ಮಡಿಕೇರಿ ಜ.17 : ಮೇಕೇರಿಯ ಸಕಾ೯ರಿ ಮಾದರಿ ಪ್ರಾಥಮಿಕ ಶಾಲೆಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ಜಿಲ್ಲಾ ರೋಟರಿ ಗವನ೯ರ್ ಪ್ರಕಾಶ್ ಕಾರಂತ್ ನೀಡಿದರು.
ಮೇಕೇರಿ ಶಾಲೆಯಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ದಾನಿಗಳಾದ ಮಡಿಕೇರಿಯ ಮಹೇಶ್ ಎಂಟರ್ ಪ್ರೈಸಸ್ ನ ಮಾಲೀಕ ಎಸ್.ಹರೀಶ್ ಕುಮಾರ್ ರೋಟರಿ ಮಿಸ್ಟಿ ಹಿಲ್ಸ್ ಮೂಲಕ ನೀಡಿದ ಬಿಸಿ ಮತ್ತು ತಣ್ಣಗಿನ ಶುದ್ಧ ನೀರಿನ ಘಟಕವನ್ನು ವಿತರಿಸಲಾಯಿತು.
ಈ ಸಂದಭ೯ ಮಾತನಾಡಿದ ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್, ಅಪೇಕ್ಷಿತರಿಗೆ ದಾನ ಮಾಡುವ ಸಂದಭ೯ ಸಿಗುವ ಆತ್ಮತೖಪ್ತಿಗಿಂತ ಬೇರೆ ಸಮಧಾನ ಯಾವುದರಿಂದಲೂ ದೊರಕುವುದಿಲ್ಲ. ರೋಟರಿ ಸಂಸ್ಥೆ ಕೂಡ ಅಗತ್ಯವುಳ್ಳವರಿಗೆ ವಿದ್ಯಾಸಿರಿ, ಜಲಸಿರಿ, ವನಸಿರಿ, ಆರೋಗ್ಯ ಸಿರಿ ಎಂಬ ಜಿಲ್ಲಾ ಯೋಜನೆಗಳ ಮೂಲಕ ನಾನಾ ರೀತಿಯ ಸಹಾಯ ನೀಡುತ್ತಾ ಬಂದಿದೆ. ಶುದ್ದ ನೀರಿನ ಘಟಕದ ಮೂಲಕ ದೊರಕುವ ಶುದ್ಧ ನೀರಿನಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ನೀರು ಕುಡಿಯಲು ದೊರಕಿ, ಅನಾರೋಗ್ಯಪೀಡಿತರಾಗುವವರ ಸಂಖ್ಯೆ ಕಡಮೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಈ ಶಾಲೆಯಲ್ಲಿನ 46 ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಅಗತ್ಯತೆ ಮನಗಂಡು ಮಿಸ್ಟಿ ಹಿಲ್ಸ್ ದಾನಿಗಳಾದ ಹರೀಶ್ ಕುಮಾರ್ ಸಹಕಾರದಿಂದ ರೂ.15 ಸಾವಿರ ವೆಚ್ಚದಲ್ಲಿ ಘಟಕವನ್ನು ನೀಡಿದೆ ಎಂದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ, ರೋಟರಿ ಜಿಲ್ಲಾ ಸೇನಾನಿ ಅವಿಲ್ ಮೆನೇಜಸ್, ದಾನಿ ಹರೀಶ್ ಕುಮಾರ್, ಪ್ರಭಾರ ಮುಖ್ಯಶಿಕ್ಷಕಿ ಕೆ.ಎಂ.ಸಬಿತಾ, ಆಡಳಿತ ಮಂಡಳಿ ಅಧ್ಯಕ್ಷ ರಫೀ್ಕ್ , ಗ್ರಾಮ ಪ್ರಮುಖರಾದ ಕುಮಾರ್, ಲತೀಶ್, ರೋಟರಿ ಮಿಸ್ಟಿ ಹಿಲ್ಸ್ ನ ಪ್ರಮುಖರಾದ ಬಿ.ಜಿ.ಅನಂತಶಯನ, ಅನಿಲ್ ಎಚ್.ಟಿ. ಮೋಹನ್ ಪ್ರಭು, ಎ.ಕೆ.ವಿನೋದ್, ದೇವಣೀರ ತಿಲಕ್, ಪೂವಯ್ಯ, ಪಿ.ವಿ.ಅಶೋಕ್, ರತ್ನಾಕರ್ ರೈ, ನಮಿತಾ ರೈ, ಹಾಜರಿದ್ದರು.