ಮಡಿಕೇರಿ ಡಿ.31 NEWS DESK : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಹುತಾತ್ಮರಾದ ಕೊಡಗಿನ ಯೋಧ ದಿವಿನ್ ಅವರ ಪಾರ್ಥಿವ ಶರೀರವನ್ನು ಇಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ಮೈಸೂರು – ಕೊಡಗು ಸಂಸದರ ಯದುವೀರ್ ಒಡೆಯರ್, ಸೇನಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.
ಲೇಖಕ: admin
ಗೋಣಿಕೊಪ್ಪ ಡಿ.31 NEWS DESK : ಪೊನ್ನಂಪೇಟೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಕುಂಞಂಗಡ ಅರುಣ್ ಭೀಮಯ್ಯ, ಗೌರವ ಕಾರ್ಯದರ್ಶಿಯಾಗಿ ಕಾಡ್ಯಮಾಡ ಗಿರೀಶ್ ಗಣಪತಿ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನಲ್ಲಿ ನಡೆದ ಕೃಷಿಕ ಸಮಾಜದ ಚುನಾವಣೆಯಲ್ಲಿ ಐದು ವರ್ಷದ ಆಡಳಿತ ಅವಧಿಗೆ ಚುನಾವಣಾಧಿಕಾರಿಗಳು ಈ ನೇಮಕಾತಿ ಆದೇಶವನ್ನು ಘೋಷಿಸಿದ್ದಾರೆ. ಉಪಾಧ್ಯಕ್ಷರಾಗಿ ಹೆಚ್.ಡಿ.ಶ್ರೀನಿವಾಸ್, ಕೋಶಾಧಿಕಾರಿಯಾಗಿ ಅಳಮೇಂಗಡ ವಿವೇಕ್, ಜಿಲ್ಲಾ ಪ್ರತಿನಿಧಿಯಾಗಿ ನೆಲ್ಲೀರ ಚಲನ್‍ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಳಮೇಂಗಡ ಬೋಸ್, ಹೆಚ್.ಕೆ.ಸುರೇಶ್, ಶರೀನ್ ಸುಬ್ಬಯ್ಯ, ಎಂ.ಬಿ.ಮೋಹನ್, ಚಿರಿಯಪಂಡ ರಾಜ ನಂಜಪ್ಪ ಆಯ್ಕೆಯಾಗಿದ್ದಾರೆ.
ಮಡಿಕೇರಿ ಡಿ.31 NEWS DESK : ಎಲ್ಲಾ ಸಮುದಾಯಗಳ ಕಷ್ಟ ಸುಖಗಳಲ್ಲೂ ಕಾಳಜಿಯಿಂದ ಸ್ಪಂದಿಸುವ ಪುರೋಹಿತರು ಅತ್ಯಂತ ಸಂಕಷ್ಟದಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ರಾಜ್ಯ ಘಟಕದ ಅಧ್ಯಕ್ಷ ಡಾ.ಜೆ.ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ. ಸೋಮವಾರಪೇಟೆಯ ಸೋಮೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ಕೊಡಗು ಜಿಲ್ಲಾ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ದೇವಾಲಯಗಳಲ್ಲಿ ದುಡಿಯುತ್ತಿರುವ ಪುರೋಹಿತರಿಗೆ ಉದ್ಯೋಗ ಭದ್ರತೆಯಾಗಲಿ, ಆರೋಗ್ಯ ವಿಮಾ ಸೌಲಭ್ಯವಾಗಲಿ, ಭವಿಷ್ಯನಿಧಿ ಯೋಜನೆಯಾಗಲಿ ಯಾವುದೂ ಇಲ್ಲದೆ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಎಲ್ಲಾ ಅಸಹಾಯಕ ಪರಿಸ್ಥಿತಿಯಿಂದ ಪುರೋಹಿತ ಕಾರ್ಮಿಕರನ್ನು ವಿಮುಕ್ತಿಗೊಳಿಸುವ ಉದ್ದೇಶದಿಂದ ಸಂಘಟನೆಯ ಆರಂಭಕ್ಕೆ ನಾಂದಿ ಹಾಡಲಾಗಿದೆ. ಆರಂಭಿಕವಾಗಿ 35ಕ್ಕೂ ಅಧಿಕ ಅರ್ಚಕ ವರ್ಗದವರು ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರುಗಳಲ್ಲೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದರು.…
ಮಡಿಕೇರಿ ಡಿ.31 NEWS DESK : ರಾಷ್ಟ್ರಕವಿ ಕುವೆಂಪು ರಚಿತಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ನಾಡಗೀತೆಯ ಆಶಯಕ್ಕೆ ನೂರು ವರ್ಷ ತುಂಬಿದೆ. ಅದರ ನೆನಪಿಗಾಗಿ ಸಹಸ್ರಕಂಠದಲ್ಲಿ ನಾಡಗೀತೆ ಹಾಡುವ ಕಾರ್ಯಕ್ರಮವನ್ನು ಮತ್ತು ರಾಷ್ಟ್ರಕವಿ ಕುವೆಂಪು 120ನೆಯ ಜನ್ಮ ದಿನಾಚರಣೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಇಲಾಖೆ, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸರಕಾರಿ ಹಿರಿಯ ದರ್ಜೆ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಜ.4 ರಂದು ಆಯೋಜಿಸಲಾಗಿದೆ. ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 9.45 ಗಂಟೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ…
ಮಡಿಕೇರಿ ಡಿ.31 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಮಕ್ಕಳಿಗೆ ಹಾಗೂ ಆಸಕ್ತ ಪುರುಷ-ಮಹಿಳೆಯರಿಗೆ ಕೊಡವ ಆಟ್-ಪಾಟ್ ಪಡಿಪು ಶಿಬಿರ ನಡೆಸಲು ನಿರ್ಧರಿಸಿದೆ. ಇದರನ್ವಯ ಉಮ್ಮತಾಟ್, ಉರ್‍ಟಿಕೊಟ್ಟ್ ಆಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ಬಾಳೊಪಾಟ್, ದುಡಿಕೊಟ್ಟ್ ನಂತಹ ಕೊಡವ ಸಂಸ್ಕೃತಿಯ ಆಟ್-ಪಾಟ್ ತರಬೇತಿಯನ್ನು ಕನಿಷ್ಟ 15 ದಿನಗಳವರೆಗೆ ಸಾಮೂಹಿಕವಾಗಿ ನೀಡಲಾಗುವುದು. ಅಂತೆಯೇ, ಕೊಡವರ ಕುಪ್ಯ-ಚೇಲೆ, ಮಂಡೆ ವಸ್ತ್ರ, ಕೊಡವತಿ ಪೊಡಿಯ ಉಡುವ ಕ್ರಮವನ್ನು ಕಲಿಸಲಾಗುವುದು. ಕೊಡವರ ಕೋರೆಕೆಟ್ಟ್, ಪಾನಿಕೆಟ್ಟ್‍ಗಳ ತರಬೇತಿ ನೀಡಲಾಗುವುದು. ಇದರೊಂದಿಗೆ ‘ದುಡಿ ಪೊಲ್‍ಪ’ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ತರಬೇತಿ ಬಯಸುವ ವಿದ್ಯಾಸಂಸ್ಥೆಗಳು, ಸಂಘ-ಸಂಸ್ಥೆಗಳ ಹೆಸರು, ವಿಳಾಸದೊಂದಿಗೆ ಅಕಾಡೆಮಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ-8762942976 ನ್ನು ಸಂಪರ್ಕಿಸಬಹುದು. ಆದ್ದರಿಂದ ಈ ಎಲ್ಲಾ ಕಲೆಗಳಲ್ಲಿ ಅರಿವು-ಅನುಭವ ಇರುವ ತಜ್ಞರು, ತರಬೇತುದಾರರು ತಮ್ಮ ಸ್ವ ವಿವರಗಳೊಂದಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‍ಗೆ ಬರೆಯುವುದು. ತರಬೇತುದಾರರಿಗೆ ಅಕಾಡೆಮಿ ವತಿಯಿಂದ ಸೂಕ್ತ ಸಂಭಾವನೆ…
ಮಡಿಕೇರಿ ಡಿ.31 NEWS DESK : ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಹಲಸಿನ ಮರವೇರಿದ ಕಾರ್ಮಿಕ ಪಣಿಎರವರ ಪೊನ್ನು ಅವರನ್ನು ಗುಂಡು ಹೊಡೆದು ಕೊಲೆಗೈದಿರುವುದು ಖಂಡನೀಯ. ಪ್ರಕರಣದ ಕುರಿತು ಶಾಸಕರು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯವೆಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮೈಸೂರು ಜಿಲ್ಲಾ ಪ್ರಮುಖ ಶೈಲೇಂದ್ರ ಕುಮಾರ್ ಕಾರ್ಮಿಕ ಪೊನ್ನು ಅವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣವನ್ನು ಶಾಸಕರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಸರಕಾರ ತಕ್ಷಣ ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕೊಡಗು ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಕಾಫಿ ತೋಟದ ಲೈನ್‍ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ ಬುಡಕಟ್ಟು ಕುಟುಂಬಗಳ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಆರೋಪಿಯ…
ಮಡಿಕೇರಿ ಡಿ.31 NEWS DESK : ಸಿದ್ದಾಪುರದ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಜ.3 ರಿಂದ 6ರ ವರೆಗೆ ತಿರು ಮಹೋತ್ಸವ ನಡೆಯಲಿದೆ. ಬ್ರಹ್ಮಶ್ರೀ ಈಡವಲತ್ ಪುಡಯೂರ್‍ಮನ ಕುಬೇರನ್ ನಂಬೂದಿರಿಪಾಡ್ ತಂತ್ರಿಗಳು ರಾಜರಾಜೇಶ್ವರ ದೇವಸ್ಥಾನದ ತಲೋರ ತಳಿಪರಂಬ್ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಜ.3 ರಂದು ಸಂಜೆ 5.30 ಗಂಟೆಯಿಂದ ಪುಣ್ಯಾಹ ಪ್ರಾಸಶುದ್ಧಿ, ವಾಸ್ತುಬಲಿ, ದೀಪಾರಾಧನೆ, ತ್ರಿಕೊಡಿಯೆಟಂ, ಅತ್ತಾಯ ಪೂಜಾ, ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಜ.4 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ಮಹಾಸುದರ್ಶನ ಹೋಮ, ಮಹಾಮೃತ್ಯುಂಜಯ ಹೋಮ, ನವಕಂ ಪಂಚಗವ್ಯಂ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಭಗವತಿಸೇವೆ, ದೀಪಾರಾಧನೆ, ಸಹಸ್ರದೀಪಾ, ಮಹಾಪೂಜೆ, ಅನ್ನಸಂರ್ಪಣೆ ನಡೆಯಲಿದೆ. ಜ.5 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ಗುಳಿಗ, ನಾಗದೇವರಿಗೆ ಪೂಜೆ, ನವಗಂ, ಪಂಚಗವ್ಯಂ, ಕಲಶಭಿಷೇಕ (ಬೆಳಿಗ್ಗೆ 9 ಗಂಟೆಗೆ ದೇವಿಗೆ ಪೊಂಗಾಲ) ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ದೀಪಾರಾಧನೆ, ತ್‍ಡಂಬ್‍ನೃತ್ಯ, ಅನ್ನದಾನ ನೆರವೇರಲಿದೆ. ಜ.6…
ಮಡಿಕೇರಿ ಡಿ.31 NEWS DESK : ವಿರಾಜಪೇಟೆ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟ ಕುಂಜಿಲ ಗ್ರಾಮದಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಅಧಿಕಾರಿಗಳು, ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಶೀಘ್ರದಲ್ಲಿ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ಭರವಸೆ ನೀಡಿದರು. ಶಾಸಕರ ಕಾಳಜಿಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ಡಿ.31 NEWS DESK : ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಕೊಡಗಿನ ರೈತರಿಗೆ ಉಳಿಗಾಲವಿಲ್ಲ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಆತಂಕ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದು, ರಾಜ್ಯದ ನಿರ್ಧಾರವನ್ನು ಕೇಂದ್ರ ಸರ್ಕಾರ ಪುರಸ್ಕರಿಸಬೇಕು ಎಂದು ಮನವಿ ಮಾಡಿದರು. ಕಸ್ತೂರಿ ರಂಗನ್ ವರದಿಯಂತೆ ಕೊಡಗಿನಲ್ಲಿರುವ ಪಶ್ಚಿಮಘಟ್ಟ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಗುರುತಿಸಿದರೆ, ಕೊಡಗಿನ ಬಹುತೇಕ ಗ್ರಾಮಗಳು ವಲಯಕ್ಕೆ ಸೇರ್ಪಡೆಗೊಂಡು ಗ್ರಾಮೀಣ ಜನರು ಬೀದಿಪಾಲಾಗಬೇಕಾಗುತ್ತದೆ. ಪುಷ್ಪಗಿರಿ ತಪ್ಪಲಿನ ಸನಿಹವೆ ಗ್ರಾಮಗಳಿದ್ದು, ಸಿ ಆ್ಯಂಡ್ ಡಿ ಕೃಷಿ ಭೂಮಿಯಲ್ಲೆ ಬದುಕು ಕಟ್ಟಿಕೊಂಡಿದ್ದಾರೆ. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಸಿ ಆ್ಯಂಡ್ ಡಿ ಭೂಮಿ ಸೂಕ್ಷ್ಮ ಪರಿಸರ ವಲಯಕ್ಕೆ ಸೇರ್ಪಡೆಯಾಗುತ್ತದೆ. ನಂತರ ರೈತರು ಗುಳೆ ಹೋಗಬೇಕಾದ ಅನಿವಾರ್ಯ ಒದಗುತ್ತದೆ ಎಂದು ಹೇಳಿದರು. ಈಗಾಗಲೇ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯಕ್ಕೆ ಸೇರಿಸಲು ಪ್ರಕ್ರಿಯೆಗಳು…
ಕುಶಾಲನಗರ ಡಿ.31 NEWS DESK : ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ನಾಡಿನಲ್ಲಿ ವೈಚಾರಿಕತೆಯನ್ನು ಭಿತ್ತಿದ ಸಾಹಿತ್ಯದ ಮೇರು ಪರ್ವತ ಕುವೆಂಪು ಎಂದು ಕೊಡಗಿನ ಹಿರಿಯ ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಪ್ರತಿಪಾದಿಸಿದರು. ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಸ್ಥಳೀಯ ಕನ್ನಡ ಭಾರತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳನ್ನು ಮೆಟ್ಟಿನಿಂತು ಸಂಘರ್ಷಗಳನ್ನು ಎದುರಿಸಿ ಮಾನವತೆಯ ಮೇರು ಗಿರಿಯಾದ ಕುವೆಂಪು ಪರಿಸರವನ್ನೇ ದೇವರೆಂದರು. ಪರಿಸರವನ್ನು ಆಹ್ಲಾದಿಸಿ ಆಸ್ವಾದಿಸಿದ ರಸ ಕವಿ ತಮ್ಮ ಬಹುಪಾಲು ಕಥೆ, ಕವನ, ಕಾದಂಬರಿ, ನಾಟಕ ಮೊದಲಾದ ಮಹಾಗ್ರಂಥಗಳನ್ನು ಬರೆದು ನಾಡಿನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಆದ್ದರಿಂದ ಇಂದಿನ ವಿದ್ಯಾರ್ಥಿ ಸಮೂಹ ಕನ್ನಡ ನಾಡಿಗೆ ರಸ ಋಷಿ ಕುವೆಂಪು ಕೊಟ್ಟಿರುವ ಸಾಹಿತ್ಯವನ್ನು ಉಳಿಸಿಕೊಂಡು ಹೋದರೆ ಅದು ಆ ವಿಶ್ವಮಾನವನಿಗೆ ಕೊಡುವ ಗೌರವವಾಗಲಿದೆ ಎಂದರು. ಕುವೆಂಪು ವಿಚಾರಧಾರೆಗಳ ಕುರಿತು ಮಾತನಾಡಿದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಂದ್ರಸ್ವಾಮಿ,…






