರ ಸಮಿತಿ ಸನ್ಮಾನ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಪದ್ಮನಾಭ, ಸದಸ್ಯರುಗಳಾಗಿ ಎ.ವಿ.ಮಂಜುನಾಥ , ಎಸ್.ಎಸ್.ಸಂಪತ್ ಕುಮಾರ್, ಕೆ.ಟಿ.ಬೇಬಿ ಮ್ಯಾಥ್ಯೂ, ಕೋಳೆರ ದಯಾ ಚಂಗಪ್ಪ, ಕೆ.ಎಸ್.ನಾಗೇಶ್, ಕುಲ್ಲಚಂಡ ಪ್ರಮೋದ್ ಗಣಪತಿ, ಉಳುವಂಗಡ ಕಾವೇರಿ ಉದಯ, ವಿ.ಟಿ.ಮಂಜುನಾಥ್  ಜವಾಬ್ದಾರಿ ವಹಿಸಲಾಯಿತು. ವೇದಿಕೆ ಸಮಿತಿ ಅಧ್ಯಕ್ಷರಾಗಿ ಅಂಬೆಕಲ್ ನವೀನ್ ಸದಸ್ಯರುಗಳಾಗಿ ಎಸ್.ಡಿ.ವಿಜೇತ್, ಸುನಿಲ್ ಪತ್ರವೋ, ನಂಗಾರು ಕೀರ್ತಿ ಪ್ರಸಾದ್, ಈರಮಂಡ ಹರಿಣಿ ವಿಜಯ್, ಪಿ.ಎಫ್ ಸಭಾಸ್ಟಿನ್, ಬಿ.ಬಿ.ನಾಗರಾಜ ಆಚಾರ್, ಬಾನಂಗಡ ಅರುಣ್ ರವರನ್ನು ಆರಿಸಲಾಯಿತು. ಆಹಾರ ಸಮಿತಿ ಅಧ್ಯಕ್ಷರಾಗಿ ಕಡ್ಲೇರ…

Read More

ಮಡಿಕೇರಿ ಫೆ.17 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಜಿಲ್ಲಾ ಮಹಿಳಾ ಸಹಾಯವಾಣಿ, ಮಡಿಕೇರಿ. ಕೊಡಗು ಜಿಲ್ಲೆ ಇವರ ಸಹಯೋಗದೊಂದಿಗೆ 2024-25 ನೇ ಸಾಲಿನ ಮಿಶನ್ ಶಕ್ತಿ ಯೋಜನೆಯಡಿ“ಬೇಟಿ ಬಚವೊ-ಬೇಟಿ ಪಡಾವೊ” ತಾಲ್ಲೂಕು ಮಟ್ಟದ ಕಾರ್ಯಕ್ರಮದ ಅಂಗವಾಗಿ ತಿತಿಮತಿ ಸರ್ಕಾರಿ ಪ್ರೌಡ ಶಾಲೆಯಲ್ಲಿ “ಸಮಗ್ರ ಮಕ್ಕಳ ಲೈಂಗಿಕ ಶಿಕ್ಷಣದ ಕುರಿತು” ಕಾರ್ಯಕ್ರಮ ನಡೆಯಿತು. ತಿತಿಮತಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು, ಪ್ರತಿ ಮನೆಯ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು. ಅಲ್ಲದೆ ಹೆಣ್ಣು ಮಕ್ಕಳ ಜನನವನ್ನು ಸಂಭ್ರಮಿಸಬೇಕು. ಗಂಡು ಮತ್ತು ಹೆಣ್ಣು ನಡುವೆ ಸಮಾನತೆ ಇರಬೇಕು ಎಂದು ತಿಳಿಸಿದರು. ಕಾನೂನು ಸಲಹೆಗಾರರು, ಸಖಿ ಒನ್ ಸ್ಟಾಪ್ ಸೆಂಟರ್ ಮಡಿಕೇರಿ ಅಂಬಿಕಾ ಮಾತನಾಡಿ ಮಕ್ಕಳಿಗೆ…

Read More

ಮಡಿಕೇರಿ ಫೆ.17 NEWS DESK : ಡಾ||ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಕ್ಯಾತೆ ಗ್ರಾಮ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ, ಈ ವಸತಿ ಶಾಲೆಗೆ 6ನೇ ತರಗತಿಯಿಂದ 10ನೇ ತರಗತಿ ವರೆಗೆ ಸಿಬಿಎಸ್‍ಇ ಪಠ್ಯಕ್ರಮ ಭೋಧಿಸುವ ಆಂಗ್ಲ ಭಾಷಾ ಅತಿಥಿ ಶಿಕ್ಷಕರ ಸೇವೆ ಪಡೆಯಲು ಅರ್ಜಿ ಆಹ್ವಾನಿಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08272 – 225528 9686138688 ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

Read More

ಮಡಿಕೇರಿ ಫೆ.17 NEWS DESK : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ವರ್ಷದಿಂದ ಕೊಡವ ಸಮಾಜದ ಮುಖಾಂತರ ಬಾಳೇಡ ಕುಟುಂಬಸ್ಥರ ಮನೆಗೆ ಹೋಗುವ ಸಂಪರ್ಕ ರಸ್ತೆಯ ಡಾಂಬರೀಕರಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದ 5 ಲಕ್ಷ ದಲ್ಲಿ ನೂತನ  ರಸ್ತೆಯ ಕಾಮಗಾರಿಯನ್ನು ಕೈಗೊಳ್ಳಲಾಯಿತು. ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ, ರಸ್ತೆಯ ಕಾಮಗಾರಿ ಬಗ್ಗೆ ಶಾಸಕರ ಗಮನಕ್ಕೆ ತಂದಾಗ, ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲು ನಿರ್ದೇಶಿಸಿದ್ದರು.  ರಸ್ತೆಯ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಉತ್ತಮ ರೀತಿಯ ರಸ್ತೆ ನಿರ್ಮಾಣ ಆಗಿದ್ದಕ್ಕೆ, ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಸಹಕರಿಸಿದ ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟ್ಟಿರ ಕುಶು ಕುಶಾಲಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ವಿರಾಜಪೇಟೆ ಫೆ.NEWS DESK :  ವಿರಾಜಪೇಟೆಯ ಮದರ್ ತೆರೇಸಾ ಸೇವಾ ಕೇಂದ್ರ ವತಿಯಿಂದ ವಿರಾಜಪೇಟೆಯ ಏಕೈಕ ಆಟೋ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಿಯಾ ಜೈಸನ್ ಅವರನ್ನು ಸನ್ಮಾನಿಸಲಾಯಿತು.  ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ವಂ.ಫಾ.ಜೇಮ್ಸ್ ಡೊಮಿನಿಕ್  ಸನ್ಮಾನಿಸಿ, ಗೌರವಿಸಿದರು. ನಂತರ ಮಾತನಾಡಿದ ಅವರು ಕುಟುಂಬವನ್ನು ನಿರ್ವಹಿಸಲು ಮಹಿಳೆ ಸಮರ್ಥಳು. ಮಹಿಳೆ ಅಬಲೆಯಲ್ಲ, ಸಬಲೆ. ಮಹಿಳೆ ಮನಸ್ಸು ಮಾಡಿದ್ದಲ್ಲಿ ತನ್ನ ಕುಟುಂಬವನ್ನು ಪೋಷಿಸುವಲ್ಲಿ ಯಾವ ಕಠಿಣ ಕೆಲಸವನ್ನು ಮಾಡಲಿಕ್ಕೆ ಹಿಂಜರಿಯುವುದಿಲ್ಲ ಎಂಬುದಕ್ಕೆ ಪ್ರಿಯ ಜೈಸನ್ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಗುರುಗಳಾದ ರೆ.ಫಾ ಮದಲೈ ಮುತ್ತು, ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಡಿ.ಡಿ.ಪಿ.ಐ ಪೆರಿಗ್ರೀನ್ ಎಸ್.ಮಚಡೋ, ಮಾರ್ಟಿನ್ ಬರ್ನಾಡ್, ಚೋಪಿ ಜೋಸೆಫ್, ಜೇಮ್ಸ್ ಮೆನೇಜಸ್, ಅನಿತಾ ನರೋನ್ನ, ಅರುಣ ಡಿಸೋಜಾ, ಮರ್ವಿನ್, ಜೋಕಿಂ ರಾಡ್ರಿಗೀಸ್, ಬೆನೆಡಿಕ್ಟ್ ಸಾಲ್ದಾನ್ಹ, ಚಾರ್ಲ್ಸ್ ಡಿಸೋಜ ಹಾಗೂ ಕೇಂದ್ರದ ಸರ್ವ ಸದಸ್ಯರು ಹಾಜರಿದ್ದು, ಪ್ರಿಯಾ ಅವರನ್ನು ಅಭಿನಂದಿಸಿದರು.

Read More

ಸಿದ್ದಾಪುರ ಫೆ.17 NEWS DESK : ಪುಲಿಯೇರಿ ಶ್ರೀ ಮಂಗುಯಿಲ್ ಭಗವತಿ ಕ್ಷೇತ್ರದ 3ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮವು ಫೆ.26 ರಿಂದ ಮಾ. 2 ರವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಎಂ.ಟಿ.ಶಶಿ. ಫೆ.26 ರಂದು ಶುದ್ದಿಪೂಜೆ ಆಚಾರ್ಯವರಣಂ, ದೀಪಾರಾಧನೆ, ಫೆ.27 ರಂದು ಗಣಪತಿ ಹೋಮ ,ಉಷಾಪೂಜೆ, ಮಹಾಪೂಜೆ, ಕಲಶ ಪೂಜೆ, ಭಗವತಿ ಪೂಜೆ, ಅತ್ತಾಯ ಪೂಜೆ. ಫೆ.28 ರಂದು ದೀಪಾರಾಧನೆ, ಸರ್ವ ಐಶ್ವರ್ಯ ಪೂಜೆ, ಮಾ.1ರಂದು ಲಲಿತ ಸಹಸ್ರನಾಮಾರ್ಚ, ಮಹಾ ಪೂಜೆ ನಡೆಯಲಿದೆ. ಮಾ.2ರಂದು ಉತ್ಸವದ ಕೊನೆಯ ದಿನವಾಗಿದ್ದು ಮಹಾ ಗಣಪತಿ ಹೋಮ, ದೇವಿಗೆ ಮಹಾ ಪೊಂಗಾಲ, ಮಹಾಕುರುದಿ, ಮಹಾಪೂಜೆ, ನಂತರ ಚಂಡೆವಾಗಳೊಂದಿ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಕಾವೇರಿ ನದಿಯಲ್ಲಿ ದೇವಿ ಆರಾಟ್ ನಡೆಯಲಿದು ಮಂಗುಯಿಲ್ ಭಗವತಿ ಕ್ಷೇತ್ರದವರೆಗೆ ಶೋಭಾಯಾತ್ರೆ ನಡೆಯಲಿದೆ. ಫೆ.8 ಗಂಟೆಗೆ ಮಹಾ ಪೂಜೆ ಮತ್ತು ದೇವಿಗೆ ಮಹಾ…

Read More

ನಾಪೋಕ್ಲು ಫೆ.17 NEWS DESK : ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆ ರಹಿತ ಕಟಾ ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ಕೊಡಗಿನ ಶಝಾ ಫಾತಿಮಾಳನ್ನು ಗ್ರಾಮಸ್ಥರು ಸನ್ಮಾನಿಸಿದರು. ಮಡಿಕೇರಿ ತಾಲೂಕಿನ ಬೇತು ಗ್ರಾಮದಲ್ಲಿ ನಾಪೋಕ್ಲು ಸ್ನೇಹಿತರ ಬಳಗದ ವತಿಯಿಂದ ಆಯೋಜಿಸಲಾದ ಭಾವಪೂರ್ಣ ಕಾರ್ಯಕ್ರಮದಲ್ಲಿ ಜಮಾಯತ್ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರೆಹಮಾನ್ ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನ ಬರಕಾ ಇಂಟನ್ರ್ಯಾಷನಲ್ ಸ್ಕೂಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಏಳನೇ ತರಗತಿ ವಿದ್ಯಾರ್ಥಿನಿ ಶಝಾ ಫಾತಿಮಾ ತಮಿಳುನಾಡಿನ ಚೆನ್ನೈನಲ್ಲಿ ಇತ್ತೀಚೆಗೆ ಜರುಗಿದ ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆರಹಿತ ಕಟಾ ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಜೊತೆಗೆ ಕುಮಿಟೆ ವೈಯುಕ್ತಿಕ ವಿಭಾಗದಲ್ಲೂ ಚಿನ್ನದ ಪದಕಕ್ಕೆ ಪಡೆದುಕೊಂಡಿದ್ದಾಳೆ. ಶಝಾ ಫಾತಿಮಾ ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಕಾಸಿಂ (ಬಹದ್ದೂರ್) ಮತ್ತು ಸೌಸ್ರೀನ್ ದಂಪತಿಯ ಪುತ್ರಿ. ಇವಳು ಝಕಿಯಾ ಯಾಸ್ಮಿನ್ ಮತ್ತು ನದೀಮ್ ರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಕಾರ್ಯಕ್ರಮದಲ್ಲಿ…

Read More

ಮಡಿಕೇರಿ ಫೆ.17 NEWS DESK :  ಚಿಲ್ ಬಾಯ್ಸ್ ಮಡಿಕೇರಿ ಹಾಗೂ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಇವರ ಆಶ್ರಯದಲ್ಲಿ, ಕಳೆದ ಒಂದು ವಾರಗಳಿಂದ ಮಡಿಕೇರಿ ನಗರದ ಕೆ.ಎಸ್ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 20ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರ ತಾಜ್ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ. ರನ್ನರ್ಸ್ ಪ್ರಶಸ್ತಿಯನ್ನು ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ತಾಜ್ ಕುಶಾಲನಗರ ತಂಡವು ನಿಗದಿತ ಆರು ಓವರ್ ಗಳಲ್ಲಿ 49 ರನ್ ಗಳಿಸಿತು. 50 ರನ್ ಗಳ ಗುರಿ ಬೆನ್ನಟ್ಟಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದರು ಕೂಡ,ಫ್ರೀಡಮ್ ಬಾಯ್ಸ್ ಹುಂಡಿ 40 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ತಾಜ್ ಕುಶಾಲನಗರ ತಂಡವು 09 ರನ್ ಗಳ ಅಂತರದಿಂದ ಗೆಲುವು ಸಾಧಿಸಿ, 20ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು.…

Read More

ಮಡಿಕೇರಿ ಫೆ.17 NEWS DESK : ಮಹಾನ್ ಮಾನವತಾವಾದಿ ಸಂತ ಸೇವಾಲಾಲ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ವೆಂಕಟ ನಾಯಕ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ  ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಲೆಮಾರಿ ಜನ ಸಮುದಾಯದ ಬಂಜಾರ, ಲಂಬಾಣಿ, ಲಮಾಣಿ, ಸುಗಾಲಿ, ಸುಕಾಲಿ ಗೋರ್, ಸೋನಾರ್, ಲೋಹಾರ್, ಬಾಜೀಗರ್ ಮತ್ತಿತರ ಅನೇಕ ಉಪನಾಮಗಳಿಂದ ಗುರುತಿಸಲ್ಪಡುವ ಬಂಜಾರರು ಮೂಲತಃ ದಿನಸಿ ಮತ್ತು ಲವಣದ ವ್ಯಾಪಾರಿಯಾಗಿದ್ದರು ಎಂದು ಅವರು ವೆಂಕಟ್ ನಾಯಕ್ ಅವರು ವಿವರಿಸಿದರು. ಲಂಬಾಣಿ, ಬಂಜಾರ ಸಮಾಜ ಬಗ್ಗೆ ಮಹಾಭಾರತದಲ್ಲಿಯೇ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ ಎಂದು ತಿಳಿಸಿದರು. ಸಂತ ಸೇವಾಲಾಲ್ ಅವರು 1739 ಫೆಬ್ರವರಿ 15 ರಂದು ಸೂರಗೊಂಡನ ಕೊಪ್ಪದಲ್ಲಿ ಜನಿಸಿದರೆಂದು ಹೇಳಲಾಗುತ್ತದೆ.…

Read More